Skip to main content

ಪವಿತ್ರ ರೌಳಾದ ಮುಂದೆ ಉಮರ್ ಖಾಳೀ ರ

ಪವಿತ್ರ ರೌಳಾದ ಮುಂದೆ ಉಮರ್ ಖಾಳೀ ರ
ಮೂಲ ಲೇಖಕರು: ಆತೂರು ಇಬ್ರಾಹಿಂ ಸಖಾಫಿ

ಜನ ನಿಬಿಡವಾದ ಪವಿತ್ರ ರೌಳಾ ಶರೀಫ್. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪುಣ್ಯ ರೌಳಾದ ಹೊರಗೆ ಏನೋ ಒಂದು ಸುಂದರವಾದ ಆಕರ್ಷಣೆಯು  ಕೇಳಿ ಬರುತ್ತಿದೆ‌. ಜನರು ಕಾತರದಿಂದ ಆಲಿಸಿದರು. ಹೌದು.... ಒಂದು ಸುಂದರವಾದ ಕಾವ್ಯ ಸರಣಿ.... ಸ್ವಲ್ಲೂ ಅಲೈಹಿ ವಸಲ್ಲಿಮೂ ತಸ್'ಲೀಮಾ.... ಎಂಬುವುದನ್ನು ಆಗಾಗ ಆವರ್ತಿಸಲ್ಪಡುತ್ತಿದೆ. ಪರಿಸರವೆಲ್ಲಾ ಶಾಂತವಾಗಿ ಅದನ್ನು ಆಲಿಸುವುದರಲ್ಲಿ ತಲ್ಲೀನವಾಗಿತ್ತು‌. ಕಾವ್ಯದ ಸಾಲುಗಳ ಲಹರಿಯಲ್ಲಿ ಮುಳುಗಿದ ಕೇಳುಗರಾದ ಜನ ಸಾಗರವು ತಮಗರಿವಿಲ್ಲದೇ ಅದರಲ್ಲಿ ಲೀನವಾದರು. ಅವರು ಸ್ವಲ್ಲೂ ಅಲೈಹಿ....ಯನ್ನು ಪುನರಾವರ್ತಿಸುತ್ತಿದ್ದರು. ಒಂದು ಅರಬಿಯೇತರ ಕವಿಯ ಕಾವ್ಯಾಲಾಪಣೆಯಲ್ಲಿ ಇದ್ದ ಅರಬೀ ಸಾಹಿತ್ಯ ಹಾಗೂ ಆಕರ್ಷಣೀಯತೆಯನ್ನು ಕಂಡು ಅರಬಿಗಳು ಕೂಡಾ ಆಶ್ಚರ್ಯ ಚಕಿತರಾದರು. ಕವಿಯ ಅರ್ಥ ವ್ಯಾಪಿಯ ಆಳದೊಳಗೆ ಅವರು ಮುಳುಗಿದರು. ಹೃದಯಾಂತರಾಳದಿಂದ ಎದ್ದು ಬಂದ ಪ್ರೇಮ ಕಾವ್ಯವು ಪವಿತ್ರ ರೌಳಾದ ಪರಿಸರದಲ್ಲಿ ಆಂದೋಲನವನ್ನುಂಟು ಮಾಡಿತು.

