Skip to main content

ಸಯ್ಯಿದುನಾ ಇಮಾಂ ಅಬೂ ಝಕರಿಯಾ ಮುಹಿಯುದ್ದೀನ್ ಯಹ್ಯಾ ಬಿನ್ ಷರಫುನ್ನವವೀ رحمة الله تعالى عليه

ಸಯ್ಯಿದುನಾ ಇಮಾಂ  ಅಬೂ ಝಕರಿಯಾ ಮುಹಿಯುದ್ದೀನ್ ಯಹ್ಯಾ ಬಿನ್ ಷರಫುನ್ನವವೀ رحمة الله تعالى عليه
✒ ಮುಹಮ್ಮದ್ ಹುಸೈನ್ ರಝಾ
_*بسم اللّٰہ الرحمٰن الرحیم*_
*_اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ_*
_*ಪೂರ್ಣ ಹೆಸರು*_
ಕುನ್ಯತ್ - ಅಬೂ ಝಕರಿಯಾ.
ಗೌರವ ನಾಮ _ಮುಹಿಯುದ್ದೀನ್.
ಹೆಸರು- ಯಹ್ಯಾ ಬಿನ್ ಷರಫ್ ಬಿನ್ ಮುರೀ ಬಿನ್ ಹಸನ್  ಬಿನ್ ಹುಸೈನ್ ಬಿನ್ ಹಿಝಾಮ್ ಬಿನ್ ಮುಹಮ್ಮದ್ ಬಿನ್ ಜಮುಅತುಲ್  ಹಿಝಾಮಿ  ನವವೀ ಶಾಫಿಈ_ ( رحمة الله عليه)
_*ಜನನ*_
_ಇಮಾಂ ನವವೀ رحمة الله عليه ರವರ ಜನನವೂ ಮುಹರ್ರಮುಲ್ ಹರಾಂ 631 ಹಿಜರಿಯಲ್ಲಿ ಡೆಮಸ್ಕಸಿನ ಹೌರಾನ್ ನಗರದ ಒಂದು ಊರಾದ ನವಾ ದಲ್ಲಿ ಉಂಟಾಯಿತು.  ಆ ಕಾರಣ  ನವವೀ ಎಂದು ಕರೆಯಲ್ಪಡುತ್ತಾರೆ._
_*ವಿದ್ಯಾರ್ಜನೆ*_
_ಶೈಖ್ ಯಾಸೀನ್ ಮುರಾಕುಷೀ رحمة الله عليه ರವರು ಹೇಳುತ್ತಾರೆ. ನಾನು  ಯಹ್ಯಾ ಬಿನ್ ಷರಫ್ ನವವೀ (رحمة الله عليه) ಯನ್ನು  ಮೊದಲ ಬಾರಿ ಯಾವಾಗ ನೋಡಿದೆನೆಂದರೆ ಆಗವರಿಗೆ ಹತ್ತು ವರ್ಷ ಪ್ರಾಯ ಇರಬಹುದು . ಮಕ್ಕಳು ಅವರನ್ನು ಆಟವಾಡಲು ಕರೆಯುತ್ತಿದ್ದರು ಆದರೆ ಅವರು ಆಡಲು ಹೋಗುತ್ತಿರಲಿಲ್ಲ ಮಕ್ಕಳು ಮತ್ತೂ ಮತ್ತೂ ಕರೆದಾಗ ಅವರು ಅಳುತ್ತಾ ಗೋಗಿ ಖುರ್'ಆನ್ ಓದಲು ತೊಡಗುತ್ತಿದ್ದರು. ನಾನು ಇದನ್ನು ಕಂಡಾಗ ಅವರ ಉಸ್ತಾದರಲ್ಲಿ ಹೋಗಿ ಹೇಳಿದೆ. ಈ ಹುಡುಗನತ್ತ ವಿಶೇಷ ಗಮನ ಹರಿಸಿರಿ ಏಕೆಂದರೆ ಈತ ಮುಂದೆ ತನ್ನ ಕಾಲದ ದೊಡ್ಡ ವಿದ್ವಾಂಸ ಹಾಗೂ ಝಾಹಿದ್ ಆಗುವನು ಹಾಗೂ ಜನರು ಅವನಿಂದ ಜ್ಞಾನವನ್ನು ಹರಸಿ ಬರುವರು. ಇದನ್ನು ಕೇಳಿದ ಉಸ್ತಾದರು ಹೇಳಿದರು.  ತಾವೇನು ಭವಿಷ್ಯ ಹೇಳುವಿರಾ? ನಾನು ಹೇಳಿದೆ. ನಾನು ಭವಿಷ್ಯ ನುಡಿಯುವವನಲ್ಲ ತರುವಾಯ ಅಲ್ಲಾಹನು ಏನನ್ನು ನನ್ನಲ್ಲಿ ಹೇಳಿಸಿದನೋ ನಾನದನ್ನೇ ಹೇಳಿದೆ ಅಷ್ಟೇ ಎಂದೆ  *(ಮುಂದೆ ಹಾಗೆಯೇ ಆಯಿತು ಜಗತ್ತು ಕಂಡ  ಮಹಾ ವಿದ್ವಾಂಸರಾದರು ಮಾತ್ರವಲ್ಲ ಜ್ಞಾನದಲ್ಲಿ ಎರಡನೇ ಶಾಫಿಈ ಎಂದು ಕರೆಯಲ್ಪಟ್ಟರು)*  ಬಳಿಕ ಉಸ್ತಾದರು ಅವರ (ಇಮಾಮರ)  ತಂದೆಯವರಲ್ಲಿ ಹೋಗಿ ನವವೀ ( رحمة الله عليه ) ಯವರ ಬಗ್ಗೆ ಹೇಳಿದಾಗ ಅವರು ತನ್ನ ಮಗನ ವಿದ್ಯಾಭ್ಯಾಸದ ಬಗ್ಗೆ ವಿಶೇಷವಾದ ಕಾಳಜಿಯನ್ನು ತೋರಿಸಿದರು. ಮಾತ್ರವಲ್ಲ ಮಗ ಪ್ರಾಯಪೂರ್ತಿ ಆಗುವ ಮುನ್ನವೇ ಖುರ್'ಆನ್ ಷರೀಫ್   ಕಲಿತು ತೀರಬೇಕೆಂದಿದ್ದರು.  ಮುಂದೆ  ಅದು ಹಾಗೆಯೇ ಅವರಿಷ್ಟದಂತೆಯೇ ಆಯಿತು._
_*ಕಠಿಣ ಪರಿಶ್ರಮ*_
_ಇಮಾಂ ನವವೀ رحمة الله عليه ರವರು 659 ಹಿಜರಿಯಲ್ಲಿ  ಹೆಚ್ಚಿನ ವಿದ್ಯೆಗಾಗಿ ಡೆಮಸ್ಕಸ್ ಗೆ ಹೋದರು ಅಲ್ಲಿ ಶಾಫಿಈ ಮಾಝ್ಹಬ್'ನ ಗ್ರಂಥವಾದ ತನ್ಬೀಹನ್ನು ನಾಲ್ಕೂವರೆ ತಿಂಗಳಲ್ಲಿ ಹಿಫ್ಳ್ ಮಾಡಿದರು. ಮತ್ತು ಶಾಫಿಈ ಮಝ್ಹಬಿನ ಇತರೆಲ್ಲಾ ಗ್ರಂಥಗಳನ್ನು ಅದೇ ವರ್ಷದಲ್ಲಿ ಕಲಿತರು. ದಿನ ರಾತ್ರಿಗಳಲ್ಲಿ ವ್ಯತ್ಯಸ್ತವಾದ ಜ್ಞಾನ ಶಾಖೆಯ ಹನ್ನೆರಡು ವಿಧ  ಅಧ್ಯಾಯಗಳನ್ನು ಬೇರೆ ಬೇರೆ ಉಸ್ತಾದರುಗಳಲ್ಲಿ ಉತ್ತಮ ರೀತಿಯಲ್ಲಿ  ಗಮನ ಕೊಟ್ಟು ಅರಿತು ಕಠಿಣ ಪರಿಶ್ರಮದಿಂದ ಕಲಿತರು. ಇಲ್ಮ್ ಕಲಿಯುವ ಕಾಲದಲ್ಲಿ ಎಷ್ಟೊಂದು ಕಠಿಣವಾಗಿ ಕಷ್ಟ ಪಟ್ಟರೆಂದರೆ ಎರಡು ವರ್ಷಗಳ ವರೆಗೆ ವಿಶ್ರಮಿಸಲು ಕಾಲುಗಳನ್ನು ನೆಲಕ್ಕೆ ಚಾಚಿರಲಿಲ್ಲ.! سبحان الله عزوجل_
