ಸುಲೈಮಾನ್ ನೆಬಿ (ಅ) "ಇನ್ಷಾ ಅಲ್ಲಾಹ್" ಎಂದು ಹೇಳಿರುತ್ತಿದ್ದರೆ..
ನಾವು ಇನ್ನೊಬ್ಬರಿಗೆ ಯಾವುದೇ ರೀತಿಯ ಭರವಸೆ ಅಥವಾ ಒಪ್ಪಿಗೆ ಕೊಡುವಾಗ *ಇನ್ಷಾ ಅಲ್ಲಾಹ್* ಎಂದು ಹೇಳುವುದು ಕಡ್ಡಾಯವಾಗಿದೆ. *ಇನ್ಷಾ ಅಲ್ಲಾಹ್* ಎಂದರೆ ಅಲ್ಲಾಹು ಇಚ್ಚಿಸಿದರೆ ಅಥವಾ ಅಲ್ಲಾಹು ಉದ್ದೇಶಿಸಿದರೆ ಎಂಬರ್ಥವಾಗಿದ್ದು ನಾವು ಇನ್ನೊಬ್ಬರಿಗೆ ಕೊಡುವ ಪ್ರತಿಯೊಂದು ಭರವಸೆಗಳ ಜೊತೆಗೆ *ಇನ್ಷಾ ಅಲ್ಲಾಹ್* ಹೇಳಿದರೆ ಈ ಕಾರಣವಾಗಿಯೇ ಅಲ್ಲಾಹನು ನಾವು ಕೊಟ್ಟ ಭರವಸೆಯು ಒಳಿತಾಗುವುದಿದ್ದರೆ ಈಡೇರಿಸಲು ಸಹಾಯ ಮಾಡುವನು.
*ಇನ್ಷಾ ಅಲ್ಲಾಹ್* ಹೇಳುವುದರಿಂದ ಇನ್ನೊಂದು ಪ್ರಯೋಜನವೂ ಇದೆ, ಅದೇನೆಂದರೆ ನಮ್ಮಿಂದ ಸಂಭವಿಸಬಹುದಾದ ಒಂದು ಸುಳ್ಳನ್ನು ತಪ್ಪಿಸಿದಂತಾಗುತ್ತದೆ. ಉದಾಹರಣೆಗೆ ಹೇಳಿವುದಾದರೆ ನನ್ನಲ್ಲಿ ಒಬ್ಬ ಸಾವಿರ ರುಪಾಯಿಯ ಸಹಾಯ ಕೇಳಿದಾಗ ನಾನು ಧೈರ್ಯವಾಗಿ ಅದಕ್ಕೇನು ಚಿಂತೆ ಮಾಡಬೇಡ ನಾಳೆ ಕೊಡುತ್ತೇನೆಂದು ಹೇಳಿದೆ ಅಂತ ಇಟ್ಟುಕೊಳ್ಳಿ. ಕೊಡುವ ಮನಸ್ಸು ಮತ್ತು ಭರವಸೆ ನೀಡುವಾಗ ಕೊಡಲು ಸಾಧ್ಯವಿದೆ ಎಂಬ ವಿಶ್ವಾಸ ನನ್ನಲ್ಲಿತ್ತಾದರು ಮರುದಿನ ಹೇಳಿದ ಸಮಯಕ್ಕೆ ಹಣಕ್ಕಾಗಿ ಆ ವ್ಯಕ್ತಿ ಬಂದಾಗ ಕಾರಣಾಂತರಗಳಿಂದ ದುಡ್ಡು ಕೊಡುವುದಕ್ಕೆ ಸಾಧ್ಯವಾಗದೆ ಆ ವ್ಯಕ್ತಿಯನ್ನು ನಿರಾಶೆ ಮಾಡಿ ಹಿಂದಿರುಗಿಸಿ ಕಳುಹಿಸಬೇಕಾಗಿ ಬಂದರೆ ನಾನು ಒಂದು ಸುಳ್ಳನ್ನು ಹೇಳಿದಂತೆ ಆಯಿತು. ನಾನು ದುಡ್ಡಿನ ಭರವಸೆ ಕೊಡುವಾಗ *ಇನ್ಷಾ ಅಲ್ಲಾಹ್* ಎಂದು ಹೇಳಿರುತ್ತಿದ್ದರೆ ಒಂದೋ ಹೇಳಿದ ಸಮಯಕ್ಕೆ ಆ ವ್ಯಕ್ತಿಗೆ ದುಡ್ಡನ್ನು ಕೊಡುವ ಸಾಮರ್ಥ್ಯ ಅಲ್ಲಾಹನು ನನಗೆ ಕೊಡುತ್ತಿದ್ದ ಅಥವಾ ಅಲ್ಲಾಹನು ಉದ್ದೇಶಿಸದ ಕಾರಣದಿಂದಾಗಿ ನನ್ನಿಂದ ಕೊಡಲು ಸಾಧ್ಯವಾಗಲಿಲ್ಲ ಎಂಬ ಅರ್ಥ ಬರುವುದರಿಂದ ನನ್ನಿಂದ ಸಂಭವಿಸಬಹುದಾಗಿದ್ದ ಒಂದು ಸುಳ್ಳನ್ನು ತಪ್ಪಿಸಿದಂತಾಗುತ್ತದೆ.
