ವಿಸ್ಮಯ ತುಂಬಿದ ಜೀವಜಗತ್ತು 👉 *41*
ಎರಡು ಕಣ್ಣನ್ನೂ ತೆರೆದು ನಿದ್ರಿಸುವ ಮೊಲ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಎರಡು ಗಿಡ್ಡನೆಯ* ಕೈಗಳು ಮತ್ತು ಎರಡು ಉದ್ದವಾದ ಕಾಲುಗಳಿರುವ ಬಹಳ ಚುರುಕಾದ ಮತ್ತು ಮುದ್ದಾದ ಒಂದು ಸಾಧು ಕೋಮಲ ಪ್ರಾಣಿಯಾಗಿದೆ ಮೊಲ.
▪ *ಲೈಂಗಿಕ* ಚಟುವಟಿಕೆಯಲ್ಲಿ ಹೀರೋ ಆಗಿರುವ ಇದು ಗರ್ಭಧಾರಣೆಯಾಗಿ ಮರಿ ಹಾಕುವ ಸಮಯವಾಗುವಾಗ ಮನುಷ್ಯನ ಉಪದ್ರವ ಇಲ್ಲದಿರಲು ಗುಡ್ಡಗಾಡುಗಳಲ್ಲಿ ಪೊದೆಗಳ ಎಡೆಯಲ್ಲಿ ಮಣ್ಣನ್ನು ಕೊರೆದು ಗುಂಡಿ ಮಾಡಿ ತನ್ನ ಮರಿಗಳ ರಕ್ಷಣೆಗೆ ಬೇಕಾಗಿ ಗೂಡು ತಯಾರು ಮಾಡುತ್ತದೆ.
▪ *ಗರ್ಭಧಾರಣೆಯಾಗಿ* ಬರೇ ಮೂವತ್ತು-ಮೂವತ್ತೈದು ದಿನಗಳಾಗುವಾಗ ಸುಮಾರು ಎರಡರಿಂದ ಐದರ ತನಕ ಮರಿ ಹಾಕುವ ಈ ಕೋಮಲ ಪ್ರಾಣಿಯು ತನ್ನ ಮರಿಯ ರಕ್ಷಣೆಗೆ ಬೇಕಾಗಿ ಎಂತಹಾ ಒರಟಾದ ಗೋಡೆಯನ್ನು ಬೇಕಾದರೂ ಕೊರೆದು ಬಿಲ ಮಾಡುತ್ತದೆ.
▪ *ಒಂದು* ವರ್ಷದಲ್ಲಿ ಎರಡು ಮೂರು ಸಲ ಮರಿಹಾಕುವ ಇದರ ಮರಿಗಳಿಗೆ ಹುಟ್ಟುವಾಗ ಶರೀರದಲ್ಲಿ ಯಾವುದೇ ರೋಮವಿರುವುದಿಲ್ಲ. ಬರೇ ಇಪ್ಪತ್ತು ದಿನಗಳ ತಾಯಿಯ ಶುಶ್ರೂಷೆಯ ಬಳಿಕ ಪುಟ್ಟ ಮರಿಗಳನ್ನು ಅದರ ಹಾದಿಗೆ ಬಿಡಲಾಗುತ್ತದೆ. ನಂತರ ಯಾವುದೇ ಹಾಲು, ಸೊಪ್ಪು ಅಥವಾ ಇತರ ಆಹಾರವನ್ನು ಪ್ರಾಥಮಿಕ ಪಾಠ ಶಾಲೆಯಾದ ತಾಯಿಯ ಮಡಿಲಿನಿಂದ ಇಪ್ಪತ್ತು ದಿನಗಳಲ್ಲಿ ಕಲಿತ ತರಬೇತಿಯಿಂದ ತಾನಾಗಿಯೇ ಹುಡುಕಿ ಹೋಗಬೇಕೇ ವಿನಾ ತಾಯಿಗೆ ಯಾವುದೇ ಜವಾಬ್ದಾರಿ ಅಥವಾ ಹೊಣೆ ಇರುವುದಿಲ್ಲ. ಗೆಡ್ಡೆಗಳು, ಸೊಪ್ಪು ತರಕಾರಿಗಳಾಗಿರುತ್ತದೆ ಇದರ ಇಷ್ಟ ಭೋಜನ.