*ಝುಹುದ್ ಮತ್ತು ತಖ್ವಾ*
_ಇಮಾಂ ನವವೀ رحمة الله عليه ರವರು ಇಶಾ ಬಳಿಕ ಸೊಲ್ಪವೆ ಊಟ ಮಾಡುತ್ತಿದ್ದರು ಮತ್ತು ಸಹರಿ ಸಮಯದಲ್ಲಿ ಬರೀ ನೀರು ಮಾತ್ರ ಕುಡಿಯುವರು. ತಣ್ಣಗಿರುವ ನೀರು ಕುಡಿಯುವುದು ಅಲ್ಲಿಯ ಜನರಲ್ಲಿ ಸಾಮಾನ್ಯ ವಾಡಿಕೆಯಾಗಿತ್ತಾದರೂ  ಇಮಾಂ ನವವೀ رحمة الله عليه ತಣ್ಣಗಿರೊ ನೀರನ್ನು ಕುಡಿಯುತ್ತಿರಲಿಲ್ಲ. ಮಹಾನರು ತುಂಬಾನೇ ಸಾದಾ ಜೀವನವನ್ನು ಅಳವಡಿಸಿಕೊಂಡಿದ್ದರು.  ಸಾದಾ ಮತ್ತು ದಪ್ಪದ ವಸ್ತ್ರವನ್ನು ಉಡುತ್ತಿದ್ದರು. ಡೆಮಸ್ಕಸ್ ನ ಫಲಗಳನ್ನು ಕೂಡ ಸೂಕ್ಷ್ಮತೆಯ ಕಾರಣ ತಿನ್ನುತ್ತಿರಲಿಲ್ಲ._
  _ಅಲ್ಲಾಮಾ ರಶೀದುದ್ದೀನ್ ಹನಫಿ رحمة الله عليه ಹೇಳುತ್ತಾರೆ. ಇಮಾಂ ನವವೀ رحمة الله عليه ರವರು ದುನಿಯಾದ ಎಲ್ಲಾ ರೀತಿಯ ಸುಖ ಸೌಕರ್ಯ ಆನಂದಗಳನ್ನು  ದೂರ ತಳ್ಳಿ  ಕಠಿಣ ವಿರಾಗಿಯಾಗಿ ಜೀವಿಸುತ್ತಿರುವುದನ್ನು ಕಂಡು ನಾನು ಅವರಲ್ಲಿ ಹೇಳಿದೆ.  ತಮ್ಮನ್ನು ದೀನೀ ಸೇವೆಯಿಂದ ದೂರ ಮಾಡುವಂತಹಾ ರೋಗವೇನಾದರೂ ಬರುವುದೇ ಎಂದು ನನಗೆ ಹೆದರಿಕೆಯಾಗುತ್ತಿದೆ! ಅದಕ್ಕೆ ಇಮಾಂ ನವವೀ رحمة الله عليه .  ಇಂತಿಂತಹಾ ವ್ಯಕ್ತಿಯೂ ಅಲ್ಲಾಹನ ಆರಾಧನೆ ಮಾಡಿ ಆತನ ಎಲುಬುಗಳು ಒಣಗಿ ಹೋದವು.! ಎಂದು ಉತ್ತರಿಸಿದರು. ಆ ಮಾತನ್ನು ಕೇಳಿ ನನಗೆ ಅರ್ಥವಾಯಿತು ಏನೆಂದರೆ ಅವರಿಗೆ ಈ ಇಹಲೋಕದಲ್ಲಿ ಯಾವುದೇ ವ್ಯಾಮೋಹವಿಲ್ಲ ಮತ್ತು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡುವುದೆ ಒಳಿತೆಂದುಕೊಂಡೆ._ 
_ಮಹಾನರ ಬಳಿ ಯಾವುದಾದರೂ ಅಮ್ರದ್ (ಮೀಸೆ ಚಿಗುರದ ಚಿಕ್ಕ ಬಾಲಕ) ವಿದ್ಯೆ ಕಲಿಯಲು ಬಂದರೆ ವಿರೋಧಿಸುತ್ತಿದ್ದರು.  ಅಲ್ಲಾಹನು ಇಮಾಂ ನವವೀ رحمة الله عليه ರವರಿಗೆ ಮೂರು ವಿಶೇಷತೆಗಳನ್ನು ನೀಡಿದ್ದನು ಅದರಲ್ಲಿ ಒಂದು ವಿಶೇಷತೆಯೇನಾದರೂ ಯಾರಲ್ಲಾದರೂ ಇದ್ದರೆ ದೂರದೂರಿನಿಂದ ಆತನನ್ನು ಜನರು ಹುಡುಕುತ್ತಾ ಬಂದು  ಆತನ ಝಿಯಾರತ್ ಮಾಡಬಹುದಾಗಿದೆ. ಆ ವಿಶೇಷತೆಗಳು ಒಂದು- ಇಲ್ಮ್ ಮತ್ತು ಅಮಲ್, ಎರಡು-  ಝುಹುದ್ ಮತ್ತು ತಖ್ವಾ, ಮೂರು- ಒಳಿತನ್ನು ಆದೇಶಿಸುವುದು ಹಾಗೂ ಕೆಡುಕನ್ನು ವಿರೋಧಿಸುವುದು,  ಮಹಾನರು ವಿದ್ಯೆಯಲ್ಲಿ ಕಾರ್ಯ ನಿರತರಾಗುವುದರ ಜೊತೆಗೆ ಸುನ್ನತ್ ನಮಾಝ್ ಎಡೆ ಬಿಡದೆ ಉಪವಾಸ ಆಚರಣೆ ಇಬಾದತ್ ಗಳಲ್ಲಿ ತನ್ನ ಉಸ್ತಾದರನ್ನು ಅನುಸಕರಿಸುತ್ತಿದ್ದರು. ಉಸ್ತಾದರ ವಫಾತ್ ಬಳಿಕ ಮಹಾನರ ಇಬಾದತ್ ಆರಾಧನೆಗಳಲ್ಲಿ ಒಲವು ಮತ್ತಷ್ಟು ಇಮ್ಮಡಿಯಾಯಿತು._
*ತಖ್ವಾ, ಅಲ್ಲಾಹನ ಭಯ*
_ಅಬೂ ಅಬ್ದುಲ್ಲಾಹ್ ಬಿನ್ ಅಬುಲ್ ಫತ್ಹ್ ಹಂಬಲಿ رحمة الله عليه ಹೇಳುತ್ತಾರೆ.  ಇಮಾಂ ನವವೀ رحمة الله عليه ರವರನ್ನು ಡೆಮಸ್ಕಸ್ ಜಾಮಿಯಾ ಮಸ್ಜಿದ್'ನಲ್ಲಿ ಒಂದು ಕಂಬದ ಹತ್ತಿರ ಕತ್ತಲಲ್ಲಿ ತುಂಬಾ ಭಯ ಭಕ್ತಿಯಿಂದ ನಮಾಝ್ ನಿರ್ವಹಿಸುವುದಾಗಿ ಕಂಡೆ ದುಃಖ ಭಯದ ಅವಸ್ಥೆಯಲ್ಲಿ ಈ ಆಯತನ್ನು ಮತ್ತೆ ಮತ್ತೆ ಓದುತ್ತಿದ್ದರು._
*وَقِفُوهُمْ ۖ إِنَّهُمْ مَسْئُولُونَ*
_*ಅರ್ಥ:* ಇವರನ್ನು ತಡೆದು ನಿಲ್ಲಿಸಿರಿ ಇವರೊಂದಿಗೆ ಪ್ರಶ್ನಿಸಲಿಕ್ಕಿದೆ. (ಅಸ್ಸ್ವಾಫ್ಫಾತ್ 24)  ಅವರ ನೋವು ತುಂಬಿದ ಸ್ವರದಲ್ಲಿ ಖುರ್'ಆನ್ ಪಾರಾಯನವನ್ನು ಕೇಳಿ ನನಗೆ ಎಂತಹಾ ಆತ್ಮ ಸಂತೃಪ್ತಿ ಉಂಟಾಯಿದೆಂದರೆ ಅದು ಅಲ್ಲಾಹನೆ ಬಲ್ಲ._
