Skip to main content

ಸಲಫಿ ಪ್ರಸ್ಥಾನದ ಭೀಕರ ರೂಪ

ಸಲಫಿ ಪ್ರಸ್ಥಾನದ ಭೀಕರ ರೂಪ

Saturday, October 14, 2017

ಒಂದು ದಿನ ಪ್ರವಾದಿ(ಸ.ಅ)ರು ಶ್ಯಾಮಿಗೂ ಯಮನಿಗೂ ಬರಕತ್ತಿಗಾಗಿ ಪ್ರಾರ್ಥಿಸುತ್ತಾರೆ. ಆಗ ನಜ್ದ್ ಪ್ರದೇಶದವರು ಬಂದು ತಮ್ಮ ಪ್ರದೇಶಕ್ಕೆ ಪ್ರಾರ್ಥಿಸುವಂತೆ ವಿನಂತಿಸುತ್ತಾರೆ. ಆಗ ಪ್ರವಾದಿ(ಸ.ಅ)ರು ಹೇಳುತ್ತಾರೆ, ಆ ಪ್ರದೇಶದಲ್ಲಾಗಿದೆ ಶೈತಾನನ ಕೊಂಬು ಉದಯಿಸುವುದು. ಅಲ್ಲಿ ಫಿತ್ನಗಳು ನಾಶಗಳು ಉಂಟಾಗಲಿವೆ (ಬುಖಾರಿ 6681). ನಜ್ದ್ ನಲ್ಲಿ ಜನಿಸಲಿರುವ ವ್ಯಕ್ತಿಯ ಭೀಕರತೆಯನ್ನು ಸೂಚಿಸಲಿಕ್ಕಾಗಿತ್ತು ಪ್ರವಾದಿ(ಸ.ಅ)ರು ಕೊಂಬು ಎನ್ನುವ ಪ್ರಯೋಗವನ್ನು ನಡೆಸಿರುವುದು. ಚರಿತ್ರೆಯನ್ನು ಪರಿಶೋಧಿಸಿದಾಗ ಸಲಫಿ ಪಂಗಡದ ಸ್ಥಾಪಕನಾದ ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಕ್ರಿ.ಶ.1703 ಹಿ.1115ರಲ್ಲಿ ನಜ್ದ್ ನಲ್ಲಿ ಜನಿಸಿದರು. ಈ ವಿಷಯವನ್ನು ಕೇರಳ ಜಮಾಅತೇ ಇಸ್ಲಾಮಿ ಪ್ರಸಿದ್ದೀಕರಿಸಿದ ಶೈಖ್ ಇಬ್ನು ಅಬ್ದುಲ್ ವಹ್ಹಾಬ್ ಎಂಬ ಪುಸ್ತಕದ ೪ನೇ ಪುಟದಲ್ಲಿ ವಿವರಿಸಲಾಗಿದೆ.