▪ *ತನ್ನ* ಶತ್ರುವಿನ ಆಗಮನವನ್ನು ಎಷ್ಟೋ ದೂರದಿಂದ ತಿಳಿಯುವ ಬಹಳ ಸೂಕ್ಷ್ಮವಾದ ಶ್ರವಣ ಶಕ್ತಿಯನ್ನು ಅಲ್ಲಾಹನು ಇದಕ್ಕೆ ಕೊಟ್ಟಿದ್ದಾನೆ. ಈ ಪ್ರಾಣಿಯು ಇತರ ಪ್ರಾಣಿಗಳಂತೆ ನಡೆಯುವುದಿಲ್ಲ. ಅಂತೆಯೇ ಓಡುವುದೂ ಇಲ್ಲ. ನಡೆತ ಮತ್ತು ಓಟದ ಮಧ್ಯೆಯಿರುವ ಜಿಗಿತವಾಗಿರುತ್ತದೆ ಇದರ ನಡೆತ ಮತ್ತು ಓಟ. ಶತ್ರುವಿನ ಉಪದ್ರವದಿಂದ ಪಾರಾಗಲು ಓಡುವಾಗ ಇದು ಗಂಟೆಗೆ ಸುಮಾರು ಮೂವತ್ತರಿಂದ ಮೂವತ್ತೈದು ಕಿಲೋಮೀಟರ್ ತನಕ ವೇಗದಲ್ಲಿ ಓಡುತ್ತದೆ.
▪ *ಇದು* ನಿದ್ರಿಸುವಾಗ ತನ್ನ ಎರಡು ಕಣ್ಣುಗಳನ್ನು ತೆರೆದಿರುತ್ತದೆ. ಅಲ್ಲದೆ ಇದರ ಬೇರೊಂದು ವಿಶೇಷತೆಯೆಂದರೆ, ಯಾವತ್ತೂ ಇದು ಕಡಲ ಕಿನಾರೆಗೆ ಹೋಗುವುದಿಲ್ಲ. ಮಾತ್ರವಲ್ಲ ಕಡಲು ಪ್ರದೇಶದಲ್ಲಿ ಇದನ್ನು ಯಾವತ್ತೂ ಕಾಣ ಸಿಗಲಾರದು. ಯಾಕೆಂದರೆ, ಸಮುದ್ರವನ್ನು ಕಂಡ ಕೂಡಲೇ ಇದು ಸಾಯುತ್ತದೆ ಎಂದು ಹೇಳಲಾಗುತ್ತದೆ.
▪ *ಬೆಳಿಗ್ಗೆ* ನಿದ್ದೆಯಿಂದ ಎದ್ದ ಕೂಡಲೇ ಅಥವಾ ಬೆಳಿಗ್ಗೆ ಮನೆಯಿಂದ ದಿನದ ಕಸಬಿಗೆ ಹೊರಡುವಾಗ ಮೊಲವನ್ನು ಕಂಡರೆ ಅವನಿಗೆ ಆ ದಿನ ಸಂಪೂರ್ಣ ಅಪಶಕುನವಾಗಿರುತ್ತದೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ ಅಂತಹಾ ನಂಬಿಕೆ ಗ್ರಾಮವಾಸಿಗಳಲ್ಲಿ ಈಗಲೂ ಇದೆ. ಆದರೆ ಇಸ್ಲಾಮಿನಲ್ಲಿ ಅದಕ್ಕೆ ಯಾವುದೇ ಪುರಾವೆ ಇಲ್ಲ.
