Skip to main content

ತಾಯಿನಾಡಿನ_ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)

ತಾಯಿನಾಡಿನ_ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)
♻♻♻♻♻♻♻♻♻
✍ ಗಫೂರ್ ಬಾಯಾರ್
------------------------

_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._

     ಲಿಬಿಯಾದ ಪೂರ್ವ ದಿಕ್ಕಾದ ಬರ್ಕ ಎಂಬ ಪ್ರದೇಶದ ತಬರುಕ್ ಸಮೀಪದ ಜಾನ್ ಸೂಳರ್ ಎಂಬ ಹಳ್ಳಿಯಲ್ಲಿ ನಿಫ ಗೇೂತ್ರದಲ್ಲಿ 1862 ರಲ್ಲಿ ಜನಿಸಿದ ಉಮರ್ ಮುಖ್ತಾರ್(ರ) ರವರ ಹದಿನಾರನೆ ವಯಸ್ಸಿನಲ್ಲಿ ತಂದೆ ಇಹಲೇೂಕ ತ್ಯಜಿಸಿದಾಗ ಹುಸೈನ್ ಅಲ್ ಖರನೈನಿ(ರ) ಎಂಬ ಸೂಫಿ ಸಂತರ ಆಶ್ರಯದಲ್ಲಿ ಬೆಳೆದರು.

      ಹುಸೈನ್ ಅಲ್ ಖರನೈನಿ ಎಂಬ ಮಹಾತ್ಮರ ಆಶ್ರಯದಲ್ಲಿ ಬೆಳೆದುದರಿಂದ ಬಹು ಬೇಗನೆ ಕುರ್ಆನಿನಲ್ಲಿ ಪಾಂಡಿತ್ಯಗಳಿಸಿ ಕುರ್ಆನ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಸನೂಸಿ ಹಾದಿಯಲ್ಲಿ ಪ್ರಸಿದ್ಧರಾದರು.

*ಇಟಲಿಯ ದಾಳಿ*

1911ರ ಇಟಲಿ-ತುರ್ಕಿ ಯುದ್ಧದ ಸಮಯದಲ್ಲಿ ಇಟಲಿ ಸೇನೆಯ ಒಂದು ವಿಭಾಗದ ಸೇನಾಧಿಪತಿ ಲ್ಯೂಜಿ ಪರಾವೆಲ್ಲಿ ಎಂಬಾತನ ನೇತೃತ್ವದ ಸೈನ್ಯ ಲಿಬಿಯನ್ ಗಡಿ ದಾಟಿ (ಅಂದು ಲಿಬಿಯ ಓಟೇೂಮನ್ ಆಡಳಿತದ ತುರ್ಕಿಗಳ ನಿಯಂತ್ರಣದಲ್ಲಿತ್ತು.)
     ಹಾಗೆ ದಂಡೆತ್ತಿ ಬಂದ ಇಟಲಿ ಪಡೆ ಲಿಬಿಯನ್ನರು ಶರಣಾಗಬೇಕೆಂದೂ ತಪ್ಪಿದರೆ ಲಿಬಿಯಾದ ರಾಜದಾನಿಯಾದ ಟ್ರಪೇೂಲಿಯನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಯಿಂದ ವಿಚಲಿತರಾದ ಬಹುತೇಕ ಟ್ರಪೇೂಲಿಯನ್ನರು ಅಲ್ಲಿಂದ ಪಲಾಯನ ಮಾಡಿದರು.