    ಅಗೋ....! ಸಣಕಲಾದ ಒಂದು ಶರೀರ ....ಪವಿತ್ರ ರೌಳಾದ ಬಾಗಿಲಿನ ಸಮೀಪದಲ್ಲಿ ನಿಂತಿದ್ದಾರೆ. ಆ ಪ್ರವಾದಿ ಪ್ರೇಮಿಯ ಎರಡು ನಯನಗಳಿಂದ ಅಶ್ರುಧಾರೆಗಳು ತುಂಬಿ ಹರಿಯುತ್ತಿದೆ. ಅಗಾಧ ಪ್ರೇಮ ಸುಗಂಧವಿರುವ ಕಣ್ಣೀರು.... ಅದು ಎರಡು ಕೆನ್ನೆಗಳ ಮೂಲಕ ಇಳಿದು ನೀಳವಾದ ಗಡ್ಡ ರೋಮದ ಮೂಲಕ ನಿರಂತರವಾಗಿ ಹರಿಯುತ್ತಿದೆ. ಯಾವುದೇ ತಡೆಯಿಲ್ಲದೇ ಹರಿಯುತ್ತಿರುವ ಕಣ್ಣೀರಿನ ಪ್ರವಾಹದಲ್ಲಿ ಆ ಪ್ರವಾದಿ ಪ್ರೇಮಿಯು ಪರಿಸರ ಮರೆತವರಂತೆ ತನ್ನ ಪ್ರೇಮ ಗೀತೆಯನ್ನು ಸುಲಲಿತವಾಗಿ ಮುಂದುವರಿಸುತ್ತಿದ್ದರು. ತನ್ನ ಪ್ರೇಮ ಭಾಜನರ ಕುರಿತ ಮದ್'ಹ್(ಪ್ರಶಂಸೆ) ಗೀತೆಗಳು ಆ ಪವಿತ್ರ ತುಟಿಗಳಿಂದ ಬೆಲೆಬಾಳುವ ಮುತ್ತುಗಳಂತೆ ನಿರರ್ಗಳವಾಗಿ ಹರಿದು ಬರುತ್ತಿತ್ತು. ಯಾರದೇ ಹೃದಯವನ್ನು ತನ್ನತ್ತ ಸೆಳೆಯುವಂತಹಾ ಅವರ್ಣನೀಯ ಸಾಲುಗಳು.ಅದಮ್ಯವಾದ ಅನುರಾಗದಿಂದ ಅನಿಯಂತ್ರಿತವಾದ ಹೃದಯಾಂತರಾಳದಿಂದ ಕಟ್ಟೆಯೊಡೆದು ಹರಿಯುವ ಪ್ರೇಮ ಗಾನದ ಸಾಲುಗಳು.....

*ಯಾ ಅಕ್ರಮಲ್ ಕುರಮಾ ಅಲಾ ಅಅ್'ತಾ ಬಿಕುಂ*
*ಉಮರುಲ್ ಫಖೀರುಲ್ ಮುರ್ತಜೀ ಲಿಜನಾಬಿಕುಂ*
*ವದ್ದಂಉ ಮಿನ್ ಐನೈಹಿ ಸಾಲ ಸಜೀಮ*
*ಸ್ವಲ್ಲೂ ಅಲೈಹಿ ವಸಲ್ಲಿಮೂ ತಸ್ಲೀಮಾ*
        *ಮಾ ಜಫ್ಫ ದಮ್'ಉನ್ ಸಾಲ ಮಿನ್ ಐನೈನಿ*
         *ಲಾಕಿನ್ನಹು ಯಜ್'ರೀ ಅಲಲ್ ಕದ್ದೈನಿ*
          *ಮಿನ್ ಹುಬ್ಬಿ ಖಲ್ಬೀ ಸಯ್ಯಿದಿಲ್ ಕೌನೈನಿ*
        *ಹಯ್ಯನ್ ವಮೈತನ್ ಫಿತುರಾಬಿ ರಮೀಮಾ*
        *ಸ್ವಲ್ಲೂ ಅಲೈಹಿ ವಸಲ್ಲಿಮೂ ತಸ್ಲೀಮಾ*
  ಓ ಪ್ರವಾದಿವರ್ಯರೇ, ತಮ್ಮ ಪವಿತ್ರವಾದ ಮನೆಯ ಬಾಗಿಲಿನಲ್ಲಿ ಫಖೀರನಾದ ಉಮರ್ ತಲುಪಿದ್ದಾರೆ. ಸುಖಾಡಂಭರಗಳ ಸೌಲಭ್ಯಗಳನ್ನು ಅರಸುತ್ತಾ ಇಲ್ಲಿಗೆ ಬಂದದ್ದಲ್ಲ. ಸುಖ ಸಂತೋಷದ ಜೀವನವನ್ನು ಆಗ್ರಹಿಸಿ ಇಲ್ಲಿಗೆ ಬಂದದ್ದಲ್ಲ ಈ ಬಡವನಾದ ಉಮರ್...! ಹಲವಾರು ವರ್ಷಗಳಿಂದ ಮಡುಗಟ್ಟಿ ನಿಂತಿದ್ದ ಆಗ್ರಹದ ಸಫಲೀಕರಣವಾಗಿದೆ ಈ ಬರುವಿಕೆಯ ಪ್ರಧಾನ ಉದ್ದೇಶ. ಅದು ಈ ಪವಿತ್ರ ಸನ್ನಿಧಿಯಲ್ಲಿ ಖಂಡಿತವಾಗಿಯೂ ಲಭಿಸುತ್ತದೆಯೆಂಬ ನಿರೀಕ್ಷೆಯೊಂದಿಗೆ ಬಂದದ್ದಾಗಿದೆ. ಬಡವನಾದ ಈ ಉಮರ್ ತಮ್ಮೊಂದಿಗೆ ಅಂಗಲಾಚುತ್ತಾನೆ. ನಿರೀಕ್ಷೆಯೊಂದಿಗೆ ಎತ್ತಿದ ಈ ಕೈಗಳನ್ನು ನಿರಾಶೆಯೊಂದಿಗೆ ಹಿಂತಿರುಗಿಸಬಾರದೆಂದು ಬೇಡಿಕೊಳ್ಳುತ್ತಿದ್ದೇನೆ...ನನ್ನ ನಯನಗಳಿಗೆ ನೋಡಿರಿ. ಅದರಿಂದ ಧಾರಾಕಾರವಾಗಿ ಹರಿಯುತ್ತಿರುವ ರಕ್ತದ ಹರಿಯುವಿಕೆಯಾಗಿದೆ ಪ್ರವಾದಿವರ್ಯರೇ..... ಅದು ಕೆನ್ನೆಯ ಮೂಲಕ ನಿರರ್ಗಳವಾಗಿ ಹರಿಯುತ್ತಿದೆ.

