ಕರ್ನಾಟಕದ ಪ್ರಪ್ರಥಮ ಮಸೀದಿ ಉಡುಪಿಯ ಬಾರ್ಕೂರಿನಲ್ಲಿದೆ
ಭಾರತ ದೇಶದ ಪ್ರಪ್ರಥಮ ಹತ್ತು ಮಸೀದಿಗಳಲ್ಲಿ ಎಂಟು ಮಸೀದಿಗಳು ಕೇರಳದಲ್ಲಿದ್ದರೆ, ಎರಡು ಮಸೀದಿಗಳು ಇಂದಿನ ಕರ್ನಾಟಕ ಕರಾವಳಿಯಲ್ಲಿದೆ.
ಕರ್ನಾಟಕ ರಾಜ್ಯದ ಪ್ರಪ್ರಥಮ ಮಸೀದಿಯು ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿದೆ. ಉಡುಪಿಯಿಂದ ಕುಂದಾಪುರ ಕಡೆಗೆ (14 ಕಿಮಿ) ಸಾಗಿದಾಗ ಸಿಗುವ ಬ್ರಹ್ಮಾವರ ಎಂಬ ಊರಿನಿಂದ ಬಲಕ್ಕೆ ತಿರುಗಿ ಸುಮಾರು 6 ಕಿಮಿ ಸಾಗಿದರೆ ಬಾರ್ಕೂರ್ (ಅಂದಿನ ಕಾಲದಲ್ಲಿ ಫಾಕನ್ನೂರು ಎಂದು ಕರೆಯುತ್ತಿದ್ದರು) ಸಿಗುತ್ತದೆ. ಇದೇ ಬಾರ್ಕೂರಿನಲ್ಲಿ ಭಾರತದ ನಾಲ್ಕನೇ ಹಾಗೂ ಕರ್ನಾಟಕದ ಪ್ರಪ್ರಥಮ ಮಸೀದಿ ಇದೆ. ಇದರ ಹೆಸರು ಮಾಲಿಕ್ ದಿನಾರ್ ಜುಮ್ಮಾ ಮಸೀದಿ ಎಂದಾಗಿದೆ. ನಂತರ ಐದನೇ ಮಸೀದಿಯು ಮಂಗಳೂರು ( ಅಂದಿನ ಕಾಲದಲ್ಲಿ ಮಂಜರೂರು ಎಂದು ಕರೆಯುತ್ತಿದ್ದರು) ನಲ್ಲಿದೆ. ಈ ಮಸೀದಿಯ ಹೆಸರು ಝೀನತ್ ಭಖ್ಷ್ (ಬೆಲಿಯೆ ಪಲ್ಲಿ) ಎಂದಾಗಿದೆ. ಆರನೇ ಮಸೀದಿಯು ಕಾಸರಗೋಡು (ಕಾಂಜರಕೂತು) ನಲ್ಲಿದೆ.
ಭಾರತಕ್ಕೆ ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಬಂದವರಲ್ಲಿ ಶರ್ಫ್ ಇಬ್ನು ಮಾಲಿಕ್ ರವರ ಮಾತೃ ಸಹೋದರರಾಗಿದ್ದ ಮಾಲಿಕ್ ಬಿನ್ ದಿನಾರ್, ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬ್ ಬಿನ್ ಮಾಲಿಕ್ ಮುಂತಾದ ಪ್ರಮುಖರಿದ್ದರು.
