Skip to main content

ಇಬ್ನು ಅಬ್ದಿಲ್ ವಹ್ಹಾಬ್ ಎಂಬ ವಹ್ಹಾಬಿ ಸ್ಥಾಪಕನಿಗೆ ತನ್ನ ಗುರುವರ್ಯರ ಉಪದೇಶ

ಇಬ್ನು ಅಬ್ದಿಲ್ ವಹ್ಹಾಬ್ ಎಂಬ ವಹ್ಹಾಬಿ ಸ್ಥಾಪಕನಿಗೆ ತನ್ನ ಗುರುವರ್ಯರ ಉಪದೇಶ

*🖊ಯೂಸುಫ್ ಸಖಾಫಿ ಬಪ್ಪಳಿಗೆ*

ಮುಸ್ಲಿಂ ಉಮ್ಮತ್ತು ಪ್ರವಾದಿ(ಸ.ಅ) ರ ಕಾಲದಿಂದಲೇ ವಿಶ್ವಾಸವಿರಿಸಿ ಬಂದ ಪರಂಪರಾಗತ ಧರ್ಮವಾದ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಧಿಕ್ಕರಿಸಿ ನೂತನವಾದವನ್ನು  ಸಮೂಹದಲ್ಲಿ ಪ್ರಚರಿಸಿ ಮುಸ್ಲಿಂ ಉಮ್ಮತ್ತನ್ನು ಮುಶ್ರಿಕರನ್ನಾಗಿಸಿ ಹಲವು ಸುನ್ನೀ ಮುಸ್ಲಿಮರ ಮಾರಣ ಹೋಮಕ್ಕೆ ಕಾರಣಕರ್ತನಾದ ಇಬ್ನು ಅಬ್ದಿಲ್ ವಹ್ಹಾಬನಿಗೆ ತನ್ನ ಸ್ವಂತ ಗುರುವರ್ಯರೂ ಶಾಫೀ ಮಝ್ಹಬಿನ ಪ್ರಮುಖ ಪಂಡಿತರೂ ಆದ ಮುಹಮ್ಮದ್ ಸುಲೈಮಾನುಲ್ ಕುರ್ದೀ (ರ)(ಹಿ.1127-1197)ರವರು  ಬರೆದ ಪತ್ರವನ್ನು ಹಾಗೂ ಅದರ ಕನ್ನಡಾನುವಾದವನ್ನೂ ಈ ಕೆಳಗೆ ನೀಡುತ್ತಿದ್ದೇನೆ..

يا ابن عبد الوهاب، سلام على من ابتع الهدى، فإني أنصحك لله تعالى أن تكف لسانك عن المؤمنين، فإن سمعت من شخص أنه يعتقد تأثير ذلك المستغاث به من دون الله فعرفه الصواب، وأذكر له الأدلة على أنه لا تأثير لغير الله تعالى، فإن أبي فكفره حينئذ بخصوصه ولا سبيل لك إلى تكفير السواد الأعظم من المسلمين، وأنت شاذ عن السواد الأعظم، فنسبة الكفر إلى من شذ عن السواد الأعظم أقرب لأنه اتبع غير سبيل المؤمنين، قال تعالى: {وَمَنْ يُشَاقِقِ الرَّسُولَ مِنْ بَعْدِ مَا تَبَيَّنَ لَهُ الْهُدَى وَيَتَّبِعْ غَيْرَ سَبِيلِ الْمُؤْمِنِينَ نُوَلِّهِ مَا تَوَلَّى وَنُصْلِهِ جَهَنَّمَ وَسَاءَتْ مَصِيراً} . وإنما يأكل الذئب من الغنم القاصية.

