Skip to main content

ವಿಶ್ವ ವಿಸ್ಮಯ ✒️ಅಬ್ದುಲ್ ನಾಸಿರ್ ಕಾವೂರು

ವಿಶ್ವ ವಿಸ್ಮಯ
✒️ಅಬ್ದುಲ್ ನಾಸಿರ್ ಕಾವೂರು


*ಇದು ಸಣ್ಣ ಒಂದು ಪ್ರಯತ್ನ ಮಾತ್ರ. Observable universe ಬಗ್ಗೆ ಏನೂ ಗೊತ್ತಿಲ್ಲ. ಅದನ್ನು ಕಲಿತವನೂ ಅಲ್ಲ. ಕೇಳಿ ತಿಳಿದಂತಹಾ ಸ್ವಲ್ಪವೇ ಸ್ವಲ್ಪ ವಿಷಯ ಮಾತ್ರ ಬರೆದಿರುವೆ. ಈ ಬರಹದಲ್ಲಿ ತಪ್ಪುಗಳಿದ್ದರೆ ಕ್ಷಮೆಯನ್ನು ಕೇಳುತ್ತಾ, ಅಲ್ಲಾಹನು ಎಷ್ಟೊಂದು ಶಕ್ತನು ಎಂದು ಚಿಂತಿಸಲಿಕ್ಕಾಗಿದೆ ಈ ಪುಟ್ಟ ಬರಹ. ಅಲ್ಲಾಹನು ಸೃಷ್ಟಿಸಿದ ಈ ಮಹಾ ವಿಶ್ವ ಬಹಳಾ ವಿಸ್ಮಯವಾಗಿದೆ. ಈ ಮಹಾ ವಿಸ್ಮಯದ ಬಗ್ಗೆ ಅರಿಯುತ್ತಾ ಹೋದಂತೆ ನಮಗರಿವಿಲ್ಲದಂತೆ ನಾಲಗೆ "ಸುಬುಹಾನಲ್ಲಾಹ್" ಎಂದು ಹೇಳಿ ಬಿಡುತ್ತದೆ. ಅಲ್ಲಾಹು ಇದನ್ನು ಸ್ವೀಕರಿಸಲಿ ಎಂಬ ಪ್ರಾರ್ಥನೆಯೊಂದಿಗೆ....*


*★بسم الله الرحمان الرحيم★*

*اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰهِ يَاحَبِيب ﷺفِدَاكَ اَبِى وَاُمِّى يَارَسُولَ اللّهِﷺ💚*

insha allaahಇದು ಎರಡು ಭಾಗವಾಗಿ ಬರಲಿದೆ.

*ಭಾಗ 1️⃣*

ಇಡೀ ವಿಶ್ವವು ಎಷ್ಟು ದೊಡ್ಡದಿದೆ ಎಂದು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ. ಆದರೆ ಭೂಮಿಯನ್ನು ಕೇಂದ್ರವಾಗಿಸಿಕೊಂಡು ಮನುಷ್ಯನಿಗೆ ಅಲ್ಲಾಹು ನೀಡಿದ ಬುದ್ಧಿಶಕ್ತಿಯಿಂದ ಕಂಡುಹಿಡಿದ ಶಕ್ತಿಶಾಲಿ ಟೆಲಿಸ್ಕೋಪ್ ತಂತ್ರಜ್ಞಾನದ ಮೂಲಕ ವಿಶ್ವವನ್ನು ಎಷ್ಟು ದೂರದ ವರೆಗೆ ನೋಡಲು ಸಾಧ್ಯವಾಗುತ್ತದೋ ಅದನ್ನು ನಾವು *ಅಬ್ಸರ್ವೇಬಲ್ ಯೂನಿವರ್ಸ್* ಎಂದು ಕರೆಯುತ್ತೇವೆ. ಇದನ್ನು ಮಾನವ ನಿರ್ಮಿತ ತಂತ್ರಜ್ಞಾನ ಮೂಲಕ ನೋಡಬಹುದೇ ವಿನಃ ಹೋಗಲು ಸಾಧ್ಯವೇ ಇಲ್ಲ. ಅಷ್ಟೊಂದು ವಿಶಾಲವಾಗಿದೆ ಈ ವಿಶ್ವ.