ಕೇರಳದ ಕೊಡಂಗಲ್ಲೂರಿನಲ್ಲಿ ಭಾರತ ದೇಶದ ಪ್ರಪ್ರಥಮ ಮಸೀದಿ ನಿರ್ಮಿಸಲಾಗಿತ್ತು. ನಂತರ ಕೇರಳದ ಅಂದಿನ ಕೊಯಿಲಾಂಡಿಕೊಲ್ಲಂ ಹಾಗೂ ಮಾಡಾಯಿ ಮಸೀದಿಗಳನ್ನು ನಿರ್ಮಿಸಿದ ಬಳಿಕ ಕರ್ನಾಟಕದ ಬಾರ್ಕೂರ್ (ಅಂದಿನ ಫಾಕನ್ನೂರು) ಗೆ ಮಾಲಿಕ್ ದಿನಾರ್ (ರ) ರವರು ತನ್ನ ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬ್ ರನ್ನು ಈ ಮಸೀದಿಯನ್ನು ಸ್ಥಾಪಿಸಲು ಕಳುಹಿಸಿದ್ದರು. ಪೂರ್ವ – ಪಶ್ಚಿಮದಲ್ಲಿ 80 ಕೋಲು ಹಾಗೂ ದಕ್ಷಿಣ ಮತ್ತು ಉತ್ತರದಲ್ಲಿ ಕ್ರಮವಾಗಿ 75, 50 ಕೋಲು ಜಾಗವನ್ನು ವಕ್ಫ್ ಮಾಡಿ, ಹಿಜರಿ 22 ರಬಿಉಲ್ ಅವ್ವಲ್ 10ರಂದು (ಗುರುವಾರ) ಬಾರ್ಕೂರಿನಲ್ಲಿ ಮಸೀದಿಯನ್ನು ಸ್ಥಾಪಿಸಿದರು. ಮಾಲಿಕ್ ಬಿನ್ ಇಬ್ರಾಹಿಂ (ರ) ರವರು ಈ ಮಸೀದಿಯ ಮೊಟ್ಟ ಮೊದಲ ಖಾಝಿಯಾಗಿದ್ದಾರೆ. ಈ ಮಸೀದಿಯ ಹೆಸರು ಮಾಲಿಕ್ ದಿನಾರ್ ಜುಮ್ಮಾ ಮಸೀದಿ ಎಂದಾಗಿದೆ.
ಈ ಮಸೀದಿಯ ಸುಮಾರು 22 ವರ್ಷಗಳ ಹಿಂದೆ ಇದ್ದ ಮೂಲ ವಿನ್ಯಾಸವನ್ನು ಅಧುನಿಕ ಸಿಮೆಂಟ್ ನಿರ್ಮಿತ ವಿನ್ಯಾಸಕ್ಕೆ ಮಾರ್ಪಡಿಸಿರುವ ಕಾರಣ, ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ ಇದು ಕರ್ನಾಟಕದ ಮೊತ್ತಮೊದಲ ಮಸೀದಿ ಎಂದು ಗುರುತು ಹಚ್ಚಲು ಸಾಧ್ಯವಿಲ್ಲ. ಈ ಮಸೀದಿಯನ್ನು ನವೀಕರಣಗೊಳಿಸುವ ಸಂದರ್ಭದಲ್ಲಿ ಲಭಿಸಿದ್ದ ಹಲವಾರು ಸಾಕ್ಷ್ಯಾವಸ್ತುಗಳಲ್ಲಿ ಅರಬಿ ಲಿಪಿಯನ್ನು ಕೆತ್ತಲಾಗಿರುವ ಒಂದು ಕಲ್ಲನ್ನು ಮಸೀದಿಯ ಒಳಗೆ ಜೋಪಾನವಾಗಿಡಲಾಗಿದೆ.
ಮಾಲಿಕ್ ಬಿನ್ ಹಬೀಬ್ ರವರು ನಂತರ ಮಂಗಳೂರಿಗೆ (ಆಗಿನ ಮಂಜರೂರು)ತೆರಳಿ, ನಾಲ್ಕು ಭಾಗದಲ್ಲಿ 40 ಕೋಲು ಜಮೀನನ್ನು ವಖ್ಫ್ ಮಾಡಿ ಹಿಜರಿ 22 ಜಮಾದಿಲ್ ಊಲ 27ರಂದು (ಶುಕ್ರವಾರ) ಮಸೀದಿ ಸ್ಥಾಪಿಸಿ, ಇದಕ್ಕೆ ತನ್ನ ಪುತ್ರರಾದ ಮೂಸ ಬಿನ್ ಮಾಲಿಕ್ ಬಿನ್ ಹಬೀಬ್ ರನ್ನು ಖಾಝಿಯಾಗಿ ನೇಮಿಸಲಾಯಿತು. ಈ ಮಸೀದಿಯ ಹೆಸರು ಝೀನತ್ ಭಖ್ಷ್ (ಬೆಲಿಯೆ ಪಲ್ಲಿ) ಎಂದಾಗಿದೆ.
