Skip to main content

ಸಲಪಿಯ ಶಿರ್ಕ್ ತಿರುಗು ಬಾಣ ವಾದಾಗ.. ✍ ಎಂ ಹೆಚ್ ಹಸನ್ ಝುಹ್'ರಿ,ಮಂಗಳಪೇಟೆ

ಸಲಪಿಯ ಶಿರ್ಕ್ ತಿರುಗು ಬಾಣ ವಾದಾಗ..
✍ *ಎಂ ಹೆಚ್ ಹಸನ್ ಝುಹ್'ರಿ,ಮಂಗಳಪೇಟೆ*

🌷🌷🌷🌷🌷🌷🌷🌷🌷🌷🌷

ಸಲಫಿಯ ವಾದ ಪ್ರಕಾರ ದರ್ಗಾ ಹೋಗುವುದು, ಮೌಲಿದ್ ಪಾರಾಯಣ, ತವಸ್ಸುಲ್,ಇಸ್ತಿಗಾಸ ನಡೆಸುವುದು ಶಿರ್ಕ್ ಆಗಿದೆ.

ಅಬೂಜಹಲ್ ಗೆ ಅಲ್ಲಾಹನಲ್ಲಿ ನಂಬಿಕೆ ಇತ್ತು ಆತ ಶಿರ್ಕ್ ಮಾಡಿದ ಎಂಬುದು ಸಲಫಿ ಅಂಬೋಣ.ಅಬೂ ಜಹಲ್ ನಂತೆ ಇಂದಿನ‌ ಸುನ್ನಿಗಳು‌ ಶಿರ್ಕ್ ಮಾಡುತ್ತಾರೆಂದಾಗಿದೆ ಸಲಪಿಯ ವಾದ.

ಸಲಪಿಯ ವಾದವನ್ನು ಪೊಸ್ಟ್ ಮಾರ್ಟಮ್ ಮಾಡಿದಾಗ   ಸಿಕ್ಕ ವರದಿ ಯನ್ನು ಈ ಕೆಳಗೆ ನೀಡಲಾಗಿದೆ.

👇👇👇👇👇

*ಇಸ್ಲಾಮಿನ ನಿಯಮ ಪ್ರಕಾರ ಯಾರಾದರೂ ಶಿರ್ಕ್ ಮಾಡಿದರೆ ಆತ ಕಾಫಿರ್ ಆಗುತ್ತಾನೆ‌.*

👉  ಕಾಫಿರ್ ಆದವನ ಮೇಲೆ ಮಯ್ಯತ್ ನಮಾಝ್ ಮಾಡಬಾರದು.

👉 ಕಾಫಿರ್  ದ್ಸಬಹ್ ಮಾಡಿದರೆ ತಿನ್ನಬಾರದು.

👉 ಕಾಫಿರಾದವನ ಹಿಂದೆ ನಮಾಝ್ ಮಾಡಬಾರದು.

👉 ಶಿರ್ಕ್ ಮಾಡಿದ್ದ ಹೆಣ್ಣನ್ನು ವಿವಾಹವಾಗಬಾರದು.

ಅಬೂ ಜಹಲ್ ಶಿರ್ಕ್ ಮಾಡುವ ಮೂಲಕ ಕಾಫಿರ್ ಆದ. ಕಾಫಿರ್ ಆಗಿ ಸತ್ತ ಅಬೂಜಹಲನ ಮಯ್ಯತ್ ಸ್ನಾನ, ಮಯ್ಯತ್ ನಮಾಝ್ ಯಾವೂದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಥವಾ ಸ್ವಾಹಾಬಿಗಳು ನಿರ್ವಹಿಸಲಿಲ್ಲ.

*ಏಕೆಂದರೆ, ಕಾಫಿರ್ ನ ಮೇಲೆ ಇದೆಲ್ಲಾ ನಿರ್ವಹಿಸುವುದು ನಿಷಿದ್ಧ ವಾಗಿದೆ.*

ಸುನ್ನಿಗಳು ಶಿರ್ಕ್ ಮಾಡುತ್ತಾರೆಂದು ಆರೋಪಿಸುವ ಸಲಪಿಯ ದೃಷ್ಟಿಯಿಂದ ಸುನ್ನಿಗಳು ಕಾಫಿರ್ ಆದವರು ತಾನೇ ...?

ಆದರೆ ....

👉 ಇಸ್ತಿಗಾಸ ಮಾಡಿದ ಸುನ್ನಿ ಯಾದವನು ಮೃತಪಟ್ಟರೆ ಸಲಪಿ ಜನಾಝ ಸ್ನಾನ ದಿಂದ ಹಿಡಿದು ಮಯ್ಯತ್ ನಮಾಝ್ ದಫನ ತನಕ ಎಲ್ಲದರಲ್ಲೂ ಭಾಗವಹಿಸುತ್ತಾನೆ.

👉 ಮೌಲಿದ್ ಓದಿ ಶಿರ್ಕ್ ಮಾಡಿ ಕಾಫಿರಾದ ಸುನ್ನೀ ದ್ಸಬಹ್ ಮಾಡಿ ಮಾಂಸ ಸಲಪಿ ತಿನ್ನುತ್ತಾನೆ.