ಇಲ್ಲಿಯವರೆಗೂ ಮನುಷ್ಯನಿಗೆ ಭೂಮಿಯ ಅತೀ ಹತ್ತಿರದ ಗ್ರಹವಾದ ಮಂಗಳ ಗ್ರಹಕ್ಕೆಯೇ ಹೋಗಲು ಸಾಧ್ಯವಾಗಿಲ್ಲ. ಮಂಗಳನಲ್ಲಿಗೆ ವಿಜ್ಞಾನಿಗಳು ಸ್ಪೇಸ್ ಕ್ರಾಫ್ಟ್ ಮಾತ್ರ ಕಳುಹಿಸಿದ್ದು. ಚಂದ್ರನ ಮೇಲೆ ಕಾಲಿಟ್ಟದ್ದು ಕೂಡಾ ಸುಳ್ಳೆಂದು ಹಲವಾರು ವಿಜ್ಞಾನಿಗಳು ಹೇಳಿದ್ದಾರೆ. ಅದು ಅಮೆರಿಕ ತನ್ನ ಪ್ರತಿಷ್ಠೆ ಮತ್ತು ರಷ್ಯಾದ ಎದುರಿಗೆ ಪೈಪೋಟಿಗೋಸ್ಕರ ಮಾಡಿದ ತಂತ್ರ ಎಂದಿದ್ದಾರೆ. ಮಾತ್ರವಲ್ಲದೆ ಚಂದ್ರಯಾನದ ವಿಡಿಯೋ ಫೂಟೇಜ್ ಗಳು ಹಲವು ಸಂಶಯಗಳನ್ನು ಹುಟ್ಟಿಹಾಕುತ್ತದೆ. ಇದರ ಬಗ್ಗೆ ಕೆಲವು ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದಾಗ ಅಮೇರಿಕಾದ ನಾಸಾ ಇದಕ್ಕೆ ಸರಿಯಾದ ಉತ್ತರ ಕೊಡಲಿಕ್ಕೆ ಹೋಗಲಿಲ್ಲ. ಇದರಿಂದ ನಮಗೆ ಸಂಶಯ ಬರುತ್ತೆ, ಚಂದ್ರಯಾನ ಹೆಸರಲ್ಲಿ ಅಮೇರಿಕ ಜಗತ್ತಿಗೆ ಮೋಸ ಮಾಡಿದೆಯಾ ಎಂದು.... ಚಂದ್ರಯಾನ ಮಾಡಿದ ನಂತರ ಇದುವರೆಗೂ ಯಾಕಾಗಿ ಚಂದ್ರಯಾನ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡುವುದು ಸಹಜ. ಮಾನವನಿಗೆ ಭೂಮಿಯ ಉಪಗ್ರಹಕ್ಕೆಯೇ ಹೋಗಲು ಸಾಧ್ಯವಿಲ್ಲದಿರುವಾಗ ಇನ್ನು ವಿಶ್ವದ ಕಡೆ ಸಂಚರಿಸುವುದಾದರೂ ಹೇಗೆ....?

ವಿಜ್ಞಾನವು ಬಾಹ್ಯಾಕಾಶದ ಬಗ್ಗೆ ಮಾಡಿರುವ ಸಾಧನೆಯನ್ನು ಅಲ್ಪ ವಿವರಿಸಿ ಮುಂದೆ ವಿಶ್ವದ ಕಡೆ ಕಣ್ಣು ಹಾಯಿಸುವ. (ಈ ಭಾಗದಲ್ಲಿ ಮನುಷ್ಯನ ಸಾಧನೆಯನ್ನು ಸಂಕ್ಷಿಪ್ತವಾಗಿ ತಿಳಿದು 2ನೇ ಭಾಗದಲ್ಲಿ ವಿಶ್ವದ ಅದ್ಭುತದ ಬಗ್ಗೆ ತಿಳಿಯುವ)

*ಬಾಹ್ಯಾಕಾಶದಲ್ಲಿ ವಿಜ್ಞಾನದ ಸಾಧನೆ*
➖➖➖➖➖➖➖

ಮಾನವನು ಬಾಹ್ಯಾಕಾಶದಲ್ಲಿ ಹಲವಾರು ಸಾಧನೆಯನ್ನು  ಮಾಡಿದ್ದಾನೆ, ಮತ್ತು ಮಾಡುತ್ತಿದ್ದಾನೆ. ಅದರಲ್ಲಿ ಕೆಲವೊಂದು ಹೇಳುವುದಾದರೆ, ದೂರದಲ್ಲಿರುವ ಕೆಲವೊಂದು ಹೊಸಾ ಹೊಸಾ ಗ್ರಹಗಳು, ನಕ್ಷತ್ರಗಳು, ಗೆಲಕ್ಸಿಗಳು, ಮುಂತಾದವುಗಳನ್ನು ಶಕ್ತಿಶಾಲಿ ಟೆಲಿಸ್ಕೋಪ್ ಮೂಲಕ ಪತ್ತೆ ಹಚ್ಚಿದಾನೆ, ಕೆಲವು ಗ್ರಹಗಳ ಬಗ್ಗೆ ಅಧ್ಯಾಯನ ನಡೆಸುತ್ತಿದ್ದಾನೆ, ಭೂಮಿಯಂತೆ ವಾಸಿಸಲು ಯೋಗ್ಯವಾದ ಬೇರೆ ಗ್ರಹಗಳಿವೆಯೇ ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾಗಿದ್ದಾನೆ. ಕೆಲವೊಂದು ಗ್ರಹಗಳ ಹತ್ತಿರಕ್ಕೆ ಸ್ಪೇಸ್ ಕ್ರಾಫ್ಟ್ ಕಳುಹಿಸುತ್ತಿದ್ದಾನೆ. ನಮ್ಮ ಹತ್ತಿರದ ಗ್ರಹವಾದ ಮಂಗಳಗ್ರಹಕ್ಕೆ ರಾಕೆಟ್ ಮೂಲಕ ಒಂದು ವಿಶೇಷವಾದ ಯಂತ್ರವನ್ನು ಕಳುಹಿಸಿದ್ದಾರೆ. ಆ ಯಂತ್ರವು ಮಂಗಳಗ್ರಹದ ಹಲವು ಫೋಟೋಗಳನ್ನು ತೆಗೆದು ಭೂಮಿಗೆ ರವಾನಿಸಿದೆ.