              ಒಮ್ಮೆ ನಬಿ(ಸ.ಅ)ರು ಗನೀಮತ್ ಸಂಪತ್ತನ್ನು ಅರ್ಹರಿಗೆ ನ್ಯಾಯಯುತವಾಗಿ ಹಂಚುತ್ತಿದ್ದಾಗ ದುಲ್-ಖುವೈಶಿರತ್ ಎಂಬ ವ್ಯಕ್ತಿಯು ನಬಿ(ಸ.ಅ)ರಿಗೆ ಹೇಳುತ್ತಾರೆ ಓ ಮುಹಮ್ಮದರೇ ನೀವು ನ್ಯಾಯ ಪಾಲಿಸಬೇಕು. ನೀತಿಯ ಪರ್ಯಾಯವಾದ ನಬಿ(ಸ.ಅ)ರೊಂದಿಗೆನೆ ನ್ಯಾಯ ಪಾಲಿಸಬೇಕೆಂದು ಹೇಳಿದ ಆ ವ್ಯಕ್ತಿಯನ್ನು ವಧಿಸಲು ಉಮರ್(ರ.ಅ)  ಪ್ರವಾದಿ(ಸ.ಅ)ರೊಂದಿಗೆ ಸಮ್ಮತಿಯನ್ನು ಕೇಳಿದಾಗ, ಪ್ರವಾದಿ(ಸ.ಅ) ಹೇಳುತ್ತಾರೆ ಉಮರೇ, ಅವರಿಗೆ ತುಂಬಾ ಅನುಯಾಯಿಗಳು ಬರಲಿದ್ದಾರೆ. ಅವರಿಗೆ ಕುರಾನ್ ಮುಖ್ಯ ವಿಷಯವಾಗಿರುತ್ತದೆ. ಅವರು ನಮಾಜ್ ನಿರ್ವಹಿಸುತ್ತಾರೆ, ಅವರು ಗಡ್ಡ ಬೆಳೆಸುತ್ತಾರೆ, ಅವರು ವೃತ ಆಚರಿಸುತ್ತಾರೆ ಆದರೆ ಅವರ ವಿಶ್ವಾಸವು ಅವರ ಗಂಟಲಿನಾಚೆಗೆ ತಲುಪುವುದಿಲ್ಲ(ಬುಖಾರಿ 6534).
               ಪ್ರವಾದಿ(ಸ.ಅ)ರ ಮುನ್ನೆಚ್ಚರಿಕೆಯಂತೆ ಇದೇ ದುಲ್-ಖುವೈಶಿರತ್ ಎಂಬ ವ್ಯಕ್ತಿಯ ಸಂತಾನ ಪರಂಪರೆಯ ೧೬ನೇ ವ್ಯಕ್ತಿಯಾಗಿದ್ದಾನೆ ಸಲಫಿ ಪ್ರಸ್ಥಾನದ ಸ್ಥಾಪಕ ಇಬ್ನು ಅಬ್ದುಲ್ ವಹ್ಹಾಬ್. ಈತನ ಜನನವು ಪ್ರವಾದಿ(ಸ.ಅ)ರು ಶೈತಾನನ ಕೊಂಬು ಉದಯಿಸಲಿದೆ ಎಂದು ಎಚ್ಚರಿಕೆ ನೀಡಿದ ನಜ್ದ್ ನ ಸಬೇದ್ ಎಂಬ ಪ್ರದೇಶದಲ್ಲಾಗಿತ್ತು.
         ಇನ್ನು ಭಾರತದಲ್ಲಿ ಪ್ರಥಮ ಬಾರಿಗೆ ಮಾಲಿಕುದೀನಾರ್(ರ.ಅ)ರವರ ನೇತೃತ್ವದಲ್ಲಿ ಹತ್ತು ಸ್ವಹಾಬಿಗಳು ಕೇರಳದ ವಿವಿಧ ಭಾಗಗಳಲ್ಲಿ ಹತ್ತು ಮಸೀದಿಗಳನ್ನು ನಿರ್ಮಿಸಿ ಇಸ್ಲಾಂ ಧರ್ಮಕ್ಕೆ ಚಾಲನೆ ನೀಡಿದ್ದರು. ಪ್ರವಾದಿ(ಸ.ಅ)ರ ಕಾಲದಲ್ಲಾಗಿತ್ತು ಅದು. ಪ್ರವಾದಿ(ಸ.ಅ)ರ ಜೀವನ ಶೈಲಿಯನ್ನು ಅನುಕರಿಸಿದವರಾಗಿದ್ದರು ಆ ಸ್ವಹಾಬಿಗಳು. ನಾವು ಗಮನಿಸಬೇಕಾದ ಅಂಶವೇನೆಂದರೆ ಆ ಸ್ವಹಾಬಿಗಳು ತಾವು ನಿರ್ಮಿಸಿದ ಮಸೀದಿಗಳಲ್ಲಿ ಮಳಯಾಲದಲ್ಲಿ ಖುತುಬಾ ನಿರ್ವಹಿಸಲೋ, ಸ್ತ್ರೀಯರು ಜುಮಾ ನಮಾಜ್ಗೆ ಬರಬೇಕೆಂದೊ ಕರೆ ನೀಡಲಿಲ್ಲ.