*ಪ್ರಸಿದ್ಧಿಯಿಂದ ದೂರ*
_ಇಮಾಂ ನವವೀ رحمة الله عليه ರವರು ತುಂಬಾ ವಿನಯವಂತರಾಗಿದ್ದರು ಯಾವತ್ತೂ ಕೂಡ ಪ್ರಶಂಸೆ ಪ್ರಸಿದ್ಧಿಯನ್ನು ಇಷ್ಟ ಪಡುತ್ತಿರಲಿಲ್ಲ. ಮಹಾನರು ತನ್ನ   ಶಿಷ್ಯರುಗಳಲ್ಲಿ ಹೇಳುತ್ತಿದ್ದರು. *ನೀವು ಎಲ್ಲರೂ ಒಟ್ಟಿಗೆ ಸೇರಿ ನನ್ನ ಬಳಿ ಬರಬೇಡಿ  ಏಕೆಂದರೆ ಹೆಚ್ಚು ಶಿಷ್ಯರನ್ನು ಹೊಂದಿದ ಕಾರಣದಿಂದ ನಾನು ದುನಿಯಾದ ಮೋಹಕ್ಕೆ ಬಲಿಯಾಗುವೆನೇನೋ ಏಕೆಂದರೆ ಶರೀರವೂ ಜನರ ಗೌಜಿಯ ಮಧ್ಯೆ ಹೆಚ್ಚು ಖುಷಿಯಾಗುತ್ತದೆ .* ಜನರು ರಾಜರನ್ನು ಭೇಟಿಯಾಗುವುದನ್ನು ಒಂದು ಪ್ರತಿಷ್ಠೆ ಎಂದುಕೊಳ್ಳುತ್ತಾರೆ ಆದರೆ ಇಮಾಮರು ಮಾತ್ರ ಆ ಯೋಚನೆಗೆ ನೇರ ತದ್ವಿರುದ್ಧವಾಗಿದ್ದರು. ಒಮ್ಮೆ  ಇಮಾಮರು ಮಸೀದಿಯಲ್ಲಿ ದರ್ಸ್ ನೀಡುತ್ತಿದ್ದರು ಆಗ ಮಹಾರಾಜರು ಮಸೀದಿಗೆ ನಮಾಝ್ ನಿರ್ವಹಿಸಲು ಬರುತ್ತಿದ್ದಾರೆ ಎಂಬ ವಾರ್ತೆಯೂ ಕೇಳಿದಾಗ ದರ್ಸನ್ನು ಅಲ್ಲಿಗೇ ಮೊಟಕು ಗೊಳಿಸಿ ಮಸೀದಿಯಿಂದ ಹೊರ ನಡೆದರು ಮತ್ತು ಆ ದಿನವಿಡೀ ಮಸೀದಿಗೆ ಹಿಂತಿರುಗಲಿಲ್ಲ. ಏಕೆಂದರೆ ಮಸೀದಿಯಲ್ಲಿ ಇದ್ದರೆ ರಾಜರನ್ನು ಭೇಟಿಯಾಗಬೇಕಾದಿತೆಂಬ ಭಯ.!_
_*تخت سکندری پر وہ تھوکتے نھیں ہیں*_
_*بستر لگا ہوا جن کا تری گلی میں*_
~_*ರಾಜ ಸಿಂಹಾಸನದ ಮೇಲೆ ಅವರು ಉಗುಳುವುದೂ (ನೋಡುವುದೂ)  ಇಲ್ಲ*_~
~_*ತಮ್ಮ ﷺ ಅಂಗಳದಲ್ಲಿ ಹಾಸಿಗೆಯನ್ನು ಹಾಸಲ್ಪಟ್ಟವರು*_~
*ವೈದ್ಯಶಾಸ್ತ್ರವನ್ನು ಬಿಟ್ಟರೇಕೆ.?*
_ಇಮಾಂ ನವವೀ رحمة الله عليه ಹೇಳುತ್ತಾರೆ. ಒಮ್ಮೆ ನನಗೆ ಇಲ್ಮುಲ್ ತ್ವಿಬ್ಬ್ ಕಲಿಯಬೇಕೇಬ ಆಗ್ರಹ ಉಂಟಾಯಿತು ತರುವಾಯ ನಾನು *ಅಲ್ ಖಾನೂನ್ ಫಿತ್ತ್ವಿಬ್ಬ್* ಗ್ರಂಥವನ್ನು ಖರೀದಿಸಿದೆ ಮತ್ತು ಈ ವಿದ್ಯೆಯಲ್ಲಿ ನಿರಂತರ ಪ್ರಯತ್ನಿಸುವೆ ಎಂದು ಸಂಕಲ್ಪಿಸಿದೆನಷ್ಟೆ ಅಂದಿನಿಂದ ನನ್ನ ಹೃದಯದಲ್ಲಿ ಕತ್ತಳು ಕವಿದುಕೊಂಡವು ಹಾಗೂ ಹಲವು ದಿನಗಳ ಕಾಲ ನನ್ನ ಸ್ಥಿತಿ ಹೀಗೆ ಮುಂದುವರಿಯಿತು ಯಾವುದೇ ಕಾರ್ಯದಲ್ಲೂ ಮನಸ್ಸು ಕೂಡಿ ಬರುತ್ತಿರಲಿಲ್ಲ ನಾನು ತುಂಬಾ ದುಃಖಿತನಾದೆ ಮತ್ತು ಯೋಚಿಸಲು ತೊಡಗಿದೆ ಏಕಾಗಿ ಹೀಗಾಗುತ್ತಿದೆ? ಎಂದು ಚಿಂತಿಸುತ್ತಿದ್ದೆ.  ಬಳಿಕ ಅಲ್ಲಾಹನ ಕಡೆಯಿಂದ (ಅದಕ್ಕೆ ಕಾರಣವೇನೆಂದು) ನನ್ನ ಹೃದಯಕ್ಕೆ  (ಇಲ್'ಹಾಂ) ಹಾಕಿ ಕೊಡಲಾಯಿತು.  ಏನೆಂದರೆ ವ್ಯದ್ಯ ಶಾಸ್ತ್ರದಲ್ಲಿ  ನೀನು ತನ್ನನ್ನು ಅನಗತ್ಯವಾಗಿ ತೊಡಗಿಸಿಕೊಂಡಿರುವುದೇ ಅದಕ್ಕೆ ಕಾರಣ ಎಂದಾಗಿತ್ತು. ನಂತರ ಬೇಗನೆ ನಾನು ಆ ಗ್ರಂಥವನ್ನು ಮಾರಿಬಿಟ್ಟೆ  ಮಾತ್ರವಲ್ಲ ನನ್ನ ಮನೆಯಲ್ಲಿ ವೈದ್ಯ ಶಾಸ್ತ್ರಕ್ಕೆ ಸಂಬಂದಿಸಿದ ಏನೆಲ್ಲಾ ವಸ್ತುಗಳಿತ್ತೋ ಅದೆಲ್ಲವನ್ನೂ ನೀಗಿಸಿದೆ. ಬಳಿಕ ಅಲ್ಲಾಹನ ಕರುಣೆ ನನ್ನ ಮೇಲೆ ಉಂಟಾಯಿತು ನನ್ನ ಹೃದಯ ಬೆಳಗಿತು ಮತ್ತು  ನಾನು ಹಿಂದಿನ ಸ್ಥಿತಿಗೆ ಮರಳಿದೆ._
*ಇಬ್ಲೀಸನ ಫಿತ್ನಾ ದಿಂದ ರಕ್ಷೆ.!*
_ಇಮಾಂ ನವವೀ رحمة الله عليه ಹೇಳುತ್ತಾರೆ.  