ವಿಸ್ಮಯ ತುಂಬಿದ ಜೀವಜಗತ್ತು 👉 *22*
*▪ವಂಶ ನಾಶವಾಗುತ್ತಿರುವ ಗುಬ್ಬಚ್ಚಿ*
📞00971553499119
▪ಜನವಾಸವಿರುವ ಎಲ್ಲಾ ಕಡೆಗಳಲ್ಲಿ ವಿಶೇಷವಾಗಿ ಮನೆ, ಅಂಗಡಿ, ಶಾಲಾ ವಠಾರಗಳಲ್ಲಿ ಕಾಣಸಿಗುವ ಬಹಳ ಚೆಲುವಾದ ಒಂದು ಪಕ್ಷಿಯಾಗಿದೆ ಗುಬ್ಬಿ ಅಥವಾ ಗುಬ್ಬಚ್ಚಿ.
▪ಕಿಟಿಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, ಅಂತೆಯೇ ಗೋಡೆಯ ಮೂಲೆ ಮೂಲೆಗಳಲ್ಲಿ ಗೂಡುಕಟ್ಟಿ ವಾಸಿಸುವ ಈ ಪಕ್ಷಿ ಒಮ್ಮೆ ನಾಲ್ಕು ಅಥವಾ ಐದು ಮೊಟ್ಟೆಯಿಡುತ್ತದೆ. ಹದಿಮೂರು ಅಥವಾ ಹದಿನಾಲ್ಕು ದಿನಗಳ ಕಾವು ಕೊಡುವಿಕೆಯ ನಂತರ ಮೊಟ್ಟೆಯೊಡೆದು ಮರಿ ಹೊರಗೆ ಬರುತ್ತದೆ. ನವಜಾತ ಮರಿಗಳಿಗೆ ಹುಟ್ಟಿದಂದಿನಿಂದಲೇ ತಂದೆ ತಾಯಂದಿರಿಂದ ಹಾರುವ ತಾಲೀಮು ಮತ್ತು ತರಬೇತಿ ಕೊಡಲಾಗುತ್ತದೆ. ಹಾರಾಟ ತರಬೇತಿ ಮುಗಿದ ಬಳಿಕ ಮರಿಗಳನ್ನು ಅದರ ಹಾದಿಗೆ ಬಿಡಲಾಗುತ್ತದೆ. ನಂತರ ದೈನಂದಿನ ಹೊಟ್ಟೆ ತುಂಬಿಸುವ ಹೊಣೆ ತಾನೇ ನೋಡಿಕೊಳ್ಳುಬೇಕಾಗಿದೆ.
▪ ಒಂದು ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಮೊಟ್ಟೆಯಿಡುವ ಗುಬ್ಬಚ್ಚಿ ಯಾವಾಗಲೂ ತನ್ನ ಸಂಗಾತಿಯೊಂದಿಗಿರುತ್ತದೆ. ನಿರಂತರ ಲೈಂಗಿಕ ಕ್ರಿಯೆಯಲ್ಲಿ
ಏರ್ಪಡುವ ಕಾರಣದಿಂದ ಈ ಪಕ್ಷಿಯ ಆಯುಷ್ಯ ಬರೇ ಒಂದೆರಡು ವರ್ಷ ಮಾತ್ರ ಎಂದು ಹೇಳಲಾಗುತ್ತದೆ. ಒಂದು ದಿನದಲ್ಲಿ ನೂರಾರು ಸಲ ತನ್ನ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಒಂದು ಅಪೂರ್ವ ಜೀವಿಯಾಗಿದೆ ಇದು. ಅಲ್ಲಾಹನ ಸೃಷ್ಟಿಗಳಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಗರಿಷ್ಟ ಮಟ್ಟದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಇದಕ್ಕೆ ಸಮಾನವಾದ ಜೀವಿ ಬೇರೊಂದಿಲ್ಲ.