              ಇನ್ನು ಸಲಫಿ ಪ್ರಸ್ಥಾನದ ನೇತಾರರು ಜನಿಸಿದ್ದು ಪ್ರವಾದಿ(ಸ.ಅ)ರು ಜನಿಸಿ ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚು ಕಾಲದ ನಂತರವಾಗಿತ್ತು. ಆದರೆ ಸುನ್ನಿಗಳು ಅಂಗೀಕರಿಸುವ ೪ ಮದ್ಸ್ಹಬ್ನ ಇಮಾಮರುಗಳು ಪ್ರವಾದಿ(ಸ.ಅ)ರು ಪ್ರಥಮ ಮೂರು ಶತಮಾನಗಳು ಉತ್ತಮ ಶತಮಾನಗಳೆಂದು ವಿಶ್ಲೇಷಿಸಿದ ಶತಮಾನಗಳಲ್ಲಿ ಜನಿಸಿ ಜೀವಿಸಿ ಮರಣಹೊಂದಿದವರಾಗಿದ್ದಾರೆ. ಇಮಾಂ ಶಾಫೀ(ರ.ಅ) ಯಮನಿನಲ್ಲಿ ಮುದರ್ರಿಸರಾಗಿದ್ದರು. ಯಮನ್ ದೇಶದ ವಿಶೇಷತೆಯಾಗಿ ಪ್ರವಾದಿ(ಸ.ಅ)ರು ಹೇಳುತ್ತಾರೆ "ಈಮಾನ್" ಯಮನಿನಲ್ಲಾಗಿದೆ (ಬುಖಾರಿ ೪೧೨೮). ಇಮಾಂ ಅಬೂಹನೀಫಾ(ರ.ಅ) ತಮ್ ಜೀವನದಲ್ಲಿ ಕೆಲವೊಂದು ಸ್ವಹಾಬಿಗಳನ್ನು ದರ್ಶಿಸಿದವರಾಗಿದ್ದರು.
             ತಮ್ಮ ಪೈಶಾಚಿಕವಾದ ಆಶಯಗಳನ್ನು ಭಿತ್ತರಿಸಿ ಲೋಕ ಮುಸಲ್ಮಾನರ ವಿಶ್ವಾಸವನ್ನು ನಾಶಪಡಿಸಲು ಹೊರಟಿರುವ ಸಲಫಿ ಪ್ರಸ್ಥಾನವನ್ನು ಬೇರು ಸಮೇತ ಕಿತ್ತೊಗೆಯಲು ನಾವು ಪಣತೊಡಬೇಕಾಗಿದೆ. ಪ್ರವಾದಿ(ಸ.ಅ)ರು ಕಲಿಸಿದ ಆಶಯ ಆದರ್ಶಗಳೊಂದಿಗೆ, ಸ್ವಹಾಬಿಗಳನ್ನು, ಮದ್ಸ್ಹಬ್ ಇಮಾಮರುಗಳನ್ನು ಅಂಗೀಕರಿಸಿ,  ಸುನ್ನತ್ ಜಮಾಅತಿನ ಆಲಿಮ್ ಗಳೊಂದಿಗೆ ಕೈಜೋಡಿಸಿ ನೈಜ ಮುಸ್ಲಿಮರಾಗಿ ಜೀವಿಸಿ ಈಮಾನಿನೊಂದಿಗೆ ಮರಣ ಹೊಂದಲು ಅಲ್ಲಾಹು ನಮಗೆ ತೌಫೀಕ್ ನೋಡಲು... ಆಮೀನ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...