    ಹಲವಾರು ವರ್ಷಗಳಾಯಿತು ತಮ್ಮ ಪವಿತ್ರ ಕೈಗಳನ್ನೊಮ್ಮೆ ಸ್ಪರ್ಶಿಸಲು ಹಾಗೂ ಆ ಪವಿತ್ರ ಕೈಗಳಿಗೆ ಸಂತೃಪ್ತಿ ಉಂಟಾಗುವಷ್ಟು ಚುಂಬನಗಳನ್ನು ನೀಡಲು ಆಶಿಸುತ್ತಿರುವುದು. ಅದಕ್ಕಾಗಿ ಹಸಿವನ್ನು, ದಾಹವನ್ನು, ಸಹಿಸಿದೆ. ನಿದ್ರೆಯಿಲ್ಲದ ಕಣ್ಣುಗಳೊಂದಿಗೆ ಹಲವಾರು ರಾತ್ರಿಗಳನ್ನು ಕಳೆದೆ. ನನ್ನ ಶರೀರವೋ ಸಣಕಲಾಗಿದೆ ಪ್ರವಾದಿವರ್ಯರೇ....ತಮ್ಮ ಕುರಿತ ಚಿಂತನೆಗಳು ಈಗಲೂ ನನ್ನ ಹೃದಯಾಂತರಾಳದಲ್ಲಿ ಅಲೆ ಅಲೆಯಾಗಿ ಅಪ್ಪಳಿಸುತ್ತಿದೆ. ತಮ್ಮೊಂದಿಗಿನ ಅದಮ್ಯವಾದ ಅನುರಾಗದಿಂದ ನನ್ನ ಹೃದಯವು ವಿಲಾಪಿಸುತ್ತಿದೆ. ಅದಕ್ಕೆ ಸಿಗುವ ಸಾಂತ್ವನ ಮಾತ್ರ ಪರಿಹಾರ....

   ಆಶ್ಚರ್ಯ.....

    ಕಣ್ಣೀರಿನಲ್ಲಿ ತುಂಬಿ ಹರಿಯುವ ಪ್ರೇಮ ಗೀತೆಯ ಮುಂದೆ ಪವಿತ್ರ ರೌಳಾ ಶರೀಫಿನ ಕಬ್ಬಿಣದ ಸರಪಳಿಯು ಮೃದುವಾಯಿತು...! ಪವಿತ್ರ ರೌಳಾದ ಬಾಗಿಲುಗಳು ತನ್ನಿಂತಾನೇ ಆ ಅನುರಾಗಿಯ ಮುಂದೆ ನಿಧಾನವಾಗಿ ತೆರೆಯಲ್ಪಟ್ಟಿತು....

      ಆಶ್ಚರ್ಯಚಕಿತರಾದ ಜನಸಮೂಹವು ನೋಡುತ್ತಿದ್ದಂತೆ ಉಮರ್ ಖಾಳಿ(ರ)ರವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪುಣ್ಯ ರೌಳಾದ ಒಳಗೆ ಪ್ರವೇಶಿಸಿ ಅದನ್ನು ಕಣ್ತುಂಬಾ ಕಂಡು ಸಂತೃಪ್ತಿ ಪಡೆದರು...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...