      ತದನಂತರ ಟ್ರಪೇೂಲಿಯ ಮೇಲೆ ಮೂರು ದಿನಗಳ ಕಾಲ ನಿರಂತರ ಬಾಂಬ್ ದಾಳಿ ನಡೆಸಿದ ಇಟಲಿ ಸೇನೆ ಟ್ರಪೇೂಲಿಯನ್ನು ತನ್ನ ವಶಕ್ಕೆ ಪಡೆದು ಟ್ರಪೇೂಲಿಯನ್ನರನ್ನು ತನ್ನ ಗುಲಾಮರನ್ನಾಗಿಸಿತು. ಇದರಿಂದ ರೊಚ್ಚಿಗೆದ್ದ ಉಮರ್ ಮುಖ್ತಾರ್ (ರ) ತಾಯಿ ನಾಡಿನ ವಿಮೇೂಚನೆಗಾಗಿ ಜನರನ್ನು ಸಂಘಟಿಸಿ ಇಟಲಿಯ ವಿರುದ್ಧ ಸಮರ ಸಾರಿದರು.
ಉಮರ್ ಮುಖ್ತಾರ್(ರ) ಕುರ್ಆನ್ ಅಧ್ಯಾಪಕರಾಗಿದ್ದರೂ ಸಹ ಭೂಗರ್ಭ ಶಾಸ್ತ್ರ ಮತ್ತು ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ನೈಪುಣ್ಯತೆಗಳಿಸಿದ್ದರು. ಹಾಗಾಗಿ ಇಟಲಿಯ ಆಕ್ರಮಣದೆದುರು ಯುದ್ಧ ಸಾರಲು ಇದು ಸಹಾಯಕವಾಯಿತು.

 ಲಿಬಿಯನ್ನರ ಗೆರಿಲ್ಲಾ ಯುದ್ಧ ತಂತ್ರದ ಅರಿವಿಲ್ಲದ ಇಟಲಿ ಸೇನೆಯ ವಿರುದ್ಧ ಚಿಕ್ಕ ಸೈನ್ಯ ಕಟ್ಟಿಕೊಂಡ ಉಮರ್ ಮುಖ್ತಾರ್(ರ) ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಮಾತ್ರವಲ್ಲ ಇಟಲಿ ಸೇನೆಯ ಸಂಪರ್ಕ ಮಾದ್ಯಮ, ವಿದ್ಯುತ್, ನೀರು ಇತ್ಯಾದಿಗಳ ಸಂಪರ್ಕ ತಪ್ಪಿಸಿ ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಇದರಿಂದಾಗಿ ಇಟಲಿ ಸೇನೆಗೆ ಅಗಾಧ ನಾಶ ನಷ್ಟವುಂಟಾಯಿತಲ್ಲದೆ ಉಮರ್ ಮುಖ್ತಾರ್(ರ)ರವರ ಗೆರಿಲ್ಲಾ ಪಡೆಯ ಕಾಟ ತಾಳಲಾರದೆ ಕಕ್ಕಾಬಿಕ್ಕಿಯಾಯಿತು.
    ಆದರೆ 1924ರಲ್ಲಿ  ಇಟಾಲಿಯನ್ ಗವರ್ನರ್ ಎನ್ನೆಸ್ಟೇೂ ಬೊಂಬೆಲ್ಲಿ ಎಂಬಾತನ ನೇತೃತ್ವದಲ್ಲಿ ಲಿಬಿಯಾದ "ಜಬಲ್ ಅಖ್ತರ್" ಪರ್ವತದ ತಪ್ಪಲಿನಲ್ಲಿ ನಡೆದ ಯುದ್ಧದಲ್ಲಿ ಲಿಬಿಯಾದ ಗೆರಿಲ್ಲಾ ಪಡೆಗೂ ಅಪಾರ ನಾಶ ನಷ್ಟವುಂಟಾಯಿತು.
    ನಂತರ ಕೆಲ ಕಾಲ ಯುದ್ಧ ಸ್ಥಗಿತಗೊಂಡಿತು.