▪ಪಾರಿವಾಳದಂತೆಯೇ ಇದಕ್ಕೂ ತನ್ನ ಮರಿಗಳ ಮೇಲೆ ಎಲ್ಲಿಲ್ಲದ ಮಮತೆ. ಮರಿಗಳ ರಕ್ಷಣೆಗಾಗಿ ತಾಯಿ ಗುಬ್ಬಚ್ಚಿ ಯಾವ ತ್ಯಾಗಕ್ಕೂ ತಯಾರಿರುತ್ತದೆ.
▪ ಜನವಾಸವಿರುವ ಒಂದು ಮನೆಯ ವಠಾರದಲ್ಲಿ ಗುಬ್ಬಚ್ಚಿ ಗೂಡುಕಟ್ಟಿ ವಾಸ ಮಾಡುತ್ತಿರುವುದಾದರೆ,
ಆ ಮನೆಯಿಂದ ಜನರು ಜಾಗ ಖಾಲಿಮಾಡಿ ಬೇರೆ ಜಾಗಕ್ಕೆ ಹೋಗುವುದಾದರೆ ಗುಬ್ಬಚ್ಚಿ ಕೂಡ ತನ್ನ ವಾಸವನ್ನು ಅಲ್ಲಿಂದ ಬದಲಾಯಿಸುತ್ತದೆ. ಅಂದರೆ ಗುಬ್ಬಚ್ಚಿ ಯಾವತ್ತೂ ಜನವಾಸವಿಲ್ಲದ ನಿರ್ಜನ ಪ್ರದೇಶದಲ್ಲಿ ಗೂಡು ಕಟ್ಟುವುದಿಲ್ಲ.
▪ಬೂದಿ, ಬಿಳಿ, ಕಪ್ಪು, ಹಳದಿ, ಕಂದು ಮುಂತಾದ ಹಲವಾರು ಬಣ್ಣಗಳಲ್ಲಿರುವ ಇವು ಹಲವಾರು ಜಾತಿಗಳಿವೆ. ನೆಲಗುಬ್ಬಿ, ಉಲಿಯಕ್ಕಿ, ಕಾನುಗುಬ್ಬಿ, ಬಂಗಾರಪಕ್ಷಿ, ಬುಲ್‌ಬುಲ್‌ಪಕ್ಷಿ, ಸೀತೆಹಕ್ಕಿ, ಪುಟಾಣಿಹಕ್ಕಿ, ಅಗ್ನಿಶಿಖೆಪಕ್ಷಿ, ಪಿಂಚ್‌ಪಕ್ಷಿ ಮುಂತಾದವುಗಳು
ಗುಬ್ಬಚ್ಚಿ ಜಾತಿಯಲ್ಲಿ ಒಳಪಡುತ್ತದೆ.
▪ಇದರಲ್ಲಿ ಸೀತೆಹಕ್ಕಿಯ ರಾತ್ರಿಯ ನಿದ್ರೆ ಬಹಳ ಅದ್ಭುತವಾಗಿರುತ್ತದೆ. ಮರದ ರೆಂಬೆಯನ್ನು ಅಪ್ಪಿಕೊಂಡು ತನ್ನ ತಲೆಯನ್ನು ಆಕಾಶದತ್ತ ತಿರುಗಿಸಿ ಬೆಳಗಿನ ತನಕ ಆಗಾಗ್ಗೆ ಕೂಗುತ್ತಾ ಮಲಗುವ ಈ ಪಾಪ ಪಕ್ಷಿಗೆ ರಾತ್ರಿ ಮಲಗಿದ ಸಮಯದಲ್ಲಿ ಆಕಾಶ ತನ್ನ ಮೇಲೆ ಬೀಳಬಹುದಾ ಎಂಬ ಭಯವಂತೆ....!