ಒಮ್ಮೆ ನನಗೆ ಜ್ವರ ಬರುತ್ತಿತ್ತು ನಾನು ನನ್ನ ತಂದೆ ತಾಯಿ ಹಾಗೂ ಇತರರೊಂದಿಗೆ ಮಲಗಿದ್ದೆ ರಾತ್ರಿಯ ಮೂರನೇ ಒಂದು ಭಾಗದಲ್ಲಿ ಅಲ್ಲಾಹನು ನನಗೆ ಪೂರ್ಣವಾದ ಶಿಫಾ ನೀಡಿದನು ಬಳಿಕ ನನಗೆ ತುಂಬಾ ಆರಾಮ ಉಂಟಾಯಿತು ಆಗ ನಾನು ಎದ್ದು ಅಲ್ಲಾಹನ ಝಿಕ್ರ್ ಹೇಳುವುದರಲ್ಲಿ ತಲ್ಲೀನನಾದೆ ಕೆಲವೊಮ್ಮೆ ನನ್ನ ಸ್ವರವೂ ಉಚ್ಛವಾಗುತ್ತಿತ್ತು. ಅಷ್ಟರಲ್ಲಿ  ಒಬ್ಬರು ಸುಂದರವಾದ ಪ್ರಾಯಸ್ಥರನ್ನು ಹೌಳ್'ನಲ್ಲಿ ಉಝೂ ಮಾಡುವುದಾಗಿ ಕಂಡೆ. ಉಝೂ ಮುಗಿಸಿದ ಬಳಿಕ ಆ ವ್ಯಕ್ತಿಯೂ ನನ್ನ ಬಳಿ ಬಂದು ಹೇಳಿತು. ಓ ನನ್ನ ಮುದ್ದು ಮಗನೇ.! ನೀನು ಝಿಕ್ರ್ ಹೇಳುವುದನ್ನು ನಿಲ್ಲಿಸು ಏಕೆಂದರೆ ನೀನು ಈ ರೀತಿ ಝಿಕ್ರ್ ಹೇಳುವುದರಿಂದ ನಿನ್ನ ತಾಯಿ ತಂದೆಗೆ ಉಪದ್ರವ ಉಂಟಾಗಬಹುದು. ಆಗ ನಾನು ಹೇಳಿದೆ ಓ ಶೈಖ್.. ತಾವು ಯಾರು.? ಆಗ ವ್ಯಕ್ತಿಯೂ ಹೇಳಿತು. ನಾನು ಯಾರೆಂಬ ಮಾತನ್ನು ಬಿಡು. ನಾನು ನಿನಗೆ ಒಳಿತನ್ನು ಬಯಸುವವನು ಎಂದು ತಿಳಿ. ಈ ಮಾತನ್ನು ಕೇಳಿ   ಕಂಡಿತಾ ಈತನು ಇಬ್ಲೀಸ್  ಆಗಿರುವನು ಎಂಬ ವಿಚಾರವೂ ನನ್ನ ಮನದಲ್ಲಿ ಮೂಡಿ ಬಂತು ಆಗ ನಾನು_ *أَعُوذُ بِاللَّهِ مِنَ الشَّيْطَانِ الرَّجِيمِ*
_ಎಂದು ಹೇಳಿದೆ ಮತ್ತು ಜೋರಾಗಿ ಝಿಕ್ರ್ ಹೇಳಲು ತೊಡಗಿದೆ ಆಗ ಇಬ್ಲೀಸನು ನನ್ನಿಂದ ದೂರವಾಗಿ ಬಾಗಿಲಿನತ್ತ ಓಡಿದ ಅಷ್ಟರಲ್ಲಿ ನನ್ನ ತಂದೆಯವರು ಹಾಗೂ ಇತರರ ಜನರೂ ಎದ್ದರು. ನಾನು ಬಾಗಿಲಿನತ್ತ ಓಡಿದೆ ಆದರೆ ಬಾಗಿಲನ್ನು ಮುಚ್ಚಲ್ಪಟ್ಟದ್ದಾಗಿ ಕಂಡೆ ಎಲ್ಲಾ ಕಡೆ ನೋಡಿದೆ ಆದರೆ ಯಾರೂ ಕಾಣಲಿಲ್ಲ.  ನನ್ನ ತಂದೆಯವರು ನನ್ನಲ್ಲಿ ಕೇಳಿದರು. ಓ ಯಹ್ಯಾ ನನ್ನ ಮಗನೇ.! ಏನಾಯಿತು.? ನಾನು ನಡೆದ ಸಂಗತಿಯನ್ನು ತಿಳಿಸಿದೆ ಆಗ ಎಲ್ಲರಿಗೂ ಆಶ್ಚರ್ಯವಾಯಿತು. ಬಳಿಕ ನಾವೆಲ್ಲರೂ ಒಟ್ಟಿಗೆ ಕೂತು ಅಲ್ಲಾಹನ ಝಿಕ್ರ್ ಹೇಳಲು ತೊಡಗಿದೆವು._
_*مصطفٰی ﷺ کی ہو نظر کرم جس پر*_
ಮುಸ್ತ್ವಫಾ ﷺ ರ ಕಾರುಣ್ಯದ ನೋಟವು ಯಾರ ಮೇಲೆ ಇದೆಯೋ
_*شیطان کی کہا چلتی ہے فریب اس پر*_
ಶೈತಾನನ ವಂಚನೆ ಎಲ್ಲಿ ನಡೆಯುತ್ತೆ ಅವರ ಮೇಲೆ....
_*ಸಮಯ ಪ್ರಜ್ಞೆ*_
_ಸಮಯ ಪ್ರಜ್ಞೆ ಇರುವ ವ್ಯಕ್ತಿಗಳು ಯಾವತ್ತೂ ಸಮಯವನ್ನು  ನಷ್ಟ ಪಡಿಸಲಾರರು. ಸಯ್ಯಿದುನಾ ಇಮಾಂ ಅಬೂ ಝಕರಿಯಾ ಯಹ್ಯಾ ಬಿನ್ ಷರಫುನ್ನವವೀ رحمة الله عليه ರವರು  ಎಂದೂ ಕೂಡ ಸಮಯವನ್ನು ವಿನಾ ಕಾರಣ ನಷ್ಟಪಡಿಸುತ್ತಿರಲಿಲ್ಲ  ರಾತ್ರಿಯಲ್ಲಾದರೂ ಹಗಳಲ್ಲಾದರೂ ಎಲ್ಲಿಯ ವರೆಗೆಂದರೆ ಹೋಗುವಾಗ ಬರುವಾಗಳೂ ಕೊಡ ಯಾವುದಾದರೂ ಗ್ರಂಥವನ್ನು ಓದುವರು ಅದಲ್ಲದಿದ್ದರೆ ಚಿಂತನೆ ಜಾರಿ ಇರುತ್ತಿತ್ತು. ಹೀಗೆ ಹಲವು ವರ್ಷಗಳು ಮಹಾನರು ಜ್ಞಾನ ಕಲಿಯುವಾಗ ಕಳೆದರು ಮತ್ತು ಮಹಾನರು ತನ್ನ ದಿನಚರಿಗೆ ತಕ್ಕಂತೆ ಸಮಯ ವಿಂಗಡಣೆ ಮಾಡಿಕೊಂಡಿದ್ದರು ಎಲ್ಲಾ ಸಮಯವೂ ಒಳಿತಿನ ಕಾರ್ಯಗಳಲ್ಲಿ ವ್ಯಯಿಸುತ್ತಿದ್ದರು. ಗ್ರಂಥ ರಚನೆ,  ಉಧ್ಬೋಧನೆ, ಸುನ್ನತ್ ನಮಾಝ್, ಉಪವಾಸ,  ಖುರ್'ಆನ್  ಪಾರಾಯಣ, ಆಖಿರತ್ ಬಗ್ಗೆ ಚಿಂತೆಯಲ್ಲಿ, ಒಳಿತನ್ನು ಆಹ್ವಾನಿಸುವುದು ಕೆಡುಕನ್ನು ವಿರೋಧಿಸುವುದು, ಹೀಗೆ ಹಲವು._
_*ಅತೀಯಾದ ಗ್ರಂಥ ಪಠಣ.!*_
_ಇಮಾಂ ನವವೀ رحمۃ اللّٰہ القوی   ಗ್ರಂಥಗಳನ್ನು ಯಾವ ಪರಿ ಓದುತ್ತಿದ್ದರು ಎಂದು ಮನಗಾನಳು ಈ ಒಂದು ಘಟನೆ ಮಾತ್ರವೇ ಸಾಕು  ಅಲ್ಲಾಮಾ ಕಮಾಲ್ رحمة الله عليه *ಅಲ್ ಬದ್ರುಸ್ಸಾಫಿರ್ ವ ತುಹ್ಫತುಲ್ ಮುಸಾಫಿರ್* ನಲ್ಲಿ ಹೇಳುತ್ತಾರೆ. ಒಮ್ಮೆ ಇಮಾಂ ಗಝ್ಝಾಲಿ رحمة الله الوالی  ರವರ ಪ್ರಸಿದ್ಧ ಗ್ರಂಥ *ಅಲ್ ವಸೀತ್ವ್*  ನ ಯಾವುದೋ ಒಂದು ಮಸ್ಅಲಾದಲ್ಲಿ  ಇಮಾಂ ನವವೀ رحمة الله القوی  ಯವರೊಂದಿಗೆ ನನಗೆ ಭಿನ್ನಾಭಿಪ್ರಾಯ ಉಂಟಾದಾಗ ಇಮಾಂ ನವವೀ رحمۃ اللّٰہ القوی  ನನ್ನೊಂದಿಗೆ ಹೇಳಿದರು.  ನಾನು ~400~ ಬಾರಿ ಪಠಿಸಿದ ಗ್ರಂಥದ ಮಸ್ಅಲಾದ ಬಗ್ಗೆ ನೀವು ನನ್ನೊಂದಿಗೆ ತರ್ಕಿಸುತ್ತಿದ್ದೀರ. ಸುಬ್ಹಾನಲ್ಲಾಹ್ عزوجل.! ಬರೀ ಒಂದು ಗ್ರಂಥವನ್ನು ~400~ ಬಾರಿ ಓದಿದ್ದರೆ ಇನ್ನು ನೂರಾರು ಗ್ರಂಥಗಳನ್ನು ಅದೆಷ್ಟು ಬಾರಿ ಓದಿರಬೇಕು.!_
