ವಿಸ್ಮಯ ತುಂಬಿದ ಜೀವಜಗತ್ತು 👉 *38*
*▪ಶೇಂದಿ ಕುಡುಕ ಚಿರತೆ▪*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ *ಕಾಡಿನ* ರಾಜನಾದ ಸಿಂಹವನ್ನು ಬಿಟ್ಟರೆ ಕಾಡಿನಲ್ಲಿ ಎರಡನೇ ಪದವಿಯಲ್ಲಿರುವ ಒಂದು ಕ್ರೂರ ಮೃಗವಾಗಿದೆ ಚಿರತೆ. ಹುಟ್ಟಿದಂದಿನಿಂದ ಸಾಯುವ ತನಕ ಯಾವಾಗಲೂ ಕುಪಿತ ಮತ್ತು ಸಿಡುಕು ಮುಖದಲ್ಲಿರುವ ಈ ಪ್ರಾಣಿಯು ದೇಹ ಪ್ರಕೃತಿಯಲ್ಲಿ ಗೋಚರಕ್ಕೆ ಹುಲಿಯಂತೆ ಗೋಚರಿಸುವುದಾದರೂ ಯಥಾರ್ಥವಾಗಿ ಇದು ಹುಲಿಗಿಂತ ಎಷ್ಟೊ ಪಟ್ಟು ಬಲಿಷ್ಠ ಹಾಗು ಕ್ರೂರವಾಗಿದೆ.
▪ *ಒಂದೇ* ಜಿಗಿತದಲ್ಲಿ ಸುಮಾರು ಇಪ್ಪತ್ತರಿಂದ ನಲುವತ್ತು ಅಡಿ (ಫೀಟ್) ತನಕ ಮೇಲಕ್ಕೂ ಮುಂದಕ್ಕೂ ಜಿಗಿಯಲು ಸಾಮರ್ಥ್ಯವಿರುವ ಈ ಮೃಗ ಗಂಟೆಗೆ ಸುಮಾರು ಎಪ್ಪತ್ತರಿಂದ ಎಂಬತ್ತು ಕಿಲೋಮೀಟರ್ ತನಕ ವೇಗದಲ್ಲಿ ಓಡುತ್ತದೆ. ಮಾತ್ರವಲ್ಲ ಕೆಲವೊಮ್ಮೆ ಅದಕ್ಕಿಂತಲೂ ವೇಗದಲ್ಲಿ ಓಡುತ್ತದೆ ಎಂದು ಹೇಳಲಾಗುತ್ತದೆ. ಕಾಡಿನಲ್ಲಿ ಇಷ್ಟೊಂದು ವೇಗದಲ್ಲಿ ಓಡುವ ಪ್ರಾಣಿ ಬೇರೆ ಇಲ್ಲ.
▪ *ಪ್ರಾಣಿಗಳಲ್ಲಿ* ಈಜುವುದು, ಜಿಗಿಯುವುದು, ಮತ್ತು ಓಡುವುದು ಈ ಮೂರು ವಿಷಯಗಳಲ್ಲಿ ಈ ಪ್ರಾಣಿಗೆ ಸರಿ ಸಮಾನವಾದ ಪ್ರಾಣಿ ಬೇರೆ ಇಲ್ಲ. ಮಾತ್ರವಲ್ಲ ಬಲಿಷ್ಠ ಶರೀರವಿರುವ ಮೃಗಗಳಲ್ಲಿ ಮರಕ್ಕೆ ಹತ್ತುವ ಮೃಗವೂ ಕೂಡ ಆಗಿದೆ.