*ಸ್ಯಾಟಲೈಟ್ಸ್ satellites*
➖➖➖➖➖➖➖

ವಿಜ್ಞಾನದ ಪ್ರಮುಖವಾದ ಒಂದು ಸಾಧನೆಯಾಗಿದೆ ಈ ಸ್ಯಾಟಲೈಟ್ಸ್'ಗಳು. ಇದನ್ನು ಮನುಷ್ಯನು ಅಂತರೀಕ್ಷಕ್ಕೆ ಕಳುಹಿಸುತ್ತಿದ್ದಾನೆ. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರವಾದರೆ ಕೃತಕ ಉಪಗ್ರಹ ಈ ಸ್ಯಾಟಲೈಟ್ಸ್ ಗಳಾಗಿವೆ. ಇದರಿಂದ ಮಾನವನು ತುಂಬಾ ಪ್ರಯೋಜನಗಳನ್ನು ಪಡೆಯುತ್ತಿದ್ದಾನೆ. ಈ ಕಾಲದಲ್ಲಿ ಮನುಷ್ಯನ ಹಲವಾರು ಕಾರ್ಯಗಳು ನಡೆಯುವುದು ಈ ಸ್ಯಾಟ ಲೈಟ್'ಗಳಿಂದಳೇ ಆಗಿದೆ.

ನಾವು ಇಂಟರ್ನೆಟ್, ಮತ್ತು ನೆಟ್'ವರ್ಕ್ ಮೂಲಕ ಇನ್ನೊಬ್ಬರನ್ನು ಎಷ್ಟೇ ದೂರದಲ್ಲಿದ್ದರೂ ಕ್ಷಣಮಾತ್ರದಲ್ಲಿ ಸಂಪರ್ಕಿಸುತ್ತಿರುವುದು ಮತ್ತು ದೂರದ ರಾಷ್ಟ್ರದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಲೈವ್ ಆಗಿ ನೋಡುವುದು, ಬೇರೆ ಬೇರೆ ರಾಷ್ಟ್ರದ ಚಾನಲ್ ಗಳ ವೀಕ್ಷಣೆ ಮಾಡುವುದು, ಮುಂತಾದ ಎಲ್ಲಾ ಕಾರ್ಯದ ಹಿಂದೆ ಕೆಲಸ ಮಾಡುವುದು ಈ ಸ್ಯಾಟಲೈಟಾಗಿದೆ. ಈಗ ಇದರ ಉಪಯೋಗ ಎಷ್ಟಿದೆಯೆಂದರೆ ಪ್ರಪಂಚದ ಯಾವುದೂ ಮೂಲೆಯಿಂದ ಎರಡುವಾರಕ್ಕೂ ಮೂರುವಾರಕ್ಕೂ ಒಮ್ಮೆ ಸ್ಯಾಟಲೈಟನ್ನು ಅಂತರೀಕ್ಷಕ್ಕೆ ಕಳುಹಿಸುತ್ತಿದ್ದಾರಂತೆ. ಇದರ ವೈರಿಂಗ್ ಮಾಡುವುದು ಸಂಪೂರ್ಣ ಚಿನ್ನದಲ್ಲಿಯಂತೆ, ಕಾರಣ ಅದು ಬೇಗ ಹಾಳಾಗದಿರಲಿ ಎಂದು. ಒಂದುವೇಳೆ ಹಾಳಾದರೆ ಅದನ್ನು ಸರಿಪಡಿಸಲು ಅಲ್ಲಿ ಯಾರೂ ಹೋಗಲು ಸಾಧ್ಯವಿಲ್ಲ. ಭೂಮಿಗಿಂತಲೂ 2ಸಾವಿರ ಕಿ.ಮೀ, ಮತ್ತೆ 3ಸಾವಿರ ಕಿ.ಮೀ, ಮತ್ತು ಅದಕ್ಕಿಂತಲೂ ದೂರದಲ್ಲಿ ಬೇರೆ ಬೇರೆ ರೀತಿಯ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಸ್ಯಾಟಲೈಟ್'ಗಳು ಭೂಮಿಯ ಸುತ್ತ ವೇಗವಾಗಿ ಸುತ್ತುತ್ತಾ ಅದರ ಕೆಲಸವನ್ನು ಮಾಡುತ್ತಿದೆ. ಇದನ್ನು ತಯಾರಿಸುವಾಗ ವೈರಿಂಗ್ ಗಾಗಿ ಸುಮಾರು 20 ಕೆ.ಜಿ ಚಿನ್ನವನ್ನು ಬಳಸುತ್ತಾರಂತೆ. ಸ್ಯಾಟಲೈಟ್ ಗಳು ಬೇರೆ ಬೇರೆ ಗಾತ್ರದಲ್ಲಿ ತಯಾರಿಸುತ್ತಾರೆ. ಸಣ್ಣ ಚೆಂಡಿನ ಗಾತ್ರದಿಂದ ಹಿಡಿದು ಲಾರಿಯ ಗಾತ್ರದಷ್ಟು ದೊಡ್ಡದಿರುತ್ತದೆ. ಇವುಗಳ ಗಾತ್ರ ಇವುಗಳ ಪ್ರಯೋಜನದ ಮೇಲೆ ಅವಲಂಭಿಸಿಯಿರುತ್ತದೆ. ಈಗಿನವರೆಗೂ ಸುಮಾರು 7000 ದಷ್ಟು ಸ್ಯಾಟಲೈಟ್ಸ್ ಗಳನ್ನು ವಿವಿಧ ದೇಶಗಳು ಅಂತರೀಕ್ಷಕ್ಕೆ ಕಳುಹಿಸಿದೆಯಂತೆ. ಇವುಗಳಲ್ಲಿ ಸುಮಾರು 3000 ಸ್ಯಾಟಲೈಟ್ಸ್ ಗಳು ಭೂಮಿಯ ಸುತ್ತ ತಿರುಗುತ್ತಿವೆ. ಇದರಲ್ಲಿ ಕೇವಲ 1500 ಸ್ಯಾಟಲೈಟ್ಸ್ ಗಳು ಮಾತ್ರ ನಮ್ಮ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದೆ. ಬಾಕಿ ಇರುವ ಎಲ್ಲಾ ಸ್ಯಾಟಲೈಟ್ಸ್ ಗಳು ನಿಯಂತ್ರ ತಪ್ಪಿಯೂ, ತಾಂತ್ರಿಕದೋಷದಿಂದಲೂ, ಹಾಳಾಗಿಯೂ ಇದೆ. (ಸಂಕ್ಷಿಪ್ತ ಬರಹವಾಗಿರುವುದರಿಂದ "ಇದನ್ನು ಹೇಗೆ ತಯಾರಿಸುತ್ತಾರೆ, ಅಂತರೀಕ್ಷಕ್ಕೆ ಹೇಗೆ ಕಳುಹಿಸುತ್ತಾರೆ, ಇದು ಹೇಗೆ ಭೂಮಿಯ ಮೇಲೆ ತಿರುಗುತ್ತದೆ, ಇದರ ಇಂಧನ ಏನು ಎಂಬುವುದು ವಿವರಿಸಲಿಲ್ಲ.ಕ್ಷಮಿಸಿ")