▪ *ಕಾಲಿನ* ಪಾದದ ಅಡಿಯಲ್ಲಿ ಮತ್ತು ಬಾಯಿಯೊಳಗೆ ದವಡೆಯಲ್ಲಿ ಕೂದಲು ಚಿಗುರುವ ಒಂದು ಅಸಾಧಾರಣ ಜೀವಿಯಾಗಿದೆ ಮೊಲ. ದನ, ಆಡುಗಳಂತೆ ಮೆಲುಕು ಹಾಕುತ್ತದೆ. ಅಂತೆಯೇ ಋತುಸ್ರಾವವಾಗುವ ಕೆಲವು ಜೀವಿಗಳಲ್ಲಿ ಒಂದಾಗಿದೆ. ಆ ಕಾರಣದಿಂದ ಇದನ್ನು ಪ್ರವಾದಿಯವರು ತಿನ್ನಲಿಲ್ಲ. ಸ್ವಹಾಬಿ *ಖುಝೈಮಃ* (ರ) ರವರು ಒಮ್ಮೆ ಈ ಬಗ್ಗೆ ಪ್ರವಾದಿಯವರಲ್ಲಿ ಕೇಳಿದಾಗ ಪ್ರವಾದಿ ಮುಹಮ್ಮದ್ (ಸ) ರು ಹೇಳಿದರು. *"ನಾನು ತಿನ್ನುವುದಿಲ್ಲ. ಆದರೆ ನಿಮಗೆ ನಿಷಿದ್ಧ ಮಾಡುವುದಿಲ್ಲ."* ಆಗ ಪುನಃ ಖುಝೈಮಃ (ರ) ಕೇಳಿದರು. *"ಅಲ್ಲ ಪ್ರವಾದಿಯವರೇ.., ನೀವು ತಿನ್ನದಿರಲು ಕಾರಣವೇನು...?"* ಆಗ ಪ್ರವಾದಿಯವರು *"ಏನಿಲ್ಲ ಅದು ಋತುಸ್ರಾವ ಆಗುವ ಮೃಗವಾಗಿದೆ"* ಎಂದು ಉತ್ತರ ಕೊಟ್ಟರು. ಈ ಹದೀಸನ್ನು ಇಮಾಮ್ ಬೈಹಖೀ ವರದಿ ಮಾಡಿದ್ದಾರೆ.
▪ *ಸಹಾಬೀಶ್ರೇಷ್ಠ* ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ. *"ಮಕ್ಕಾ ಪಟ್ಟಣದ ಹತ್ತಿರದ ಪ್ರದೇಶವಾದ ಲಹರಾನ್ ಎಂಬ ಜಾಗದಲ್ಲಿ ನಾವೊಮ್ಮೆ ನಡೆದು ಹೋಗುತ್ತಿದ್ದಾಗ ಗುಡ್ಡದಿಂದ ಒಂದು ಮೊಲವು ಜಿಗಿದು ಬಂತು. ಕೂಡಲೇ ನಾವದನ್ನು ಓಡಿಸಿ ಕಷ್ಟಪಟ್ಟು ಹಿಡಿದೆವು. ನಂತರ ಅದನ್ನು ಸ್ವಹಾಬಿಯಾದ ಅಬೂ ತಲ್‌ಹಾ (ರ) ರ ಹತ್ತಿರ ಕೊಂಡು ಹೋದೆವು. ಅವರದನ್ನು ದ್ಸಬಹ್ ಮಾಡಿ ಅದರ ತೊಡೆ ಮಾಂಸವನ್ನು ಪ್ರವಾದಿಯವರಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟರು. ಪ್ರವಾದಿಯವರು ಅದನ್ನು ಸ್ವೀಕರಿಸಿದರು."*
▪ *ಈ ಹದೀಸನ್ನು* ಇಮಾಮ್ ಬುಖಾರಿಯವರು ತನ್ನ ಪ್ರಸಿದ್ದ ಗ್ರಂಥವಾದ ಸಹೀಹ್ ಅಲ್ ಬುಖಾರಿಯಲ್ಲಿ ವರದಿ ಮಾಡಿದ್ದಾರೆ. ಮಾತ್ರವಲ್ಲ ಇಮಾಮ್ ಬುಖಾರಿಗಿರುವ ಇನ್ನೊಂದು ಗ್ರಂಥವಾದ *"ಅಲ್ ಹಿಬಾಃ"* ಎಂಬ ಗ್ರಂಥದಲ್ಲಿ "ಆ ಮಾಂಸವನ್ನು ಸ್ವೀಕರಿಸಿ ಅದನ್ನು ತಿಂದಿದ್ದರು" ಎಂದೂ ವರದಿ ಮಾಡಿದ್ದಾರೆ.