ನಂತರ ಕಾಸರಗೋಡಿಗೆ (ಅಂದಿನ ಕಾಂಜರಕೂತು) ಬಂದು ಹಿಜರಿ 22 ರಜಬ್ ತಿಂಗಳ 18 ರಂದು ಮಾಲಿಕ್ ದಿನಾರ್ ಮಸೀದಿ ಸ್ಥಾಪಿಸಲಾಯಿತು. ಈ ಮಸೀದಿಗೆ ತನ್ನ ಪುತ್ರರಾದ ಅಹ್ಮದ್ ಬಿನ್ ಮಾಲಿಕ್ ಬಿನ್ ಹಬೀಬ್ ರನ್ನು ಖಾಝಿಯಾಗಿ ನೇಮಿಸಿದರು.
ಈ ಬಗ್ಗೆ ಹೆಚ್ಚಿನ ವಿವರಗಳು:
►►ಜೈನುದ್ದೀನ್ ಮಖ್ದೂಮ್ ರವರ “ತುಹ್ಫತುಲ್ ಮುಜಾಹಿದೀನ್” ಪುಸ್ತಕದಲ್ಲಿ ಉಲ್ಲೇಖವಿದೆ.
►►ಖ್ಯಾತ ಇತಿಹಾಸ ತಜ್ಞ ಕೆ.ಕೆ ವಸಂತರವರೂ ಕೂಡಾ ಸಂಶೋಧನೆ ನಡೆಸಿದ್ದಾರೆ. ಅನಸ್ ಹುದವಿಯವರ ಮಲಯಾಳಂ ಭಾಷೆಯಲ್ಲಿರುವ ಪುಸ್ತಕವನ್ನು ಅಬ್ದುರ್ರಝಾಕ್ ನಾವೂರು ರವರು ಕನ್ನಡಕ್ಕೆ ಭಾಷಾಂತರಿಸಿರು “ಮಾಲಿಕ್ ದಿನಾರ್ ಮತ್ತು ಕಾಸರಗೋಡಿನ ಪುರಾತನ ಮಸ್ಜಿದ್” ಎಂಬ ಪುಸ್ತಕದಲ್ಲೂ ನಮೂದಿಸಲಾಗಿದೆ.
►► ಕಲ್ಲಿಕೋಟೆಯ ಖಾಝಿಯಾಗಿದ್ದ ಸಯ್ಯದ್ ಹುಸೈನ್ ಬಿನ್ ಮುಹಮ್ಮದ್ ಬಿನ್ ಆಲಿ ಶಿಹಾಬುದ್ದೀನ್ ಬಾ ಅಲವಿಯವರು ಅರಬ್ಬಿ ಭಾಷೆಯಿಂದ ಮಲಯಾಳಂ ಭಾಷೆಗೆ ಅನುವಾದಿಸಿರುವುದನ್ನು ಮಲಬಾರ್ ಡೆಪ್ಯುಟಿ ಕಲೆಕ್ಟರ್ ಆಗಿದ್ದ ಗೋಪಾಲನ್ ನಾಯರ್ ರವರು ಇದನ್ನು ಪುನರ್ ಕ್ರಮಿಸಿ “ಮಳೆಯಾಳತ್ತಿಲೆ ಮಾಪಿಳಮಾರ್” ಎಂಬ ಹೆಸರಿನಲ್ಲಿ ಪ್ರಸಿದ್ಧೀಕರಿಸಿದ್ದರು.
