Skip to main content

ಕೊನೆಯಿಲ್ಲ ಈ ಪ್ರೀತಿಗೆ


ಕಾಲ ಬದಲಾಗುತ್ತಿರುವಾಗ ಜನರು ಬದಲಾಗುತ್ತಿದ್ದಾರೆ. ಕಾಲಕ್ಕೆ ಹೂಂದಿಕೂಂಡು ಜನ ಸಮೂಹವು ಮುಂದೆ ಹೋಗುತ್ತಿರುವಾಗ ಇಸ್ಲಾಮೀ ಶಿಷ್ಟಾಚಾರಗಳು ದಿನಕಳೆದಂತೆ ಮುಸ್ಲಿಮರಲ್ಲಿ ಕಡಿಮೆ ಗೊಳ್ಳುತ್ತಿದೆ.ಜಗತ್ತಿಗೆ ಒಂದು ಮಾದರಿ ಪುರುಷರಾಗಿ ಅಲ್ಲಾಹನು ನಿಯುಕ್ತ ಗೊಳಿಸಿದಂತಹ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಜನರಿಗೆ ಹಲವಾರು ವಿಚಾರಗಳ‌ ಕುರಿತು ಬೋಧಿಸಿದರು. ಆದರೆ ಇಂದು ಅವರು ಕಲಿಸಿಕೊಟ್ಟಂತಹ ಪರಿಪಾಠಗಳು ಜನರೆಡೆಯಿಂದ ಮಾಯವಾಗುತ್ತಿದೆ .ಪ್ರವಾದಿ ಚರ್ಯೆಯನ್ನು ಅನುಸರಿಸಿ ಜೀವನ ನಡೆಸಲು ಯುವ ಸಮುದಾಯವು ಮುಂದಾಗುತ್ತಿಲ್ಲ. ಪ್ರೇಮ ವೆಂಬುವುದು ಏನೆಂದು ಅರ್ಥಮಾಡಿಕೊಂಡಿದ್ದರೂ ಅದನ್ನು ನೀಡಬೇಕಾದವರಿಗೆ ನೀಡದೆ ಇತರೆ ಅನ್ಯ ಸ್ತ್ರೀ ಪುರುಷರಿಗೆ ಕೂಡುವುದರಲ್ಲಿ ತಲ್ಲೀನಣರಾಗಿದೆ ಯುವ ಸಮುದಾಯ.