👉ಮೌಲಿದ್ ಓದಿ ಕಾಫಿರಾದ ಸುನ್ನೀ  ಹೆಣ್ಣನ್ನು ಸಲಪಿಯು ವಿವಾಹ ವಾಗುತ್ತಾನೆ.

👉 ದರ್ಗಾ ಹೋಗಿ ಕಾಫಿರಾದ ಸುನ್ನೀ ಇಮಾಮರ ಹಿಂದೆ ನಿಂತು ಸಲಪಿ ನಮಾಝ್ ಮಾಡಿತ್ತಾನೆ.


ಅರೇರೇ‌...... ಶಿರ್ಕ್ ಮಾಡಿದಾತನ ಮೃತ ಪಟ್ಟರೆ ನಮಾಝ್ ಮಾಡಬಹುದೆಂದೂ, ಆತನು ದ್ಸಬಹ್ ಮಾಡಿದ ಮಾಂಸ ತಿನ್ನಬಹುದೆಂದು , ಸುನ್ನೀ ಹೆಣ್ಣನು ವಿವಾಹ ವಾಗಬಹುದೆಂಬುದಕ್ಕೆ ಯಾವ ಖುರ್ ಆನ್ ಆಯತ್ ಸಲಪಿಗೆ ಪುರಾವೆ ಯಾಗಿ ಸಿಕ್ಕಿದೆ ?

ಅಂದರೆ ಇಲ್ಲೊಂದು ವಿಚಾರ ಸ್ಪಷ್ಟ ವಾಗಿದೆ.

*ಸುನ್ನಿಗಳು ಮೃತರಾದರೆ ಅವರ ಮೇಲೆ ಮಯ್ಯತ್ ನಮಾಝ್ ಮಾಡಬಹುದಾದರೆ, ಸುನ್ನೀ ಗಳು ದ್ಸಬಹ್ ಮಾಡಿದ್ದು ತಿನ್ನಬಹುದಾದರೆ , ಸುನ್ನೀ ಹೆಣ್ಣನ್ನು ವಿವಾಹವಾಗಬಹುದಾದರೆ, ಸುನ್ನೀ ಇಮಾಮ್ ನ ಹಿಂದೆ ನಿಂತು ನಮಾಝ್ ಮಾಡಬಹುದಾದರೆ ಸುನ್ನೀ ಗಳು ಶಿರ್ಕ್ ಮಾಡಿದವರಲ್ಲ ಎಂಬುದಕ್ಕೆ ಸಲಪಿ ಯ ವರ್ತನೆ ಅತೀ ದೊಡ್ಡ ಪುರಾವೆ ಯಾಗಿದೆ. ಏಕೆಂದರೆ, ಶಿರ್ಕ್ ಮಾಡಿದವರೊಂದಿಗೆ ಇದೆಲ್ಲವೂ ನಿಷಿದ್ಧ ವಾಗಿದೆ.*

ಶಿರ್ಕ್ ಮಾಡಿದ ಹೆಣ್ಣನ್ನು ವಿವಾಹವಾದರೆ ಅದು ಸಿಂದುವಲ್ಲ. ಹಾಗಾದರೆ ಸಲಪಿಯು ಸುನ್ನೀ ಹೆಣ್ಣನ್ನು ವರಿಸಿದ್ದು ಬಾತಿಲಾದ ನಿಖಾಅ್ ಮೂಲಕ ಎಂದು ಸಲಪಿ ಒಪ್ಪಿಕೊಳ್ಳಬೇಕಾಗುತ್ತದೆ. ಸಲಪಿಗೆ ಸುನ್ನೀ ಹೆಂಡತಿ ಮೂಲಕ ಜನಿಸಿದ ಮಕ್ಕಳು ವ್ಯಭಿಚಾರ ಸಂತತಿಗಳೆಂದು ಸಲಪಿ ಹೇಳಲು ತಯಾರಿರುವನೇ ?

ಸಲಪಿಯ ವಾದದ ಆಳ ತಿಳಿದರೆ ಸುನ್ನೀ ಹೆಣ್ಣಿನೊಂದಿಗಿನ ಸಲಪಿ ಸಂಬಂಧ ಅನೈತಿಕ ಎಂದೂ,  ವ್ಯಭಿಚಾರ ಎಂದು ಸಲಪಿ ಒಪ್ಪಿಕೊಳ್ಳಬೇಕು.

ಸಲಪಿಯ ಶಿರ್ಕ್ ಆರೋಪ ಅದು ಅಜ್ಞಾನದ ಪರಮಾವಧಿ ಯೇ ಹೊರತು ವಾಸ್ತವ ವಲ್ಲ.

ಸಾಧಾರಣ ಜನರ ಮುಂದೆ ಸಲಪಿ ಖುರ್ ಆನ್, ಹದೀಸ್ ಓದುವಾಗ ಅದರ ನಿಜ ಅರ್ಥ ತಿಳಿಯದವರು ಹೌದೆಂದು ಭಾವಿಸುತ್ತಾರೆ.

ಯಾವ ಸಲಪಿಯಾದರೂ ಶಿರ್ಕ್ ನ ವಾದವನ್ನು ಬಡಿಸಲು ಬಂದರೆ ಮೇಲಿನ ಪ್ರಶ್ನೆಯನ್ನು ಕೇಳಿ.

🌷🌹🌷🌹🌷🌹🌷🌹🌷🌹🌷

🌳🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...