▪ *ಒಟ್ಟಿನಲ್ಲಿ* ಪ್ರವಾದಿಯವರು ಮೊಲದ ಮಾಂಸವನ್ನು ತಿಂದಿದ್ದರೂ ಅದು ಈವೊಂದು ಅಪೂರ್ವ ಸಂದರ್ಭದಲ್ಲದೆ ಬೇರೆ ತಿಂದ ಬಗ್ಗೆ ಯಾವುದೇ ವರದಿಯಿಲ್ಲ. ತಾನು ಒಮ್ಮೆಯೂ ತಿನ್ನದಿದ್ದರೆ ಅವರೊಂದಿಗಿದ್ದ ಅವರ ಅನುಯಾಯಿಗಳಾದ ಸಹಾಬಿಗಳು ಅದನ್ನು ತಿನ್ನುವುದು ನಿಷಿದ್ಧವೆಂದು (ಹರಾಮ್) ಭಾವಿಸಿ ತಿನ್ನಲಾರರು. ಆ ಕಾರಣಕ್ಕಾಗಿರಬಹುದು ತನಗೆ ತಿನ್ನಲು ಮನಸ್ಸಿಲ್ಲದ ಮೊಲದ ಮಾಂಸವನ್ನು ಉಡುಗೊರೆಯಾಗಿ ದೊರೆತಾಗ ತಿಂದದ್ದು ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ *ಮೊಲದ* ಮಾಂಸ ತೇವಾಂಶ ಕಡಿಮೆಯಿದ್ದು ಬಹಳ ಉಷ್ಣವಾಗಿರುತ್ತದೆ. ಆದ್ದರಿಂದ ಮೊಲ ಮಾಂಸ ತಿಂದರೆ ಬಾಯಾರಿಕೆ ಜಾಸ್ತಿಯಾಗುತ್ತದೆ. ರಾತ್ರಿ ನಿದ್ರೆ ಕಡಿಮೆಯಾಗುತ್ತದೆ. ಶಾರೀರಿಕ ಪ್ರಕೃತಿಯಲ್ಲಿ ಉಷ್ಣಾಂಶ ಜಾಸ್ತಿಯಿರುವವರಿಗೆ ತಿಂದರೆ ಪಿತ್ತ ಜಾಸ್ತಿಯಾಗುತ್ತದೆ. ಮನೆಯಲ್ಲಿ ಅಥವಾ ಫಾಮಿನಲ್ಲಿ ಸಾಕಣೆ ಮಾಡುವ ಮೊಲದ ಮಾಂಸಕ್ಕಿಂತ ಗುಡ್ಡಗಾಡಿನ ಮೊಲದ ಮಾಂಸ ಪೌಷ್ಟಿಕವೂ ಬಹಳ ರುಚಿಕರವೂ ಆಗಿರುತ್ತದೆ.