▪ತೂಕ ಬಹಳ ಕಡಿಮೆಯಿರುವ ಗುಬ್ಬಚ್ಚಿಯು ನಡೆದಾಡುವಾಗ ಸರಿಯಾದ ಸಮತೋಲನ (ಬ್ಯಾಲೆನ್ಸ್) ಸಿಗದ ಕಾರಣ ಇದಕ್ಕೆ ಚೆನ್ನಾಗಿ ನಡೆದಾಡಲಾಗುವುದಿಲ್ಲ. ಆ ಕಾರಣದಿಂದ ಇದು ಯಾವಾಗಲೂ ಕುಪ್ಪಳಿಸಿ ನಡೆಯುವುದನ್ನು ನೀವು ಕಂಡಿರಬಹುದು.
▪ಬಹಳ ಬುದ್ದಿವಂತನಾದ ಇದಕ್ಕೆ ಒಳ್ಳೆ ನೆನಪುಶಕ್ತಿ ಕೂಡ ಇದೆ. ಗೂಡಿರುವಲ್ಲಿಂದ ಸುಮಾರು ಒಂದೆರಡು ಮೈಲಿ ದೂರ ಆಹಾರ ಹುಡುಕಿ ಹೋದರೂ ಸಂಜೆಯಾಗುವಾಗ ನಿರಾಯಾಸ ಗೂಡಿರುವ ಜಾಗಕ್ಕೆ ಮರಳಿ ಬರುತ್ತದೆ.
▪ಸಹಾಬೀಶ್ರೇಷ್ಠ ಹಝ್ರತ್ ಬಿನ್ ಮಸ್‌ಊದ್ (ರ) ರು ಹೇಳುತ್ತಾರೆ. "ನಾನು ಮತ್ತು ಕೆಲವು ಸಹಾಬಿಗಳು ಒಂದು ದಿನ ಪ್ರವಾದಿಯವರ ಬಳಿ ಇರುವಾಗ ಒಂದು ಗುಬ್ಬಚ್ಚಿ ಹಾರಿ ಬಂದು ನಮ್ಮ ಮಜ್‌ಲಿಸಿನಲ್ಲಿ ಬೇಸರದಿಂದ ಕೂಗಲು ಶುರುಮಾಡಿತು. ಕೂಡಲೇ ಪ್ರವಾದಿ ಮುಹಮ್ಮದ್ (ಸ) ರು ನಮ್ಮಲ್ಲಿ ಕೇಳಿದರು. *"ನಿಮ್ಮಲ್ಲಿ ಯಾರಾದರೂ ಇವತ್ತು ಈ ಸಾಧು ಪಕ್ಷಿಯನ್ನು ಉಪದ್ರವ ಅಥವಾ ಅದಕ್ಕೆ ಬೇಸರವಾಗುವ ಏನಾದರು ಕೆಲಸ ಮಾಡಿದ್ದೀರಾ...?"* ಕೂಡಲೇ ಗ್ರಾಮವಾಸಿಯಾದ ಒಬ್ಬ ನಮ್ಮ ಪೈಕಿಯಿಂದ ಎದ್ದು ನಿಂತು ಹೇಳಿದರು. *"ಹೌದು ಪ್ರವಾದಿಯವರೇ.. ನಾನು ತೊಂದರೆ ಕೊಟ್ಟಿದ್ದೇನೆ. ನಾನಿವತ್ತು ಅದರ ಗೂಡಿನಿಂದ ಅದರ ಕೆಲವು ಮೊಟ್ಟೆಗಳನ್ನು ತೆಗೆದು ತಂದಿದ್ದೇನೆ"* ಕೂಡಲೇ ಕಾರುಣ್ಯದ ನೇತಾರ ಪ್ರವಾದಿಯವರು ಹೇಳಿದರು. *"ಹೋಗು...ಹೋಗು.. ಈಗಲೇ ಹೋಗಿ ನೀನು ತೆಗೆದ ಆ ಬಡಪಾಯಿ ಪಕ್ಷಿಯ ಮೊಟ್ಟೆಯನ್ನು ಅದರ ಗೂಡಲ್ಲಿಟ್ಟು ಬಾ.."*
▪ ಆ ದಿನದ ಪಲ್ಯ ಗುಬ್ಬಚ್ಚಿ ಮೊಟ್ಟೆಯಿಂದ ಗಡದ್ದಾಗಿ ಮಾಡಬೇಕೆಂದಿದ್ದರೂ ಪ್ರವಾದಿ ವರ್ಯರ ಈ ಗಂಭೀರ ತಾಕೀತಿನಿಂದಾಗಿ ಅದು ವಿಫಲವಾಯಿತು. ಕೂಡಲೇ ಆ ವ್ಯಕ್ತಿ ಅದರ ಗೂಡು ಹುಡುಕಿ ಹೋಗಿ ಮೊಟ್ಟೆಗಳನ್ನು ಅಲ್ಲಿ ಇಟ್ಟು ಬಂದರು.