'ಪ್ರೇಮ'ವೆಂಬುದು ವರ್ಣಣಾತೀತವಾದ ಪ್ರಾಕೃತಿಕವಾಗಿ ಬರುವಂತಹ ವಿಷಯ. ನಾವು ಹಲವಾರು ಕಾರಣಗಳಿಂದ ಹಲವರನ್ನು ಪ್ರೀತಿಸುತ್ತೇವೆ . ಪ್ರೀತಿ_ಪ್ರೇಮ ವೆಂಬುದು ಮನುಷ್ಯನಲ್ಲಿ ಹಟ್ಟುವಂತಹ ಗುಣ .ನಿಜವಾಗಯೂ ಮುಅ್ ಮಿನರಾದ ನಾವು ನಮ್ಮ ಜೀವ ಕ್ಕಿಂತಲೂ ಹೆಚ್ಚಾಗಿ ಪ್ರೀತಿಸ ಬೇಕಾದದ್ದು  ಮುತ್ತಿ ಗಿಂತಲೂ ಮುತ್ತಾದ ನನ್ನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು .ಹಬೀಬರನ್ನು ಪ್ರೀತಿಸಿ ಪ್ರೀತಿಸಿ ಅದೆಷ್ಟೋ ಸ್ವಹಾಬಿಗಳು ತಮ್ಮ ಶರೀರವನ್ನೇ ಹಬೀಬರಿಗಾಗಿ ಮುಡಿಪ್ಪಾಗಿಟ್ಟರು.ಕಾರುಣ್ಯದ ಕಡಲಾಗಿ ಜನರೊಂದಿಗೆ ಬೆರೆತು ಜಗತ್ತಿಗೆ ಇಸ್ಲಾಮಿನ ನಿಯಮವನ್ನು ಜೀವನದೋಂದಿಗೆ ಸಾರಿ ಹೇಳಿದ ಪ್ರವಾದಿ (ಸ ಅ)ರನ್ನು ಜಗತ್ತು ಇಂದು ಸ್ಮರಿಸುತ್ತಿದೆ . ದಿನದ 24 ಗಂಟೆಗಳಲ್ಲೂ ಜಗತ್ತಿನಾದ್ಯಂತ ಉಚ್ಚರಿಸಲ್ಪಡುವ ಏಕೈಕ ನಾಮವಿದ್ದರೆ ಅದು ನನ್ನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನಾಮವನ್ನಾಗಿದೆ . ಇಷ್ಟೆಲ್ಲಾ ಮಹಿಮೆಯಿರುವ ಒಬ್ಬ ಸಂದೇಷವಾಹಕರನ್ನು ನಮಗೆ ಕಳುಹಿಸಿದ ಅಲ್ಲಾಹನಿಗೆ ನಾವೆಷ್ಟೂ ಸ್ತುತಿ ಅರ್ಪಿಸಿದರೂ ಸಾಲದು .
ದ್ವಿ ಲೋಕ ವಿಜಯಕ್ಕೆ ಇಂದು ಈ ಜಗತ್ತಿನಲ್ಲಿ ಪರಿಹಾರವಾಗಿ ನಿಂತಿರುವುದು ಅದು ನಾನು ಇಷ್ಟ ಪಡುವ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಅವರ ಜೀವನ ಚರ್ಯೆಯನ್ನು ಯಥೇಚ್ಛವಾಗಿ ನಮ್ಮ ಜೀವನದಲ್ಲ ಅಳವಡಿಸಿ ಕೊಳ್ಳುವುದಾಗಿದೆ.ಅದಲ್ಲದೆ ಆ ಹಬೀಬರನ್ನು ಸ್ವ ಶರೀರಕ್ಕಿಂತ ಮಿಗಿಲಾಗಿ  ಪ್ರೀತಿಸಿ ನಮ್ಮ ಶರೀರವನ್ನು ಹಬೀಬರಿಗೆ ಸಮರ್ಪಿಸುದಾಗಿದೆ . ಅದಲ್ಲದೆ ಇಂದು ಈ. ಜಗತ್ತಿನಲ್ಲಿ ನಮಗೆ ವಿಜಯ ಹೊಂದಲು ಸಾದ್ಯವಿಲ್ಲ.ಅಂದು ಸ್ವಹಾಬಿಗಳು ಆ ಹಬೀಬರನ್ನು ಪ್ರೀತಿಸಿದ ಮತ್ತು ಅನುಸರಿಸಿದ ಚರಿತ್ರೆಯನ್ನು ಕೇಳಿದರೆ ನಿಜಕ್ಕೂ ನಾವು ಮೂಕವಿಸ್ಮಿತರಾಗುತ್ತೇವೆ.ಕಾರಣ ಅಷ್ಟಕ್ಕೂ ಅವರು ಪ್ರವಾದಿ ಪ್ರೇಮಿಯಾಗಿದ್ದರು.ಅವರ ಪ್ರೇಮರ್ಭಟದ ಮುಂದೆ  ನಮ್ಮ ಸಾಸಿವೆ ತೂಕದ ಪ್ರೀತಿಯ ಹಿಡಿದು ಹೇಗೆ ಪ್ರವಾದಿ ಪ್ರೇಮಿಯೆನ್ನಲಿ ನಾವು .ಕಾಲದ ವೇಗಕ್ಕೆ ತುತ್ತಾದ  ಮಾನವನ ಮನದಲ್ಲಿ ಪ್ರವಾದಿ ಪ್ರೇಮವೆಂಬುದು ಮಾಯವಾಗುತ್ತಿದೆ ಪಾಶ್ಚಾತ್ಯ ಫ್ಯಾಷನ್ ಗಳಿಗೆ ಮುಗಿಬಿದ್ದ ಜನರು ಆ ಪ್ರವಾದಿ(ಸ ಅ)ರನ್ನು ಅವರ ಜೀವನ ಚರ್ಯೆಯನ್ನು ಅನುಸರಿಸಲು ನಮ್ಮ ಮನಸ್ಸು ಒಪ್ಪುತ್ತಿಲ್ಲ .ಅನಾಚಾರಗಳಿಂದ ಲೀನವಾದ ಈ ಜಗತ್ತಿನಲ್ಲಿ ಇಂದೆಲ್ಲವೂ ದಶ್ಚಚಟವಾಗಿ ಮಾರ್ಪಾಡು ಹೊಂದಿದೆ.
ಸುಬುಹಾನಲ್ಲಾಹ್!!!!!ಹಬೀಬರ ಮೇಲೆ ನಮ್ಮಲ್ಲಿರುವ ಪ್ರೇಮಕ್ಕೂ ಅವರಿಗೆ ತಮ್ಮ ಉಮ್ಮತಿನ ಮೇಲಿರುವ ಸ್ನೇಹಕ್ಕೆ ನಿದರ್ಶನವಾಗಿ ನಮಗೆದ್ದು ಕಾಣುವ ಹಲವು ವಿಚಾರಗಳನ್ನು ನೋಡುವಾಗ ಹಬೀಬರು ನಮ್ಮನ್ನು ಅಷ್ಟು ಸಹ ಪ್ರೀತಿಸಿದ್ದಾರೋ....????ಎಂದು ಸಹ ನಂಬಲಸಾದ್ಯವಾಗುತ್ತದೆ. ಅಂತ್ಯ ದಿನದಲ್ಲಿ ಎಲ್ಲ ಜನರು "ನಫ್ಸಿ ನಫ್ಸಿ" ಎಂದು ಗೋಗರೆಯುವಾಗ ಅಲ್ಲಿಯೂ ಕೂಡಾ "ಉಮ್ಮತೀ....ಉಮ್ಮತೀ..." ಎಂದು ಆ ಭೀಕರ ಸಮಯದಲ್ಲೂ ತನ್ನ ಸಮುದಾಯವನ್ನು ಮರೆಯದೆ‌ ಪ್ರೀತಿಯ ಕಡಲಾದ ಹಬೀಬರನ್ನು ಹೇಗೆ ತಾನೆ ಮರೆಯಲು ಸಾದ್ಯ. ಈಮಾನ್ ಬೆಳಗುವ ಪ್ರತಿಯೊಂದು ಹೃದಯದಲ್ಲೂ ಅವರ ಮೇಲೆ ಸದಾ ಪ್ರೀತಿಯೂ ಹುಟ್ಟಿಕೊಂಡಿರುತ್ತದೆ.ತಮ್ಮ ಜೀವನ ಕ್ರಮವನ್ನು ಪ್ರವಾದಿ ಚರ್ಯೆಯಂತೆ ನಡೆಸಿ, ಅವರ ಮೇಲೆ ನಿತ್ಯ ಸ್ವಲಾತನ್ನು ಹೆಚ್ಚಿಸಿ ತಮ್ಮ ಮನವನ್ನೋಮ್ಮೆ ಹಬೀಬರ ಕಡೆಗೆ ತಿರುಗಿಸಿದರೆ ಹಬಿಬರಿಗಾಗುವ ಸಂತೋಷವನ್ನು ಹೇಳಿ ಮುಗಿಸಲು ಸಾದ್ಯವೇ.?? ಅಲ್ಲಾಹ್ ಜೀವನದಲ್ಲಿ ಒಂದು ಬಾರಿಯಾದರೂ ಮದೀನಮಣ್ಣಿಗೆ ಎತ್ತುವ. ಭಾಗ್ಯವ ಕರುಣಿಸು Allah...😭.(Aameen😰 )


✍🏻✍🏻mishriya kk
New bee teacher puttur

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...