*ಉಸ್ತಾದರ ವಿಶೇಷ ಕಾಳಜಿ*
_ಇಮಾಂ ನವವೀ رحمة الله القوى ರವರು ಫಿಖ್ಹ್ ಜ್ಞಾನವನ್ನು ಶೈಖ್ ಅಬೂ ಇಬ್ರಾಹೀಮ್ ಇಸ್'ಹಾಖ್ ಬಿನ್ ಅಹ್ಮದ್ ಬಿನ್ ಉಸ್ಮಾನ್ ಮಗ್ರಿಬಿ رحمة الله عليه ರವರಲ್ಲಿ ಕಲಿತರು ಇಮಾಮರು ಅವರನ್ನು ತುಂಬಾ ಆದರಿಸುತ್ತಿದ್ದರು ಅವರಿಗೆ ಉಝೂ ಮತ್ತು ಸ್ನಾನಕ್ಕೆ ನೀರನ್ನು ತುಂಬಿಸಿ ಕೊಡುತ್ತಿದ್ದರು. ಅವರೊಂದಿಗೆ ಕಲಿಯುತ್ತಿದ್ದಾಗಳೇ ಇಮಾಂ ನವವೀ رحمة الله القوى ಯವರು_
_ಅವರಲ್ಲಿ ಕಲಿಯುತ್ತಿರುವ ಗ್ರಂಥಗಳ ವ್ಯಾಖ್ಯಾನವನ್ನು ಬರೆಯುತ್ತಿದ್ದರು. ಉಸ್ತಾದರು ಇಮಾಮರ ಜ್ಞಾನ ದಾಹವನ್ನು ಕಂಡು ಅವರನ್ನು ತನ್ನ ದರ್ಸಿನ *ಮುಈದುದ್ದರ್ಸ್* ಮಾಡಿದರು.  (ಅಂದರೆ ಇಮಾಮರು ತನ್ನ ಉಸ್ತಾದರಿಂದ ಕಲಿತ ಪಾಠವನ್ನು ದರ್ಸಿನಲ್ಲಿ ಆವರ್ತಿಸುವರು.)_
_*ರೋಗಾವಸ್ಥೆಯಲ್ಲಿ ಸಹನೆ*_
_ಇಮಾಂ ನವವೀ رحمة الله القوى ರವರು ತನ್ನ ತಂದೆಯವರೊಂದಿಗೆ ಹರಮೈನ್ ತ್ವಯ್ಯಿಬೈನ್ (ಮಕ್ಕಾ, ಮದೀನಾ) ಕ್ಕೆ ಯಾತ್ರೆ ಹೊರಟಾಗ ತೀವ್ರ ಜ್ವರ ಬಾದಿತರಾದರು ಆ ಜ್ವರವೂ ಅರಫಾ ವರೆಗೂ ಮುಂದುವರಿಯಿತು ಅಂತಹಾ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಕೃತಘ್ನತೆಯನ್ನು ತೋರದೆ ಸಹನೆ ಪಾಲಿಸಿದರು. ಯಾತ್ರೆ ಮುಗಿಸಿ ಡೆಮಸ್ಕಸ್'ಗೆ ಹಿಂತಿರುಗಿದ ಬಳಿಕ ಇಮಾಂ ನವವೀ رحمة الله القوى ರವರ ಮೇಲೆ ಅಲ್ಲಾಹನು ಜ್ಞಾನದ ಮಳೆಯನ್ನು ಸುರಿಸಿದನು. ಮಹಾನರಿಗೆ ಎರಡು ಬಾರಿ ಪವಿತ್ರ ಹಜ್ಜ್ ನಿರ್ವಹಿಸುವ ಭಾಗ್ಯವು ಲಭಿಸಿತ್ತು._
_ಒಮ್ಮೆ ಇಮಾಮರ ಸಂಗಡಿಗರು ಸ್ನೇಹಿತರು ಇಮಾಮರೊಂದಿಗೆ  ಖಿಯಾಮತ್ ದಿನದಲ್ಲಿ ನಮ್ಮನ್ನು ಮರೆಯದಿರಿ ಎಂದು ಹೇಳಿದಾಗ ಇಮಾಮರು ಅವರೊಂದಿಗೆ ಹೇಳಿದರು.  ಅಲ್ಲಾಹನಾಣೆ.! ಖಿಯಾಮತ್ ದಿನದಲ್ಲಿ ಅಲ್ಲಾಹನು ಅಲ್ಲಿ ನನಗೆ ಸ್ಥಾನವನ್ನು ನೀಡಿದರೆ ನನ್ನನ್ನು ಬಲ್ಲ ಎಲ್ಲಾ ಜನರನ್ನು ಸ್ವರ್ಗಕ್ಕೆ ಕಳುಹಿಸುವ ವರೆಗೆ ನಾನು ಸ್ವರ್ಗಕ್ಕೆ ಪ್ರವೇಶಿಸಲಾರೆನು._
*ಉಸ್ತಾದರೊಂದಿಗೆ ಗೌರವ*
ಸಯ್ಯಿದುನಾ ಇಮಾಂ ನವವೀ رحمة الله القوى ರವರ ಉಸ್ತಾದರಾದ ಶೈಖ್ ಕಮಾಲ್ ಇರ್ಬಿಲೀ رحمة الله عليه ರವರು ಒಮ್ಮೆ ಇಮಾಂ ನವವೀ رحمة الله عليه ಯವರನ್ನು ತನ್ನ ಜೊತೆ ಊಟಕ್ಕೆ ಕರೆದರು ಆಗ ಇಮಾಮರು ವಿನಯಾನ್ವಿತರಾಗಿ ಅವರೊಂದಿಗೆ ಹೇಳಿದರು. ಯಾ ಸಯ್ಯಿದೀ..!  ನನಗೆ ತಮ್ಮ ಜೊತೆ ಊಟ ಮಾಡಲು ಕಾರಣಾಂತರ ಸಾಧ್ಯವಾಗದು ಆದ್ದರಿಂದ ತಾವು ನನಗೆ ದಯವಿಟ್ಟು ಕ್ಷಮಿಸಬೇಕು. ಉಸ್ತಾದರು ಆಗಲಿ ಎಂದರು. ನಂತರ ಯಾರೋ ಇಮಾಮರೊಡನೆ ಊಟ ಮಾಡದೇ ಇರಲು ಕಾರಣವೇನೆಂದು ಕೇಳಿದರು. _ಅದಕ್ಕೆ ಇಮಾಮರ ಉತ್ತರ.  ಊಟ ಮಾಡುತ್ತಾ ಉಸ್ತಾದರು  ಯಾವುದಾದರೊಂದು ತುತ್ತನ್ನು ತಿನ್ನುವ ಇರಾದೆಯನ್ನು ಮಾಡಿದ್ದು ಅರಿವಿಲ್ಲದೆ ಆ ತುತ್ತನ್ನು ನಾನು ತಿಂದುಬಿಡುವೆನೇನೋ ಎಂಬ ಭಯ ನನ್ನನ್ನು ಕಾಡಿತು ಅದೇ ಆಗಿದೆ ನಾನು ಉಸ್ತಾದರೊಂದಿಗೆ ಊಟ ಮಾಡದೇ ಇರಲು ಕಾರಣ ಎಂದರು._
*ಅವರ ಇಮಾಂ ನನ್ನ ಇಮಾಮರ ಉಸ್ತಾದ್ ಆಗಿದ್ದರು.!*