▪ ಹಿಜ್‌ರಾ ವರ್ಷ 467 ರಲ್ಲಿ ಹುಟ್ಟಿ 538 ರಲ್ಲಿ ನಿಧನರಾದ ಖ್ಯಾತ ಪಂಡಿತ ಮತ್ತು ಕುರ್‌ಆನ್ ವ್ಯಾಖ್ಯಾನಗಾರ ಇಮಾಮ್ *ಝಮಕ್‌ಶರೀ* ಯವರ ಒಂದು ಕಾಲು ಮುರಿದು ಹೋಗಿತ್ತು. ಅವರೊಮ್ಮೆ ಇರಾಕಿನ ಬಗ್ದಾದಿಗೆ ಹೋದಾಗ ಅಲ್ಲಿನ ಉಲಮಾಗಳು ಅವರಲ್ಲಿ ಅವರ ಮುರಿದ ಕಾಲಿನ ಬಗ್ಗೆ ಅದರ ಕಾರಣವೇನೆಂದು ಕೇಳಿದರು. ಆಗ ಝಮಕ್‌ಶರಿಯವರು ಹೇಳಿದರು. *"ಇದು ನನ್ನ ತಾಯಿಯ ಶಾಪವಾಗಿದೆ. ನಾನು ಬಾಲಕನಾಗಿರುವಾಗ ನನಗೆ ಪಕ್ಷಿಗಳನ್ನು ಹಿಡಿದು ಹಾರಾಡಿಸುವುದೆಂದರೆ ಬಹಳ ಇಷ್ಟ. ಅಂತೆಯೇ ಒಂದು ದಿನ ನಾನೊಂದು ಗುಬ್ಬಚ್ಚಿಯನ್ನು ಹಿಡಿದು ಅದರ ಕಾಲಿಗೆ ಹಗ್ಗ ಹಾಕಿ ಒಂದು ಕಡೆ ಕಟ್ಟಿ ಹಾಕಿದೆ. ಏನೋ ಕಟ್ಟಿದ್ದು ಸಡಿಲವಾದ್ದರಿಂದ ಗುಬ್ಬಚ್ಚಿ ಅಲ್ಲಿಂದ ಕಾಲಲ್ಲಿರುವ ಹಗ್ಗದೊಂದಿಗೆ ಓಡಿಹೋಗಿ ನಮ್ಮ ಮನೆಯ ಗೋಡೆಯಲ್ಲಿರುವ ಒಂದು ತೂತಿನಲ್ಲಿ ಅವಿತು ಕುಳಿತಿತು. ನಾನು ಆಕಡೆ ಹೋಗಿ ಅದನ್ನು ಆ ತೂತಿನಿಂದ ಬಲವಾಗಿ ಎಳೆದೆ. ಎಳೆದ ಎಳೆತದ ರಭಸಕ್ಕೆ ಪಾಪ ಅದರ ಕಾಲು ಹಗ್ಗದಲ್ಲಿ ಸಿಲುಕಿ ತುಂಡಾಯಿತು. ಸ್ವಲ್ಪ ಕಳೆದು ನನ್ನ ತಾಯಿಯವರು ಆ ಕಡೆ ಬಂದರು. ತಾಯಿ ಬರುವಾಗ ಗುಬ್ಬಚ್ಚಿಯು ನಡೆಯಲಾಗದೆ ನರಳಾಡುತ್ತಿತ್ತು. ಗುಬ್ಬಚ್ಚಿಯ ರೋದನ ಮತ್ತು ನರಳುವುದನ್ನು ಕಂಡ ನನ್ನ ತಾಯಿ ತಡೆಯಲಾರದ ಬೇಸರದಿಂದ ಹೇಳಿದರು. "ಪಾಪ ಈ ಗುಬ್ಬಚ್ಚಿಯ ಕಾಲನ್ನು ತುಂಡು ಮಾಡಿದ ದುಷ್ಟನ ಕಾಲನ್ನು ಅಲ್ಲಾಹನು ತುಂಡು ಮಾಡಲಿ." ನಂತರ ಹಲವಾರು ವರ್ಷಗಳು ಕಳೆದು ನಾನು ಯುವಕನಾದಾಗ ಒಂದು ದಿನ ನಾನು ಬುಖಾರಾದಲ್ಲಿ ದೀನೀ ವಿಜ್ಞಾನ ಕಲಿಯುತ್ತಿರುವಾಗ ನಾನು ಸಂಚರಿಸುತ್ತಿರುವ ವಾಹನದಿಂದ ಅಕಸ್ಮಾತ್ ಕಾಲು ಜಾರಿ ಕೆಳಗೆ ಬಿದ್ದೆ. ಆ ಅಪಘಾತದಲ್ಲಿ ನನ್ನ ಕಾಲು ತುಂಡಾಯಿತು. ಸುಬ್‌ಹಾನಲ್ಲಾಹ್! ಆಗ ನನಗೆ ತಿಳಿಯಿತು. ಇದು ನನ್ನ ತಾಯಿಯು ನಾನು ಪುಟ್ಟ ಬಾಲಕನಿರುವಾಗ ಹಾಕಿದ ಶಾಪದ ಫಲವೆಂದು."*
▪ಒಬ್ಬನು ಒಂದು ಗುಬ್ಬಚ್ಚಿಯನ್ನು ಯಾವುದೇ ಕಾರಣವಿಲ್ಲದೆ ಸುಮ್ಮನೆ ವಿನೋದಕ್ಕೆ ಬೇಕಾಗಿ ಕೊಂದರೆ ಆ ಗುಬ್ಬಚ್ಚಿಯು ನಾಳೆ ಪರಲೋಕದಲ್ಲಿ ವಿಚಾರಣೆ ಮಾಡುವ ಸಮಯದಲ್ಲಿ ಅಲ್ಲಾಹನ ಎದುರಲ್ಲಿ ನಿಂತು ಈ ಕೊಂದ ವ್ಯಕ್ತಿಗೆ ಸನ್ನೆ ಮಾಡಿ *"ಇವನು ನನ್ನನ್ನು ಭೂಲೋಕದಲ್ಲಿ ಕಾರಣವಿಲ್ಲದೆ ಕೊಲೆ ಮಾಡಿದ್ದಾನೆ"* ಎಂದು ಹೇಳಿ ಕೇಸು ಕೊಡುತ್ತದೆ ಎಂದು ಪ್ರವಾದಿಯವರು ಹೇಳಿದ ಹದೀಸನ್ನು ಇಮಾಮ್ ನಸಾಯೀ ವರದಿ ಮಾಡಿದ್ದಾರೆ.