►► ಸುನ್ನಿ ಸ್ಟೂಡೆಂಟ್ ಫೆಡರೇಶನ್ ನ ದಶಮಾನೋತ್ಸವದ ಸಂದರ್ಭದಲ್ಲಿ ಮುದ್ರಿಸಲಾಗಿದ್ದ “ಧರ್ಮಕ್ರಾಂತಿ” ಸಂಚಿಕೆಯಲ್ಲೂ ಇದರ ಬಗ್ಗೆ ಮಾಹಿತಿಗಳಿವೆ
ಭಾರತದ ಪ್ರಥಮ ಹತ್ತು ಮಸೀದಿಗಳಿರುವ ಊರುಗಳು:
1) ಕೊಡಂಗಲ್ಲೂರು
2) ಕೊಯಿಲಾಂಡಿಕೊಲ್ಲಂ
3) ಮಾಡಾಯಿ
4) ಫಾಕನ್ನೂರು (ಬಾರ್ಕೂರು)
5) ಮಂಜರೂರು (ಮಂಗಳೂರು)
6) ಕಾಂಜರ್ಕೂತು (ಕಾಸರಗೋಡು)
7) ಜಫತಿನ
8) ಧರ್ಮಪಟ್ಟಣಂ (ಧರ್ಮಡ)
9) ಫೌದಿನ್
10) ಶಾಲಿಯಾತ್ (ಚಾಲಿಯ – ಕಲ್ಲಿಕೋಟೆ ಹಾಗೂ ಮಲಪ್ಪುರಂ ಮಧ್ಯದಲ್ಲಿ)
ಈ ರೀತಿಯಾಗಿ ಕರ್ನಾಟಕ ರಾಜ್ಯದ ಪ್ರಪ್ರಥಮ ಮಸೀದಿ ಎಂಬ ಹೆಗ್ಗಳಿಕೆಯು ಬಾರಕೂರಿನ ಮಾಲಿಕ್ ದಿನಾರ್ ಜುಮಾ ಮಸೀದಿಗೆ ಇದೆ. ಬಾರ್ಕೂರು ಇಂದು ಪುಟ್ಟ ಗ್ರಾಮವಾಗಿದ್ದರೂ ಕೂಡಾ ಅಂದಿನ ಕಾಲದಲ್ಲಿ ಇದೊಂದು ಐತಿಹಾಸಿಕ ನಗರವಾಗಿತ್ತು. ಮಾಲಿಕ್ ದಿನಾರ್ ರವರ ಕಾಲಾನಂತರ ಇದು ಅಳುವ ರಾಜರ ಮತ್ತು ವಿಜಯ ನಗರ ಅರಸರ ಮುಖ್ಯ ಸ್ಥಾನಿಕ ರಾಜಧಾನಿಯಾಗಿತ್ತು. ನಂತರ ಇಕ್ಕೇರಿ ಹಾಗೂ ಕೆಳದಿಯ ನಾಯಕರುಗಳು ರಾಜ್ಯಭಾರ ಮಾಡಿದ್ದರು. ತದ ನಂತರ ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕೂಡಾ ಇಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದರು. ಇಂತಹ ಐತಿಹಾಸಿಕವಾದ ಊರು ಇಂದಿನ ತಲೆಮಾರಿಗೆ ಅಪರಿಚಿತ ಊರಾಗಿ ಉಳಿದಿದೆ.
ಮಾಹಿತಿ:
ನಜೀರ್ ಬಾರ್ಕೂರು – ಅಧ್ಯಕ್ಷರು, ಮಾಲಿಕ್ ದಿನಾರ್ ಜುಮ್ಮಾ ಮಸೀದಿ ಬಾರ್ಕೂರು
ಸಯ್ಯದ್ ಅಲವಿ ಸಖಾಫಿ, ಗಂಗಾವಳಿ ಕೋಣಂದೂರು

Comments