Skip to main content

ಆಶುರಾ ಉಪವಾಸದ ಶ್ರೇಷ್ಠತೆ

ಆಷೂರಾಅ ತಾಸೂಆಯುಂ
          *🍀 ಪವಿತ್ರತೆ 🍀*
*✦•┈┈┈┈•✿❁ ﷽ ❁✿•┈┈┈┈•✦*

ಆಶುರಾ ಉಪವಾಸದ ಶ್ರೇಷ್ಠತೆ

ನಬಿ ﷺ ಹೇಳಿದರು: 

" صِيَامُ يَوْمِ عَرَفَةَ أَحْتَسِبُ عَلَى اللَّهِ أَنْ يُكَفِّرَ السَّنَةَ الَّتِي قَبْلَهُ وَالسَّنَةَ الَّتِي بَعْدَهُ وَصِيَامُ يَوْمِ عَاشُورَاءَ أَحْتَسِبُ عَلَى اللَّهِ أَنْ يُكَفِّرَ السَّنَةَ الَّتِي قَبْلَهُ "

ಅರಫಾ ದಿನದಲ್ಲಿನ ಉಪವಾಸದ ಕಾರಣ ಅಲ್ಲಾಹನು ಹಿಂದಿನ ಒಂದು ವರ್ಷದ ಮತ್ತು ಮುಂದಿನ ವರ್ಷದ ಸಣ್ಣ ಪಾಪವನ್ನು ಅಲ್ಲಾಹು ಮನ್ನಿಸುವನೆಂದು ನಾನು ಊಹಿಸುವೆನು.
(ಸ್ವಹೀಹ್ ಮುಸ್ಲಿಂ 1163)
 


ಹಾಗೆಯೇ ಇನ್ನೊಂದು ಹದೀಸ್‌ನಲ್ಲಿ ಈ ರೀತಿ ಇದೆ:-

عَنْ ابْنِ عَبَّاسٍ رَضِيَ اللَّهُ عَنْهُمَا قَالَ : مَا رَأَيْتُ النَّبِيَّ صَلَّى اللَّهُ عَلَيْهِ وَسَلَّمَ يَتَحَرَّى صِيَامَ يَوْمٍ فَضَّلَهُ عَلَى غَيْرِهِ إِلا هَذَا الْيَوْمَ يَوْمَ عَاشُورَاءَ وَهَذَا الشَّهْرَ يَعْنِي شَهْرَ رَمَضَانَ . " 
ಇಬ್ನು ಅಬ್ಬಾಸ್ ಹೇಳಿದರು
ಅಷ್ಟೊಂದು ಉತ್ಸಾಹದಿಂದ ಬಾಕಿ ಇರುವುದಕ್ಕಿಂತ ಮಹತ್ವ ಕೊಟ್ಟು ನಬಿ ಯಾವುದಾದರೂ ದಿನಗಳಲ್ಲಿ ಉಪವಾಸ ಮಾಡಿದ್ದು ನಾನು ಕಂಡಿಲ್ಲ. '' ಈ ದಿನವನ್ನು ಬಿಟ್ಟು ಅಂದರೆ ಆಶೂರಾಅ್ ದಿನವನ್ನು, ಈ ತಿಂಗಳು ಬಿಟ್ಟು ಅಂದರೆ ರಮಳಾನ್ ತಿಂಗಳು. "
(ಸ್ವಹೀಹುಲ್ ಬುಖಾರಿ:1862)

ಅಥವಾ ಸಾಧಾರಣ ಸುನ್ನತ್ ಉಪವಾಸಕ್ಕಿಂತ ಪ್ರಾಮುಖ್ಯತೆ ಆಶೂರಾಅ್ ಉಪವಾಸ ಕ್ಕೆ ಅಲ್ಲಾಹುವಿನ ಪ್ರವಾದಿ(ﷺ) ಕೊಟ್ಟಿದ್ದಾರೆ.
   