▪ಅಬೂ ಹಮ್‌ಝಃ ಅಲ್ ಯಮಾನೀ (ರ) ರವರು ಹೇಳುತ್ತಾರೆ. "ನಾನೊಮ್ಮೆ ಪ್ರವಾದಿ ಮುಹಮ್ಮದ್ (ಸ) ರ ಮೊಮ್ಮಗ ಹಝ್ರತ್ ಹುಸೈನ್ (ರ) ರ ಮಗ ಸಯ್ಯಿದ್ ಅಲೀ ಬಿನ್ ಹುಸೈನ್ (ರ) ರ ಒಂದು ಸಭೆಯಲ್ಲಿ (ಮಜ್‌ಲಿಸ್) ಕುಳಿತು ಕೊಂಡಿರುವಾಗ ಅಲ್ಲಿಗೆ ಕೆಲವು ಗುಬ್ಬಚ್ಚಿಗಳು ಬಂದು ಅವರನ್ನು ಸುತ್ತುವರಿದು ಕೂಗುತ್ತಾ ಹಾರಲು ಶುರುಮಾಡಿತು. ಆಗ ಅವರು ನನ್ನಲ್ಲಿ ಕೇಳಿದರು." *"ಹಂಝಾ..., ನಿನಗೆ ಈ ಗುಬ್ಬಚ್ಚಿಗಳು ಅದರ ಬಾಯಿಯಲ್ಲಿ ಶಬ್ದ ಮಾಡಿ ಹೇಳುವುದರ ಅರ್ಥವೇನೆಂದು ಗೊತ್ತಾ....?"* ನಾನು ಹೇಳಿದೆ. *"ಇಲ್ಲ... ನನಗೆ ಗೊತ್ತಿಲ್ಲ."* ಆಗ ಅವರು ಹೇಳಿದರು. *"ಅದು ಅಲ್ಲಾಹನಿಗೆ ಝಿಕ್‌ರ್ ಹೇಳಿ ಅವನಲ್ಲಿ ಈ ದಿನದ ಅದರ ಆಹಾರವನ್ನು (ರಿಝ್‌ಕ್) ಕೇಳುವುದಾಗಿದೆ"*
▪ಯಾವುದೇ ಪಕ್ಷಿಗಳನ್ನು ಪ್ರತ್ಯೇಕವಾಗಿ ಗಾತ್ರ ಕಡಿಮೆಯಾದ ಗುಬ್ಬಚ್ಚಿಯನ್ನು ದ್ಸಬಹ್ ಮಾಡುವಾಗ ಇಸ್ಲಾಮಿನ ನಿಯಮದಂತೆ ದ್ಸಬಹ್ ಮಾಡಬೇಕು. ನಿಯಮತಪ್ಪಿ ರುಂಡ ಮುಂಡ ಬೇರೆ ಬೇರೆ ಮಾಡಿ ಅಥವಾ ಇನ್ಯಾವುದೇ ಅನ್ಯಾಯವಾದ ರೀತಿಯಲ್ಲಿ ಚೂರಿಹಾಕಿದರೆ ನಾಳೆ ಪರಲೋಕದಲ್ಲಿ ಈ ಪುಟ್ಟ ವಿಷಯದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದೆಂದು ಪ್ರವಾದಿ ಮುಹಮ್ಮದ್ (ಸ) ಹೇಳಿದ ಹದೀಸನ್ನು ಇಮಾಮ್ ಬಿನ್ ಮಾಜಃ ವರದಿ ಮಾಡಿದ್ದಾರೆ.
▪ಗುಬ್ಬಚ್ಚಿಯ ಪಿಟ್ಟೆಯನ್ನು ಜೊಲ್ಲುರಸದಲ್ಲಿ ಮಿಶ್ರಣ ಮಾಡಿ ಚರ್ಮದಲ್ಲಿ ನರೋಲಿ ಅಂತೆಯೇ ಮೊಡವೆ ಇರುವವರು ಆ ಜಾಗಕ್ಕೆ ಸವರಿದರೆ ಕೆಲವೇ ದಿನಗಳಲ್ಲಿ ಅದು ಸಂಪೂರ್ಣ ಮಾಯವಾಗುವುದು.