 ಈ ಹಂತದಲ್ಲಿ ಉಮರ್ ಮುಖ್ತಾರ್(ರ) ಈಜಿಪ್ಟ್ ಸೇನೆಯ ನೆರವು ಪಡೆದು ಹೊಸ ಯುದ್ಧ ತಂತ್ರ ರೂಪಿಸಿ ಮತ್ತೆ ಇಟಾಲಿಯನ್ ಸೇನೆಯ ವಿರುದ್ಧ ಯುದ್ಧ ಸಾರಿ ಇಟಲಿ ಸೇನೆಯನ್ನು ನಿರಂತರವಾಗಿ ಬೇಟೆಯಾಡಲಾರಂಭಿಸಿದರು. ಈ ನಡುವೆ ಲಿಬಿಯಾದ ಸೆನ್'ಸೂಂಗಿಯಟ್ಟಿ ಎಂಬ ವಿಭಾಗವೂ ಇಟಲಿ ಸೇನೆಯ ವಿರುದ್ಧ ಹೇೂರಾಡುತ್ತಿತ್ತಾದರೂ ಅತ್ಯಾಧುನಿಕ ಆಯುಧ ಸಾಮಾಗ್ರಿಗಳಿಂದ ಪ್ರಭಲವಾದ ಇಟಲಿಯನ್ ಸೈನ್ಯವನ್ನೆದುರಿಸಲಾಗದೆ ನಿಶ್ಚಲವಾಗಿತ್ತು.

 1927-28ರ ಕಾಲಘಟ್ಟದಲ್ಲಿ ಉಮರ್ ಮುಖ್ತಾರ್ (ರ) ಸೆನ್'ಸೂಂಗಿ ಪಡೆಯನ್ನು ಪುನರ್ ಸಂಘಟಿಸಿ ತನ್ನ ಪಡೆಯೊಂದಿಗೆ ಸೇರಿಸಿಕೊಂಡು ಯುದ್ಧ ಮುಂದುವರಿಸಿ ಅಂದಿನ ಜನರಲ್ ತರುಝುಕ್ ನೇತೃತ್ವದ ಪಡೆಯನ್ನು ಹಿಮ್ಮೆಟ್ಟಿಸಿದರು.
    ನಂತರ ಬೆನಿಟ್ಟೇೂ ಮುಝೇೂಲಿನಿಕ್ ಮತ್ತು ಎಮಿಲೊ ಡಿಬೇೂಣ ಎಂಬಿಬ್ಬರು ಇಟಾಲಿಯನ್ ಪಡೆಯ ನೇತೃತ್ವ ವಹಿಸಿ ಉಮರ್ ಮುಖ್ತಾರ್(ರ) ಪಡೆಯನ್ನೆಯನ್ನೆದುರಿಸಲು ಹೊಸ ತಂತ್ರ ರೂಪಿಸಿದರು.

*ಇಟಾಲಿಯನ್ ಪಡೆಯ ಹೊಸ ತಂತ್ರ*

ಉಮರ್ ಮುಖ್ತಾರ್(ರ) ರವರ ಗೆರಿಲ್ಲಾ ಪಡೆಯ ಮುಂದೆ ಇಟಲಿ ಸೇನೆಯ ಪರಾಜಯಕ್ಕೆ ಕಾರಣ ಈಜಿಪ್ಟಿನ ಸೇನೆ ಮತ್ತು ಪರ್ವತದ ತಪ್ಪಲಿನಲ್ಲಿ ವಾಸಿಸುವ ಜನರು ಉಮರ್ ಮುಖ್ತಾರ್ ನೇತೃತ್ವದ ಗೆರಿಲ್ಲಾ ಪಡೆಗೆ ನೆರವು ನೀಡುತ್ತಿರುವುದೇ ಮೂಲ ಕಾರಣವೆಂದು ಭಾವಿಸಿ ಪರ್ವತದ ತಪ್ಪಲಿನ ಜನರನ್ನು ಕೊನ್ಸಡ್ರೇಸನ್ ಎಂಬಲ್ಲಿಗೆ ಸ್ಥಳಾಂತರಿಸಿ ಲಿಬಿಯ-ಈಜಿಪ್ಟ್ ಗಡಿಯನ್ನು ಮುಚ್ಚುವ ಮೂಲಕ ಹೊಸ ಯುದ್ಧ ತಂತ್ರದೊಂದಿಗೆ ಯುದ್ಧಕ್ಕಿಳಿದರು.
       ಗಡಿ ಮುಚ್ಚಿದ್ದರಿಂದ ಉಮರ್ ಮುಖ್ತಾರ್(ರ)ರವರ ಪಡೆಗೆ ವಿದೇಶಿ ನೆರವು ಸ್ಥಗಿತಗೊಂಡಿತಲ್ಲದೆ ಸ್ಥಳೀಯರ ನೆರವೂ ಕೈತಪ್ಪಿತು. ಮಾತ್ರವಲ್ಲ ಇಟಲಿ ಸೇನೆ ಇಟಲಿಯಿಂದ ಮತ್ತಷ್ಟು ಸೈನ್ಯವನ್ನು ಕರೆಸಿಕೊಂಡು ಘೇೂರ ಆಕ್ರಮಣಕ್ಕಿಳಿಯಿತು.