*ಸ್ಪೇಸ್ ಸೂಟ್, ಅಂತರೀಕ್ಷ ಪ್ರಯಾಣ, ಮತ್ತು (ISS) ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್*
➖➖➖➖➖➖➖

*ಈ ವಿಶ್ವದಲ್ಲಿ ಎಷ್ಟೋ ರಹಸ್ಯಗಳು ರಹಸ್ಯಗಳಾಗಿಯೇ ಉಳಿದಿದೆ. ಅದನ್ನು ಭೇದಿಸಲು ಮನುಷ್ಯನಿಂದ ಸಾಧ್ಯವಾಗುತ್ತಾ ಇಲ್ಲ. ಆ ರಹಸ್ಯಗಳನ್ನು ಭೇದಿಸಲು ಮಾನವನ ಕಠಿಣ ಶ್ರಮ ನಡೆಯುತ್ತನೇ ಇದೆ.*

ಭೂಮಿಯ ವಾತಾವರಣಕ್ಕೆ ದೂರವಿರುವ ಅಂತರೀಕ್ಷದಲ್ಲಿ ಜೀವಿಸಲು ಭೂಮಿಯಲ್ಲಿರುವಂತೆಯೇ ಅನುಕೂಲವಿರುವುದಿಲ್ಲ. ತುಂಬಾ ಬಿಸಿ, ಭಯಂಕರವಾದ ಸೂರ್ಯನ ಕಿರಣಗಳು, ಮುಂತಾದ ಹಲವಾರು ಸಮಸ್ಯೆಗಳಿರುವ ಅಂತರೀಕ್ಷದಲ್ಲಿ ಗಗನಯಾನಿಗಳನ್ನು ರಕ್ಷಿಸುವುದೇ *ಸ್ಪೇಸ್ ಸೂಟ್* (ಸ್ಪೇಸ್ ಸೂಟ್ ಎಂದರೆ ನಾವೆಲ್ಲಾ ಫೋಟೋ ಮತ್ತು ಟಿವಿಯಲ್ಲಿ ನೋಡಿರುತ್ತೇವೆ, ಗಗನಯಾನಿಗಳು ಧರಿಸುವ ಬಿಳಿ ವರ್ಣದ ದಪ್ಪವಾಗಿರುವ ಸೂಟ್) ಅಂತರೀಕ್ಷದಲ್ಲಿ ಟೆಂಪ್ರೇಚರ್ ಸುಮಾರು 250ಡಿಗ್ರಿ ಇರುತ್ತದೆ. ಇದರಿಂದ ಅಂತರೀಕ್ಷ ಯಾಣಿಗಳನ್ನು ಸ್ಪೇಸ್ ಸೂಟ್ ರಕ್ಷಿಸುತ್ತದೆ. ಸ್ಪೇಸ್ ಸೂಟ್ ಒಳಗಡೆ ಗಗನಯಾನಿಗಳಿಗೆ ಬೇಕಾದ ವಾಟರ್ ಕೂಲಿಂಗ್ ಸಿಸ್ಟಮ್ ಮತ್ತು ಸ್ಪೇಸ್ ಸೂಟ್ ಹಿಂದೆಯಿರುವ ಬಾಕ್ಸ್ ನಂತಿರುವ ವಸ್ತುವಿನಲ್ಲಿ ಗಗನಯಾಣಿಗಳು ಸ್ಪೇಸ್ ವಾಕ್ ಮಾಡುವಾಗ ಉಸಿರಾಡಲು ಬೇಕಾದ ಆಕ್ಸೀಜನ್, ಕುಡಿಯಲು ನೀರು, ಮತ್ತು ಸ್ಪೇಸ್ ಸೂಟ್ ಗೆ ಬೇಕಾದ ಇಲೆಕ್ಟ್ರಿಕ್ ಕೂಡಾ ಇರುತ್ತದೆ. ಮಾತ್ರವಲ್ಲದೆ ಅಂತರೀಕ್ಷದಲ್ಲಿ ಸಣ್ಣ ಸಣ್ಣ ಕಲ್ಲುಗಳು ಬುಲೆಟ್ ಗಿಂತಾ ವೇಗವಾಗಿ ಬರುತ್ತಿರುತ್ತದೆ. ಇದರಿಂದೆಲ್ಲಾ ಈ ಸ್ಪೇಸ್ ಸೂಟ್ ರಕ್ಷಿಸುತ್ತದೆ. ಈ ಸ್ಪೇಸ್ ಸೂಟ್ ನ ತೂಕ 140 ಕೆ.ಜಿ ಇರುತ್ತದೆ. ಆದರೆ ಅಂತರೀಕ್ಷದಲ್ಲಿ ಇದನ್ನು ಧರಿಸುವವರಿಗೆ ಅದರ ಭಾರ ಅರಿವಿಗೆ ಬರಲ್ಲ. ಕಾರಣ ಅಂತರೀಕ್ಷದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರ ಬಗ್ಗೆ ಕೇಳಲು ಚೆನ್ನಾಗಿರುತ್ತದೆ. ಆದರೆ ಒಂದು ಸ್ಪೇಸ್ ಸೂಟ್ ತಯಾರಿಸುವುದಕ್ಕೆ ಸುಮಾರು 80 ಕೋಟಿಯಷ್ಟು ಖರ್ಚಾಗುತ್ತದೆ.