▪ *ಗರ್ಭಧಾರಣೆಯಾಗಿ* ಮೂರು-ಮೂರುವರೆ ತಿಂಗಳಲ್ಲಿ ಎರಡರಿಂದ ನಾಲ್ಕರ ತನಕ ಮರಿಹಾಕುವ ಈ ಪ್ರಾಣಿಯ ಮರಿಯ ಕಣ್ಣು ಹುಟ್ಟುವಾಗ ಸಂಪೂರ್ಣ ಮುಚ್ಚಿರುತ್ತದೆ. ನಂತರ ಹತ್ತು ದಿನಗಳು ಕಳೆಯುವಾಗ ಅದು ತಾನಾಗಿಯೇ ತೆರೆಯುತ್ತದೆ. ಹುಟ್ಟಿದ ಮರಿಗೆ ಪ್ರಾರಂಭದಲ್ಲಿಯೇ ಬೇಟೆಯಾಡುವ ತಾಲೀಮು ಮತ್ತು ತರಬೇತಿ ನೀಡಲಾಗುತ್ತದೆ. ಸುಮಾರು ಆರು ತಿಂಗಳಾಗುವಾಗಲೇ ಚೆನ್ನಾಗಿ ಬೇಟೆಯಾಡಲು ಕಲಿತಿರುತ್ತದೆ. ಅದಾಗ್ಯೂ ಆ ಸಮಯದಲ್ಲಿ ಮರಿಯು ತಾಯಿಯ ನಿಯಂತ್ರಣದಲ್ಲೇ ಇರುತ್ತದೆ. ಒಂದು ಒಂದುವರೆ ವರ್ಷವಾಗುವಾಗ ತಾಯಿಯ ಪ್ರಾಥಮಿಕ ಶಾಲೆಯಿಂದ ಪಡೆದ ಬೇಟೆ ಬಿರುದಿನೊಂದಿಗೆ ತನ್ನ ಹೊಟ್ಟೆಪಾಡಿಗೆ ಬೇಕಾಗಿ ಏಕಾಂಗಿಯಾಗಿ ಬೇಟೆಗೆ ಹೊರಡುತ್ತದೆ.
▪ *ಕಾಡಿನ* ರಾಜನಾದ ಸಿಂಹವಾಗಿ ಈ ಚಿರತೆಗೆ ಯಾವಾಗಲೂ ಹಗೆತನ ಮತ್ತು ವೈರತ್ವವಿರುತ್ತದೆ. ಆದರೂ ಇಬ್ಬರೂ ಬಲಿಷ್ಠರಾದ್ದರಿಂದ ಪರಸ್ಪರ ಭಯ ಮತ್ತು ಹೆದರಿಕೆ ಇರುವುದರಿಂದ ಪರಸ್ಪರ ಕಾದಾಟ ನಡೆಯುವುದು ಬಹಳ ಅಪರೂಪ.
▪ *ಸಿಂಹದಂತೆಯೇ* ದೈರ್ಯ ಮತ್ತು ಎದೆಗಾರಿಕೆಯಲ್ಲಿ ಚಿರತೆಯೂ ಹಿಂದೇನಿಲ್ಲ. ಯಾವಾಗಲೂ ಸಿಟ್ಟಿನಲ್ಲಿರುವ ಈ ಚಿರತೆಗೆ ಕೋಪ ಬಂದು ಉದ್ರೇಕಗೊಂಡರೆ ಕೆಲವೊಮ್ಮೆ ಕೋಪ ತಡೆಯಲಾರದೆ ಸುಬ್‌ಹಾನಲ್ಲಾಃ... ತನ್ನನ್ನೇ ತಾನು ಕೊಂದು ಬಿಡುತ್ತದೆ.!
▪ *ಯಾವಾಗಲೂ* ಬೇಟೆಯಾಡಿ ಹಸಿ ಮಾಂಸ ತಿಂದು ಅಭ್ಯಾಸವಿರುವ ಚಿರತೆ ಯಾವತ್ತೂ ಸತ್ತ ಶವವನ್ನು ತಿನ್ನಲಾರದು. ಬೇರೆ ಮೃಗಗಳು ಯಾವುದಾದರೊಂದು ಮೃಗವನ್ನು ಕೊಂದು ತಿನ್ನುತ್ತಿರುವುದಾದರೆ ಅಲ್ಲಿಗೆ ಇಣುಕಿ ನೋಡಿ ಬಾಯಿನೀರು ಸುರಿಸುವ ಎರೆಪ್ಪಾಳಿ ಸ್ವಭಾವವೂ ಇದಕ್ಕಿಲ್ಲ. ಮಾತ್ರವಲ್ಲ ಇತರ ವನ್ಯ ಪ್ರಾಣಿಗಳು ತಿಂದು ಬಾಕಿ ಬಿಟ್ಟ ಎಂಜಲಿಗೆ ಎಂದೂ ಬಾಯಿ ಹಾಕದು. ಅಂತಹಾ ವಿಷಯಗಳಲ್ಲಿ ತನ್ನ ವರ್ಚಸ್ಸು, ಪ್ರತಿಷ್ಠೆ, ಮತ್ತು ಗೌರವಕ್ಕೆ ದಕ್ಕೆ ಬರುವುದನ್ನು ಸದಾ ಕಾಪಾಡುತ್ತದೆ.
