ಅಅ್'ಲಾ ಹಝ್ರತ್ ಇಮಾಮೇ ಅಹ್ಲೇ ಸುನ್ನತ್ ಇಮಾಮೇ ಇಷ್ಖೋ ಮುಹಬ್ಬತ್ ಶಾಹ್ ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ
ಅಅ್'ಲಾ ಹಝ್ರತ್ ಇಮಾಮೇ ಅಹ್ಲೇ ಸುನ್ನತ್ ಇಮಾಮೇ ಇಷ್ಖೋ ಮುಹಬ್ಬತ್ ಶಾಹ್ ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ
◻▪◻▪◻▪◽▪◻▪◻
✒ ಮುಹಮ್ಮದ್ ಹುಸೈನ್ ರಝಾ.
_*بسم اللّٰہ الرحمٰن الرحیم*_
*_اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ_*
💢 *ಆಲಾ ಹಝ್ರತ್ رضى الله تعالى عنه ರವರ ಜೀವನದ ಕೆಲವು ಪ್ರಮುಖ ಘಟನೆಗಳು.*
★ *1272 ಹಿಜರಿ ಶವ್ವಾಲ್ 10 ಈಸವೀ 1856 ಜೂನ್14 ಶನಿವಾರ ಸಯ್ಯಿದೀ ಆಲಾ ಹಝ್ರತ್ رضى الله تعالى عنه ರವರ ಜನನ.*
★ 1276 ಹಿ ರಬೀಉಲ್ ಅವ್ವಲ್ 1860 ಈ. *4 ವರ್ಷ ಪ್ರಾಯದಲ್ಲಿ ಸಂಪೂರ್ಣ ಖುರ್'ಆನ್ ಷರೀಫ್ ಕಲಿತರು.*
★ ಮತ್ತು *ಅದೇ ಪ್ರಾಯದಲ್ಲಿ ಅರಬಿ ಭಾಷೆಯಲ್ಲಿ ಮಾತನಾಡಿದರು.*
★ 1278 ಹಿ ರಬೀಉಲ್ ಅವ್ವಲ್ 1861ಈ. *6 ವರ್ಷ ಪ್ರಾಯದಲ್ಲಿ ಮೊದಲ ಪ್ರಭಾಷಣ.*
★ 1279 ಹಿ 1862 ಈ. *7 ವರ್ಷ ಪ್ರಾಯದಲ್ಲಿ ರಮದಾನ್ ಮಾಸದಲ್ಲಿ ಉಪವಾಸ ಆರಂಭಿಸಿದರು.*
★ 1280 ಹಿ 1863 ಈ. 8 ವರ್ಷ ಪ್ರಾಯದಲ್ಲಿ ಆಸ್ತಿಗೆ ಸಂಬಂಧಪಟ್ಟ ಪ್ರಶ್ನೆಗೆ ಆಶ್ಚರ್ಯಕರ ಉತ್ತರವನ್ನು ಬರೆದರು.
★1285 ಹಿ 1868 ಈ. *ಮೊದಲ ಅರಬಿ ಗ್ರಂಥ ರಚನೆ.*
★ 1286 ಹಿ 1869 ಈ. *ಶಾಬಾನ್ 13 ವರ್ಷ 4 ತಿಂಗಳು 10 ದಿನ ಪ್ರಾಯದಲ್ಲಿ ಸನದ್ ಪಡೆದರು.*
★ಮತ್ತು ಅದೇ ವರ್ಷ *ಫತ್ವಾ ನೀಡಲು ಚಾಲನೆ.*
★ ಹಾಗೂ ಅದೇ ವರ್ಷ *ದರ್ಸ್ ಪ್ರಬೋಧನೆಗೆ ಚಾಲನೆ.*
★ 1291ಹಿ 1874 ಈ. 19 ವರ್ಷ ಪ್ರಾಯದಲ್ಲಿ *ವಿವಾಹ ಮತ್ತು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ.*
★ 1292 ರಬೀಉಲ್ ಅವ್ವಲ್ 1875 ಈ. ಮೊದಲ ಮಗು *ಹುಜ್ಜತುಲ್ ಇಸ್ಲಾಂ ಮುಹಮ್ಮದ್ ಹಾಮಿದ್ ರಝಾ ಖಾನ್ رحمة الله عليه* ಜನನ.
★ 1294 ಹಿ ಜುಮಾದಿಲ್ ಅವ್ವಲ್ 1877 ಈ. 22 ವರ್ಷ ಪ್ರಾಯದಲ್ಲಿ *ಮಾರ್ಹರಾ ಶರೀಫಿನಲ್ಲಿ ಸಯ್ಯಿದ್ ಆಲೇ ರಸೂಲ್ رضى الله عنه ರವರಿಂದ ಬೈಅತ್ ಹಾಗೂ ಎಲ್ಲಾ ತ್ವರೀಖತ್ ನ ಖಿಲಾಫತ್ ಹಾಗೂ ಇಜಾಝತ್ ದೊರೆಯಿತು.*
★ಮತ್ತು ಅದೇ ವರ್ಷ *ಬೈಅತ್'ಗೆ ಚಾಲನೆ.*
★ ಮತ್ತು ಅದೇ ವರ್ಷ *ಮೊದಲ ಉರ್ದು ಗ್ರಂಥ ರಚನೆ.*
★ 1295 ಹಿ 1878 ಈ. 23 ವರ್ಷ *ಪ್ರಾಯದಲ್ಲಿ ಮೊದಲ ಹಜ್ಜ್ ಯಾತ್ರೆ.* ಹಾಗೂ ಮಕ್ಕಾದ ಹಿರಿಯ ವಿದ್ವಾಂಸರಾದ *ಶೈಖ್ ಅಹ್ಮದ್ ಬಿನ್ ಝೈನ್ ಮಕ್ಕೀ, ಶೈಖ್ ಅಬ್ದುರ್ರಹ್ಮಾನ್ ಸಿರಾಜ್, ಶೈಖ್ ಹುಸೈನ್ ಬಿನ್ ಸ್ವಾಲಿಹ್ ಜಮಲುಲ್ಲೈಲ್ ಮಕ್ಕೀ رحمۃ اللّٰہ تعالٰی علیہم اجمعین* ಅವರುಗಳಿಂದ *ಹದೀಸ್ ಗೆ ಇಜಾಝತ್ ಲಭಿಸಿತು.*
★ 1299 ಹಿ 1882 ಈ. 27 ವರ್ಷ ಪ್ರಾಯದಲ್ಲಿ *ಮೊದಲ ಫಾರ್ಸಿ ಗ್ರಂಥ ರಚನೆ.*
★1303 ಹಿ 1885 ಈ. 31 ವರ್ಷ ಪ್ರಾಯದಲ್ಲಿ ಪ್ರಸಿದ್ಧ ಉರ್ದು ಕವಿತೆ *ಖಸೀದಾಯೇ ಮಿ'ರಾಜಿಯ್ಯಾ* ರಚನೆ.