▪ಸಾರಾಯಿ ಕುಡಿತಕ್ಕೆ ಬಲಿಯಾಗಿ ಅದನ್ನು ಅಭ್ಯಾಸ ಮಾಡಿದವನಿಗೆ ಗುಬ್ಬಿಯ ಮೆದುಳನ್ನು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಜಜ್ಜಿ ಅದನ್ನು ಕುಡಿಸಿದರೆ ಮತ್ತೆ ಅವನು ಎಂದೂ ಕುಡಿಯಲಾರ.
▪ಮೂತ್ರಜನಕಾಂಗ ಮತ್ತು ಮೂತ್ರಕೋಶದಲ್ಲಿ ಕಲ್ಲು ಇರುವವರು ಗುಬ್ಬಿಯನ್ನು ಉಪ್ಪು ಮಿಶ್ರಣ ಮಾಡಿ ಸುಟ್ಟು ತಿನ್ನುವುದರಿಂದ ಕಲ್ಲು ಹಾರಿ ಹೋಗುವುದು.
▪ ಮೂಲವ್ಯಾಧಿ ರೋಗ ಇರುವವರು ಮಿದುಳನ್ನು ಜೇನಿನೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ ಜಜ್ಜಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ತುಂಬಾ ಒಳ್ಳೆಯದು. ನೋವು ಸಂಪೂರ್ಣ ಕಡಿಮೆಯಾಗುತ್ತದೆ.
▪ಗುಬ್ಬಿಯ ಮಾಂಸ ಕೋಳಿ ಮಾಂಸಕ್ಕಿಂತಲೂ ಉಷ್ಣ. ಅಲ್ಲದೇ ತೇವಾಂಶವೂ ಕೂಡ ಬಹಳ ಕಡಿಮೆಯಾದ್ದರಿಂದ ಚಳಿಗಾಲ ಮತ್ತು ಮಳೆಗಾಲದಲ್ಲಿ ಇದರ ಮಾಂಸ ತಿನ್ನುವುದರಿಂದ ಶರೀರಕ್ಕೆ ಒಳ್ಳೆಯ ಬಿಸಿ ಮತ್ತು ಉಷ್ಣತೆ ಸಿಗುತ್ತದೆ. ಅಲ್ಲದೆ ಆಗಾಗ್ಗೆ ಇದರ ಮಾಂಸ ತಿನ್ನುವುದರಿಂದ ಬುದ್ದಿ ಜಾಸ್ತಿಯಾಗುತ್ತದೆ.
▪ಒಬ್ಬನಿಗೆ ಗುಬ್ಬಚ್ಚಿಯನ್ನು ಚೂರಿಹಾಕುವ ಕನಸು ಕಂಡರೆ ರೋಗಿಯಾದ ಒಂದು ಮಗು ಹುಟ್ಟಿ ಆ ರೋಗದಲ್ಲೇ ನರಳಿ ಮರಣ ಹೊಂದುವುದರ ನಿಶಾನೆಯಾಗಿದೆ.
▪ಹಲವಾರು ಗುಬ್ಬಚ್ಚಿಗಳು ತನಗೆ ದೊರೆತ ಅಥವಾ ತನ್ನ ಅಧೀನದಲ್ಲಿರುವುದನ್ನು ಕನಸಿನಲ್ಲಿ ಕಂಡರೆ ಹಣ ಸಂಪಾದನೆ ಆಗುವುದರ ಸಂಕೇತವಾಗಿದೆ.