▪ *ನಿದ್ರೆ ಮಾಡುವುದರಲ್ಲಿ* ಪ್ರಶಸ್ತಿ ದೊರೆತ ಚಿರತೆ ತಿಂದು ಹೊಟ್ಟೆ ತುಂಬಿದರೆ ಅರಾಮವಾಗಿ ನಿದ್ರೆ ಮಾಡುತ್ತದೆ. ಆ ನಿದ್ರೆ ಕೆಲವೊಮ್ಮೆ ಮೂರು ನಾಲ್ಕು ದಿನಗಳ ತನಕವೂ ಮುಂದುವರಿಯುತ್ತದೆ. ಸುಬ್‌ಹಾನಲ್ಲಾಹ್.! ಇದೆಂತಹಾ ವಿಸ್ಮಯ ತುಂಬಿದ ಜೀವ ಜಗತ್ತು..?
▪ *ಇದರ* ಬೇರೊಂದು ವಿಶೇಷತೆಯೆಂದರೆ ಕಾಡು ಪ್ರಾಣಿಗಳಲ್ಲಿ ಮದ್ಯಪಾನವನ್ನು ಇಷ್ಟಪಡುವ ಒಂದು ಮೃಗವಾಗಿದೆ ಇದು. ಖ್ಯಾತ ತತ್ವಜ್ಞಾನಿ *ಅಮ್‌ರ್ ಬಿನ್ ಬಹ್‌ರ್ ಅಲ್ ಜಾಹಿಳ್* ಹೇಳುತ್ತಾರೆ. ಪ್ರಾಚೀನ ಕಾಲದಲ್ಲಿ ಈ ಪ್ರಾಣಿಗೆ ಸಾರಾಯಿ ಕುಡಿಯಿಸಿ ನಿರಾಯಾಸವಾಗಿ ಇದನ್ನು ಬೇಟೆಯಾಡುತ್ತಿದ್ದರು. ಕಾಡಿನಲ್ಲಿ ಎಲ್ಲಾದರು ಒಂದು ಕಡೆ ಸಾರಾಯಿ ಅಥವಾ ಇತರ ಮದ್ಯಪಾನೀಯವನ್ನಿಟ್ಟರೆ ಚಿರತೆ ಬಂದು ಅದನ್ನು ಕುಡಿದರೆ ಮನುಷ್ಯನಂತೆಯೇ ಅಮಲಾಗಿ ಬೀಳುತ್ತದೆ. ಆ ಸಮಯದಲ್ಲಿ ಅದನ್ನು ಯಾರಿಗೆ ಬೇಕಾದರೂ ಬೇಟೆಯಾಡಬಹುದು.
▪ *ಚಿರತೆಯ* ರೋಮವನ್ನು ಸುಟ್ಟು ಮನೆಯಲ್ಲಿ ಹೊಗೆ ಹಿಡಿದರೆ ಆ ಮನೆಗೆ ಚೇಳಿನ ಉಪದ್ರವ ಅಥವಾ ತೊಂದರೆ ಇರಲಾರದು.
ಕಾಡು ಪರಿಸರದಲ್ಲಿ ಮನೆ ಇರುವವರಿಗೆ ರಾತ್ರಿ ಸಮಯ ಮನೆ ವಠಾರಕ್ಕೆ ಚಿರತೆ ಬರುತ್ತದೆ ಎಂಬ ಭಯವಿದ್ದರೆ ಮನೆಯಂಗಳದಲ್ಲಿ ಸತ್ತ ಮನುಷ್ಯನ ತಲೆಬುರುಡೆಯನ್ನು ತೂಗುಹಾಕಿದರೆ ಆ ಪರಿಸರಕ್ಕೆ ಚಿರತೆಯ ನೆರಳು ಕೂಡ ಬಾರದು.
▪ *ಚಿರತೆಯ* ಮಾಂಸ ಒಬ್ಬನ ಹೊಟ್ಟೆ ಸೇರಿದರೆ ಅವನಿಗೆ ಸರ್ಪ, ಚೇಳು ಮುಂತಾದ ವಿಷಜಂತುಗಳು ಕಚ್ಚಿದರೆ ಅದರ ವಿಷದಿಂದ ಅವನ ಶರೀರಕ್ಕೆ ಯಾವುದೇ ಪರಿಣಾಮ ಬೀಳದು. ಜೀವಪರ್ಯಂತ ಅವನ ಶರೀರದಲ್ಲಿ ವಿಷದ ರೋಗ ನಿರೋಧಕ ಶಕ್ತಿ *(ಅ್ಯಂಟೀಬಯೋಟಿಕ್)* ಇರುತ್ತದೆ.
