Skip to main content

ನೂರುಲ್ ಉಲಮಾ


ನೂರುಲ್ ಉಲಮಾ
ಅದೊಂದು ಸಭೆ,ಸಾಧಾರಣ ಸಭೆ ಅಲ್ಲ, ಉಲಮಾ ದಿಗ್ಗಜರ ಸಭೆ, ಪಂಡಿತ ಶಿರೋಮಣಿಗಳ ಸಭೆ, ಸಮುದಾಯವನ್ನು ಇಸ್ಲಾಮಿನ ನೈಜ ಆಶಯದತ್ತ ಕೊಂಡೊಯ್ಯುವ ಚಿಂತನೆಯಿಂದ ನಡೆಸುವ ಸಭೆ,  ನೂತನವಾದಿಗಳ ಶಡ್ಯಂತ್ರಕ್ಕೆ ಒಳಗಾಗುವವರಿಗೆ ಸನ್ಮಾರ್ಗದ ದಾರಿ ತೋರಿಸುವ ಸಲುವಾಗಿ ನಡೆಸುವ ಜಿಹಾದಿನ ಸಭೆ,  ಸಮಾಜದಲ್ಲಿರುವ ಕಟ್ಟ ಕಡೆಯ ಮನುಷ್ಯರಿಗೆ ಉತ್ತಮವಾದ ಬದುಕನ್ನು ಕೊಟ್ಟು ಅಂತವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಚಿಂತನ ಮಂಥನ ನಡೆಸುವಂತಹ ಸಭೆ, ಸಮುದಾಯ ಇಸ್ಲಾಮಿನ ವಿಧಿ ವಿಧಾನಗಳನ್ನು ಮನದಂತರಾಳದಿಂದ ತಿಳಿಯಲು,
ಅಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಯಾವ ರೀತಿ ಸಂಘಟಿತ ಆಗಬೇಕೊ ಅದಕ್ಕಾಗಿ ರೂಪುರೇಷೆ ರೂಪಿಸುವ ಸಭೆ,
ಅಲ್ಲಿ ಉಲಮಾ ಲೋಕದ ಮಹಾ ಪಂಡಿತರುಗಳಿದ್ದರು, ಎಲ್ಲರೂ ಘಾಡವಾದ ಚರ್ಚೆಯಲ್ಲಿರುವಾಗ, ಅವರಲ್ಲೊಬ್ಬರು ಒಂದು ಲೇಖನವನ್ನು ತಂದು ಸಭೆಯ ಮುಂದಿಟ್ಟರು, ಅದು ಅಲ್ ಬಯಾನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವಾಗಿತ್ತು.     ಅದನ್ನು ಓದಿದೊಡನೆ ನೆರೆದ ಪಂಡಿತರಲ್ಲಿ ಮನ ಸಂತಸ ಗೊಳ್ಳವ ಸಂಚಲನ,
ಇಷ್ಟರ ವರೆಗೆ ನಾವು ಚರ್ಚೆಮಾಡಿ ನಮ್ಮ ಮೆದುಳಿಗೆ ಇಂತಹ ಪ್ಲಾನ್ ಬಂದಿರಲಿಲ್ಲ. *ಅಲ್ ಹಂದುಲಿಲ್ಲಾಹ್* ಈ ಒಂದು ವಿಷಯವನ್ನು ನಾವು ಚರ್ಚೆಗೆ ತೆಗೆದುಕೊಂಡು ಜಾರಿಗೆ ತಂದರೆ, ದಾರ್ಮಿಕ ವಿಧ್ಯಾಭ್ಯಾಸ ಕಲಿಯಲು ಮುಂದೆ ಇದು  ಒಂದು ಹೊಸತನ ಬರಲಿದೆ ಎಂದು ಅಭಿಪ್ರಾಯ ಬಂತು.
ಅಷ್ಟಕ್ಕೂ ಈ ಲೇಖನವನ್ನು ಬರೆದವರಾರು ಎಂಬ ಪ್ರಶ್ನೆ ಅಲ್ಲಿ ಎಲ್ಲರಿಂದಲೂ ಬಂತು.

