Skip to main content

ಪಾಕಿಸ್ತಾನಕ್ಕೆ ಝಿಂದಾಬಾದ್ ಕೂಗುತ್ತಿದ್ದ ಕಾಶ್ಮೀರಿಗಳು.

ಪಾಕಿಸ್ತಾನಕ್ಕೆ ಝಿಂದಾಬಾದ್ ಕೂಗುತ್ತಿದ್ದ ಕಾಶ್ಮೀರಿಗಳು.
🎤 *ಕಾಂತಪುರಂ*

*(Saturday, October 14, 2017 Report )*

————————————-
ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದ ಕಾಶ್ಮೀರ ಸಮೂಹವನ್ನು "ಇಂಡಿಯಾ ಹಮಾರಾ ಹೇ"
ಎಂದು ಕರೆಯಿಸುವಲ್ಲಿ ಮರ್ಕಝ್ ನ ಚಟುವಟಿಕೆಗಳಿಗೆ ಸಾಧ್ಯವಾಯಿತು ಎಂದು ಅಖಿಲ ಭಾರತ ಸುನ್ನೀ ಜಂಯ್ಯತುಲ್ ಉಲಮಾ ಶೈಖುನಾ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಎರ್ನಾಕುಳಂ ಚೇರನೆಲ್ಲೂರುನಲ್ಲಿ ಮರ್ಕಝ್ ಅಧೀನ ಸಂಸ್ಥೆ ಅಲ್ ಫಾರೂಕಿಯ್ಯ ಶಾಲೆಯ ಹೈಯರ್ ಸೆಕಂಡರಿ ಬ್ಲಾಕ್ ಉದ್ಘಾಟನೆಗೈದು ಉಸ್ತಾದ್ ಮಾತನಾಡುತ್ತಿದ್ದರು.
ಪಾಕಿಸ್ತಾನ ವನ್ನು ಬೆಂಬಲಿಸಿ ಅವರಿಗೆ ಜೈಕಾರ ಮೊಳಗಿಸುವ ದೊಡ್ಡದೊಂದು ವಿಭಾಗ ಕಾಶ್ಮೀರದಲ್ಲಿರುವುದರಿಂದಲೇ ಅಲ್ಲಿ ನಿತ್ಯ ಸಂಘರ್ಷ ನಡೆಯುತ್ತಾ ಇತ್ತು.
ಕಾಶ್ಮೀರದಲ್ಲಿ ಮರ್ಕಝ್ ನ ಅಧೀನದಲ್ಲಿ ಶಾಲೆಗಳನ್ನು ತೆರೆದು ಅವರಿಗೆ ಭೌತಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸ ನೀಡಿದಾಗ ಪಾಕಿಸ್ತಾನಕ್ಕೆ ಜೈಕಾರ ಮೊಳಗಿಸುತ್ತಿದ್ದ ಅವರು ಭಾರತಕ್ಕೆ ಜೈಕಾರ ಮೊಳಗಿಸಿ ಇಂಡ್ಯಾ ಹಮಾರಾ ಹೇ (ಭಾರತ ನಮ್ಮದು) ಎಂದು ಘೋಷಣೆ ಕೂಗಲಿಕ್ಕೆ ಅವರಿಂದ ಸಾಧ್ಯವಾಯಿತು ಎಂದು ಧೈರ್ಯದಿಂದ ಹೇಳಲು ಸಾಧ್ಯ ಎಂದರು.
ಕಾಶ್ಮೀರದಲ್ಲಿ ಮರ್ಕಝ್ 18 ಶಾಲೆಗಳನ್ನು ಸ್ಥಾಪಿಸಿದೆ.ಹತ್ತು ವರ್ಷ ಮುಂಚೆ ಅನಾಥ ವಿದ್ಯಾರ್ಥಿಗಳು ಸಹಿತ ಹಲವು ಕಾಶ್ಮೀರಿ ವಿದ್ಯಾರ್ಥಿಗಳನ್ನು ಕ್ಯಾಲಿಕಟ್ ಮರ್ಕಝ್ ಗೆ ಕರಕೊಂಡು ಬಂದು ಅವರಿಗೆ ಉನ್ನತ ವಿದ್ಯಾಭ್ಯಾಸ ನೀಡುವಾಗಲೂ ಅವರಲ್ಲಿ ಹಲವರು ಪಾಕಿಸ್ತಾನ ಪರವಾಗಿ ಮಾತನಾಡುತ್ತಿದ್ದರು!
ಆದರೆ ಕಲಿಕೆ ಪೂರ್ತಿಗೊಳಿಸಿದಾಗ ರಾಷ್ಟ್ರ ಸ್ನೇಹ ಮತ್ತು ದೇಶ ಭಕ್ತಿ ಅವರ ರಕ್ತ ಧಮನಿಗಳಲ್ಲಿ ಲೀನವಾಗಿತ್ತು. ಮರ್ಕಝ್ ಅವರಿಗೆ ದೇಶ ಸ್ನೇಹ ಮತ್ತು ಭಕ್ತಿಯ ಕುರಿತು ಚೆನ್ನಾಗಿ ಕಲಿಸಿಕೊಟ್ಟಿತ್ತು.
ಮತ-ಭೌತಿಕ ಸಮನ್ಯಯ ವಿದ್ಯಾಭ್ಯಾಸ ನೀಡಿದರೆ ಮಾತ್ರ ಒಬ್ಬ ವ್ಯಕ್ತಿಯಲ್ಲಿ ಮನುಷ್ಯತ್ವ , ಮಾನವೀಯತೆ, ಮತ್ತು ದೇಶ ಪ್ರೇಮ ಹಾಗೂ ಉನ್ನತ ಪ್ರಜ್ಞೆ ಮೂಡುತ್ತದೆ ಎಂಬುದಕ್ಕೆ ಕಾಶ್ಮೀರ ವಿದ್ಯಾರ್ಥಿಗಳೇ ಸ್ಪಷ್ಟ ನಿದರ್ಶನವೆಂದು ಉಸ್ತಾದ್ ವಿವರಿಸಿದರು.