*ಉಮರ್ ಮುಖ್ತಾರ್(ರ) ಬಂಧನ*

ಸ್ವದೇಶಿಯರ ನೆರವಾಗಲೀ ವಿದೇಶಿ ನೆರವಾಗಲಿ ಇಲ್ಲದ ಕಾರಣ ಇಟಲಿ ಸೇನೆಯ ಆಕ್ರಮಣವನ್ನೆದುರಿಸಲಾಗದೆ ಉಮರ್ ಮುಖ್ತಾರ್ (ರ)ರವರ ನೇತೃತ್ವದ ಪಡೆ ಸೇೂಲೊಪ್ಪಿಕೊಳ್ಳಬೇಕಾಯಿತು. ಹಾಗಾಗಿ ಉಮರ್ ಮುಖ್ತಾರ್(ರ) ತಲೆಮರೆಸಿಕೊಂಡರು.

     1931 ಸೆಪ್ಟೆಂಬರ್ 11 ರಂದು ಸೊನಟ್ಟ ಎಂಬಲ್ಲಿ ಇಟಲಿ ಸೇನೆ ಉಮರ್ ಮುಖ್ತಾರ್(ರ) ರನ್ನು ಸೆರೆ ಹಿಡಿದರು.
ಆದರೆ ಇಟಲಿ ಸೇನೆ ಸೆರೆ ಹಿಡಿಯುವ ಕೊನೆ ನಿಮಿಷದವರೆಗೂ ಶತ್ರು ಸೇನೆಯೊಂದಿಗೆ ವೀರಾವೇಶದಿಂದ ಹೇೂರಾಡಿದ ಮಹಾನರು ಶತ್ರು ಸೈನ್ಯದ ತೀವ್ರ ದಾಳಿಗೊಳಗಾಗಿ ಗಾಯಾಳುವಾಗಿ ಸೆರೆಯಾದರು.

      ಲಿಬಿಯ-ಇಟಲಿ ಯುದ್ಧದಲ್ಲಿ ಇಟಾಲಿಯನ್ ಸೇನೆ ನೇತೃತ್ವ ವಹಿಸಿದ್ದ ಕೊನೆಯ ಜನರಲ್ ರುಡೇೂಲ್ಫ್ ಗ್ರೇಸಿಯನ್ ಬಹು ಗೌರವದಿಂದಲೇ ಉಮರ್ ಮುಖ್ತಾರ್ (ರ) ರನ್ನು ಬಂಧಿಸಿ ಕರೆದೊಯ್ದನು.

ಬಂಧಿಸಿದ ನಂತರ ಕೇವಲ ಮೂರು ದಿನಗಳ ವಿಚಾರಗೊಳಪಡಿಸಿದ ಇಟಲಿ ಸೇನೆ ಉಮರ್ ಮುಖ್ತಾರ್ (ರ) ರವರನ್ನು ಸಾರ್ವಜನಿಕವಾಗಿ ನೇಣಿಗೇರಿತು ಇನ್ನಲಿಲ್ಲಾಹ್...