ಆ ಲೇಖನವನ್ನು ಬರೆದವರನ್ನೇ ಚರ್ಚೆಯಲ್ಲಿ ಸೇರಿಸಿದರೆ ಇನ್ನೂ ಸಹ ಹೆಚ್ಚಿನ ಅಭಿಪ್ರಾಯಗಳು ಸಿಗಬಹುದು ಎಂಬ ಅಭಿಪ್ರಾಯ ದೊಂದಿಗೆ, ಮುಂದಿನ‌ ಚರ್ಚಾ ಸಭೆಗೆ ಅವರನ್ನು ಕರೆತರಲಾಯಿತು,
ಪಂಡಿತ ಮಹಾ ದಿಗ್ಗಜಗರಿದ್ದ ಆ ದರ್ಬಾರಿಗೆ 27 ರ ಹರೆಯದ ಯುವಕನ ಪ್ರವೇಶ ,
ಅವರ ಆಗಮನದ ಶೈಲಿಯೇ ಬಹಳಷ್ಟು ವಿನಯದಿಂದ ಕೂಡಿತ್ತು,  ಅವರ ವಿನಯವನ್ನು ಕಂಡು ಎಲ್ಲರೂ ಅವರತ್ತ ನೆಟ್ಟ ದೃಷ್ಟಿ  ತೆಗೆಯಲು ನಿಮಿಷಗಳೇ ಬೇಕಾಯಿತು.
ಅವರು ಬೇರೆ ಯಾರೂ ಅಲ್ಲ‌ ಎರಡು ಶತಮಾನಗಳೆಡೆಯಲ್ಲಿ ಸಮುದಾಯಕ್ಕಾಗಿ ಜೀವಿಸಿದ, ನಮ್ಮೆಲ್ಲರ ಅಧ್ಯಾತ್ಮಿಕ ನೇತಾರ, ಸುನ್ನತ್ ಜಮಾತ್‌ಗೆ ಶೃಂಗರಿಸಿದ  ಕಿರೀಟ ಮಹಾನ್ *ನೂರುಲ್ ಉಲಮಾ ಅಬ್ದುಲ್ ಖಾದರ್ ಮುಸ್ಲಿಯಾರ್*(ಖ.ಸಿ)
ಅವರು ಬರೆದ ವಿಷಯವೇ ನಾವೀಗ ಬಳಸುವ *ಮದರಸಾ ಸಿಲಬಸ್*
ನಂತರ ಬಂದ ಮದರಸದ ನೂತನ ಸಂವಿದಾನವು ಕೋಟ್ಯಾಂತರ ಮುಸಲ್ಮಾನರಿಗೆ ದೀನ್ ಕಲಿಯುವ ಸುಲಭದಾಯಕ ಮಾರ್ಗವಾಗಿ ಪರಿಣಮಿಸಿತು. ಇವತ್ತು ನಾವು ಕಾಣುವ ಮದರಸಾ ಸಿಲಬಸ್ ಇದರ ಸಂವಿದಾನದ ಶಿಲ್ಪಿ ಮಹಾನರಾದ ನೂರುಲ್ ಉಲಮಾ (ಖ.ಸಿ) ಉಸ್ತಾದ್ ರವರಾಗಿರುತ್ತಾರೆ.

ಮಹಾನರಾದ ನೂರುಲ್ ಉಲಮಾರ ಬಗ್ಗೆ ಬರೆಯಲು ಹೊರಟರೆ ನಮ್ಮ ಆಯುಸ್ಸನ್ನು ಅದಕ್ಕೇ ಬಳಸಬೇಕಾದಿತು ಅಂದರೆ ತಪ್ಪಾಗದು. ಅಂತಹ ಕೊಡುಗೆ ಯನ್ನು ಅವರು ಸಮುದಾಯಕ್ಕೆ ಕೊಟ್ಟಿರುತ್ತಾರೆ. ಅವರ ಜೀವನ ಶೈಲಿ ಅಧ್ಯಾತ್ಮಿಕತೆಯ ಭಂಡಾರವಾಗಿದೆ.

 ಸುನ್ನತ್ ಜಮಾತ್‌ನ ಅಖೀದಾ ವಿಷಯದಲ್ಲಿ ಈ ಲೋಕವೇ ನನಗೆ ಎದುರಾಗಿ ನಿಂತರೂ ಕಿಂಚಿತ್ತೂ ಅಂಜದೆ, ಧೈರ್ಯದಿಂದ ಗರ್ಜಿಸಿದ ಮಹಾನರಾದ *ಅಬ್ದುಲ್ ರಹ್ಮಾನ್ ಕುಂಞಿಕೋಯ ಅಲ್ ಬುಖಾರಿ  (ಖ.ಸಿ) ತಂಙಳ್* ರವರವರನ್ನು *ತಾಜುಲ್ ಉಲಮಾ* ಅಂತ ಬಿರುದು ನೀಡಿ ಗೌರವಿಸುವ ಸಂದರ್ಬದಲ್ಲಿ ತಂಙಳ್‌ರವರು ಹೇಳಿದ ಮಾತು, ನನಗಿಂತ ಅಭಿನಂದಿಸಲ್ಪಡುವ ವ್ಯಕ್ತಿ ಇದ್ದರೆ ಅದು ನೂರುಲ್ ಉಲಮಾ ಎಂದಾಗಿತ್ತು.

