Skip to main content

ಮಸೀದಿಯಲ್ಲಿ ಅಲ್ಲಾಹನ‌ ಇಷ್ಟದಾಸರನ್ನು ಕರೆದು ಸಹಾಯಾಚನೆ ನಡೆಸುವುದು ಬಹುದೈವರಾಧನೆಯೇ

ಮಸೀದಿಯಲ್ಲಿ ಅಲ್ಲಾಹನ‌ ಇಷ್ಟದಾಸರನ್ನು ಕರೆದು ಸಹಾಯಾಚನೆ ನಡೆಸುವುದು ಬಹುದೈವರಾಧನೆಯೇ?

ವಹ್ಹಾಬಿಗಳ ಪುರಾವೆ ಸತ್ಯಾಂಶ👇🏻

ಅಧ್ಯಾಯ: 72 ಸೂಕ್ತ: 18
وَأَنَّ ٱلْمَسَٰجِدَ لِلَّهِ فَلَا تَدْعُوا۟ مَعَ ٱللَّهِ أَحَدًۭا
*ಮಸೀದಿಗಳು ಅಲ್ಲಾಹನಿಗಿರುವುದಾಗಿವೆ. ಆದುದರಿಂದ ಅವುಗಳಲ್ಲಿ ಅಲ್ಲಾಹನೊಂದಿಗೆ ಇತರ ಯಾರನ್ನೂ ಆರಾಧಿಸಬೇಡಿರಿ.*

ಅಲ್ಲಾಹನ ಮಸೀದಿಯಲ್ಲಿ ಅಲ್ಲಾಹನ ಹೊರತು ಬೇರೆ ಯಾರಿಗೂ ಆರಾಧಿಸಬೇಡಿರಿ
ಎಂದರ್ಥ.ಮಸ್ಜಿದ್ ಎಂದಿರುವುದರಲ್ಲಿ ಆ
ಕಾಲದಲ್ಲಿದ್ದ ಜೂದ ಕ್ರೈಸ್ತರ |
ಆರಾಧನಾಲಯಗಳೂ ಒಳಪಡುತ್ತವೆ.ಅವರು ಅಲ್ಲಾಹೇತರರಿಗೆ ಆರಾಧಿಸುತ್ತಿದ್ದರು.
ಆದ್ದರಿಂದ ಅವುಗಳನ್ನು ಕೂಡಾ ಶಿರ್ಕ್ ಮುಕ್ತಗೊಳಿಸಿರಿ ಎಂಬ ಆದೇಶವಿದು.ಇಮಾಮ್ ಅಲ್-ಹಸನ್‌ರವರ ಪ್ರಕಾರ ಮಸಾಜಿದ್ ಅಂದರೆ ಇದೇ ಭೂಮಿ.
“ಭೂಮಿಯನ್ನು ನನಗೆ ಮದ್
ಮಾಡಿಕೊಡಲಾಗಿದೆ' ಎಂದಿದ್ದಾರೆ
ನಬಿಯವರು. ಅಂದರೆ ಎಲ್ಲೂ
ನಮಾಝ್ (ಸಾಷ್ಟಾಂಗ) ಸಮ್ಮತ ಎಂದರ್ಥ.ಆದ್ದರಿಂದ ಅಲ್ಲಾಹನು ಭೂಮಿಯನ್ನು ಸೃಷ್ಟಿಸಿದ ತನಗೆ ಹೊರತು ಬೇರೆ ಯಾರಿಗೂ
ಭೂಮಿಯಲ್ಲಿ ಎಲ್ಲೂ ಸುಜೂದ್
ಮಾಡಬೇಡಿರಿ ಎಂದು ಹೇಳಿದ್ದಾನೆ
ಎಂದರ್ಥ, ಸಈದ್ ಬಿನ್ ಮುಸಯಬ್ ರವರು 'ಮಸಾಜಿದ್'ಗೆ ಸುಜೂದ್ ಮಾಡುವಅಂಗಗಳು ಎಂಬ ಅರ್ಥ ಹೇಳಿದ್ದಾರೆ. ಆ ಅಂಗಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ
ಆ ಅಂಗಗಳ ಮೂಲಕ ಸುಜೂದ್ ಮಾಡಿರಿ,ಬೇರೆ ಯಾರಿಗೂ ಮಾಡಬೇಡಿರಿ ಎಂದರ್ಥ.
(ತಫೀರ್ ರಾಝಿ : 30:163)

