Skip to main content

ಟೀಚರ್ಸ್ & ಶಾರ್ಕ್ ಫಿಶ್


🎓🎓 ಮಾಸ್ಟರ್ ಮೈಂಡ್ 🎓🎓

 ಟೀಚರ್ಸ್ & ಶಾರ್ಕ್ ಫಿಶ್

ಜಪಾನ್ ನಲ್ಲಿ ಸಮುದ್ರದ ತಟದಲ್ಲಿ ಮೀನು ಹಿಡಿದು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟ ನಡೆಯುತ್ತಿತ್ತು.

ಸಮುದ್ರ ತಟದಲ್ಲಿನ ಆ ಮೀನಿಗೆ ತುಂಬಾ ಬೇಡಿಕೆ ಮಾತ್ರವಲ್ಲ ಅದರ ರುಚಿ ಕೂಡಾ ಅಷ್ಟೇ ಇತ್ತು.ಮಾರುಕಟ್ಟೆಯಲ್ಲಿ ಆ ಒಂದು ಮೀನಿನ ಖರೀದಿಗೆ ಜನ ಮುಗಿಬೀಳುತ್ತಿರುವುದು ಕಾಣುತ್ತಿತ್ತು.

ಅಷ್ಟಕ್ಕೂ ದಿವಸಗಳು ಕಳೆದಂತೆ ಸಮುದ್ರ ತಟದಲ್ಲಿ ಆ ಮೀನಿನ ಸಂಖ್ಯೆ ಕಡಿಮೆಯಾಯಿತು ಅಲ್ಲದೆ ಆ ರುಚಿಕರ ಮೀನೇ ಇಲ್ಲದಾಯಿತು.

ಆವಾಗಲೇ ಯಾರೇೂ ಹೇಳಿದರು, ಆ ಮೀನುಗಳೆಲ್ಲವೂ ಸಮುದ್ರದ ಮಧ್ಯ ಭಾಗಕ್ಕೆ ವಲಸೆ ಹೇೂಗಿದೆ ಎಂದು.

ಮಾಹಿತಿ ದೊರೆತ ಬೆಸ್ತರು ತಮ್ಮ  ದೋಣಿಯೊಂದಿಗೆ ಆ ಜಾಗ ತಲುಪಿದರು.ಅಚ್ಚರಿ ಎಂಬಂತೆ ಅವರಿಗೆ ಅದೇ ಮೀನು ಅಲ್ಲಿ ದೊರೆತವು.ರುಚಿಗೆ ಕೊರತೆಯಾಗಬಾರದೆಂದು ಜೀವಂತ ಮೀನನ್ನೇ ನೀರು ತುಂಬಿದ ಒಂದು ಸಣ್ಣ ಬಕೆಟ್ ನಲ್ಲಿ ಹಾಕಿ ತಂದರು.

ಮಾರುಕಟ್ಟೆ ತಲುಪಿದರು,ಎಂದಿನಂತೆ ಮಾರಾಟ ಪ್ರಾರಂಭವಾಯಿತು. ಜನಜಂಗುಳಿ ಸೇರಿತು.ಎಲ್ಲರೂ ಪ್ರಸ್ತುತ ಮೀನು ದೊರೆತ ಸಂತೇೂಷದಿಂದ ಮನೆ ತಲುಪಿದರು.

ಮಾರನೇ ದಿನ ಜನರೆಡೆಯಲ್ಲಿ ಚರ್ಚೆ,ಗದ್ದಲ.....

ವಿಷಯ ಇಷ್ಟೇ, ಮೀನು ಅಂದಿನಂತೆ ರುಚಿಕರವಾಗಿಲ್ಲ ಎಂಬುವುದು.

ದಿನ ಕಳೆದಂತೆ ಆ ಮೀನಿನ ಡಿಮಾಂಡೇ ಕಡಿಮೆಯಾಯಿತು.

ಇದಕ್ಕೆ ಕಾರಣ ಏನು ?
ಮೀನಿನಲ್ಲಿ ಬದಲಾವಣೆ ಇಲ್ಲ ಅಂದು ಮತ್ತು ಇಂದು ದೊರೆತ ಮೀನು ಒಂದೇ.

ಇದರ ಕುರಿತು ರಿಸರ್ಚ್ ಮಾಡಲು ಒಂದು ತಂಡ ಮುಂದೆ ಬಂತು.

ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರು ಈ ರೀತಿ ಸಂಭವಿಸಲು ಕಾರಣ ಏನು ಎಂಬುದನ್ನು ಮುಂದಿಟ್ಟರು

ಕಾರಣ ಇಷ್ಟೇ....
ಅಂದು ಮೀನು ಸಮುದ್ರ ತಟದಲ್ಲಾಗಿತ್ತು ದೊರೆತಿದ್ದುದು
ಸಮುದ್ರ ವಿಶಾಲವಾಗಿರುವುದರಿಂದ ಮೀನಿಗೆ ಓಡಾಡಲು ತುಂಬಾ ವಿಶಾಲ ಜಾಗವಿತ್ತು ಮೀನು ಆಕ್ಟೀವ್ ಆಗಿತ್ತು.
ಆದರೆ ಇಂದು ಅದೇ ಮೀನನ್ನು ಸಮುದ್ರ ಮಧ್ಯ ಭಾಗದಿಂದ ಪುಟ್ಟ ನೀರು ತುಂಬಿದ ಬಕೆಟ್ ನಲ್ಲಾಗಿದೆ ತರುವುದು ಅಲ್ಲಿ ಮೀನಿಗೆ ಓಡಾಡಲು ಸಂಕುಚಿತ ಸ್ಥಳ ಮಾತ್ರವಿದ್ದು ಮೀನಿಗೆ ಆಲಸ್ಯತನ ಬಂದಿದೆ.
ಆದ್ದರಿಂದ ಮೀನು ತನ್ನ ರುಚಿಯನ್ನು ಕಳೆದು ಕೊಂಡಿತು.

ಇದಕ್ಕೆ ಪರಿಹಾರವೇನೆಂದು ಕೇಳಿದಾಗ ಅವರು ಹೇಳಿದ್ದು ಈ ಮೀನು ತರುವ ಬಕೆಟ್ ನಲ್ಲಿ ಒಂದು ಶಾರ್ಕ್ ಫಿಶ್ ಅದರೊಟ್ಟಿಗೆ ಹಾಕಬೇಕು.ಸಣ್ಣ ಮೀನನ್ನು ತಿನ್ನಲು ಶಾರ್ಕ್ ಫಿಶ್ ಮುಂದಾಗುವಾಗ ತನ್ನ ರಕ್ಷಣೆಗಾಗಿ ಓಡಾಡಲು ಮುಂದಾಗುತ್ತೆ ಆಗ ಆ ಮೀನು ಆಕ್ಟೀವ್ ಆಗುತ್ತೆ ಇದರಿಂದ  ಟೇಸ್ಟ್ ಕೂಡಾ ಉಳಿದು ಕೊಳ್ಳುತ್ತೆ ಎಂದು ಸಲಹೆಯಿತ್ತರು.

ಇದು ಒಬ್ಬರು ಉತ್ತಮ ಟೀಚರ್ ಗೆ ಇರುವ ಉದಾಹರಣೆ ಎಂದರೆ ತಪ್ಪಲ್ಲ.
ವಿದ್ಯಾರ್ಥಿಗಳು ಆಲಸ್ಯರಾಗಬಾರದು , ಅವರ ಸ್ಥಾನ ಸಮಾಜದಲ್ಲಿ ಎದ್ದು ಕಾಣಬೇಕೆಂದು ವಿದ್ಯಾರ್ಥಿಗಳ ಹಿಂದೆಯೇ ಓಡಾಡುತ್ತಿರುವ ಈ ಸಮಾಜದಲ್ಲಿ ಬೆಲೆಕಲ್ಪಿಸಲಾಗದ ಮಹಾನ್ ವ್ಯಕ್ತಿಗಳಾಗಿದ್ದಾರೆ TEACHERS

ಇವರು ತಾಯಿಗೆ ಸಮಾನರು..
ಅದಕ್ಕಾಗಿಯೇ The mother is the first teacher and The teacher is the second mother ಎಂದು ಹೇಳುವುದು.

ಅದೂ ಅಲ್ಲದೆ 'ನನ್ನನ್ನು ಓರ್ವ ಅದ್ಯಾಪಕನಾಗಿ ಅಲ್ಲಾಹನು ಕಳುಹಿಸಿದ್ದಾನೆ' ಎಂದು ಪ್ರವಾದಿ ಮುಹಮ್ಮದ್  ﷺ ರವರು ಹೇಳಿದ ಮಾತು ಟೀಚರ್ಸ್ ಗಳ ಮಹತ್ವವನ್ನು ಇನ್ನಷ್ಟು ಎತ್ತಿ ತೇೂರಿಸುತ್ತದೆ.

Happy Teachers day 

✍ *Musthafa Master Ullal*
*======================*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...