_ಒಮ್ಮೆ ಇಮಾಂ ನವವೀ رحمة الله القوى ರವರೊಂದಿಗೆ ಮಾಲಿಕ್ ಮಝ್ಹಬಿನ ವ್ಯಕ್ತಿಯೊಬ್ಬರು ಯಾವುದೋ ಮಸ್ಅಲಾದಲ್ಲಿ ತರ್ಕಕ್ಕಿಳಿದು ಕಠಿಣವಾಗಿ ವರ್ತಿಸಿದರು ಆದರೆ ಇಮಾಮರು ಯಾವುದೇ ಕಠಿಣತೆ ತೋರದೆ ಅವರೊಂದಿಗೆ ವಿನಯದಿಂದಲೇ ವರ್ತಿಸಿದರು. ಬಳಿಕ ಯಾರೋ ಇಮಾಮರೊಂದಿಗೆ ಆತನೊಂದಿಗೆ ವಿನಯದಿಂದ ವರ್ತಿಸಿದಕ್ಕೆ  ಕಾರಣ ಕೇಳಿದರು.  ಆಗ *ಇಮಾಂ ನವವೀ رحمۃ اللّٰہ القوى  ಹೇಳಿದರು. ಆತನ ಇಮಾಂ ನನ್ನ ಇಮಾಮರ ಉಸ್ತಾದ್ ಆಗಿದ್ದಾರೆ. ಆದ್ದರಿಂದ ಆತನೊಂದಿಗೆ ವಿನಯದಿಂದ ವರ್ತನೆಯೂ ಯದಾರ್ಥದಲ್ಲಿ ಆತನ ಇಮಾಮರೊಂದಿಗೆ ವಿನಯದಿಂದ ವರ್ತಿಸಿದಂತಾಗಿದೆ* ( *ಸಯ್ಯಿದುನಾ ಇಮಾಂ ಮಾಲಿಕ್ ಬಿನ್ ಅನಸ್ رضى الله تعالى عنه* ರವರು ಇಮಾಂ ನವವೀ رحمۃ اللّٰہ علیہ ಹಾಗೂ ಸರ್ವ ಶಾಫಿಈ ಮುಕಲ್ಲಿದೀನ್'ಗಳ ಇಮಾಮರಾದ *ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಇದ್ರೀಸುಸ್ಶಾಫಿಈ رضى الله تعالى عنه*  ರವರ ಉಸ್ತಾದರಾಗಿದ್ದಾರೆ)_
*ಬಾಲ್ಯದಲ್ಲೇ ಕರಾಮತ್.!*
_ಇಮಾಂ ನವವೀ رحمة الله القوى ರವರ ತಂದೆಯವರಾದ ಸಯ್ಯಿದುನಾ ಷರಫ್ ಬಿನ್ ಮುರೀ رحمة الله عليه ರವರು ಹೇಳುತ್ತಾರೆ. ನನ್ನ ಮಗ ಯಹ್ಯಾ  ಸುಮಾರು ಏಳು ವರ್ಷ ಪ್ರಾಯದವನಾಗಿದ್ದಾಗ ಪವಿತ್ರ ರಮಳಾನಿನ ಇಪ್ಪತ್ತೇಳರ ರಾತ್ರಿ ನನ್ನೊಂದಿಗೆ ಮಲಗಿದ್ದ ಅಚಾನಕ್ಕಾಗಿ ಎದ್ದು ಕುಳಿತು ನನ್ನನ್ನು ಎಬ್ಬಿಸಿ ಹೇಳಿದ *ಅಪ್ಪಾ..! ಇದೆಂಥಹಾ ಪ್ರಕಾಶವಾಗಿದೆ.? ಇಡೀ ಮನೆಯನ್ನೇ ಬೆಳಗಿಸಿದೆಯಲ್ವಾ.!*  ಶಬ್ದವನ್ನು ಕೇಳಿ ಮನೆಯವರೆಲ್ಲರೂ ಎದ್ದು ಬಂದರು ಆದರೆ ನಮ್ಮಲ್ಲಿ ಯಾರಿಗೂ ಕೂಡ ಯಾವ ಪ್ರಕಾಶವನ್ನು ಕೂಡ ಕಾಣಲು ಸಾಧ್ಯವಾಗಿಲ್ಲ. ಆಗ ಇವತ್ತು ಲೈಲತುಲ್ ಖದ್ರ್ ಆಗಿದೆ ಎಂಬ ವಿಷಯವನ್ನು  ನಾನು ಮನಗಂಡೆ.  (ಇಮಾಂ ನವವೀ رحمة الله القوى ರವರಿಗೆ ಅಲ್ಲಾಹನು ಲೈಲತುಲ್ ಖದ್ರ್'ನ ಚಿಹ್ನೆಯನ್ನು ಪ್ರತ್ಯಕ್ಷ ಗೊಳಿಸಿದ್ದನು ಮತ್ತದು ಇಮಾಮರ ಬಾಲ್ಯದಲ್ಲಿ ಉಂಟಾದ  ಕರಾಮತ್ ಗಳಲ್ಲಿ ಒಂದಾಗಿದೆ)_
*ಚಿತ್ರವು ಜೀವ ತಾಳಿತು!*
_ಶಾಮ್ ದೇಶದ ಗವರ್ನರ್ ಜಾಮಿಯಾ ಉಮವೀ ಯ ಖಜಾನೆಯಲ್ಲಿ ಇರಿಸಲಾಗಿದ್ದ ಗ್ರಂಥಗಳನ್ನು ಬೇರೆಡೆಗೆ ಹಸ್ತಾಂತರಿಸಲು ಬಯಸಿದಾಗ ಸಯ್ಯಿದುನಾ ಇಮಾಂ ನವವೀ رحمة الله القوى ರವರು ಅದನ್ನು ಕಠಿಣವಾಗಿ ವಿರೋಧಿಸಿದರು. ಆಗ ಗವರ್ನರ್ ಕೋಪಗೊಂಡು ಇಮಾಮರನ್ನು ಬಂಧಿಸಲು ಮುಂದಾಗ  ಇಮಾಂ ನವವೀ رحمة الله القوى ರವರು ಅಲ್ಲಿಯ ನೆಲದಲ್ಲಿ ಬಿಡಿಸಲಾದ ವಿಚಿತ್ರ ಜೀವಿಗಳ ಚಿತ್ರಗಳೆಡೆಗೆ ಇಷಾರೆ ಮಾಡಿದರು ಆಗ ಅಲ್ಲಾಹನ ಖುದುರತ್ತಿನಿಂದ ಅವುಗಳು ಜೀವತಾಳಿ ಎದ್ದು ನಿಂತು ಗವರ್ನರನ್ನು ಅಕ್ರಮಿಸಲು ಮುಂದಾದವು.! ಇದನ್ನು ಕಂಡ ಗವರ್ನರ್ ಮತ್ತು ಆತನ ಸಂಗಡಿಗರು ಜೀವ ಭಯದಿಂದ ಅಲ್ಲಿಂದ ಓಡಿ ಹೋದರು. ಬಳಿಕ ಆ ಗವರ್ನರ್ ಇಮಾಮರೊಂದಿಗೆ ಪಶ್ಚಾತಾಪ ಪಟ್ಟು ಕ್ಷಮೆಯನ್ನೂ ಕೇಳಿದರು ಮತ್ತು ಮಹಾನರ ಪಾದವನ್ನು ಚುಂಬಿಸಿದರು._
*ರೋಗವು ಶಮನವಾಯಿತು*
_ಶೈಖ್ ವಲೀಯುದ್ದೀನ್ ಅಬುಲ್ ಹಸನ್ رحمة الله عليه ಹೇಳುತ್ತಾರೆ. ನಾನು ವಿಪರೀತವಾದ ಕಾಲಿನ ಗಂಟುಗಳ ನೋವಿನಿಂದ ಬಳಲುತ್ತಿದ್ದೆ  ಆಗ ಇಮಾಂ ನವವೀ رحمة الله القوى ರವರು ನನ್ನ ಇಯಾದತ್ ಗೆ (ಸಂದರ್ಶನಕ್ಕೆ) ಬಂದರು ಮತ್ತು ನನಗೆ ಸಹನೆಯನ್ನು ತಾಳಲು ಹೇಳುತ್ತಿದ್ದರು  ಅವರು ಸಹನೆಯ ಬಗ್ಗೆ ಹೇಳುತ್ತಿರುವಾಗ ನನ್ನ ನೋವುಗಳು ದೊರವಾಗುತ್ತಾ ಹೋಯಿತು. ಎಲ್ಲಿಯ ವರೆಗೆಂದರೆ ನೋವು ಸಂಪೂರ್ಣವಾಗಿ ನಿವಾರಣೆಯಾಯಿತು.  ಮಹಾನರ ಬರಕತ್'ನಿಂದ ನನ್ನ ನೋವು ನಿವಾರಣೆಯಾಗುತ್ತಿದೆ  ಎಂಬ ವಿಚಾರವನ್ನು ನಾನು ಮಾನಗಂಡೆ._