ಅಲ್ಲಾಹುವಿನ ಮಾರ್ಗದಲ್ಲಿ ಒಂದು ದಿನ ಉಪವಾಸ ಹಿಡಿಯುದರಿಂದ ಲಭಿಸುವ ಶ್ರೇಷ್ಠತೆಕ್ಕಿಂತ ಆಶೂರಾಅ್ ದಿನದ ಉಪವಾಸಕ್ಕೆ ಇದೆ.

عن أبوسعيد الخدري رضي الله عنه قال:  سمعت النبي صلى الله عليه وسلم يقول: من صام يوما في سبيل الله بعد الله وجهه عن النار سبعين خريفا.

ಇಬ್ನು ಸಈದ್ ಅಲ್ ಖುದ್ರೀ (ರ.ಅ) ನಿಂದ :-  ನಬಿ (ಸ.ಅ) ರವರು ಹೇಳುವುದಾಗಿ ನಾನು ಕೇಳಿದ್ದೇನೆ. ಅಲ್ಲಾಹುವಿನ ಮಾರ್ಗದಲ್ಲಿ ಯಾರಾದರೂ ಒಂದು ಉಪವಾಸ ಹಿಡಿದರೆ ಅಲ್ಲಾಹು ಅವನ ಮುಖವನ್ನು ನರಕದಿಂದ 70 ವರುಷ ಅಂತರದ ದೂರದಲ್ಲಿ ದೂರವಿರಿಸುತ್ತಾನೆ. (ಮುತ್ತಫಕ್ಕುನ್ ಅಲೈಹಿ)

*📌ಆಶೂರಾಅ್ ದಿನದೊಂದಿಗೆ ತಾಸುಆಅ್ (ಮುಹರ್ರಮ್ 9)ಕೂಡಾ ನೋಡಲು ಸುನ್ನತ್ ಇದೆ*

  ಇಮಾಮ್ ಮುಸ್ಲಿಂ ರಹಿಮಹುಲ್ಲಾ ಉದ್ಧರಿಸಲಾದ ಹದೀಸ್‌ನಲ್ಲಿ ಈ ರೀತಿಯಲ್ಲಿ ಕಾಣಬಹುದು.

عن عَبْدَ اللَّهِ بْنَ عَبَّاسٍ رَضِيَ اللَّهُ عَنْهُمَا قال : حِينَ صَامَ رَسُولُ اللَّهِ صَلَّى اللَّهُ عَلَيْهِ وَسَلَّمَ يَوْمَ عَاشُورَاءَ وَأَمَرَ بِصِيَامِهِ قَالُوا يَا رَسُولَ اللَّهِ إِنَّهُ يَوْمٌ تُعَظِّمُهُ الْيَهُودُ وَالنَّصَارَى فَقَالَ رَسُولُ اللَّهِ صَلَّى اللَّهُ عَلَيْهِ وَسَلَّمَ فَإِذَا كَانَ الْعَامُ الْمُقْبِلُ إِنْ شَاءَ اللَّهُ صُمْنَا الْيَوْمَ التَّاسِعَ قَالَ فَلَمْ يَأْتِ الْعَامُ الْمُقْبِلُ حَتَّى تُوُفِّيَ رَسُولُ اللَّهِ صَلَّى اللَّهُ عَلَيْهِ وَسَلَّمَ.
ಇಬ್ನು ಅಬ್ಬಾಸ್ (ರ.ಅ) ಹೇಳುತ್ತಾರೆ :ನಬಿ (ಸ.ಅ) ಆಶೂರಾಅ್ ದಿನದಲ್ಲಿ ಉಪವಾಸ ಹಿಡಿದೂ ಮತ್ತು ಹಿಡಿಯಬೇಕೆಂದು ಕಲ್ಪಿಸುವಾಗ ಸ್ವಹಾಬಿಯು ಕೇಳಿದರು :ಯಾ ರಸೂಲಲ್ಲಾಹ್ (ಸ.ಅ) ಅಂದು ಜೂದರು, ಕ್ರೈಸ್ತರು ಮಹತ್ವ ಕೊಡುವ ದಿನವಲ್ಲವೇ ಆವಾಗ ನಬಿ(ಸ. ಅ) ಹೇಳುತ್ತಾರೆ :ಇಂಷಾ ಅಲ್ಲಾಹ್ ಮುಂದಿನ ವರ್ಷ ನಾವು (ಜೂದ ಕ್ರೈಸ್ತರಿಂದ ವ್ಯತ್ಯಸ್ಥ ರೀತಿಯಲ್ಲಿ) ಒಂಭತ್ತನೆಯ ದಿನದಲ್ಲಿ ಉಪವಾಸ ಹಿಡಿಯುವ. ಆದರೆ ಮುಂದಿನ ವರ್ಷ ಬರುವ ಮುಂಚಿತವಾಗಿ ರಸೂಲ್ ಮರಣ ಹೊಂದಿರುತ್ತಾರೆ.
(ಸ್ವಹೀಹ್ ಮುಸ್ಲಿಂ 1916)