ಅಂತರೀಕ್ಷದಲ್ಲಿ ಎಷ್ಟೇ ಭಾರವಿರುವ ವಸ್ತುವನ್ನು ಕೂಡಾ ಸಲೀಸಾಗಿ ಎತ್ತಬಹುದು. (ಉದಾ: ಒಂದು ದೊಡ್ಡ ಬಂಡೆಕಲ್ಲನ್ನು ಸ್ಪೇಸ್ ಗೆ ಕೊಂಡುಹೋದರೆ ಅದನ್ನು ನೀವು ಸಲೀಸಾಗಿ ಎತ್ತಬಹುದು. ಅಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ಯಾವುದೇ ವಸ್ತುವಿಗೂ ತೂಕವಿರುವುದಿಲ್ಲ.) ಅಂತರೀಕ್ಷದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣದಿಂದ ಅಂತರೀಕ್ಷಯಾಣಿಗಳು ಮತ್ತು ಅಲ್ಲಿರುವ ಎಲ್ಲಾ ವಸ್ತುಗಳು ತೇಲುತ್ತನೇ ಇರುತ್ತದೆ. ಅಂತರೀಕ್ಷದಲ್ಲಿ ಭೂಮಿಯನ್ನು ಪೂರ್ಣವಾಗಿ ನೋಡಲು ಸಾಧ್ಯವಾಗುತ್ತದೆ. ಅಂತರೀಕ್ಷ ಪ್ರಯಾಣವೆಂದರೆ ಸುಲಭದ ಮಾತಲ್ಲ. ಸ್ವಲ್ಪ ಎಡವಟ್ಟಾದರೂ ಪ್ರಾಣ ಪಕ್ಷಿ ಹಾರಿ ಹೋಗುತ್ತೆ. ಅಲ್ಲಿಗೆ ತೆರಳುವ ಗಗನಯಾಣಿಗಳಿಗೆ ಅತ್ಯಂತಾ ಕಠಿಣವಾದ ಹಲವು ತರಬೇತಿಯನ್ನು ನೀಡಲಾಗುತ್ತದೆ. ಭೂಮಿಯಿಂದ ಅಂತರೀಕ್ಷಕ್ಕೆ ಹೋಗುವ ರಾಕೆಟ್ ತುಂಬಾ ವೇಗವಾಗಿ ಹೋಗುತ್ತದೆ. ಇದರಿಂದ ಗಗನಯಾಣಿಗಳ ದೇಹದ ಮೇಲೆ ತುಂಬಾ ಒತ್ತಡ ಬೀಳುತ್ತದೆ. ಇದಕ್ಕಾಗಿ ಗಗನಯಾಣಿಗಳಿಗೆ G ಪೋರ್ಸ್ ಎಂಬ ಕಠಿಣ ತರಬೇತಿ ಕೊಡುತ್ತಾರೆ. ಈ ತರಬೇತಿಯು ಅತ್ಯಂತಾ ಕಠಿಣವಾಗಿರುತ್ತದೆ. ಈ ರೀತಿಯ ಹಲವಾರು ತರಬೇತಿಗಳು ಸತತ 2ವರ್ಷಗಳ ಕಾಲ ಕೊಡುತ್ತಾರೆ. ಇಂತಹಾ ತರಬೇತಿಗಳೆಲ್ಲಾ ಪೂರ್ಣವಾದ ಬಳಿಕವಾಗಿದೆ ಅಂತರೀಕ್ಷ ಪ್ರಯಾಣ.