▪ಒಂದು ಕಾಲದಲ್ಲಿ ನಮ್ಮ ಮನೆ, ಅಂಗಡಿ, ಶಾಲೆ, ಕಾಲೇಜು ಪರಿಸರಗಳಲ್ಲಿ ಯಥೇಚ್ಛವಾಗಿ ಕಾಣ ಸಿಗುತ್ತಿದ್ದ ಈ ಗುಬ್ಬಚ್ಚಿಯು ಇತ್ತೀಚಿನ ದಿನಗಳಲ್ಲಿ ಕಣ್ಣಿಗೆ ಕಾಣ ಸಿಗುವುದೇ ಬಹಳ ಅಪರೂಪವಾಗಿದೆ. ಇದರ ಬಗ್ಗೆ ಹಲವಾರು ಕಾರಣಗಳನ್ನು ಹೇಳಲಾಗುತ್ತದೆ. ಬಹಳ ಮುಖ್ಯವಾದ ಒಂದು ಕಾರಣವೇನೆಂದರೆ, ಇಂದಿನ ಈ ಆಧುನಿಕ ಯುಗದಲ್ಲಿ ನಿರ್ಮಾಣವಾಗುತ್ತಿರುವ ನವೀನ ಮಾದರಿಯ ಕಟ್ಟಡಗಳಲ್ಲಿ ಈ ಸಾಧು ಪಕ್ಷಿಗೆ ಗೂಡುಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಾಗಿದೆ.
▪ ಎರಡನೆಯ ಕಾರಣವೇನೆಂದರೆ, ಇಂದಿನ ಜನರು ಜಾಸ್ತಿಯಾಗಿ ಪಟ್ಟಣಗಳಲ್ಲಿ ಮಹಡಿಗಳಲ್ಲಿ (Flat) ವಾಸ ಮಾಡುವುದರಿಂದ ಹಳೆಯ ಕಾಲದಂತೆ ಮನೆಗಳಿಗೆ ಅಂಗಳಗಳಿಲ್ಲದಿರುವುದರಿಂದ ಮನೆಯಿಂದ ಹೊರಗೆ ಎಸೆಯುವ ಕಾಳು ಕಡ್ಡಿಗಳು, ಧಾನ್ಯಗಳು ಸಿಗದೆ ಹೋಯಿತು.
▪ಮೂರನೆಯ ಮತ್ತು ಕೊನೆಯದಾಗಿ ಹೇಳುವ ಒಂದು ಅಪಾಯಕಾರಿ ಕಾರಣವೇನೆಂದರೆ, ನಾವಿಂದು ಈ ಆಧುನಿಕ ಯುಗದಲ್ಲಿ ಬಳಸುವ ಮೊಬಾಯಿಲ್ ಬಳಕೆಗೆ ಸಹಾಯಕವಾಗಿರುವ ಮೊಬಾಯಿಲ್ ಟವರಿನಿಂದ ಹೊರಬರುವ ವಿಕಿರಣಗಳು (ರೇಡಿಯೇಶನ್) ಇದರ ಸಂತತಿಯನ್ನು ಸಂಪೂರ್ಣ ವಿನಾಶ ಮತ್ತು ನಿರ್ನಾಮ ಮಾಡುತ್ತದೆ ಎಂಬ ಸಂಶಯ ಕೂಡ ಮೂಡಿ ಬರುತ್ತದೆ. ಒಟ್ಟಿನಲ್ಲಿ ಗುಬ್ಬಚ್ಚಿಯು ಅಪರೂಪದ ಒಂದು ಅತಿಥಿಯಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
▪ಇಸ್ಲಾಮಿನ ನಾಲ್ಕು ಮದ್‌ಹಬ್‌ಗಳಲ್ಲೂ ಗುಬ್ಬಚ್ಚಿ ಭಕ್ಷ್ಯಯೋಜ್ಯವಾಗಿದೆ.
ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಮತ್ತು ತತ್ವಜ್ಞಾನಿ ಜಾಹಿಳ್ ರವರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.

Comments