ಆದುದರಿಂದಲೇ ಮುಹರ್ರಮ್ ಹತ್ತರೊಂದಿಗೆ ಒಂಭತ್ತನೆಯ ಉಪವಾಸ ಹಿಡಿಯಲು ಸುನ್ನತ್ತಾಗಿದೆ.
ಜೂದ ಕ್ರೈಸ್ತರಿಂದ ಆಚಾರ ವಿಚಾರಗಳನ್ನು ವಿಶ್ವಾಸಿಗಳು ವ್ಯತ್ಯಾಸ ಮುಂದುವರಿಸಿ ಎಂದು ಈ ಹದೀಸ್ ಕಲಿಸುತ್ತದೆ. ಅವರ ಆಚಾರ ವಿಚಾರ ಅನುಷ್ಠಾನವನ್ನು ಹರಡಿಸುವ ಕೆಲವು ಜನರಿಗೆ ಸ್ವಹಾಬತ್ ನಬಿಯವರೊಂದಿಗೆ ಕೇಳಿದ ಈ ಒಂದು ಪ್ರಶ್ನೆ ಪಾಠವಾಗಿದೆ.

*ಮುಹರ್ರಮಿನ ಉಪವಾಸದಿಂದ ಮನ್ನಿಸುವ ಸಣ್ಣ ತಪ್ಪುಗಳು :-*
ಇಮಾಮ್ ನವವೀ ರಹಿಮಹುಲ್ಲಾ ಹೇಳಿದರು.,''ಅರಫಾ ದಿನದಲ್ಲಿನ ಉಪವಾಸ ಎರಡು ವರ್ಷಗಳ ಪಾಪಗಳನ್ನು ಮನ್ನಿಸಲು ಕಾರಣ. "
ಆಶೂರಾಅ್ ದಿನದಲ್ಲಿನ ಉಪವಾಸ ಹಿಂದಿನ ಒಂದು ವರ್ಷದ ಸಣ್ಣ ತಪ್ಪುಗಳು ಮನ್ನಿಸಲು ಕಾರಣ.
ಒಬ್ಬರು ಆಮೀನ್ ಎನ್ನುವಾಗ ಮಲಾಯಿಕತ್ತಿನ ಆಮೀನ್ ಎನ್ನುವುದರೊಂದಿಗೆ ಕೂಡಿಬಂದರೆ ಅವನ ಹಿಂದಿನ ಎಲ್ಲಾ ತಪ್ಪುಗಳನ್ನು ಮನ್ನಿಸುವನು.
ಇದೆಲ್ಲಾ ತಪ್ಪುಗಳ ವಿಮೋಚನೆಗೆ ಕಾರಣವಾಗಿದೆ
ಒಬ್ಬರಿಗೆ ಸಣ್ಣ ತಪ್ಪುಗಳು ಇರುವುದಾದರೆ ಅದು ಮನ್ನಿಸಲ್ಪಡುತ್ತದೆ ಸಣ್ಣ ತಪ್ಪುಗಳೋ ದೊಡ್ಡ ತಪ್ಪುಗಳೋ ಇಲ್ಲವಾದರೆ ಅದು ಅವನಿಗೆ ಒಳ್ಳೆಯದಾಗಿ ಬರೆದಿಡುತ್ತಾರೆ. ಮತ್ತು ಅವನ ಪದವಿಗಳು ವರ್ಧಿಸುತ್ತದೆ. ಇನ್ನು ಒಬ್ಬರಿಗೆ ಸಣ್ಣ ತಪ್ಪುಗಳಿಲ್ಲ ದೊಡ್ಡ ತಪ್ಪುಗಳು ಮಾತ್ರ ಇರುವುದಾದರೆ ಆ ದೊಡ್ಡ ತಪ್ಪುಗಳ ಭಾರವನ್ನು ಉಪವಾಸ ಕಾರಣ ಕಡಿಮೆಗೊಳಿಸಲು ನಾವು ನಿರೀಕ್ಷಿಸುತ್ತೇವೆ.
(ಅಲ್ ಮಜ್ ಮೂಅ್:ವೋ:6)

