Skip to main content

ಕಿವುಡ ಗಿಡುಗ


ವಿಸ್ಮಯ ತುಂಬಿದ ಜೀವಜಗತ್ತು 👉 *37*

 ಕಿವುಡ  ಗಿಡುಗ

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

▪ *ಬಹಳ* ಎತ್ತರವಾದ ಬೆಟ್ಟ ಮತ್ತು ಪರ್ವತ ಪ್ರದೇಶಗಳಲ್ಲಿ ಗೂಡುಕಟ್ಟಿ ವಾಸಿಸುವ ಮತ್ತು ಬಹಳ ಅಪರೂಪವಾಗಿ ಕಾಣಸಿಗುವ ಒಂದು ಪಕ್ಷಿಯಾಗಿರುತ್ತದೆ ಗಿಡುಗ ಅಥವಾ ಗರುಡ.
   ▪‌ *ಹಾವುಗಳು,* ಕೋಳಿ ಮರಿಗಳು, ಇಲಿಗಳು, ಪಾರಿವಾಳಗಳಾಗಿರುತ್ತದೆ ಇದರ ಇಷ್ಣ ಭೋಜನ. ಕಂದು ಮತ್ತು ಕಪ್ಪು ಬಣ್ಣದಲ್ಲಿ ಕಾಣಲ್ಪಡುವ ಈ ಮಾಂಸಾಹಾರಿ ಪಕ್ಷಿ ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳ ತನಕ ಬದುಕುತ್ತದೆ. ಬರೇ ಎರಡು ಅಥವಾ ಮೂರು ಮೊಟ್ಟೆಯಿಡುವ ಈ ಜೀವಿ ಇಪ್ಪತ್ತು ದಿನಗಳ ಕಾಲ ಮೊಟ್ಟೆಗೆ ಕಾವು ಕೊಡುತ್ತದೆ.
   ▪ ಬಹಳ ವೇಗವಾಗಿಯೂ ಅಂತೆಯೇ ಭೂಮಿಯ ಮಟ್ಟದಿಂದ ಬಹಳ ಎತ್ತರದಲ್ಲಿಯೂ ಹಾರಾಡುವ ಇದು ಅಂತರೀಕ್ಷದಲ್ಲಿ ಹಾರಾಡುವಾಗ ತನ್ನ ರೆಕ್ಕೆಯನ್ನು ಕಿಂಚಿತ್ತೂ ಅಲುಗಾಡಿಸದೆ ಹಾರಾಡುತ್ತದೆ. ಮಾತ್ರವಲ್ಲ ಕೆಲವೊಮ್ಮೆ ಅಂತರೀಕ್ಷದಲ್ಲಿ ಯಾವುದೇ  ಅಲುಗಾಟವಿಲ್ಲದೆ ನಿಮಿಷಗಳ ತನಕ ನಿಲ್ಲುತ್ತದೆ. ಈ ಸಾಮರ್ಥ್ಯ ಈ ಜಾತಿಗೆ ಸೇರಿದ ಹಿಂಸ್ರ ಪಕ್ಷಿ, ಹದ್ದು, ರಣಹದ್ದು ಮುಂತಾದ ಪಕ್ಷಿಗಳಿಗಲ್ಲದೆ ಅಲ್ಲಾಹನು ಬೇರೊಂದಕ್ಕೆ ಕೊಡಲಿಲ್ಲ. ಆಧುನಿಕ ಜಗತ್ತಿನ ವಿಮಾನಗಳ ಮತ್ತು ವಾಯುಯಾನಗಳ ಹಾರಾಟ ಮತ್ತು ಇನ್ನಿತರ ತಂತ್ರಜ್ಞಾನವು ಇದರ ಚಲನ ವಲನಗಳ ನೇರ ನಕಲಾಗಿರುತ್ತದೆ ಎಂದು ಸಾಂದರ್ಭಿಕವಾಗಿ ನೆನಪಿಸುತ್ತೇನೆ.