"ಓ ಅಬ್ದುಲ್ ವಹ್ಹಾಬರ ಮಗನೇ ಸನ್ಮಾರ್ಗಿಗಳಿಗೆ ಅಲ್ಲಾಹನ ರಕ್ಷೆಯಿರಲಿ. ಅಲ್ಲಾಹನ ಸಂಪ್ರೀತಿಗಾಗಿ ನಿನಗೆ ನಾನೊಂದು ಉಪದೇಶವನ್ನು ನೀಡುತ್ತೇನೆ. ಸತ್ಯ ವಿಶ್ವಾಸಿಗಳನ್ನು ಆಕ್ಷೇಪಿಸುವುದರಿಂದ ನಿನ್ನ ನಾಲಗೆಗೆ ನೀನು ತಡೆಯಿಡು. ಅಲ್ಲಾಹನಲ್ಲದ ಸಹಾಯ ಯಾಚಿಸಲ್ಪಡುವ ವಸ್ತುವಿಗೆ ಸ್ವಂತವಾಗಿ ಪ್ರಭಾವ(ಶಕ್ತಿ)ವಿದೆಯೆಂದು ವಿಶ್ವಾಸವಿರಿಸಿ ಆ ಶಕ್ತಿಯೊಂದಿಗೆ ಒಬ್ಬ ವ್ಯಕ್ತಿಯು ಸಹಾಯ ಯಾಚಿಸುತ್ತಿದ್ದಾನೆಂದು ನೀನು ತಿಳಿದರೆ ಅವನಿಂದ ಅದರ  ಸತ್ಯಾಂಶವನ್ನು ನೀನು ತಿಳಿದುಕೊ. ಅಲ್ಲಾಹನಲ್ಲದ ಯಾವುದಕ್ಕೂ ಸ್ವಂತವಾದ ಶಕ್ತಿಯಿಲ್ಲವೆಂಬುದಕ್ಕಿರುವ ಪುರಾವೆಗಳನ್ನು ಆತನಿಗೆ ತಿಳಿಸಿಕೊಡು. ಅವನು ಅದಕ್ಕೆ ವಿರುದ್ಧವಾದರೆ ಆತನನ್ನು ಸತ್ಯ ನಿಷೇಧಿಯನ್ನಾಗಿಸು.
ಬಹು ಸಂಖ್ಯಾತ ಮುಸ್ಲಿಮರನ್ನು(السواد الأعظم) ಸತ್ಯ ನಿಷೇಧಿಯನ್ನಾಗಿಸಲು ನಿನಗೆ ಯಾವುದೇ ಅವಕಾಶವಿಲ್ಲ. ಬಹು ಸಂಖ್ಯಾತ ಮುಸ್ಲಿಮರಿಂದ ನೀನು ಒಬ್ಬಂಟಿಯಾಗಿದ್ದೀಯಾ. ಬಹುಸಂಖ್ಯಾತ ಮುಸ್ಲಿಮರನ್ನು ಸತ್ಯ ನಿಷೇಧಿಯನ್ನಾಗಿಸುವುದಕ್ಕಿಂತಲೂ ಬಹುಸಂಖ್ಯಾತ ಮುಸ್ಲಿಮರಿಂದ ಏಕಾಂಗಿಯಾದವನನ್ನು ಸತ್ಯ ನಿಷೇಧಿಯನ್ನಾಗಿಸುವುದಾಗಿದೆ  ಉತ್ತಮ. ಕಾರಣ ಅಲ್ಲಾಹನು ಹೇಳುತ್ತಾನೆ.
( ಸನ್ಮಾರ್ಗವು ಮನದಟ್ಟಾದ ನಂತರ ಯಾರಾದರೂ ಪ್ರವಾದೀ (ಸ.ಅ) ವಿರುದ್ಧವಾಗಿ ನಡೆದರೆ , ಸತ್ಯವಿಶ್ವಾಸಿಗಳಲ್ಲದವರ ಹಾದಿಯನ್ನು ಸ್ವೀಕರಿಸಿದರೆ ಅವನು ತಿರುಗಿದ ಕಡೆಗೆ ಅವನನ್ನು ನಾವು ತಿರುಗಿಸುವೆವು. ಅತೀ ಭಯಾನಕವಾದ ನರಕಕ್ಕೆ  ಅವನನ್ನು ನಾವು ತಳ್ಳುವೆವು. ನಿಶ್ಚಯವಾಗಿಯೂ ನರಿಯು ತಿನ್ನುವುದು ಒಬ್ಬಂಟಿಯಾದ ಆಡನ್ನಾಗಿದೆ".

( الدرة السنية في الرد على الوهابية- لسيدي زيني دهلان )

*ಅಲ್ಲಾಹನು  ವಹ್ಹಾಬಿಗಳ ಶರ್ರಿನಿಂದ ಮುಸ್ಲಿಂ ಉಮ್ಮತ್ತನ್ನು ಕಾಪಾಡಲಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...