ಸುಲೈಮಾನ್ ನೆಬಿ (ಅ) ಒಂದು ದಿನ ಇವತ್ತು ನಾನು ನನ್ನ ನೂರು ಹೆಂಡತಿಯರನ್ನು ಸಮೀಪಿಸುತ್ತೇನೆ ಅದರಿಂದಾಗಿ ನನ್ನ ನೂರು ಹೆಂಡತಿಯರು ನೂರು ಮಕ್ಕಳಿಗೆ ಜನ್ಮ ನೀಡುತ್ತಾರೆ ಹಾಗೂ ಆ ನೂರು ಮಕ್ಕಳು ಅಲ್ಲಾಹುವಿನ ದೀನಿಗಾಗಿ ಧರ್ಮ ಯುದ್ದದಲ್ಲಿ ಪಾಳ್ಗೊಳ್ಳಲಿದ್ದಾರೆ ಎಂದು ಹೇಳಿ ಹೊರಟರು, ಆದರೆ *ಇನ್ಷಾ ಅಲ್ಲಾಹ್* ಎಂದು ಹೇಳುವುದನ್ನು ಮರೆತು ಬಿಟ್ಟರು. ಹಾಗೇನೇ ಅವರು ಹೇಳಿದಂತೆ ನೂರು ಹೆಂಡತಿಯರನ್ನು ಒಂದೇ ದಿನದಲ್ಲಿ ಸಮೀಪಿಸಿದರೂ ಕೂಡ ನೂರು ಹೆಂಡತಿಯರಲ್ಲಿ ಯಾರೊಬ್ಬರೂ ಮಗುವನ್ನು ಹೆರಲಿಲ್ಲ, ಒಬ್ಬಳು ಹೆಂಡತಿ ಮಾತ್ರ ಹೆತ್ತದ್ದು ಬರೀ ಒಂದು ಮಾಂಸದ ತುಂಡನ್ನು ಮಾತ್ರವಾಗಿತ್ತು.
ಜೀವನದಲ್ಲಿ ಒಮ್ಮೆಯೂ ಸುಳ್ಳನ್ನು ಹೇಳದ ಪ್ರವಾದಿ ಮುಹಮ್ಮದ್ ನೆಬಿ (ಸ.ಅ) ಈ ಚರಿತ್ರೆಯ ಕುರಿತು ವಿವರಿಸುವಾಗ ಹೇಳಿದರು.. ಸುಲೈಮಾನ್ ನೆಬಿ (ಅ) ಅಂದು ತನ್ನ ಮಾತಿನ ಜೊತೆಗೆ *ಇನ್ಷಾ ಅಲ್ಲಾಹ್* ಎಂದು ಹೇಳಿರುತ್ತಿದ್ದರೆ ಆ ನೂರು ಹೆಂಡತಿಯರು ಕೂಡ ಮಕ್ಕಳಿಗೆ ಜನ್ಮಕೊಟ್ಟು ಅದನ್ನು ನೋಡಿ ಸಂತೋಷ ಪಡುವ ಭಾಗ್ಯವನ್ನು ಸುಲೈಮಾನ್ ನೆಬಿ (ಅ) ಅವರಿಗೆ ಅಲ್ಲಾಹನು ನೀಡುತ್ತಿದ್ದನು.
*ಇನ್ಷಾ ಅಲ್ಲಾಹ್* ಎಂಬ ವಾಕ್ಯ ತುಂಬಾ ಮಹತ್ವವುಳ್ಳ ಒಂದು ಪ್ರಯೋಗವಾಗಿದ್ದು, ಯಾರು ಕೂಡಾ ಇದನ್ನು ಕಡೆಗಣಿಸಿ ಕಾಣಬಾರದು.