*ರಾತ್ರೋ ರಾತ್ರಿ ರವಾಹಿಯಾದಿಂದ ಮಕ್ಕಾ ಷರೀಫ್'ಗೆ ಪಯಣ.!*
_ರವಾಹಿಯಾ ಮದ್ರಸಾದ ಕಾವಲುಗಾರರು ಹೇಳುತ್ತಾರೆ. ಒಮ್ಮೆ ರಾತ್ರಿ ಇಮಾಂ ನವವೀ رحمة الله القوى ರವರು ಮದ್ರಸಾದಿಂದ ಹೊರಗೆ ಹೋಗುವುದಾಗಿ ಕಂಡೆ ನಾನೂ ಕೂಡ ಅವರ ಹಿಂದೆ ಹಿಂದೆ ನಡೆದೆ ಮತ್ತು ಅವರು ಬಾಗಿಲಿನ ಬಳಿ ಹೋಗುತ್ತಲೇ ಬಾಗಿಲು ಯಾವುದೇ ಕೀ ಇಲ್ಲದೆಯೇ ತನ್ನಷ್ಟಕ್ಕೆ ತೆರೆದುಕೊಂಡವು ಇಮಾಮರು ಹೊರಗೆ ಹೋದರು ನಾನೂ ಅವರ ಹಿಂದೆಯೇ ಹೊರ ನಡೆದೆ. ಅಲ್ಪ ಹೊತ್ತಿನಲ್ಲೇ ನಾವು ಮಕ್ಕಾ ಶರೀಫಿಗೆ ತಲುಪಿದೆವು. ಇಮಾಂ ನವವೀ رحمة الله القوى ರವರು ಕಅಬಾ ಶರೀಫಿನ ತವಾಫ್ ಮಾಡಿದರು ಹಾಗೂ ಸಈ ಮಾಡಿದರು ಬಳಿಕ ಮತ್ತೆ ತವಾಫ್ ನಿರ್ವಹಿಸಿ ರವಾಹಿಯಾದ ಕಡೆಗೆ ಹಿಂತಿರುಗಿದರು ನಾನೂ ಕೂಡ ಅವರ ಹಿಂದೆಯೇ ನಡೆಯತೊಡಗಿದೆ ನಡೆಯುತ್ತಾ ನಾವು ಅಲ್ಪ ಹೊತ್ತಲ್ಲೇ ರವಾಹಿಯಾಕ್ಕೆ ತಲುಪಿದೆವು._
_*جو اللّٰہ کے بندے ہیں انکے لیئے زمین کو سمیٹا گیا ہے*_
ಯಾರು ಅಲ್ಲಾಹನ ದಾಸರೋ ಅವರಿಗಾಗಿ ಭೂಮಿಯನ್ನು ಮಡಚಲ್ಪಟ್ಟಿದೆ
_*وہ جب چاہیں محبوب کی گلیوں کی سیر کرتے ہیں*_
ಅವರು ಬಯಸಿದಾಗ ತನ್ನ ಪ್ರೇಮಿಯ ಅಂಗಳಗಳನ್ನು ಸುತ್ತಾಡುವರು
*ಮನಸಿನ ಮಾತನ್ನು ಅರಿತರು.!*
_ಶೈಖ್ ಅಬುಲ್ ಖಾಸಿಂ ಮಿಝ್ಝೀ رحمة الله عليه ಹೇಳುತ್ತಾರೆ. ನಾನು ಒಮ್ಮೆ ರಾತ್ರಿ ಕನಸು ಕಂಡೆ ಏನೆಂದರೆ ಮಿಝ್ಝಾದಲ್ಲಿ ಬಹಳಷ್ಟು ಜನರು ಪತಾಕೆಗಳನ್ನು ಹಿಡಿದುಕೊಂಡು ನಡೆಯುತ್ತಿದ್ದಾರೆ ಮತ್ತು ತುಂಬಾ ಸಡಗರ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ನಾನು ಸಂಭ್ರಮದ ಕಾರಣವನ್ನು ಅವರಲ್ಲಿ ಕೇಳಿದಾಗ ನನ್ನೊಂದಿಗೆ ಹೇಳಲಾಯಿತು. ಇವತ್ತು ಮುಹಿಯುದ್ದೀನ್ ಯಹ್ಯಾ ಬಿನ್ ಶರಫುನ್ನವವೀ ( رحمة الله القوى ) ಯವರನ್ನು ಖುತುಬ್ ಮಾಡಲಾಗುವುದು ಎಂದು.  ನಾನು ಅದುವರೆಗೂ ಆ ಹೆಸರನ್ನು ಕೇಳಿರಲಿಲ್ಲ ಮತ್ತು ನಾನು ಅವರ ಬಗ್ಗೆ ಅರಿತಿರಲಿಲ್ಲ. ತರುವಾಯ ನಾನು ಅವರ ಹುಡುಕಾಟದಲ್ಲಿ ಡೆಮಸ್ಕಸ್ ಗೆ ತೆರಳಿದೆ ಅಲ್ಲಿ ಹೋದಾಗ ಯಹ್ಯಾ ಬಿನ್ ಶರಫುನ್ನವವೀ رحمة الله القوى ರವರು ಅಲ್ಲಿಯ ಉಸ್ತಾದುಲ್ ಹದೀಸ್ ಎಂದು ತಿಳಿಯಿತು. ಬಳಿಕ ನಾನವರ ಬಳಿ ಹೋದಾಗ *ಅವರು ನನ್ನಲ್ಲಿ ಹೇಳಿದರು. ನನ್ನ ರಹಸ್ಯವನ್ನು ತನ್ನ ಬಳಿಯೇ ಇರಿಸಬೇಕು ಯಾರಲ್ಲಿಯೂ ಪ್ರತ್ಯಕ್ಷ ಪಡಿಸಬೇಡಿ.*  ನಾನು ಅವರಲ್ಲಿ ಇನ್ನೂ ಮಾತನ್ನು ಪ್ರಾರಂಭಿಸಿರಲಿಲ್ಲ ಆದರೆ ಅವರು ನನ್ನ ಉದ್ದೇಶವನ್ನು ಮೊದಲೇ ಅರಿತಿದ್ದರು.!_
*ವಫಾತ್*
_*ಇಮಾಂ ನವವೀ رحمة الله القوى ರವರು ತನ್ನ ಜೀವನದ ಬಹುತೇಕ ಸಮಯವನ್ನು ಡೆಮಸ್ಕಸ್ ನಲ್ಲಿಯೇ ಕಳೆದರು. ಜೀವನದ ಕೊನೆ ಕಾಲದಲ್ಲಿ  ತನ್ನ ಊರಾದ  ನವಾಕ್ಕೆ ಹೋಗುವ ಮೊದಲು ತನ್ನ ಗುರುವರ್ಯರುಗಳ ಹಾಗೂ ಮಾಶಾಯಿಖ್ ಗಳ ಖಬರ್ ಝಿಯಾರತ್ ಮಾಡಿದರು ಮತ್ತು ತನ್ನ ಅಭಿಮಾನಿಗಳನ್ನು ಭೇಟಿಯಾದರು. ಅಲ್ಲಿಂದ ನವಾಕ್ಕೆ ಹೋದ ಬಳಿಕ ರೋಗಬಾಧಿತರಾದರು  ಮತ್ತು ರಜಬುಲ್ ಮುರಜ್ಜಬ್ 24 ಭುದವಾರ ರಾತ್ರಿ ಹಿಜರಿ 672 ರಲ್ಲಿ ಲೋಕ ಕಂಡ ಆ ಮಹಾನ್ ವಿದ್ವಾಸರು ತನ್ನ ಜೀವನದ 44 ವರ್ಷ ಹಾಗೂ 6 ತಿಂಗಳನ್ನು ಪೂರ್ತಿಗೊಳಿಸಿ ಶಾಶ್ವತ ಮತ್ತು ನಿರಂತರವಾದ ಉಖ್ರವೀ ಲೋಕದತ್ತ ತನ್ನ ಪಯಣವನ್ನು ಮುಂದುವರಿಸಿದರು.*_