▪ *ವಿಷ* ಕಡಿದವರು ಇದರ ರೆನೆಟ್‌ನ‌್ನು (Abomasum) (ಕೆಲವು ಪ್ರಾಣಿಗಳ ಜಠರದ ಪೊರೆಯ ಒಂದು ಭಾಗ) ಸುರ್ಕದೊಂದಿಗೆ ಮಿಶ್ರಣ ಮಾಡಿ ಕುಡಿದರೆ ಬಹಳ ಫಲ ಕಾಣುತ್ತದೆ. ಮೂರರ ಚಳಿಜ್ವರ ಬರುವವರು ಇದನ್ನು ಕುಡಿದರೆ ಜ್ವರ ಬೆಟ್ಟ ಹತ್ತುತ್ತದೆ. ಅಂತೆಯೇ ಹೆರಿಗೆ ಹತ್ತಿರವಾದವರಿಗೆ ಹೆರಿಗೆ ನೋವು ಕಡಿಮೆಯಾಗಲು ಇದನ್ನು ಕುಡಿಯುವುದು ಬಹಳ ಒಳ್ಳೆಯದು.
▪ *ರಾತ್ರಿ* ಚಾಪೆಯಲ್ಲಿ ಮೂತ್ರಶಂಕೆ ಮಾಡುವ ಅಭ್ಯಾಸವಿರುವವರು ಮೊಲ ಮಾಂಸವನ್ನು ಕೆಲವು ದಿನಗಳ ಕಾಲ ತಿಂದರೆ ಆ ಖಾಯಿಲೆಯು ತಾನಾಗಿಯೇ ಮಾಯವಾಗುತ್ತದೆ.
▪ *ಯಾವುದಾದರು* ಮಾರಕ ಖಾಯಿಲೆಯ ಕಾರಣ ಪಾರ್ಶ್ವಫಲ ಉಂಟಾಗಿ (ಸೈಡ್ ಎಫೆಕ್ಟ್) ಶರೀರ ಕಂಪಿಸುವ ತೊಂದರೆ ಇರುವುದಾದರೆ ಮೊಲದ ಮೆದುಳನ್ನು ಸುಟ್ಟು ತಿಂದರೆ ರೋಗ ಗುಣವಾಗುತ್ತದೆ.
▪ *ಚರ್ಮದಲ್ಲಿ* ಕಾಣಲ್ಪಡುವ ಕಪ್ಪು ಮಚ್ಚೆ, ಕಲೆ ಮತ್ತು ಇತರ ಎಲ್ಲಾ ಚರ್ಮ ಸಂಬಂಧವಾದ ಖಾಯಿಲೆಗಳಿಂದ ಬರುವ ಗುರುತುಗಳಿಗೆ ಇದರ ರಕ್ತವನ್ನು ಕೆಲವು ದಿನಗಳ ಕಾಲ ಲೇಪಿಸಿದರೆ ಅದು ಸಂಪೂರ್ಣ ಮಾಯವಾಗುತ್ತದೆ.
▪ *ಹೆಣ್ಣೊಬ್ಬಳು* ಮೊಲದ ಬಿಸಿ ರಕ್ತವನ್ನು ಕುಡಿದರೆ ಸುಬ್‌ಹಾನಲ್ಲಾಹ್! ನಂತರ ಅವಳು ಎಂದೆಂದಿಗೂ ಗರ್ಭಿಣಿ ಆಗಳು.
▪ *ಸಣ್ಣ ಮಕ್ಕಳಿಗೆ* ಹಲ್ಲು ಚಿಗುರುವುದು ತಡವಾದರೆ ಮೊಲದ ಮಿದುಳನ್ನು ಜಜ್ಜಿ ಹಲ್ಲು ಬರುವ ಜಾಗಕ್ಕೆ ಸವರಿದರೆ ಹಲ್ಲು ಚಿಗುರಲು ಶುರುವಾಗುತ್ತದೆ.