ಇನ್ನು ಕೆಲವರು ತಮಗೆ ಪರಿಚಯ ಇರುವವರನ್ನು ಒಂದು ಮದುವೆಗೆ ಕರೆದರೆ ಅಥವಾ ಯಾವುದಾದರೊಂದು ಕೆಲಸಗಳನ್ನು ಒಪ್ಪಿಸಿದಾಗ ಆ ಕಡೆಯಿಂದ *ಇನ್ಷಾ ಅಲ್ಲಾಹ್* ಎಂಬ ಪ್ರತ್ಯುತ್ತರ ಬಂದರೆ ಇವನು ಮದುವೆಗೆ ಬರುವುದು ಅನುಮಾನ ಅಂತ ತಿಳಿದುಕೊಳ್ಳುವವರು ಇದ್ದಾರೆ. ಹಾಗೇನೇ ತನ್ನಿಂದ ಸಾದ್ಯವಿಲ್ಲ ಅನ್ನುವ ಕೆಲಸಗಳಿಂದ ಹಿಂದೆ ಸರಿಯಲು *ಇನ್ಷಾ ಅಲ್ಲಾಹ್* ಎಂದು ಹೇಳುವವರೂ ಇದ್ದಾರೆ. ಖಂಡಿತವಾಗಿಯೂ ಇಂತಹ ಆಲೋಚನೆ ತಪ್ಪು, *ಇನ್ಷಾ ಅಲ್ಲಾಹ್* ವಾಕ್ಯದ ಮಹತ್ವ ತಿಳಿದುಕೊಂಡವನು ಖಂಡಿತವಾಗಿಯೂ ಔಪಚಾರಿಕವಾಗಿ *ಇನ್ಷಾ ಅಲ್ಲಾಹ್* ಎಂದು ಒಮ್ಮೆಯೂ ಹೇಳಲಾರ.
ಮನುಷ್ಯರಾದ ನಾವು ಇನ್ನೊಬ್ಬರಿಗೆ ಭರವಸೆಗಳನ್ನು ನೀಡಬಹುದೇ ಹೊರತು ಅದನ್ನು ಸಾಧಿಸಿಕೊಡಲು ಅಲ್ಲಾಹುವಿನ ಸಹಾಯ ಖಂಡಿತ ಬೇಕು. ನಮಗೆ ನಮ್ಮ ಮೇಲೆ ಅದೆಷ್ಟೇ ಆತ್ಮವಿಶ್ವಾಸ ಇದ್ದರೂ ಅಲ್ಲಾಹುವಿನ ಸಹಾಯವಿಲ್ಲದೆ ನಾವು ಸ್ವತಂತ್ರರಾಗಿ ಏನನ್ನೂ ಸಾಧಿಸಲು ಸಮರ್ಥರಲ್ಲ ಎಂಬ ಆಲೋಚನೆ ಪ್ರತಿಯೊಬ್ಬರಲ್ಲೂ ಸದಾ ಕಾಡುವಂತಿರಬೇಕು. ಅಲ್ಲಾಹು ಉದ್ದೇಶಿಸಿದರೆ ಮಾತ್ರ ಎಲ್ಲವೂ ನಡೆಯುವುದು. ಆದುದರಿಂದ ಪ್ರತಿಯೊಬ್ಬರೂ ಯಾವುದೇ ವರ್ತಮಾನ ಕಾಲದ ಕುರಿತು ಚಿಂತಿಸುವಾಗ, ಮಾತನಾಡುವಾಗ ಒಳ್ಳೆಯ ಉದ್ದೇಶದೊಂದಿಗೆ ದೃಢ ವಿಶ್ವಾಸದಲ್ಲಿ *ಇನ್ಷಾ ಅಲ್ಲಾಹ್* ಎಂದು ಹೇಳಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಒಳಿತಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ನಮ್ಮ ನಿರ್ಧಾರಗಳನ್ನು ಅಂದುಕೊಂಡಿರುವುದಕ್ಕಿಂತಲೂ ಚಂದವಾಗಿ ನೆರವೇರಿಸಿ ಕೊಡುತ್ತಾನೆ. *ಇನ್ಷಾ ಅಲ್ಲಾಹ್*
✒ *ಸಿರಾಜ್ ಎಂ.ಎ (ಎಸ್ಸಾರ್ಜೆ)*

Comments