▪ *ಎಷ್ಟೋ* ಸಮಯದಿಂದ ವಾಸಿಯಾಗದೆ ಇರುವ ಹಳೆಯ ಗಾಯಕ್ಕೆ ಚಿರತೆಯ ಕೊಬ್ಬನ್ನು ಲೇಪಿಸಿದರೆ ಆ ಹುಣ್ಣು ಸಂಪೂರ್ಣವಾಗಿ ಗುಣವಾಗುತ್ತದೆ.
▪ *ಒಂದು* ಜಾಗದಲ್ಲಿ ಚಿರತೆಯ ಕೈಕಾಲಿನ ಉಗುರನ್ನು ಕತ್ತರಿಸಿ ದಫನ ಮಾಡಿದರೆ ಆ ವಲಯದಲ್ಲಿ ಇಲಿಯ ತೊಂದರೆ ಇರಲಾರದು.
▪ *ಮೂಲವ್ಯಾಧಿ* ಖಾಯಿಲೆ ಇರುವವರು ಚಿರತೆಯ ಚರ್ಮದ ಮೇಲೆ ಕುಳಿತು ಕೊಳ್ಳುವ ಅಭ್ಯಾಸ ಮಾಡಿದರೆ ಖಾಯಿಲೆ ಗುಣವಾಗುತ್ತದೆ
▪ *ಒಬ್ಬನಿಗೆ* ಚಿರತೆಯ ಮಾಂಸವನ್ನು ತಿಂದ ಕನಸು ಬಿದ್ದರೆ ಅವನು ಮುಂದಕ್ಕೆ ಜನರೆಡೆಯಲ್ಲಿ ಮನ್ನಣೆ ಮತ್ತು ಮಾನ್ಯತೆ ಇರುವ ಒಬ್ಬ ವ್ಯಕ್ತಿ ಆಗುವುದರೊಂದಿಗೆ ಹಲವಾರು ಆಸ್ತಿ ಪಾಸ್ತಿಯ ಮಾಲಿಕನಾಗುವನು ಎಂಬುದರ ಸಂಕೇತವಾಗಿದೆ.
▪ *ಒಬ್ಬನು* ಚಿರತೆಯ ಮೇಲೆ ಹತ್ತಿ ಸವಾರಿ ಮಾಡುವ ಕನಸು ಕಂಡರೆ ಅವನು ಅಧಿಕಾರದ ಗದ್ದುಗೆಗೆ ಹತ್ತುವುದರ ನಿಶಾನೆಯಾಗಿದೆ.
▪ *ಮನೆಯೊಳಗೆ* ಚಿರತೆ ನುಗ್ಗಿದ ಕನಸು ಬಿದ್ದರೆ ಆ ಮನೆಯು ಯಾರಾದರು ಅಕ್ರಮಿಗಳ ಅಕ್ರಮಕ್ಕೆ ಬಲಿಯಾಗುವುದರ ಸಂಕೇತವಾಗಿದೆ.
▪ *ಒಬ್ಬನು* ಚಿರತೆಯನ್ನು ಬೇಟೆಯಡುವ ಕನಸು ಕಂಡರೆ ಅವನ ವ್ಯಾಪಾರ ಮತ್ತು ಇನ್ನಿತರ ವಿಷಯಗಳಲ್ಲಿ ಒಳ್ಳೆಯ ಲಾಭ ಬರುವುದರ ನಿಶಾನೆಯಾಗಿದೆ.
▪ *ಒಬ್ಬನಿಗೆ* ಅವನನ್ನು ಚಿರತೆ ಕಚ್ಚುವ ಕನಸು ಬಿದ್ದರೆ ಅವನು ಮುಂದಕ್ಕೆ ಏನೋ ತೊಂದರೆಗೆ ಈಡಾಗುತ್ತಾನೆ ಎಂಬುದರ ನಿಶಾನೆಯಾಗಿದೆ. ಕಚ್ಚುವಿಕೆಯ ಪ್ರಮಾಣ ಮತ್ತು ಗಾತ್ರಕ್ಕೆ ಅನುಸಾರವಾಗಿ ಆಗಿರುತ್ತದೆ ಅನಾಹತದ ಪ್ರಮಾಣ. ಉದಾಹರಣೆಗೆ ಗಂಭೀರವಾಗಿ ಕಚ್ಚಿದ್ದರೆ ಬರುವ ಅನಾಹುತವೂ ಗಂಭೀರವಾಗಿರುತ್ತದೆ.
▪ *ಚಿರತೆಯ* ಮಾಂಸ ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ದವಾಗಿದೆ.
ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಖಝ್‌ವೀನಿಯವರ *ಅಜಾಯಿಬುಲ್ ಮಖ್‌ಲೂಖಾತ್* ಎಂಬ ಗ್ರಂಥ.

Comments