▪ *ಒಂದು* ಕೋಣೆಯಲ್ಲಿ ಮೊಲದ ಪಿಟ್ಟೆಯನ್ನು (ಸೆಗಣಿ) ಸುಟ್ಟಾಗ ಅದರಿಂದ ಬರುವ ಹೊಗೆಯನ್ನು ಒಬ್ಬನು ಸೇದಿದರೆ ಅವನು ಅಲ್ಲಿಂದ ದೂರ ಸರಿಯುವ ತನಕ ಅವನಿಂದ ನಿಯಂತ್ರಣವಿಲ್ಲದೆ ನಿರಂತರ ಕೆಳವಾಯು (ಹೂಸು) ಹೋಗುತ್ತಾ ಇರುತ್ತದೆ. ಅಂತೆಯೇ ಅದರ ಪಿಟ್ಟೆಯನ್ನು ಶರೀರ ಚರ್ಮದಲ್ಲಿ ಕಾಣಲ್ಪಡುವ ಮಚ್ಚೆ, ಕಪ್ಪು ಕಲೆ ಇತ್ಯಾದಿಗಳಿಗೆ ಕೆಲವು ಬಾರಿ ಲೇಪಿಸಿದರೆ ಅದು ಸಂಪೂರ್ಣವಾಗಿ ಮಾಯವಾಗುತ್ತದೆ.
▪ *ಮೊಲದ* ವೃಷಣವನ್ನು ಜಜ್ಜಿ ವಿಷ ಕಡಿದಲ್ಲಿಗೆ ಸವರಿದರೆ ವಿಷ ಸಂಪೂರ್ಣವಾಗಿ ನಿಯಂತ್ರಣವಾಗುತ್ತದೆ. ಅಂತೆಯೇ ಇದರ ಪಿತ್ತಕೋಶವನ್ನು ಜಜ್ಜಿ ತುಪ್ಪದೊಂದಿಗೆ ಮಿಶ್ರಣ ಮಾಡಿ ಬೊಕ್ಕೆ, ಹುಣ್ಣುಗಳ ಮೇಲೆ ಸವರಿದರೆ ಅದು ಸಂಪೂರ್ಣವಾಗಿ ಒಣಗುತ್ತದೆ. ಅಂತೆಯೇ ವಿಷ ಕಡಿದಲ್ಲಿಗೆ ಇದರ ಪಿತ್ತಕೋಶವನ್ನು ಜಜ್ಜಿ ಸವರಿದರೂ ಒಳ್ಳೆಯ ಫಲ ಕಾಣುತ್ತದೆ. ನಿಮಿಷದಲ್ಲೇ ವಿಷವು ನಿಯಂತ್ರಣವಾಗುತ್ತದೆ.
▪ *ಕಾಲಿಗೆ* ಅಥವಾ ಶರೀರದ ಇತರ ಯಾವುದಾದರು ಭಾಗಕ್ಕೆ ಮುಳ್ಳು, ಮೊಳೆ, ಲೋಹದ ತುಂಡು ಇತ್ಯಾದಿಗಳು ಹೊಕ್ಕಿ ಶರೀರದಿಂದ ಹೊರ ತೆಗೆಯಲಾಗದ ಅವಸ್ಥೆಯಲ್ಲಿ ಇರುವುದಾದರೆ ಆ ಜಾಗಕ್ಕೆ ಮೊಲದ ರೆನೆಟ್ ಅನ್ನು (Abomasum) ಕೆಂಪು ದಾಸವಾಳದೊಂದಿಗೆ ಮಿಶ್ರಣ ಮಾಡಿ ಜಜ್ಜಿ ಲೇಪ ಮಾಡಿದರೆ ಅದು ಹೊರ ತಾನಾಗಿಯೇ ಬರುತ್ತದೆ. ಯಾವುದೇ ಸರ್ಜರಿಯ ಅಗತ್ಯವಿಲ್ಲ.
