Skip to main content

ಅವರ ಅಂಗಾಂಗಳು ಅಲ್ಲಾಹನನ್ನು ಸ್ಮರಿಸುತ್ತಿತ್ತು

ಅವರ ಅಂಗಾಂಗಳು ಅಲ್ಲಾಹನನ್ನು ಸ್ಮರಿಸುತ್ತಿತ್ತು
-------------------------------------------
     ಹನಫಿ ಮಹಾ ಪಂಡಿತರಲ್ಲಿ ಓರ್ವರಾದ ಇಮಾಮ್ ಅಹ್ಮದ್ ರಝಾ ಬರೇಲ್ವಿ ರಲಿಯಲ್ಲಾಹು ಅನ್ಹುರವರಿಗೆ  ಇಬ್ಬರು ಮಕ್ಕಳು.
1. *ಹಾಮಿದ್ ರಝಾ* (ಮುಜದ್ದಿದೇ ಇಸ್ಲಾಮ್)  ,
2. *ಮುಸ್ತಫಾ ರಝಾ* (ಮುಫ್ತಿ ಆಝಮೇ ಹಿಂದ್).
  ಇದರಲ್ಲಿ ಮುಫ್ತಿ ಆಝಮೇ ಹಿಂದ್ ಎಂದು ಕರೆಯಲ್ಪಡುತ್ತಿದ್ದ ಮುಸ್ತಫಾ ರಝಾರವರು ಮಹಾನ್ ವ್ಯಕ್ತಿಯಾಗಿದ್ದರು. ಇವರ ಕುರಿತು ಎರಡು ಚರಿತ್ರೆ ಕೇಳಲ್ಪಟ್ಟೆ,
  1. ಒಮ್ಮೆ ಇವರು ರೈಲಿನಲ್ಲಿ ಯಾತ್ರೆಹೋಗುತ್ತಿರಬೇಕಾದರೇ ಇವರ ಎಡಭಾಗದಲ್ಲಿ ಒಬ್ಬರು ಹಿಂದು ವ್ಯಕ್ತಿ ಕುಳಿತಿದ್ದರು! ಆ ಹಿಂದೂ ಸಹೋದರನಿಗೆ لا اله   الا الله محمد رسول اللهﷺ. ಎಂಬ ಶಬ್ದ ಕೇಳುತ್ತಿದೆ. ಈ ಹಿಂದೂ ವ್ಯಕ್ತಿ ಒಂದು ನಿಮಿಷ ಸ್ಥಂಭಿಭೂತರಾದರು ಕಾರಣಃ ತನ್ನ ಬಲಭಾಗದಲ್ಲಿ ಕುಳಿತ ವ್ಯಕ್ತಿ (ಮುಸ್ತಫಾ ರಝಾ) ಏನನ್ನು ಹೇಳುವುದಾಗಿ ಕಾಣುತ್ತಿಲ್ಲ ಆದರೂ ಶಬ್ದ ಕೇಳಿ ಬರುತ್ತಿದೆ? , ಆ ಹಿಂದೂ ಸಹೋದರ ರಝಾರ ಹೃದಯದ ಸನಿಹ ತನ್ನ  ಕಿವಿಯಿಟ್ಟು ಆಲಿಸಿದಾಗ ತಿಳಿಯಿತು! ಶಬ್ದ ಹೊರಡುವ ಸ್ಥಳ. ಆ ಶೈಖರ ಅಂಗಾಂಗಗಳು ಅಲ್ಲಾಹನ ಸ್ಮರಿಸುವುದಾಗಿ ಕೇಳಲ್ಪಟ್ಟ  ಆ ಹಿಂದೂ ಸಹೋದರ ಕ್ಷಣದಲ್ಲೇ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
  2.ಮುಫ್ತಿ ಆಝಮ್ ಮುಸ್ತಫಾ ರಝಾರವರಿಗೆ ಮುಂಬೈಯಲ್ಲಿ ಹಲವಾರು ಮುಹಿಬ್ಗಳಿದ್ದರು. ಮಹಾನರು ಒಮ್ಮೊಮ್ಮೆ ಮುಂಬೈ ಹೋಗುತ್ತಿದ್ದರು. ಅಲ್ಲಿ ಅವರಿಗೆ ಒಂದು ಮುಹಿಬ್ಬಿನ ಮನೆಯಲ್ಲಿಯೇ ವಿಶೇಷ ಕೋಣೆಯಿದೆ, ಆ ಕೋಣೆಗೆ ಮಹಾನರಲ್ಲದೆ ಬೇರೆ ಯಾರು ಹೋಗಲು ಅನುಮತಿಯಿಲ್ಲ ಆ ಮನೆಯ ಯಜಮಾನನು ಕೂಡ ಮಹಾನರ ಕೋಣೆಗೆ ಹೋದವನಲ್ಲ, ಆದರೂ! ಈ ಮನೆಯ ಯಜಮಾನನಿಗೆ ಜಿಜ್ಞಾಸೆ. ಮಹಾನರು ಒಳಗೆ ಹೋಗಿ ಏನುಮಾಡುತ್ತಾರೆ ಎಂದು ತಿಳಿಯಬೇಕು ಎಂದು ಬಗೆದು ಬಾಗಿಲಿನಲ್ಲಿ ಸಣ್ಣದಾದ ರಂಧ್ರಮಾಡಿದನು, ಮಹಾನರು ಕೋಣೆಗೆ ಹೊಕ್ಕಿ ಸ್ವಲ್ಪ ಹೊತ್ತಾದಾಗ ಆ ರಂಧ್ರದಲ್ಲಿ ಇಣುಕಿ ನೋಡಿದಾಗ ಒಂದು ಕ್ಷಣ ಸ್ಥಂಭಿಭೂತನಾದನು. ಕಾರಣಃ ಅವರ ಅಂಗಾಂಗಳು ವಿವಿಧ ಭಾಗಗಳಾಗಿ ಅಲ್ಲಾಹನನ್ನು ಸ್ಮರಿಸುವುದಾಗಿ ಕಣ್ಣಾರೆ ಕಂಡನು.
  ಮಹಾನರ ಅಂಗಾಂಗಗಳು ಅಲ್ಲಾಹನ ಸ್ಮರಿಸುವುದಾಗಿ ಕಿವಿಯಾರೆ ಕೇಳಿದ ಹಲವರಿದ್ದಾರೆ.
  *ಆಲಾ ಹಝ್ರತ್ ರಲಿಯಲ್ಲಾಹು ಅನ್ಹು* ರವರ ಮಖ್ಬರದ ಬಲಭಾಗದಲ್ಲಿ *ಹಾಮಿದ್ ರಝಾ* ಎಡಭಾಗದಲ್ಲಿ *ಮುಸ್ತಫಾ ರಝಾ* ಈರ್ವರ ದರ್ಗಾ ಇದೆ.
  ಅಲ್ಲಾಹನು ಈ ಮೂರು ಮಹಾನರ ಭರ್ಕತ್ತಿನಿಂದ ನಮ್ಮ ಹಲಾಲಾದ ಆಸೆಗಳನ್ನು ಈಡೇರಿಸಲಿ, ಆಪತ್ತುಗಳಿಂದ ನಮ್ಮನ್ನು ಕಾಪಾಡಲೀ. *ಅಮೀನ್*

✒.ಕಬೀರ್ ಮರ್ಝೂಖಿ
(ರಬ್ಬಾನಿ ವಿಧ್ಯಾರ್ಥಿ ಹರ್ಯಾಣ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...