ಇದಕ್ಕಾಗಿ ಮರ್ಕಝ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆ ಸಹಿತ ಹಲವು ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದೆ.
ಅಂದರೆ ಶಾಲೆಗಳನ್ನು ಮತ ಸ್ಥಾಪನೆಗಳನ್ನಾಗಿ ಮಾರ್ಪಾಡು ಮಾಡಬೇಕೆಂದು ಅರ್ಥವಿಲ್ಲ. ಇತರ ಸಂಸ್ಥೆಗಳಿಂದ ಮತ್ತು ಇತರ ಸ್ಟೇಟ್ ಗಳಿಂದ ವಿದ್ಯಾರ್ಜನೆಗೆಯ್ಯಲು ಕೇರಳಕ್ಕೆ ಬರುವ ಮಕ್ಕಳನ್ನು ಮನುಷ್ಯ ಕಳ್ಳ ಸಾಗಣಿಕೆ ಎಂದು ಚಿತ್ರೀಕರಿಸಿಕೊಂಡು ಅವರಿಗೆ ವಿದ್ಯೆ ನಿರಾಕರಿಸುವುದು ಸರಿಯಲ್ಲ. ಅಂತಹ ನಿಯಮಗಳನ್ನು ಪುನಪರಿಶೋದನೆಗೆ ಗುರಿ ಮಾಡಿ ಆ ನಿಯಮವನ್ನು ಕಿತ್ತೊಗೆಯಬೇಕೆಂದು ಕಾಂತಪುರಂ ಉಸ್ತಾದ್ ಹೇಳಿದರು. ವಿವರವಿಲ್ಲದ ಕೆಲವೊಂದು ಅವಿವೇಕಿ ಅಧಿಕಾರಿಗಳಾಗಿದ್ದಾರೆ ಇಂತಹ ನಿಯಮ ಜಾರಿಗೆಗೊಳಿಸುವುದೆಂದು ಉಸ್ತಾದ್ ಖಾರವಾಗಿ ನುಡಿದರು.
ನಮ್ಮ ಊರಿನ ಅದೆಷ್ಟೋ ವಿದ್ಯಾರ್ಥಿಗಳು ಇತರ ಸ್ಟೇಟ್'ಗಳಲ್ಲಿ ಕಲಿಯುತ್ತಿದ್ದು ಅದನ್ನು ಅವರು ನಿರಾಕರಿಸಿದರೆ ನಮ್ಮ ವಿದ್ಯಾರ್ಥಿಗಳ ಗತಿ ಏನಾಗಬಹುದೆಂದು ಎಲ್ಲರೂ ಚಿಂತಿಸುವುದು ಒಳಿತೆಂದು ಕಿವಿಮಾತು ಹೇಳಲು ಉಸ್ತಾದ್ ಮರೆಯಲಿಲ್ಲ..
ಹತ್ತು ಹದಿನೈದು ವರ್ಷಗಳ ಮುಂಚೆ ಪಾಲಕ್ಕಾಡ್ ನಿಂದ ಮಲಪ್ಪುರಕ್ಕೆ ಅಕ್ಕಿ ಸಾಗಟವನ್ನು ನಿರೋಧಿಸಲಾಗಿತ್ತು. ಕೇರಳದಿಂದ cashewnutನ್ನು ಕರ್ನಾಟಕಕ್ಕೆ ಕೊಂಡುಹೋಗುವುದನ್ನು ತಡೆಹಿಡಿಯಲಾಗಿತ್ತು. ಅಂತಹ ನಿಯಮಗಳನ್ನು ಹೇರುವ ಅಧಿಕಾರಿಗಳಿಗೆ ವಿವೇಕ ಇಲ್ಲವೆಂದೇ ಹೇಳಬೇಕು ನಂತರ ಆ ನಿಯಮವನ್ನು ಕಿತ್ತೆಸೆಯಲಾಯಿತು.
ಇಂತಹ ಅಧಿಕಾರಿಗಳಾಗಿದ್ದಾರೆ ಒಂದು ರಾಜ್ಯದ ವಿದ್ಯಾರ್ಥಿಗಳು ಮತ್ತೊಂದು ರಾಜ್ಯಕ್ಕೆ ಹೋಗಿ ಕಲಿಯಬಾರದೆಂಬ ಹೊಸ ಕಾನೂನು ಜಾರಿಮಾಡುವುದೆಂದು ಕಟಕಟಿಯಾದರು.
SYS, SSF ಮತ್ತು ಕೇರಳ ಮುಸ್ಲಿಂ ಜಮಾತ್ ಎಲ್ಲವೂ ಮುಸ್ಲಿಮರ ಮತ್ತು ಇತರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರನ್ನು ಸಬಲೀಕರಿಸುವುದಾಗಿದೆ ಗುರಿ. ಭೀಕರವಾದ ಕೋಮುವಾದದ ಚಟುವಟಿಕೆಗಳಲ್ಲಿ ತಲ್ಲೀನರಾದವರನ್ನು ತಡೆಯುವುದೇ ನಮ್ಮ ಗುರಿ ಅಂತಹ ವಿಧ್ವಂಸಕ ಕೃತ್ಯಗಳಿಗೆ ನಾವು
ಅನುಮತಿ ನೀಡುವುದೇ ಇಲ್ಲ ಎಂದು ಗುಡುಗಿದರು. 
  ವರದಿ

 ✒ ಅಬೂಶಝ


Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...