ಅಂತರೀಕ್ಷದಲ್ಲಿ ಗಗನಯಾಣಿಗಳು ಹೋಗಿ ಶಂಶೋಧನೆ ನಡೆಸಲು ಮತ್ತು ಅಲ್ಲಿ ತಂಗಲುಬೇಕಾಗಿ ಮಾನವನು ಒಂದು ಅದ್ಭುತವಾದ ಪ್ರತ್ಯೇಖ ವ್ಯವಸ್ಥೆಯನ್ನು ಮಾಡಿದ್ದಾನೆ ಅದುವೇ *(ISS) ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್* ಇದು ಗಗನಯಾಣಿಗಳಿಗೆ ಮನೆಯಿದ್ದಂತೆ. ಇದರ ಬಗ್ಗೆ ಅಲ್ಪ ತಿಳಿದು, ನಂತರ ವಿಶ್ವದ ಬಗ್ಗೆ ಸಂಕ್ಷಿಪ್ತವಾಗಿ ನೋಡುವ....

ISS ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್. ಇದು ಭೂಮಿಯಿಂದ 400 ಕಿ.ಮೀ ದೂರದಲ್ಲಿದೆ. ಇದನ್ನು ಭೂಮಿಯಿಂದ ಟೆಲಿಸ್ಕೊಪ್ ಮೂಲಕ ವೀಕ್ಷಣೆ ಮಾಡಬಹುದು. ಇದರ ವೇಗ ಗಂಟೆಗೆ 27, 600 ಕಿ.ಮೀ. ಇದು ಒಂದು ಫುಟ್ಬಾಲ್ ಮೈದಾನದಷ್ಟು ದೊಡ್ಡದಿದೆ. ಇದನ್ನು ಅಮೆರಿಕಾ, ರಷ್ಯಾ, ಜಪಾನ್, ಕೆನಡಾ ಮುಂತಾದ 16 ಬಲಿಷ್ಟ ರಾಷ್ಟ್ರಗಳು ಒಟ್ಟು ಸೇರಿ ನಿರ್ಮಾಣ ಮಾಡಿದೆ. ಇದರ ನಿರ್ಮಾಣದ ಖರ್ಚು ನಮ್ಮ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ *ತೊಂಬತ್ತು ಲಕ್ಷದ ಎಪ್ಪತ್ತು ಸಾವಿರ ಕೋಟಿ* ಆಗಿದೆಯಂತೆ.

ಗಗನಯಾಣಿಗಳು ಅಂತರೀಕ್ಷಕ್ಕೆ ಪ್ರಯಾಣಿಸುವಾಗ ರಾಕೆಟ್ ನ ತುದಿಯಲ್ಲಿರುವ ಸ್ಪೇಸ್ ಕ್ರಾಫ್ಟ್ ನ ಒಳಗಡೆ ಇರುತ್ತಾರೆ. ರಾಕೆಟ್ ಲಾಂಚ್ ಆದ ಕೆಲಸವು ನಿಮಿಷಗಳ ನಂತರ ರಾಕೆಟ್ ತುದಿಯಲ್ಲಿರುವ ಸ್ಪೇಸ್ ಕ್ರಾಫ್ಟ್ ರಾಕೆಟ್ ನಿಂದ ಪೂರ್ತಿಯಾಗಿ ಬೇರೆಯಾಗಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್ ಗೆ ಕನೆಕ್ಟ್ ಆಗುತ್ತೆ. ಇದನ್ನು ಡಾಕಿಂಗ್ ಅನ್ನುತ್ತಾರೆ. ನಂತರ ಗಗನಯಾಣಿಗಳು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್'ನ ಒಳಗಡೆಗೆ ಹೋಗುತ್ತಾರೆ. ಅಲ್ಲಿ ಕೆಲವು ದಿನಗಳು ಹಲವು ರಿಸರ್ಚ್ ಗಳನ್ನು ನಡೆಸಿ ಸ್ಪೇಸ್ ಸ್ಟೇಷನಿನ ಹಾಳಾದ ಬಾಗಗಳನ್ನು ಸರಿಪಡಿಸುತ್ತಾರೆ. ಇಂತಹಾ ಸಂದರ್ಭದಲ್ಲಿ ಅವರು ಸ್ಪೇಸ್ ವಾಕ್ ಮಾಡಬೇಕಾಗುತ್ತದೆ. ಈ ಸ್ಪೇಸ್ ವಾಕ್ ಮಾಡುವಾಗ ಸ್ಪೇಸ್ ಸೂಟ್ ಧರಿಸಬೇಕಾಗುತ್ತದೆ. ಒಂದು ವೇಳೆ ಸ್ಪೇಸ್ ಸೂಟ್ ಧರಿಸದೆ ಸ್ಪೇಸ್ ಸ್ಟೇಷನಿನ ಹೊರಗಡೆ ಬಂದರೆ ಗಾಳಿ ಇಲ್ಲದಿರುವುದರಿಂದ ಮತ್ತು ಬಿಸಿ ಜಾಸ್ತಿ ಇರುವುದರಿಂದ ಮನುಷ್ಯನು ಕೇವಲ 17 ಸೆಕೆಂಡಿನಲ್ಲಿ ಸತ್ತು ಹೋಗುತ್ತಾನಂತೆ.