   ▪  *ಅಂತರೀಕ್ಷದಲ್ಲಿ* ಹಾರಾಡುವ ಸಮಯ ಕೆಳಗೆ ಎಷ್ಟೋ ದೂರದಲ್ಲಿರುವ ತನ್ನ ಆಹಾರವನ್ನು ಕಾಣುವ ಅತೀ ಸೂಕ್ಷ್ಮವಾದ ನೇತ್ರವನ್ನು ಅಲ್ಲಾಹನು ಇದಕ್ಕೆ ಕೊಟ್ಟಿರುತ್ತಾನೆ. ಆದರೆ ಈ ಪಕ್ಷಿ ಕಿವುಡ. ಇದಕ್ಕೆ  ಕಿವಿ ಕೇಳುವುದಿಲ್ಲ ಎಂದು ಹೇಳಲಾಗುತ್ತದೆ. ಬೇಟೆಯಾಡುವುದಕ್ಕಿಂತ ಯಾರಾದರಿಂದ ಕಿತ್ತು ತೆಗೆಯುವುದೆಂದರೆ ಇದಕ್ಕೆ ಬಹಳ ಇಷ್ಟ. ಇದರ ಬೇರೊಂದು ವಿಶೇಷತೆಯೆಂದರೆ, ಇದು ಯಾವತ್ತೂ ಒಬ್ಬ  ಎಡ ಕೈಯಲ್ಲಿ ಮಾಂಸ, ಮೊಟ್ಟೆ ಮುಂತಾದ ಆಹಾರ ವಸ್ತುಗಳನ್ನು ಕೊಂಡು ಹೋಗುವಾಗ ಕಿತ್ತು ತೆಗೆಯುವುದಿಲ್ಲ. ಬಲಗೈಯಲ್ಲಿರುವಾಲೇ ಕಿತ್ತು ತೆಗೆಯುತ್ತದೆ. ಸುಬ್‌ಹಾನಲ್ಲಾಹ್ ...! ಇದೆಂತಹಾ ವಿಪರ್ಯಾಸ..?
   ▪ಕಂಡಲ್ಲಿ ಕೊಲ್ಲಲು ಸುನ್ನತ್ತಾದ ಒಂದು ಜೀವಿಯಾಗಿದೆ ಇದು. ಎಷ್ಟರ ತನಕವೆಂದರೆ, ಪವಿತ್ರ ಹರಮಿನಲ್ಲೂ ಇದನ್ನು ಕೊಲ್ಲುವುದು ಸಮ್ಮತಾರ್ಹವಾಗಿದೆ. ಈ ಬಗ್ಗೆ ಸಹೀಹಾದ ಹಲವಾರು ಹದೀಸುಗಳು ವರದಿಯಾಗಿದೆ. ಕಂಡಲ್ಲಿ ಕೊಲ್ಲಲು ಸುನ್ನತ್ತಾದ ಜೀವಿಯೆಂದು ಹೇಳಿ ಯಾವತ್ತೂ ಅದನ್ನು ಹುಡುಕಿ ಕೊಲ್ಲುವುದು ತಪ್ಪಾಗಿರುತ್ತದೆ. ಉದಾಹರಣೆಗೆ, ಗಿಡುಗವೊಂದು ನಮ್ಮ ಮನೆ ಅಂಗಳಕ್ಕೆ ಅಥವಾ ನಾವು ನಡೆದು ಹೋಗುವ ದಾರಿಯಲ್ಲಿ ಕಂಡರೆ ಕೊಲ್ಲುವುದು ಸುನ್ನತ್ತೇ ವಿನಾ ಯಾವತ್ತೂ ಅದರ ಬದುಕು ವಲಯವಾದ ಪರ್ವತ ಶ್ರೇಣಿಗಳು, ಕಾಡುಗಳು ಅಂತೆಯೇ ಅದರ ಗೂಡಿಗೆ ಹೋಗಿ ಕೊಲ್ಲುವುದು ನಿಷಿದ್ದವಾಗಿದೆ.
   ▪ *ಜಂಟಿಯಾಗಿ ಇರುವುದನ್ನು* ಬಯಸದ ಇದು ಯಾವಾಗಲೂ ಒಂಟಿಯಾಗಿಯೇ ಇರುತ್ತದೆ. ಇತರ ಸಣ್ಣ ಪಕ್ಷಿಗಳನ್ನು ಕೊಂದು ತಿನ್ನುವ ಜೀವಿಯಾದರೂ ಇದರ ಬೇರೊಂದು ಉತ್ತಮ ಸ್ವಭಾವವೆಂದರೆ, ತನ್ನ ಗೂಡಿನ ಆಸುಪಾಸಿನಲ್ಲಿ ವಾಸಿಸುವ ಇತರ ಸಣ್ಣ ಪಕ್ಷಿಗಳಿಗೆ ಇದು ನೆರೆಹೊರೆಯವರೆಂಬ ನೆಲೆಯಲ್ಲಿ ಯಾವತ್ತೂ ತೊಂದರೆ ಮಾಡಲಾರದು. ಮಾತ್ರವಲ್ಲ ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಕೂಡ ಬೆಳೆಸುತ್ತದೆ. ಎಷ್ಟರ ತನಕವೆಂದರೆ, ತಿನ್ನಲು ಏನನ್ನೂ ಸಿಗದೆ ಹಸಿವಿನಿಂದ ಸಾಯುವ ಗತಿಗೇಡು ಬಂದರೂ ನೆರೆಕರೆಯ ಪಕ್ಷಿಗಳು ಮತ್ತು ಅವುಗಳ ಮರಿಗಳ ಮೇಲೆ ಆಕ್ರಮಣ ಮಾಡದು.
   ▪ಪ್ರಖ್ಯಾತ ಸೂಫಿವರ್ಯ ಶೈಖ್ ಶಿಬ್‌ಲ್ ಅಲ್ ಮರ್ವಝಿಯವರು ಒಮ್ಮೆ ತನ್ನ ಮನೆಗೆ ಪದಾರ್ಥ ಮಾಡಲು ಮಾರುಕಟ್ಟೆಯಿಂದ ಮಾಂಸ ತರುತ್ತಿದ್ದರು. ದಾರಿಮಧ್ಯೆ ಒಂದು ಗಿಡುಗ ಅದನ್ನು ಅವರ ಕೈಯಿಂದ ಕಿತ್ತು ತೆಗೆದು ಹೋಯಿತು. *"ಇನ್ನು ಮನೆಗೆ ಖಾಲಿ ಕೈಯಲ್ಲಿ ಹೇಗೆ ಹೋಗುವುದು..?"* ಎಂದು ತನ್ನ ಮನದಲ್ಲೇ ಕೇಳುತ್ತಾ ಏನೇ ಆಗಲಿ *"ನಮಾಝು ಮಾಡಿ ಬರುವ* ಎಂದು ಹೇಳಿ ಅಲ್ಲೇ ಇರುವ ಒಂದು ಮಸೀದಿಗೆ ಹೋಗಿ ನಮಾಝು ಮಾಡಿದರು. ನಂತರ ಮಾಂಸ ನಷ್ಟವಾದ ಬೇಸರದಿಂದ ಮನೆಗೆ ಹೋದರು. ಮನೆ ತಲುಪಿದಾಗ ಮನೆಯ ಒಳಗಿನಿಂದ ಮಾಂಸ ಪಲ್ಯದ ಘಮಘಮ ಪರಿಮಳ ಬರುತ್ತಿತ್ತು.
   ▪ *ಶೈಖ್* ಶಿಬ‌್‌ಲ್‌ರವರು ತನ್ನ ಬಾಳ ಸಂಗಾತಿಯಲ್ಲಿ ಕೇಳಿದರು. *"ಇದೆಲ್ಲಿಂದ ನಿನಗೆ  ಮಾಂಸ ಲಭಿಸಿತು...?"* ಆಗ ಅವರ ಪತ್ನಿ *"ಎಲ್ಲಿಂದಲೂ ಖರೀದಿಸಿದ್ದು ಅಲ್ಲ. ಹೊರಗಡೆ ನಮ್ಮ ಮನೆ ಅಂಗಳಕ್ಕೆ ನೇರವಾಗಿ ಮೇಲೆ ಅಂತರೀಕ್ಷದಲ್ಲಿ ಎರಡು ಗಿಡುಗಗಳು ಒಂದು ಕಟ್ಟು ಮಾಂಸಕ್ಕೆ ಪರಸ್ಪರ ಜಟಾಪಟಿ ಮಾಡುತ್ತಿತ್ತು. ಅಕಸ್ಮಾತ್ ಜಗಳವಾಡುವಾಗ ಆ ಕಟ್ಟು ನಮ್ಮ ಅಂಗಳಕ್ಕೆ ಬಿತ್ತು. ನಾನದನ್ನು ಪಲ್ಯ ಮಾಡಿದೆ."* ಎಂದು ಉತ್ತರಿಸಿದರು.
   ▪ *ಈ ವಾರ್ತೆಯನ್ನು* ಕೇಳಿದಾಕ್ಷಣ ಸೂಫಿವರ್ಯ ಶಿಬ್‌ಲ್ ರವರು ಹೇಳಿದರು. *"ಶಿಬ್‌ಲಿಗೆ ಅವನ ನೆನಪಿಲ್ಲದಿದ್ದರೂ ಈ ಸಾಧು ಶಿಬಿಲಿಯನ್ನು ನೆನಪಿಟ್ಟು ಮಾಂಸ ತಲುಪಿಸಿದ ಆ ಅಲ್ಲಾಹುವಿನಿಗೆ ಸ್ತುತಿಗಳು."*
   ▪ *ಈ ಘಟನೆಯನ್ನು* ವಿಶ್ವ ವಿಖ್ಯಾತ ಪಂಡಿತ ಇಮಾಮ್ ಖುಷಯಿರಿಯವರು ತನ್ನ *ಅಲ್ ರಿಸಾಲಃ* ಎಂಬ ಗ್ರಂಥದ ಅವುಲಿಯಾಗಳ ಕರಾಮತುಗಳು ಎಂಬ ಅಧ್ಯಾಯದಲ್ಲಿ ಉಲ್ಲೇಖಿಸಿದ್ದಾರೆ.
   ▪ *ಸ್ವರ್ಗ ಪ್ರವೇಶದ* ಪರವಾನಿಗೆ ಮುಂಗಡವಾಗಿಯೇ ಲಭಿಸಿದ ಸಹಾಬೀಶ್ರೇಷ್ಠ ಹಝ್ರತ್ ಸ‌ಅದ್ ಬಿನ್ ಅಬೀ ವಖ್ಖಾಸ್ (ರ) ರವರು ಒಮ್ಮೆ ಹೀಗೆಯೇ ಮನೆಗೆ ಮಾಂಸ ತರುತ್ತಿರುವಾಗ ಗಿಡುಗವೊಂದು ಅದನ್ನು ಅವರ ಕೈಯಿಂದ ಕಿತ್ತು ತೆಗೆದು ಹೋಯಿತು. ಸಿಟ್ಟು ತಡೆಯಲಾಗದೆ ಮಹಾನುಭಾವರು ಗಿಡುಗನಿಗೆ ವಿರುದ್ಧವಾಗಿ ಏನೋ ಹೇಳಿದರು. ಸುಬ್‌ಹಾನಲ್ಲಾಹ್...! ಹೇಳಿದ್ದೇ ತಡ, ಮೇಲೆ ಹಾರಿ ಮಾಂಸ ತಿನ್ನಲು ಶುರು ಮಾಡಿದಾಗಲೇ ಮಾಂಸದ ಒಂದು ಎಲುಬು ಅದರ ಗಂಟಲಲ್ಲಿ ಸಿಲುಕಿ ಗಿಡುಗವು ಸತ್ತು ಬಿತ್ತು.
   ▪ *ಆತ್ಮೀಯ* ಲೋಕದ ತೇಜಸ್ಸು, ಸೂಫಿವರ್ಯ, ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ) ರವರು ಒಮ್ಮೆ ಒಂದು ವೇದಿಕೆಯಲ್ಲಿ ಧಾರ್ಮಿಕ ಬೋಧನೆ ಮಾಡುತ್ತಿರುವಾಗ ಬಹಳ ವೇಗವಾಗಿ ಗಾಳಿ ಬೀಸುತ್ತಿತ್ತು. ಗಾಳಿಯ ರಭಸಕ್ಕೆ ಎಲ್ಲಿಂದಲೋ ಒಂದು ಗಿಡುಗ ಅವರ ಮಜ್‌ಲಿಸಿಗೆ ಬಂದು ಬಿತ್ತು. ಬಂದ ಗರುಡ ಬಹಳ ಜೋರಾದ ದನಿಯಲ್ಲಿ ಕೂಗಲು ಆರಂಭಿಸಿತು. ಇದರಿಂದ ಧಾರ್ಮಿಕ ಭಾಷಣ ಆಲಿಸುತ್ತಿದ್ದ ಸಭಿಕರಿಗೆ ತುಂಬಾ ತೊಂದರೆಯಾಯಿತು. ಇದನ್ನು ಗಮನಿಸಿದ ಶೈಖ್‌ರವರು ಗಾಳಿಯಲ್ಲಿ ಹೇಳಿದರು. *"ಇದರ ರುಂಡ ಮತ್ತು ಮುಂಡವನ್ನು ಬೇರೆಬೇರೆ ಮಾಡು"* ಶೈಖ್‌ರವರು ಹೇಳಿದ್ದೇ ತಡ. ಗರುಡನ ರುಂಡ ಒಂದು ಕಡೆಯಲ್ಲೂ ಮುಂಡ ಬೇರೊಂದು ಕಡೆಯಲ್ಲೂ ತುಂಡು ತುಂಡಾಗಿ ಬಿತ್ತು. ಶೈಖ್‌ರವರು ತನ್ನ ತರಗತಿ ಮುಗಿಸಿದ ನಂತರ ರುಂಡ ಮುಂಡ ಬೇರೆಬೇರೆಯಾಗಿದ್ದ ಗರುಡನ ರುಂಡವನ್ನು ಒಂದು ಕೈಯಲ್ಲಿಯೂ ಮುಂಡವನ್ನು ಮತ್ತೊಂದು ಕೈಯಲ್ಲೂ ಹಿಡಿದು *ಬಿಸ್ಮಿಲ್ಲಾಹಿ* ಎಂದು ಹೇಳಿ ಜೋಡಿಸಿ ಹಾರಲು ಹೇಳಿದರು. ಸುಬ್‌ಹಾನಲ್ಲಾಹ್..! ಸತ್ತ ಗಿಡುಗನಿಗೆ  ಜೀವ ಬಂದು ಹಾರಿ ಹೋಯಿತು.
   ▪ *ಈ ಘಟನೆಯನ್ನು* ಖ್ಯಾತ ವಿದ್ವಾಂಸ ಅಲ್ಲಾಮಾಃ ಯೂಸುಫ್ ಬಿನ್ ಇಸ್‌ಮಾಯೀಲ್ ಅಲ್ ನಬ್‌ಹಾನಿಯವರು ತನ್ನ *ಜಾಮಿಅ್ ಕರಾಮಾತುಲ್ ಅವುಲಿಯಾಯಿ* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
   ▪ *ಗಿಡುಗನ* ಬಗ್ಗೆ ಇತಿಹಾಸದಲ್ಲಿ ಬಹಳ ಸ್ವಾರಸ್ಯಕರ ಕತೆಯೂ ಇದೆ. ಪ್ರವಾದಿ ಮುಹಮ್ಮದ್ (ಸ) ರ ಪತ್ನಿಯರಿಗೆ ಬಟ್ಟೆ ತೊಳೆಯುವುದು, ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಇತ್ಯಾದಿ ಮನೆ ಕೆಲಸದಲ್ಲಿ ಸಹಾಯ ಮಾಡಲು ಖದ್ದಾಮೆಯಾಗಿ *ವಲೀದಃ* ಎಂಬ ಹೆಸರಿನ ಒಬ್ಬರು ಗ್ರಾಮವಾಸಿ ಮಹಿಳೆ ಬರುತ್ತಿದ್ದರು. ಮಾತ್ರವಲ್ಲ ಅವರಿಗೆ ವಾಸಿಸಲು ಮಸೀದಿಯ ಬದಿಯಲ್ಲೇ ಒಂದು ಪುಟ್ಟ ಕೋಣೆಯನ್ನು ಕೂಡ ವ್ಯವಸ್ಥೆ ಮಾಡಲಾಗಿತ್ತು.  ಈ ಮಹಿಳೆ ಯಾವಾಗಲು ಮನೆಗೆಲಸ ಮಾಡುವಾಗ *"ಆ ಶಾಲು ಕದ್ದು ಹೋದ ದಿನ ನನ್ನನ್ನು ಅಲ್ಲಾಹನು ಆ ನೀಚ ಜನರ ಅಕ್ರಮದಿಂದ ಬಚಾವು ಮಾಡಿದನು"* ಎಂದು ಅರ್ಥ ಬರುವ ಒಂದು ಅರಬಿ ಪದ್ಯವನ್ನು ಸದಾ ಹಾಡುತ್ತಿದ್ದರು.
   ▪ *ಈ ಹಾಡು* ಕೇಳಿ ಕೇಳಿ ಪ್ರವಾದೀ ಪತ್ನಿ ಬೀವಿ ಆಯಿಶಾ (ರ) ರಿಗೆ ಬೆಕ್ಕಾಸ ಹಿಡಿದಿತ್ತು. ಒಂದು ದಿನ ಬೀವಿ ಆಯಿಶಾ (ರ) ರವರು ಈ ಖದ್ದಾಮೆಯಲ್ಲಿ (ಸೇವಕಿ) ಕೇಳಿದರು. *"ನೀವು ಯಾವಾಗಲೂ ಈ ಪದ್ಯವನ್ನು ಹಾಡುತ್ತೀರಲ್ಲಾ...? ಏನಿದರ ರಹಸ್ಯ..?"*
   ▪ ಆಗ ಸೇವಕಿ... *"ಏನಿಲ್ಲ.. ನಾನು ಇಸ್ಲಾಮಿಗೆ ಬರುವುದಕ್ಕಿಂತ ಮೊದಲು ಒಂದು ಮನೆಯಲ್ಲಿ ಚಾಕರಿ ಮಾಡುತ್ತಿದ್ದೆ. ಒಂದು ದಿನ ಆ ಮನೆಯಲ್ಲಿ ಒಂದು ಮದುವೆ ಸಮಾರಂಭದಲ್ಲಿ ವಧುವು ತಾನು ಕುತ್ತಿಗೆಗೆ ಹಾಕುವ ಮುತ್ತು ರತ್ನದಿಂದ ಚಿತ್ರ ಮಾಡಲ್ಪಟ್ಟ ತನ್ನ ಶಾಲನ್ನು  ಶೌಚಾಲಯಕ್ಕೆ ಹೋಗುವಾಗ ಹೊರಗಿಟ್ಟು ಹೋದಳು. ದುರದೃಷ್ಟವಶಾತ್ ಆ ದಾರಿಯಾಗಿ ಹಾರಿ ಬಂದ ಒಂದು ಗಿಡುಗವು ಅದನ್ನು ಮಾಂಸಕಟ್ಟೆಂದು ಭಾವಿಸಿ ತೆಗೆದು ಹಾರಿ ಹೋಯಿತು. ಶಾಲು ಕಾಣದಾಗ ಆ ಮನೆಯವರು ನನ್ನ ಮೇಲೆ ಶಂಕಿಸಿ ನನ್ನನ್ನು ಚೆನ್ನಾಗಿ ಥಳಿಸಿದರು. ಅಸಹಾಯಕಿಯಾದ ನಾನು ಆಗ ಅಲ್ಲಾಹನಲ್ಲಿ ನನ್ನ ನಿರಪರಾಧಿತ್ವ ಅವರಿಗೆ ತಿಳಿದು ಅವರ ಅಕ್ರಮದಿಂದ ನನ್ನನ್ನು ಬಚಾವು ಮಾಡಬೇಕೆಂದು ಬೇಡಿ ಕೊಂಡೆನು. ಸುಬ್‌ಹಾನಲ್ಲಾಹ್..! ಆ ಕದ್ದ ಗಿಡುಗವೇ ವಾಪಾಸು ಬಂದು ಆ ಶಾಲನ್ನು ಅಲ್ಲೇ ಹಾಕಿತು. ಆ ಕಾರಣದಿಂದ ಆ ಮರೆಯಲಾಗದ ನಿಮಿಷವನ್ನು ನೆನಪಾಗುವಾಗ ನಾನು ಈ ಹಾಡನ್ನು ಹಾಡುತ್ತಿದ್ದೇನೆ"*  ಎಂದು ಉತ್ತರ ಕೊಟ್ಟರು.
   ▪ *ಇದು* ಯಾವುದೇ ಕಾಲ್ಪನಿಕ ಕತೆಯಲ್ಲ. ಇಮಾಮ್ ಬುಖಾರಿಯವರು ತನ್ನ ಸಹೀಹುಲ್ ಬುಖಾರಿಯಲ್ಲಿ ವಿವರಿಸಿದ ಒಂದು ಘಟನೆಯಾಗಿದೆ.
   ▪ಈ ಗಿಡುಗವು ಯಾವತ್ತೂ ಪಾರಿವಾಳ, ಗಿಳಿ ಮುಂತಾದ ಪಕ್ಷಿಗಳಂತೆ ಮನುಷ್ಯನ ನಿಯಂತ್ರಣ ಮತ್ತು ಹತೋಟಿಗೆ ಬಂದು ಅವನೊಂದಿಗೆ ಬೆರೆತು ಬಾಳದು. ಆದರ ಕಾರಣವೇನೆಂದರೆ,  ಪ್ರವಾದಿ ಸುಲೈಮಾನ್ (ಅ) ರವರ ರಾಜ ದರ್ಬಾರ್ ನಲ್ಲಿ ಅವರ ಸೈನಿಕ ಬಳಗದಲ್ಲಿ ಹಲವಾರು ಗಿಡುಗಗಳು ಇದ್ದವು. ಮಾತ್ರವಲ್ಲ ಅದು ಅವರ ಅವರ ಸಾಕು ಪ್ರಾಣಿಯಂತೆ ಅವರಿಗೆ ಸಂಪೂರ್ಣ ವಿಧೇಯರಾಗಿದ್ದವು. ಅಲ್ಲದೆ ಇತರ ಭಕ್ಷಯೋಗ್ಯ ಜೀವಿಗಳನ್ನು ಬೇಟೆಯಾಡಲು ಇದನ್ನು ಬಳಸುತ್ತಿದ್ದರು. ಭೂಲೋಕದ ಚಕ್ರವರ್ತಿಯಾಗಿದ್ದ ಅವರು ಅಲ್ಲಾಹನಲ್ಲಿ *" ನೀನು ಈ ತನಕ ಅಂತೆಯೇ ಮುಂದಕ್ಕೆ ಯಾರಿಗೂ ಕೊಡದ ರಾಜ ಅಧಿಕಾರವನ್ನು ನನಗೆ ಕೊಡಬೇಕು."* ಎಂದು ದುಆ ಕೂಡ ಮಾಡಿದ್ದರು. ಆ ಕಾರಣವಾಗಿರುತ್ತದೆ ಇದು ಬೇರೆ ಯಾರಾಗಿಯೂ ನೆಂಟತನ ಅಥವಾ ಸಹವಾಸ ಮಾಡದಿರುವ ರಹಸ್ಯ ಎಂದು ಹೇಳಲಾಗುತ್ತದೆ.
   ▪ಗಿಡುಗನ ರಕ್ತವನ್ನು ಗುಲಾಬಿ ಹೂವಿನ ನೀರಿನೊಂದಿಗೆ ಮಿಶ್ರಣ ಮಾಡಿ ಕೆಲವು ದಿನಗಳ ಕಾಲ ಬೆಳಿಗ್ಗೆ ಹಸಿ ಹೊಟ್ಟೆಗೆ ಕುಡಿದರೆ ಶ್ವಾಸಕೋಶ ಸಂಬಂಧಿಸಿದ ಖಾಯಿಲೆಯಿದ್ದು ಶ್ವಾಸೋಚ್ಚಾಸದಲ್ಲಿ ಅಡಚಣೆ ಇರುವುದಾದರೆ ಅದು ಸಂಪೂರ್ಣ ಗುಣವಾಗುತ್ತದೆ.
   ▪ಅದರ ಪಿತ್ತಕೋಶವನ್ನು ಸೂರ್ಯನ ಬೆಳಕು ನೇರವಾಗಿ ಬೀಳದ ಜಾಗದಲ್ಲಿಟ್ಟು ಒಣಗಿಸಿ ನಂತರ ಹುಡಿಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಹಾಕಬೇಕು. ಈ ಹುಡಿಯನ್ನು ಹಾವು, ಸರ್ಪ, ಚೇಳು ಮುಂತಾದ ವಿಷಜಂತುಗಳು ಕಡಿದಲ್ಲಿಗೆ ಹಚ್ಚಿದರೆ ಒಳ್ಳೆಯ ಫಲ ಕಾಣುತ್ತದೆ.
   ▪ *ಒಂದು* ಮನೆಯ ಮುಂಭಾಗದಲ್ಲಿ ಗಿಡುಗನನ್ನು ಕಟ್ಟಿ ಹಾಕಿದರೆ ಆ ಮನೆಗೆ ಹಾವು, ಚೇಳು ಮುಂತಾದ ವಿಷ ಜಂತುಗಳು ಬರಲಾರದು.
   ▪ *ಒಬ್ಬನಿಗೆ* ಗಿಡುಗವೊಂದು ತನಗೆ ಲಭಿಸಿದ ಕನಸು ಕಂಡರೆ ಅವನಿಗೆ ಗಂಡು ಮಗುವೊಂದು ಹುಟ್ಟಿ ಆ ಮಗು ಯುವಕನಾಗುವಾಗ ಅಧಿಕಾರದ ಗದ್ದುಗೆ ಹತ್ತುವುದರ ನಿಶಾನೆಯಾಗಿದೆ.
ಲಭಿಸಿದ ಗಿಡುಗ ಕೈಯಿಂದ ಹಾರಿ ಹೋದರೆ ಹುಟ್ಟುವ ಗಂಡು ಮಗು ಹುಟ್ಟಿದ ಕೂಡಲೇ ಮರಣಹೊಂದುವುದರ ನಿಶಾನೆಯಾಗಿದೆ.

ಸಂಗ್ರಹ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ನಬ್‌ಹಾನಿಯ *ಜಾಮಿಅ್ ಕರಾಮತುಲ್ ಅವುಲಿಯಾಯಿ* ಮತ್ತು ಇಮಾಮ್ ಅಬ್‌ಶೀಹಿಯ *ಮುಸ್‌ತತ್‌ರಫ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...