ಶೈಖುಲ್ ಇಸ್ಲಾಂ ಇಬ್ನ್ ತೈಮೀಯಾ (ರ.ಅ) ಹೇಳುತ್ತಾರೆ "ಶುದ್ಧೀಕರಣ.,ನಮಾಝ್, ರಮಳಾನ್ ತಿಂಗಳ ಉಪವಾಸ, ಅರಫದ ಉಪವಾಸ, ಆಶೂರಾಅ್ ದಿನದಲ್ಲಿನ ಉಪವಾಸ, ಇತ್ಯಾದಿಗಳು ಸಣ್ಣ ತಪ್ಪುಗಳನ್ನು ಮನ್ನಿಸುವ ಕಾರಣವಾಗಿದೆ.
(ಅಲ್ ಫತಾವಲ್ ಕುಬ್ರಾ:ವೋ:5)

ಅಥವಾ ದೊಡ್ಡ ತಪ್ಪುಗಳು ಇರುವವರು ಪ್ರತ್ಯೇಕವಾಗಿ ಅದರಿಂದ ಪಶ್ಚಾತ್ತಾಪತ ಪಟ್ಟು(ತೌಬ ಹೇಳಿ) ಮರಳಿರಿ.

ಅಲ್ಲಾಹು ನಮ್ಮೆಲ್ಲರ ತಪ್ಪುಗಳನ್ನು ಮನ್ನಿಸಲಿ...
ಬಹಳ ಶ್ರೇಷ್ಠವಾದ ಆಶೂರಾಅ್ ದಿನದಲ್ಲಿ ಅನೈತಿಕತೆಯನ್ನು ಮೂಢನಂಬಿಕೆಯನ್ನು ಆಚರಿಸುವ ಮೂಲಕ ಆ ದಿನವನ್ನು ಕೆಟ್ಟದಾಗಿ ನೋಡುವುದು ಕೆಟ್ಟದಾಗಿ ಮಾರ್ಪಾಡು ಮಾಡುವ ಕೆಲವು ಜನರಿಂದ ಅಲ್ಲಾಹು ನಮ್ಮೆಲ್ಲರನ್ನು ಕಾಪಾಡಲೀ

*ಆಮೀನ್ ಯಾ ರಬ್ಬಲ್ ಆಲಮೀನ್*
                        
*ನಬಿ ﷺ  ಮೇಲೆ ಮೂರು ಸ್ವಲಾತ್ ಹೇಳಲು ಮರಯದಿರಿ ..*

🌹 *اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه* 🌹

🔹〰️〰️〰️🔹🔸🔹〰️〰️🔹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...