*ಗಗನಯಾಣಿಗಳು ಅಂತರೀಕ್ಷದಿಂದ ಭೂಮಿಗೆ  ವಾಪಸ್ ಆಗುವುದು*
➖➖➖➖➖➖➖

ಸ್ಪೇಸ್ ಸ್ಟೇಶನ್ ನಲ್ಲಿ ಬೇರೆ ಬೇರೆ ಗಗನಯಾಣಿಗಳು ಬರುತ್ತಲೇ ಇರುತ್ತಾರೆ. ಒಂದು ತಂಡ ಬಂದ ಅದೇ ಸ್ಪೇಸ್ ಕ್ರಾಫ್ಟ್ ನಲ್ಲಿ ಮುಂಚೆ ಇದ್ದ ತಂಡ ಭೂಮಿಗೆ ಹಿಂತಿರುಗಬೇಕಾಗುತ್ತದೆ. ಆ ಸ್ಪೇಸ್ ಕ್ರಾಫ್ಟ್ ಸ್ಪೇಸ್ ಸ್ಟೇಶನ್'ನಿಂದ ಬೇರೆ ಯಾಗುವುದಕ್ಕೆ ಅನ್ ಡಾಕಿಂಗ್ ಎನ್ನುತ್ತಾರೆ. ಸ್ಪೇಸ್ ಕ್ರಾಫ್ಟ್ ಸ್ಪೇಸ್ ಸ್ಟೇಶನ್ ನಿಂದ ಬೇರೆಯಾದ ನಂತರ ಕೆಲವು ನಿಮಿಷ ಪ್ರಯಾಣ ಮಾಡಿ ನಂತರ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ನಂತರ ಸ್ಪೇಸ್ ಕ್ರಾಫ್ಟ್ ಮೂರು ಭಾಗಗಳಾಗುತ್ತದೆ. ಅದರಲ್ಲಿ ಸ್ಪೇಸ್ ಕ್ರಾಫ್ಟ್ ನ ಮಧ್ಯದ ಭಾಗವಾದ ಡೀಸೆಂಟ್ ಮಾಡುಲ್ ಎಂಬ ಬಾಗದಲ್ಲಿ ಗಗನಯಾಣಿಗಳು ಇರುತ್ತಾರೆ. ಬೇರೆಯಾದ ಉಳಿದ ಎರಡು ಭಾಗಗಳು ಗಾಳಿಯಲ್ಲಿ ಸ್ಪೋಟವಾಗುತ್ತದೆ. ಗಗನಯಾಣಿಗಳಿರುವ ಡೀಸೆಂಟ್ ಮಾಡುಲ್ ಭೂಮಿಯ ಗುರುತ್ವಾಕರ್ಷಣಾ ಬಲದಿಂದ ಗಂಟೆಗೆ 800 ಕಿ.ಮಿ ವೇಗದಲ್ಲಿ ಬರುತ್ತದೆ. ಸ್ವಲ್ಪ ಸಮಯವಾದಾಗ ಇದರ ವೇಗ ಕಡಿಮೆಯಾಗಲು ಬೇಕಾಗಿ ಒಂದು ಪ್ಯಾರಶೂಟನ್ನು ಓಪನ್ ಮಾಡುತ್ತಾರೆ. ಇದರಿಂದ ಅದರ ವೇಗ 800 ಕಿ.ಮಿ ನಿಂತ ಕೇವಲ 25 ಕಿ.ಮಿ ಗೆ ಸೇರಿಕೊಳ್ಳುತ್ತದೆ. ಈ ವೇಗದಿಂದ ಭೂಮಿಗೆ ಬಿದ್ದರೂ ಕೂಡಾ ತೊಂದರೆಯಾಗುತ್ತದೆ. ಇದಕ್ಕಾಗಿ ಭೂಮಿಗೆ 70 ಸೆ.ಮಿ ದೂರದಲ್ಲಿರುವಾಗ ಸ್ಪೇಸ್ ಕ್ರಾಫ್ಟ್ ನ ಅಡಿಯಲ್ಲಿರುವ 6 ಚಿಕ್ಕ ಚಿಕ್ಕ ರಂಧ್ರಗಳಲ್ಲಿ ಬೆಂಕಿ ಆಗುತ್ತದೆ. ಇದರಿಂದ 25 ವೇಗ ಇರುವ ಸ್ಪೇಸ್ ಕ್ರಾಫ್ಟ್ 5 ಕಿ.ಮಿ ಗೆ ಬದಲಾಗಿ ಭೂಮಿ ಮೇಲೆ ಸುರಕ್ಷಿತವಾಗಿ ಬೀಳುತ್ತದೆ. ಈ ರೀತಿಯಾಗಿ ಅಂತರೀಕ್ಷ ಪ್ರಯಾಣ ಇಲ್ಲಿಗೆ ಮುಗಿಯುತ್ತದೆ.

*ಇದನ್ನೆಲ್ಲವನ್ನು yutoob ನಲ್ಲಿ ಸರ್ಚ್ ಮಾಡಿ ನಮಗೆ ನೋಡಬಹುದು.*

ಅಂತರೀಕ್ಷದಲ್ಲಿ ಗಗನಯಾಣಿಗಳು ಏನು ಮಾಡುತ್ತಾರೆ.

ಸ್ಪೇಸ್ ಸ್ಟೇಶನ್'ನ ಒಳಗಡೆ ಅವರು ಏನೆಲ್ಲಾ ಮಾಡುತ್ತಾರೆ. ಸ್ಪೇಸ್ ವಾಕ್ ಹೇಗೆ ಮಾಡುತ್ತಾರೆ, ಅಲ್ಲಿ ಆಗುವ ವಿಚಿತ್ರವಾದ ಅನುಭವವನ್ನು ನೋಡಬಹುದು.