▪ *ಹೆಣ್ಣೊಬ್ಬಳು* ಗರ್ಭಧಾರಣೆಯ ಪ್ರಾರಂಭದಲ್ಲಿ ಗಂಡು ಮೊಲದ ರೆನೆಟ್‌ನ್ನು ಹಸಿಯಾಗಿ ತಿಂದರೆ ಅವಳಿಗೆ ಹುಟ್ಟುವ ಮಗು ಗಂಡಾಗುತ್ತದೆ. ಹೆಣ್ಣು ಮೊಲದ್ದನ್ನು ತಿಂದರೆ ಮಗು ಹೆಣ್ಣಾಗುತ್ತದೆ.
▪ *ಗರ್ಭಿಣಿಯಾಗದ* ಹೆಣ್ಣೊಬ್ಬಳು ಮೊಲದ ಮೆದುಳನ್ನು ಹಸಿಯಾಗಿ ತಿಂದು ಆ ದಿನವೇ ತನ್ನ ಪತಿಯಾಗಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟರೆ ಅಲ್ಲಾಹುವಿನ ವಿಧಿಯಂತೆ ಅವಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡುತ್ತಾಳೆ.
▪ *ಹಲ್ಲು ನೋವು* ಇರುವವನು ಮೊಲದ ಹಲ್ಲನ್ನು ತನ್ನೊಂದಿಗೆ ಜೇಬಿನಲ್ಲಿ ಅಥವಾ ಶರೀರದ ಇತರ ಯಾವುದಾದರೊಂದು ಭಾಗದಲ್ಲಿ ಇಟ್ಟುಕೊಂಡರೆ ಅವನ ಹಲ್ಲುನೋವು ಬೆಟ್ಟ ಹತ್ತುತ್ತದೆ. ಅಂತೆಯೇ ಒಬ್ಬನು ಮೊಲದ ಕಾಲಿನ ಹಿಮ್ಮಡದ (ಮಡಂಬ್) ಎಲುಬನ್ನು ತನ್ನೊಂದಿಗೆ ಇಟ್ಟುಕೊಂಡರೆ ಅವನು ಯಾರ ಕಣ್ಣೇರಿಗೆ ಅಂತೆಯೇ ಸಿಹ್‌ರಿಗೆ (ಮಾಟ ಮಂತ್ರ) ಬಲಿಯಾಗಲಾರ. ಅದು ಅವನ ಕೈಯಲ್ಲಿ ಇರುವ ತನಕ ಯಾವೊಬ್ಬನಿಗೂ ಅವನನ್ನು ಸಿಹ್‌ರ್ ಮಾಡಿ ತೊಂದರೆ ಮಾಡಲು ಖಂಡಿತಾ ಸಾಧ್ಯವಿಲ್ಲ. ಮಾತ್ರವಲ್ಲ ಜಿನ್ನ್, ಶೈತಾನ್, ಪಿಶಾಚಿಗಳು ಅವನ ಗುಮಾನಿಗೆ ಬರಲಾರರು.
▪ *ಒಬ್ಬನಿಗೆ* ಮೊಲದ ಮಾಂಸ ಬೇಯಿಸಿ ತಿಂದ ಕನಸು ಬಿದ್ದರೆ ಅವನು ತಿಳಿಯದ ಭಾಗದಿಂದ ಅವನನ್ನು ಐಶ್ವರ್ಯ ಮತ್ತು ಸಂಪತ್ತು ಹುಡುಕಿ ಬರುತ್ತದೆ ಎಂಬುದರ ನಿಶಾನೆಯಾಗಿದೆ.
ಸಂಗ್ರಹ ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಮತ್ತು ತತ್ವಜ್ಞಾನಿ ಜಾಹಿಳ್‌ರ *ಕಿತಾಬುಲ್ ಹಯವಾನ್* ಎಂಬ ಮೂರು ಗ್ರಂಥಗಳು.

Comments