*‼Note‼*
ಸಾಮಾನ್ಯವಾಗಿ ಸುನ್ನಿ ಮಸೀದಿಗಳಲ್ಲಿ ಖುತುಬಿಯತ್ ನಡೆಸಲಾಗುವುದು.ಆ‌‌ ಮಜ್ಲೀಸ್'ನಲ್ಲಿ ಶೈಖ್‌ ಜೀಲಾನಿ(ರ)‌ ಕರೆದು ಅವರೊಂದಿಗೆ ಇಸ್ತಿಗಾಸ ನಡೆಸಲಾಗುತ್ತದೆ.ಹೀಗೆ ಮಾಡುವುದು ಶಿರ್ಕ್ ಆಗುತ್ತದೆ ಎಂದು ಸಳಪಿಗಳ ತಪ್ಪು‌ಕಲ್ಪನೆಗಳು‌ ಮತ್ತು ವಾದ.
ಆ ಮಸೀದಿಯಲ್ಲಿ ಶೈಖ್ ರವರ ಮೂರ್ತಿಯನ್ನಾಗಲಿ,ವಿಗ್ರಹವನ್ನಾಗಲಿ ಮಾಡಿಲ್ಲ.ಅಥವಾ ಅವರನ್ನು ಪೂಜಿಸುತ್ತಿಲ್ಲ.ಬದಲಾಗಿ ಶೈಖ್ ಜೀಲಾನಿ(ರ) ರವರು ಸುಲ್ತಾನುಲ್ ಔಲಿಯಾ ಅಲ್ಲಾಹನ ಇಷ್ಟದಾಸರು ಎಂಬ ನೆಲೆಯಲ್ಲಿ ಅವರನ್ನು ಸಹಾಯಾಚಿಸುವುದಾಗಿದೆ.ಇದು ಹೇಗೆ ಶಿರ್ಕ್ ಆಗುವುದು?? ಅದಕ್ಕೆ ಅವರು ನೀಡುವ ಪುರಾವೆ ಮೇಲಿನ ಅಧ್ಯಾಯದ ಸೂಕ್ತ ವಾಗಿದೆ.ಆದರೆ ಸುನ್ನಿಗಳು ಶೈಖ್(ರ) ಕರೆಯುದಕ್ಕೂ ಸೂಕ್ತಕ್ಕೂ ಯಾವುದೇ ಸಂಬಂಧವಿಲ್ಲ.ಏಕೆಂದರೆ ಅಲ್'ಹಮ್ದುಲಿಲ್ಲಾಹ್ ಪ್ರತಿಯೊಬ್ಬ ಸುನ್ನಿ ಮುಸಲ್ಮಾನರು ಅಲ್ಲಾಹನನ್ನು ಮಾತ್ರ ಆರಾಧಿಸುವುದು.
ಅದಕ್ಕೆ ಸ್ಪಷ್ಟ ಪುರಾವೆ...👇🏻
ಅಧ್ಯಾಯ: 72 ಸೂಕ್ತ: 20
قُلْ إِنَّمَآ أَدْعُوا۟ رَبِّى وَلَآ أُشْرِكُ بِهِۦٓ أَحَدًۭا
(ಸಂದೇಶವಾಹಕರೇ,) ತಾವು ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.

*_✍🏻Straight Path Ahlu Sunnah_*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...