*إِنَّا لِلَّهِ وَإِنَّا إِلَيْهِ رَاجِعُونَ*
_ಹೀಗೆ ಮುಸ್ಲಿಂ ಜಗತ್ತಿಗೆ ಮತ್ತೊಂದು ಅಮೂಲ್ಯ ಮುತ್ತು  ನಷ್ಟವಾಯಿತು. ಆದರೂ ಅವರ   ನೆನಪುಗಳು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿ ಜೀವಂತವಾಗಿದೆ ಇಮಾಂ ನವವೀ رحمة الله القوى ರವರ ಖಬರ್ ಷರೀಫ್ ಅವರ ಹುಟ್ಟೂರಾದ ನವಾದಲ್ಲಿ ಈಗಲೂ ಮುಸಲ್ಮಾನರ  ಅಭಯ ಮತ್ತು ಝಿಯಾರತ್ ಕೇಂದ್ರವಾಗಿ ಪ್ರಜ್ವಲಿಸುತ್ತಿದೆ._
*ಸೇಬು ತಿನ್ನುವ ಬಯಕೆ.!*
_ಸಯ್ಯಿದುನಾ ಇಮಾಂ ನವವೀ رحمۃ اللّٰہ القوی ರವರ ಮರಣ ಸಮಯವು ಸನ್ನಿಹಿತವಾದಾಗ ಅವರಿಗೆ ಸೇಬು ತಿನ್ನಬೇಕೆಂಬ ವಿಪರೀತ ಬಯಕೆಯು ಉಂಟಾಯಿತು. ಬಳಿಕ ಸೇಬು ತರಲಾಯಿತಾದರೂ ಮಹಾನರು ತಿನ್ನಲಿಲ್ಲ. ಅವರ ವಫಾತ್ ಬಳಿಕ ಮನೆಯವರಲ್ಲಿ ಯಾರೋ ಕನಸಿನಲ್ಲಿ ಕಂಡು ಇಮಾಮರೊಂದಿಗೆ ಕೇಳಿದರು. ಅಲ್ಲಾಹನು ತಮ್ಮೊಂದಿಗೆ ಹೇಗೆ ವ್ಯವಹರಿಸಿದನು?  ಇಮಾಂ ನವವೀ رحمۃ اللّٰہ القوی ಹೇಳಿದರು. ಅಲ್ಲಾಹು ನನ್ನ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಿದನು ಮತ್ತು ನನ್ನನ್ನು ಸತ್ಕರಿಸಿದನು ಹಾಗೂ ಅಲ್ಲಿ ನನಗೆ ಮೊಟ್ಟ ಮೊದಲು ತಿನ್ನಲು ಸೇಬನ್ನು ಕೊಡಲಾಯಿತು._
*ಅಗೌರವಕ್ಕೆ ತಕ್ಕ ಫಲ.!*
_ಒಬ್ಬ ವ್ಯಕ್ತಿಯೂ ಇಮಾಂ ನವವೀ رحمۃ اللّٰہ القوی ರವರ ಖಬರ್ ಶರೀಫ್ ಬಳಿ ಬಂದು ಕೈ ಸನ್ನೆ ಮಾಡುತ್ತಾ ಹೀಗೆ ಹೇಳ ತೊಡಗಿದ.  ಇಮಾಂ ಔಝಾಈ ಯವರೊಂದಿಗೆ ಭಿನ್ನಾಭಿಪ್ರಾಯ ಮಾಡುತ್ತಾ *ಈ ಮಸ್ಅಲಾ ದಲ್ಲಿ ನಾನು ಹೀಗೆ ಹೇಳುತ್ತೇನೆ* ಎಂದು ಹೇಳುತ್ತಿದ್ದ ಅದೇ ವ್ಯಕ್ತಿ ಅಲ್ವಾ  ನೀವು.? ಇಷ್ಟು ಹೇಳಿ ಆ ವ್ಯಕ್ತಿಯೂ ಇನ್ನೂ ಎದ್ದು ನಿಂತಿರಲಿಲ್ಲ ಎಲ್ಲಿಂದಲೋ ಬಂದ ಚೇಳೊಂದು ಆತನ ಕಾಲಿಗೆ ಕಡಿಯಿತು. ಅಲ್ಲಾಹನ ವಲೀಯ್ಯ್ ರೊಂದಿಗೆ ತೋರಿದ ಅಗೌರವಕ್ಕೆ ತಕ್ಷಣವೇ ತಕ್ಕ ಫಲವನ್ನು ಆತ  ಅನುಭವಿಸಿದನು._
*ಬೆಕ್ಕು ನಾಲಗೆಯನ್ನು ಹೊರಗೆಳೆಯಿತು!*
_ಒಬ್ಬ ಯಕ್ತಿಯೂ ಇಮಾಂ ನವವೀ رحمۃ اللّٰہ القوی ರವರ ವಿರುದ್ಧ ಅತಿಯಾಗಿ ಮಾತಾಡುತ್ತಿದ್ದನು ತರುವಾಯ ಆತನು ಮರಣಹೊಂದಿದಾಗ ಆತನ ಜನಾಝಾ ಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಬೆಕ್ಕೊಂದು ಬಂತು ಹಾಗೂ ಆತನ ನಾಲಗೆಯನ್ನು ಕಚ್ಚಿ ಹೊರಗೆಳೆಯಿತು. ಬಳಿಕ ಈ ಘಟನೆಯೂ ಜನರಿಗೊಂದು ಪಾಠವಾಯಿತು. ಅಲ್ಲಾಹನ ಇಷ್ಟದಾಸರಾದ ಅಂಬಿಯಾ ಔಲಿಯಾ ಮತ್ತು ಸ್ವಾಲಿಹೀನ್ ಗಳನ್ನು ಗೌರವಿಸುವ ಆದರಿಸುವ ಪ್ರೀತಿಸುವ ಮತ್ತು ಅವರಿಂದ ಬರಕತ್ ಪಡೆಯುವ ಸಜ್ಜನರಲ್ಲಿ  ಅಲ್ಲಾಹು ನಮ್ಮೆಲ್ಲರನ್ನೂ ಒಳಪಡಿಸಲಿ_
_*ಮಹಾನುಭಾವರ ಮೇಲೆ ಅಲ್ಲಾಹನ ಕಾರುಣ್ಯವೂ ಸದಾ ಕಾಲ ಉಂಟಾಗಲಿ ಅವರ ಬರಕತ್'ನಿಂದ  ಅಲ್ಲಾಹನು ನಮ್ಮೆಲ್ಲರನ್ನೂ ಸಜ್ಜನರ ಸಾಲಿನಲ್ಲಿ ಸೇರಿಸಲಿ ಈಮಾನಿನೊಂದಿಗೆ ಜೀವಿಸಿ ಈಮಾನಿನೊಂದಿಗೆ ಮರಣಹೊಂದವ ಭಾಗ್ಯವನ್ನು ಕರುಣಿಸಲಿ...*_
_*رَبَّنَا تَقَبَّلْ مِنَّا إِنَّكَ أَنْتَ السَّمِيعُ العَلِيمُ آمین یارب العالمین بجاہ سید النبی الامین الکریم الرؤف الرحیم صلی اللّٰہ تعالیٰ علیہ واٰلہٖ وصحبہ وبارک وسلّم اجمعین*_
_*صَلُّوا عَلَى الْحَبِيب ...*_ 
_*صَلَّى اللهُ تعالى عَلَى مُحَمَّدٍﷺ*_
ಮುಗಿಯಿತು..

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...