Skip to main content

ತಾಯಿಗೆ ಬಯ್ಯುವ ವ್ಯಕ್ತಿಗೆ ಖಲೀಫ ಉಮರ್ ಈ ರೀತಿ ಪಾಠ ಕಲಿಸಿದರು

ತಾಯಿಗೆ ಬಯ್ಯುವ ವ್ಯಕ್ತಿಗೆ ಖಲೀಫ ಉಮರ್ ಈ ರೀತಿ ಪಾಠ ಕಲಿಸಿದರು

 ಒಮ್ಮೆ ಇಸ್ಲಾಮಿನ ಖಲೀಫಾ ಹಝ್ರತ್ ಉಮರ್(ರ)ರವರ ಬಳಿ ತನ್ನ ತಾಯಿಗೆ ಬಯ್ಯುವ ವ್ಯಕ್ತಿಯ ಬಗ್ಗೆ ದೂರು ಬಂತು. ಕೂಡಲೇ ಖಲೀಫಾ ಆ ವ್ಯಕ್ತಿಯನ್ನು ತಮ್ಮ ಮುಂದೆ ಹಾಜರು ಪಡಿಸುವಂತೆ ಆಜ್ಞೆ ಹೊರಡಿಸಿದರು. ಭಟರು ಆ ವ್ಯಕ್ತಿಯನ್ನು ಉಮರ್‌ರ ಮುಂದೆ ತಂದು ನಿಲ್ಲಿಸಿದರು. ಆನಂತರ ಆತನ ಹೊಟ್ಟೆಗೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟುವಂತೆ ಆಜ್ಞಾಪಿದರು ಉಮರ್.
 ಅದೇ ರೀತಿ ಆ ವ್ಯಕ್ತಿಯ ಹೊಟ್ಟೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟಲಾಯಿತು. ಆತ ಅದರ ಜೊತೆಗೇ ಮಲಗಬೇಕು.
 ಅದರ ಜೊತೆಗೇ ನಡೆಯಬೇಕು. ಹಾಗೂ ತನ್ನ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕು.ಒಂದು ದಿನ ಕಳೆಯಿತು.
ಆ ವ್ಯಕ್ತಿ ಖಲೀಫಾ ಉಮರ್‌ರ ಬಳಿ ಬಂದು, ದಯವಿಟ್ಟು ಇದನ್ನು ತೆಗೆಯಿರಿ ನನಗೆ ಬದುಕಲು ಕಷ್ಟವಾಗುತ್ತಿದೆ ಎಂದನು.
ಆಗ ಉಮರ್ ಆ ಚರ್ಮದ ಚೀಲದಲ್ಲಿ ತುಂಬಿದ ನೀರನ್ನು ತೆಗೆಯಲು ಆಜ್ಞಾಪಿಸಿದರು. ಆದರೆ ಚರ್ಮದ ಚೀಲವನ್ನು ಹಾಗೇ ಬಿಡಲಾಯಿತು.
ಒಂದು ದಿನ ಕಳೆಯಿತು. ಈಗ ಆ ವ್ಯಕ್ತಿ ತನ್ನ ತಾಯಿಯ ಜೊತೆ ಬಂದು ದಯವಿಟ್ಟು ನನ್ನ ಈ ಭಾರವನ್ನು ಕೆಳಗಿಳಿಸಿ ನಾನು ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ತಿನ್ನಲೂ ಕುಡಿಯಲೂ ಯಾವುದೂ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದನು. ಆತನ ತಾಯಿ ಕೂಡ ತನ್ನ ಮಗನನ್ನು ಕ್ಷಮಿಸುವಂತೆ ಖಲೀಫಾರಲ್ಲಿ ಬೇಡಿ ಕೊಂಡರು.
ಖಲೀಫಾ ಉಮರ್ ಈಗ ಆ ವ್ಯಕ್ತಿಗೆ ಆತನ ತಾಯಿಯನ್ನು ತೋರಿಸುತ್ತಾ,      “ನೋಡು      ಆಕೆಯನ್ನು ಆಕೆ ನಿನ್ನ ತಾಯಿ, ನಿನಗೆ ಈ ಚೀಲವನ್ನು ಹೊರ ಭಾಗಕ್ಕೆ ಕಟ್ಟಲಾಗಿದೆ.
ಆದರೆ ಇಷ್ಟೇ ಭಾರವನ್ನು ಆಕೆ ಒಂಭತ್ತು ತಿಂಗಳು ಹೊತ್ತು ಕೊಂಡು ನಿನ್ನನ್ನು ಹೆತ್ತಿದ್ದಾಳೆ.
ಆಗ ಅವಳಿಗೆ ಸರಿಯಾಗಿ ತಿನ್ನಲೂ, ಕುಡಿಯಲೂ, ನಿದ್ರಿಸಲೂ ಸಾಧ್ಯವಾಗುತ್ತಿರಲಿಲ್ಲ.
ನೀನು ಆಕೆಗೆ ಮರಣದ ವೇದನೆ ನೀಡಿ ಹುಟ್ಟಿದ್ದೀಯ. ಆಕೆ ನಿನಗೆ ಎರಡು ವರ್ಷ ತನ್ನ ಎದೆಹಾಲು ಕುಡಿಸಿ ಸಾಕಿದಳು.
 ಆಕೆಗೆ ನೀನು ಈಗ ನಿನ್ನ ಕೈ ಕಾಲು ಬಲಿತ ನಂತರ ಕೃತಜ್ಞತೆ ಸಲ್ಲಿಸುವ ಬದಲು ಕೃತಘ್ನನಾಗಿ ವರ್ತಿಸುತ್ತೀಯ..?

ಇನ್ನು ಮುಂದೆ ನಿನ್ನ ದೂರು ಬಂದಲ್ಲಿ ಉಮರ್‌ನಷ್ಟು ಕೆಟ್ಟವ ಇನ್ಯಾರೂ ಇರಲಾರರು ಎಂದು ಖಲೀಫಾ ಉಮರ್ ಸೀದಾ ಮುಂದೆ ನಡೆದು ಹೋದರು.
•••••••••••••••••••••••••••••••••••••

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...