ಉಮರ್ ಮಖ್ತಾರ್(ರ)ರವರ ವಿಚಾರಣೆ ನಿಷ್ಪಕ್ಷಪಾತವೂ ನ್ಯಾಯಸಮ್ಮತವಾದುದಾಗಲಿ ಆಗಿರಲಿಲ್ಲ ಎನ್ನುವುದು ಆಗಿನ ವಿಧ್ವಾಂಸರ ಅಭಿಪ್ರಾಯ. ಅವರನ್ನು ಪೀಡಿಸಿ ವಿಚಾರಣೆಗೊಳಪಡಿಸುವಾಗ ಸೇನಾಧಿಕಾರಿಗಳ ಕಣ್ಣುಗಳನ್ನು ನೇೂಡಿ ಕುರ್ಆನ್ ಪಾರಯಣಗೈಯ್ಯುತ್ತಿದ್ದರೆಂದು ಆ ಮಹಾತ್ಮರನ್ನು ವಿಚಾರಣೆಗೊಳಪಡಿಸಿದ ಸೇನಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

     1931 ಸೆಪ್ಟೆಂಬರ್ 16ರಂದು ನೇಣಿಗೇರಿಸುವ ಅಂತಿಮ ನಿಮಿಷದಲ್ಲಿ ಕೊನೆಯಾದಾಗಿ ಏನಾದರೂ ಹೇಳಲಿಕ್ಕಿದೆಯೇ ಎಂದು ಕೇಳಿದಾಗ 73 ವರ್ಷ ವಯಸ್ಸಿನ ಆ ಸೂಫಿ ಸಂತರ ಕೊನೆಯ ವಾಕ್ಯ ಇದಾಗಿತ್ತು "ನಾವೆಲ್ಲರೂ ಅಲ್ಲಾಹನಿಂದ, ನಮ್ಮೆಲ್ಲರ ಮರಳುವಿಕೆಯೂ ಅಲ್ಲಾಹನ ಸನ್ನಿಧಿಗೆ ಮಾತ್ರವಾಗಿರುತ್ತದೆ."

    ತಾಯಿನಾಡಿನ್ನು ಆಕ್ರಮಿಸಿದ ಆಕ್ರಮಣಕಾರಿಗಳ ವಿರುದ್ಧ ಯುದ್ಧ ಸಾರಿ ಕೊನೆಯುಸಿರಿನ ತನಕವೂ ವೀರಾವೇಶದಿಂದ ಹೇೂರಾಡಿದ ಆ ಧೀರ ಯೇೂಧ ಒಂದು ವೇಳೆ ಶತ್ರು ಸೇನೆಯೊಂದಿಗೆ ಸಂಧಾನ ಮಾಡಿಕೊಂಡಿದ್ದರೆ  ಲೌಕಿಕವಾದ ಸರ್ವ ಸುಖಾಡಂಬರಗಳೂ ಅವರನ್ನರಸಿ ಬರುತ್ತಿತ್ತು. ಆದರೆ ಅವೆಲ್ಲವನ್ನೂ ಬದಿಗಿಟ್ಟು *ಹುಬ್ಬುಲ್ ವತನಿ ಮಿನಲ್ ಈಮಾನ್* ಎಂಬ ಪ್ರವಾದಿ ﷺ ವಚನಕ್ಕನುಸಾರವಾಗಿ ತಾಯಿನಾಡಿನ ವಿಮೇೂಚನೆಗಾಗಿ ಹೇೂರಾಡಿ ಶಹೀದಾದ ಆ ಧೀರ ಪರಾಕ್ರಮಿಯ ಬದುಕು ಮತ್ತು ಹೇೂರಾಟಗಳು ಲಿಬಿಯ ದೇಶದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.

*ಮುಗಿಯಿತು.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...