ನೂರುಲ್ ಉಲಮಾ ಉಸ್ತಾದರ ಜೀವನದ ಪ್ರತಿಯೊಂದು ಕ್ಷಣವೂ ಅಲ್ಲಾಹನ ಸಾನಿದ್ಯವಾಗುವ ರೀತಿಯಲ್ಲಿತ್ತು. ಅವರ ಜೀವನದ ಪ್ರತಿಯೊಂದು ಸೆಕೆಂಡುಗಳು ಅಲ್ಲಾಹನಿಗೆ ಅತ್ತಿರವಾಗುವ ಚಿಂತನೆ ಮತ್ತು ಪ್ರತಿಯೊಂದು ವಿಷಯದಲ್ಲಯೂ ಸೂಕ್ಷ್ಮತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದರು.

ಅವರು ಬರೆದ ಹಲವಾರು ಗ್ರಂಥಗಳ ಪೈಕಿ ಮಳಯಾಳಂ ಭಾಷೆಯಲ್ಲಿ ಬರೆದ *ಓರ್ಮಯುಡೆ ಏಡ್‌ಗಳ್* (ಕನ್ನಡಕ್ಕೆ ಭಾಷಾಂತರಗೊಂಡಿದೆ) ಅದರಲ್ಲಿ ಉಸ್ತಾದರು ಉಲ್ಲೇಖಿಸಿದ ವಿಷಯ ಪ್ರತಿಯೊಬ್ಬರೂ ಎದೆಗೆ ಕೈ ಇಟ್ಟು ಚಿಂತಿಸಬೇಕಾದ ಉಲ್ಲೇಖವಾಗಿದೆ.
ನಿಮಗೆ ನೆನಪಿರಬಹುದು, ಒಮ್ಮೆ ದುಬಾಯಿಯ ಆಸ್ಪತ್ರೆಯಲ್ಲಿ ಅರಬಿಯೊಬ್ಬರು ತನ್ನ ಕಣ್ಣಿನ ಚಿಕಿತ್ಸೆ ಮಾಡಿಸಿ  ಬಿಲ್ ನೋಡಿ ಅತ್ತೇ ಬಿಟ್ಟರು. ಆ ಅಳು ಸದಾರಣ ಅಳು ಆಗಿರಲಿಲ್ಲ, ಕಾರಣ ಕೇಳಿದಾಗ ಅವರ ಉತ್ತರ ಈಗಿತ್ತು, ನನಗೆ ಅಲ್ಲಾಹನು ನೀಡಿದ ಅನುಗ್ರಹ ಗಳಲ್ಲಿ ಒಂದು ಕಣ್ಣಾಗಿದೆ, ಜೀವನದಲ್ಲಿ ಒಮ್ಮೆ ಕಣ್ಣು ಚಿಕಿತ್ಸೆಮಾಡಿ ಇಷ್ಟು ಬಿಲ್ ಆದರೆ , ಜೀವನ ಪರ್ಯಂತ ನಾನು ಅನುಭವಿಸುವ ಅನುಗ್ರಹ ಗಳ ಬೆಲೆ ಎಷ್ಟಿರಬಹುದು, ಇದಕ್ಕೆ ನಾವು ಬೆಲೆ ಕಟ್ಟಲು ಸಾದ್ಯವೇ, ಆ ಅಲ್ಲಾಹನ ಅನುಗ್ರಹ ಗಳಿಗೆ ನಾವು ಯಾವ ಮಟ್ಟದಲ್ಲಿ ಉತ್ತರ ಹೇಳಬೇಕಾಗಿತು ಅಂತಾಗಿತ್ತು ಅವರ ಹೇಳಿಕೆ,
ಆದರೆ ಇದಕ್ಕಿಂತಲೂ ಹೃದಯಕ್ಕೆ ನಾಟುವ ರೀತಿಯ ವಿಷಯವಾಗಿತ್ತು ನೂರುಲ್ ಉಲಮಾ ಉಸ್ತಾದರು ಉಲ್ಲೇಖಿಸಿದ್ದು, ಅಲ್ಲಾಹನು ನಮಗೆ ನೀಡಿದ, ಎಣಿಸಲು ಅಸಾಧ್ಯವಾದ ಅನುಗ್ರಹಗಳಲ್ಲಿ ಒಂದಾಗಿದೆ  ನಮ್ಮ ಉಸಿರಾಟ, ನಾವು ಪ್ರತಿಯೊಂದು ಸೆಕೆಂಡುಗಳಲ್ಲಿ ಸೇವಿಸುವ ಉಸಿರಿಗೆ ಪ್ರತಿಯಾಗಿ ಅಲ್ಲಾಹನಿಗೆ ಸಲ್ಲಿಸುವ ಋಣಗಳಾದರೂ ಏನು, ಇದಕ್ಕೆ ನಾಳೆ ನಾವು ಯಾವ ರೀತಿ ಉತ್ತರ ಹೇಳಬೇಕಾದಿತು ಎಂದು.
ಎಂತಹ ಧೀರ್ಘ ದೃಷ್ಟಿಯಿಂದ ಕೂಡಿದ ಬರಹ ಅಲ್ಲವೆ.
ಅವರ ಜೀವನ ಶೈಲಿಯೇ ಹಾಗೆ.
ಪ್ರತಿಯೊಂದು ವಿಷಯದಲ್ಲಿಯೂ ಅತೀ ಸೂಕ್ಷತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದಾರೆ.
ಪ್ರಪಂಚವೆಲ್ಲವೂ ಸುಖ ನಿದ್ದೆಯಲ್ಲಿರಬೇಕಾದರೆ ಮೂರು ಗಂಟೆ ರಾತ್ರಿ ಸ‌ಅದಿಯಾ ವಠಾರದಲ್ಲಿ ಅಲ್ಲಾಹನ ಅದ್‌ಕಾರ್ ಮತ್ತು ಇಬಾದತ್‌ಗಳಿಗಾಗಿ ಮುಡಿಪಾಗಿಟ್ಟವರು. ರಾತ್ರಿಗಳನ್ನು ಹಗಲಾಗಿಸಿಕೊಂಡು ದೇವಾರಾದನೆಯಲ್ಲಿ ಮಗ್ನರಾಗಿದ್ದವರಾಗಿದ್ದಾರೆ ನೂರುಲ್ ಉಲಮಾ ಉಸ್ತಾದ್.

ಕಾಸರಗೊಡಿನಿಂದ ಚೆಮುನಾಡ್ ಮಾರ್ಗವಾಗಿ ದೇಳಿ(ಸ‌ಅದಾಬಾದ್) ಎಂಬ‌ ಊರಿನಲ್ಲಿ ತಲೆ ಎತ್ತಿ ನಿಂತಿರುವ, ಲೋಕ ಪ್ರಸಿದ್ದ ಧಾರ್ಮಿಕ ಹಾಗೂ ಲೌಕಿಕ ವಿಧ್ಯಾ ಮಹಾ ಸಮುಚ್ಚಯ *ಜಾಮಿಯ ಸ‌ಅದಿಯ ಅರಬಿಯ* ಇದನ್ನು ಅರಿಯದವರಾರು, ಆ ಮಹಾ ವಿಧ್ಯಾಮಂದಿರವನ್ನು ಸಮುದಾಯಕ್ಕೆ ಅರ್ಪಿಸಿದ ನೂರುಲ್ ಉಲಮಾ, ಅಲ್ಲಿ‌ ಅದೆಷ್ಟೊ‌ ಜನರು‌ ಧಾರ್ಮಿಕವಾಗಿ ಮತ್ತು ಲೌಕಿಕವಾಗಿ ವ್ಯಾಸಂಗ ಮಾಡಿ ಪದವಿ ಗಿಟ್ಟಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಮಿಂಚುತ್ತಿದ್ದಾರೆ. ಅದೆಷ್ಟೊ ನಿರ್ಗತಿಕರು, ಅನಾಥರು ಅಲ್ಲಿ ಉಚಿತವಾಗಿ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ.

ಅಲ್ಲಾಹನು ನೂರುಲ್ ಉಲಮಾ ಉಸ್ತಾದರೊಂದಿಗೆ ನಮ್ಮನ್ನು,ನಮ್ಮ ಕುಟುಂಬವನ್ನು, ನಮ್ಮ ಸಂಘಟನಾ ಮಿತ್ರರನ್ನು ಸ್ವರ್ಗ ವೃಂದಾವನದಲ್ಲಿ ಒಗ್ಗೂಡಿಸಲಿ (ಆಮೀನ್ ಯಾ ರಬ್ಬಲ್ ಆಲಮೀನ್)

*ಚಿಂತಕರ ಛಾವಡಿ*
*ಇಕ್ಬಾಲ್ ಕೈರಂಗಳ ದಮ್ಮಾಮ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...