★1310 ಹಿ ದಿಲ್'ಹಿಜ್ಜ 22 1892 ಈ. ಎರಡನೇ ಪುತ್ರ *ಮುಫ್ಟಿಯೇ ಆಝಮೇ ಹಿಂದ್ ಮುಹಮ್ಮದ್ ಮುಸ್ತ್ವಫಾ ರಝಾ ಖಾನ್* رحمۃ اللّٰہ علیہ ಜನನ.
★1311ಹಿ 1897 ಈ. ನದ್ವತುಲ್ ಉಲಮಾ ಕಾನ್ಪುರ್ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿ.
★ 1315 ಹಿ. 1897 ಈ. ನದ್ವತುಲ್ ಉಲಮಾ ಚಳುವಳಿಯಿಂದ ಬೇರ್ಪಟ್ಟರು.
★ 1317 ಹಿ 1899 ಈ. 45 ವರ್ಷ ಪ್ರಾಯದಲ್ಲಿ *ಫತಾವಲ್ ಹರಮೈನ್* ಗ್ರಂಥ ರಚನೆ.
★1318 ಹಿ 1900 ಈ. 46 ವರ್ಷ ಪ್ರಾಯದಲ್ಲಿ *ಆಮಾಲುಲ್ ಅಬ್ರಾರ್ ವ ಆಲಾಮುಲ್ ಅಶ್ರಾರ್* ಅರಬಿ ಕವಿತೆ ರಚನೆ.
★ಮತ್ತು ನದ್ವತುಲ್ ಉಲಮಾವನ್ನು ವಿರೋಧಿಸಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದು.
★ ಹಾಗೂ *ಮುಜದ್ದಿದೇ ಮಾಇತೇ ಹಾಝಿರಾ* ಎಂಬ ಬಿರುದು ನಾಮವನ್ನು ಪಡೆದರು.
★ 1322 ಹಿ. 1904 ಈ. 50 ವರ್ಷ ಪ್ರಾಯದಲ್ಲಿ ಬರೇಲಿ ಶರೀಫಿನಲ್ಲಿ *ಮಂಝರುಲ್ ಇಸ್ಲಾಂ* ಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ.
★ 1323 ಹಿ ದಿಲ್ ಹಿಜ್ಜ 1905 ಈ. 51 ವರ್ಷ ಪ್ರಾಯದಲ್ಲಿ *ಎರಡನೇ ಹಜ್ಜ್ ಯಾತ್ರೆ.*
★ ಅದೇ ಸಂಧರ್ಭದಲ್ಲಿ ಮಕ್ಕಾದಲ್ಲಿ *ಪ್ರವಾದಿ صلى الله عليه وسلم ರ ಇಲ್ಮ್ ಗೈಬ್ ಗೆ ಸಭಂದಿಸಿದ ವಿಶ್ವ ಪ್ರಸಿದ್ದವಾದ* ~*ಅದ್ದೌಲತುಲ್ ಮಕ್ಕೀಯ್ಯಾ ಬಿಲ್ ಮಾದ್ದತಿಲ್ ಗೈಬೀಯ್ಯಾ*~ *ಎಂಬ ಗ್ರಂಥವನ್ನು ಯಾವುದೇ ಗ್ರಂಥಗಳನ್ನು ಅವಲಂಬಿಸದೆ ಸ್ವಜ್ಞಾನದಿಂದ ಬರೀ ಎಂಟೂವರೆ ಗಂಟೆಗಳಲ್ಲಿ ಬರೆದರು.*
★ 1324 ಹಿ 1906 ಈ. 52 ವರ್ಷ ಪ್ರಾಯದಲ್ಲಿ *ಮಕ್ಕಾ ಹಾಗೂ ಮದೀನಾದ ಉಲಮಾಗಳಿಗೆ ಸನದೇ ಖಿಲಾಫತ್ ನೀಡಿದರು.*
★ ಅದೇ ವರ್ಷ ಕರೆನ್ಸಿ ನೋಟ್'ಗೆ ಸಂಬಂಧಿಸಿ ಮಕ್ಕಾದಲ್ಲಿ *ಕಿಫ್ಲುಲ್ ಫಖೀಹಿಲ್ ಫಾಹಿಂ* ಎಂಬ ಗ್ರಂಥವನ್ನು ರಚಿಸಿದರು.
★ ಹಾಗೂ ಅದೇ ವರ್ಷ ರಬೀಉಲ್ ