ಪ್ರಮುಖ ಸತ್ಕರ್ಮಗಳು
ಸತ್ಕರ್ಮಗಳು ಮಾಡುವ ಮೂಲಕ ನಾವು ಜೀವನ ಶೈಲಿಯನ್ನು ಬದಲಾಯಿಸಬೇಕಾಗಿದೆ. ಅತ್ಯಂತ ಮಹತ್ವವಿರುವ ದಿನನಿತ್ಯ ಮಾಡಬೇಕಾದ ಕೆಲವು ಪ್ರಮುಖ ಸತ್ಕರ್ಮಗಳು...
ಸುಬುಹಿ ನಮಾಝ್ ಬಳಿಕ 41 ನಾರಿಯತ್ ಸ್ವಲಾತ್ ರೂಢಿ ಮಾಡುವುದು.
ಇಮಾಂ ಸುಲೈಮಾನುಲ್ ಜಝೂಲಿ ರಹ್ಮತುಲ್ಲಾಹಿ ಅಲೈಹಿ ರಚಿಸಿರುವ ಲೋಕಮಾನ್ಯತೆ ಪಡೆದ ಅತ್ಯಂತಾ ಶ್ರೇಷ್ಟವಾದ ದಲಾಯಿಲುಲ್ ಖೈರಾತ್ ಸ್ವಲಾತ್ (ಈ ಸ್ವಲಾತಿನಲ್ಲಿ ಸೋಮವಾರದಿಂದ ಹಿಡಿದು ಅದಿತ್ಯವರದವರೆಗೆ ದಿನಕ್ಕೊಂದರಂತೆ ಒಂದೊಂದು ಸ್ವಲಾತ್ ಇದೆ.) ಎಲ್ಲಾ ಉಲಮಾಗಳೂ ಹೇಳುವ ಬಹಳಾ ಶ್ರೇಷ್ಠತೆಯಿರುವ ಪ್ರಮುಖವಾದ ಸ್ವಲಾತಾಗಿದೆ ಇದು.
ದಿನಕ್ಕೆ ಕನಿಷ್ಠ 100 ಸ್ವಲಾತಾದರೂ ಹೇಳುವುದು.
ದಿನಕ್ಕೆ ಕನಿಷ್ಠ 100 ತಹ್ಲೀಲ್ ಹೇಳುವುದು
ಅಸ್ಮಾವುಲ್ ಹುಸ್ನ
ಅಸ್ಮಾವುನ್ನಬಿ ﷺِ
ಅಸ್ಮಾವುಲ್ ಬದ್ರ್ ನಿತ್ಯವೂ ರೂಢಿ ಮಾಡುವುದು
ಸಂಜೆ ಮತ್ತು ಬೆಳಗ್ಗೆ ಗೊತ್ತಿರುವ ದಿಕ್ರ್ ಗಳನ್ನು ಹೇಳುತ್ತಾ ಅಲ್ಲಾಹನನ್ನು ಸ್ತುತಿಸುವುದು.
ನಿತ್ಯವೂ 100 ತಸ್ಬೀಹ್ ಹೇಳುವುದು
(سبحان الله وبحمده سبحان الله العظيم وبحمده استغفر الله)
ನಿತ್ಯವೂ ಒಂದು ಪೇಜಾದರೂ ಖುರ್'ಆನ್ ಖತಮ್ ಓದುವುದು
ಸೂರತುಲ್ ಯಾಸೀನ್
ಸೂರತುಲ್ ವಾಖಿಅ
ಸೂರತುಲ್ ಮುಲ್ಕ್ ಮುಂತಾದ ಪ್ರಮುಖ ಸೂರತ್ ಗಳನ್ನು ನಿತ್ಯವೂ ಪಾರಾಯಣ ಮಾಡುವುದು.
ನಿತ್ಯವೂ ಹದ್ದಾದ್ ಓದುವುದು.....
ನಿತ್ಯವೂ ಖಸೀದತುಲ್ ಬುರ್ದಾದ ಒಂದು ಫಸಲನ್ನಾದರೂ ಹೇಳುವುದು. (ಹೀಗೆ ಹೇಳುತ್ತಾ ರೂಢಿ ಮಾಡಿದರೆ 10 ದಿನಕ್ಕೆ ಒಂದು ಬುರ್ದಾ ಪೂರ್ಣಗೊಳ್ಳುತ್ತದೆ.)
(ಮೇಲಿನ ಸತ್ಕರ್ಮಗಳ ಮಹತ್ವ ಬರೆಯಲಿಲ್ಲ. ಎಲ್ಲವೂ ತುಂಬಾ ಮಹತ್ವವಿರುವ ಸತ್ಕರ್ಮಗಳಾಗಿದೆ) ಮುಂತಾದ ಕೆಲವು ಸತ್ಕರ್ಮಗಳನ್ನು ನಿತ್ಯವೂ ರೂಢಿ ಮಾಡಿಕೊಂಡು ಬಂದರೆ ಮನಸ್ಸಿಗೆ ತುಂಬಾ ನೆಮ್ಮದಿಯ ಜೊತೆ ದುನ್ಯಾದಲ್ಲೂ ಆಖಿರಾದಲ್ಲೂ ಉಪಕಾರ ಸಿಗುವಂತಹಾ ಮಹತ್ವದ ಸತ್ಕರ್ಮಗಳಾಗಿವೆ.
*ಅಲ್ಲಾಹು ತೌಫಿಖ್ ನೀಡಲಿ.*
صلى الله عليك يا رسول الله صلى الله عليه وسلم
امين يا رب العالمين
✒ ಅಬ್ದುಲ್ ನಾಸಿರ್ ಕಾವೂರು🍇
➖➖➖➖➖➖➖➖➖
Comments