ರಾಕೆಟ್ ಲಾಂಚಿಂಗ್,

ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನಿಗೆ ಗಗನಯಾಣಿಗಳಿರುವ ಸ್ಪೇಸ್ ಕ್ರಾಫ್ಟ್ ಹೇಗೆ ಕನೆಕ್ಟ್ (ಡಾಕಿಂಗ್) ಆಗುತ್ತೆ, ಹೇಗೆ ಅನ್ ಡಾಕಿಂಗ್ ಆಗುತ್ತೆ,

ಅಂತರೀಕ್ಷದಲ್ಲಿ ಭೂಮಿ ಹೇಗೆ ಕಾಣುತ್ತೆ,

ಭೂಮಿಗೆ ಸ್ಪೇಸ್ ಕ್ರಾಫ್ಟ್ ಬೀಳುವುದು,

ರಾಕೆಟ್ ನಲ್ಲಿರುವ ದೊಡ್ಡ ದೊಡ್ಡ ಸಿಲಿಂಡರ್ ಅದರಲ್ಲಿರುವ ಇಂಧನ ಕಾಲಿಯಾದ ಮೇಲೆ ಸುರಕ್ಷಿತವಾಗಿ ಕೆಳಗಡೆ ಸಮುದ್ರಕ್ಕೆ ಬೀಳುವುದು,

ಮಂಗಳಗ್ರಹಕ್ಕೆ ಸ್ಪೇಸ್ ಕ್ರಾಫ್ಟ್ ಹೇಗೆ ಕಳುಹಿಸುತ್ತಾರೆ,

ತೇಲಾಡುವ ಅಂತರೀಕ್ಷದಲ್ಲಿ ಗಗನಯಾಣಿಗಳು ಆಹಾರವನ್ನು ಹೇಗೆ ಉಪಯೋಗಿಸುತ್ತಾರೆ, ಹೇಗೆ ನಿದ್ರಿಸುತ್ತಾರೆ, ಹೇಗೆ ವ್ಯಾಯಾಮ ಮಾಡುತ್ತಾರೆ, ನೀರನ್ನು ಯಾವ ರೀತಿ ಬಳಸುತ್ತಾರೆ,

ಸ್ಪೇಸ್ ಸ್ಟೇಷನಿನ ಹೊರಗಡೆಯ LIVE ವೀಡಿಯೊ ಮುಂತಾದ ಹಲವು ವೀಡಿಯೋ ಯುಟ್ಯೂಬ್ ನಲ್ಲಿ ಸರ್ಚ್ ಮಾಡಿ ನೋಡಬಹುದು.


ಇದನ್ನೆಲ್ಲಾ ತಿಳಿದ ನಾವು ಎನಿಸಬಹುದು ವಿಜ್ಞಾನ ಬಹಳಾ ಮುಂದಿದೆ ಎಂದು. ಆದರೆ ವಾಸ್ತವದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ ವಿಜ್ಞಾನವು ಈಗ ತಾನೇ ಅಂಬೆಗಾಲಿಡುತ್ತಿದೆ ಅಷ್ಟೇ. ವಿಜ್ಞಾನಕ್ಕೆ ಭೂಮಿಯ ಹತ್ತಿರವಿರುವ ಒಂದು ಗ್ರಹಕ್ಕೆ ಹೋಗಬೇಕಾದರೆ ಇನ್ನೂ ಎಷ್ಟೋ ವರ್ಷಗಳ ಕಾಲ ಅಧ್ಯಯನ ನಡೆಸಿದ ನಂತರವೇ ಸಾಧ್ಯ. ಹತ್ತಿರವಿರುವ ಒಂದು ಗ್ರಹಕ್ಕೆ ತಲುಪಲೇ ಎಷ್ಟೋ ವರ್ಷಗಳ ಕಾಲ ಅಧ್ಯಾಯನ ಮಾಡಬೇಕೆಂದರೆ, ಇನ್ನು ಅದರ ನಂತರವಿರುವ ಗ್ರಹಗಳಿಗೆ ಗೆಲಕ್ಸಿಗಳ ಕಡೆ ಹೋಗುವ ವಿಷಯ ಹೇಳಿ ಪ್ರಯೋಜನವಿಲ್ಲ. ಈ ವಿಸ್ಮಯ ವಿಶ್ವದ ಬಗ್ಗೆ ವಿಜ್ಞಾನಕ್ಕೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಮಹಾ ಅಚ್ಚರಿಯಾಗಿದೆ ಈ ವಿಶ್ವ.

*insha allaah ವಿಶ್ವದ ಸೃಷ್ಟಿ, ಗ್ರಹಗಳು, ಉಪಗ್ರಹಗಳು, ಗೆಲಕ್ಸಿಗಳು, ಅಬ್ಸರ್ವೇಬಲ್ ಯೂನಿವರ್ಸ್, ಗ್ರಹಗಳ ಗಾತ್ರ, ವಿಚಿತ್ರವಾದ ಗ್ರಹಗಳು, ದೈತ್ಯ ಗ್ರಹಗಳು, ದೈತ್ಯ ನಕ್ಷತ್ರಗಳು, ಮುಂತಾದವುಗಳ ಬಗ್ಗೆ 2ನೇ ಭಾಗದಲ್ಲಿ ನೋಡುವ. 2ನೇ ಭಾಗ ತುಂಬಾ ಅದ್ಭುತವಾಗಿದೆ.*

اللهم صل على سيدنا محمد وعلى اله وصحبه وسلم

ದುಆ ವಸಿಯ್ಯತ್ತಿನೊಂದಿಗೆ

*✒️ಅಬ್ದುಲ್ ನಾಸಿರ್ ಕಾವೂರು🍇*
➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...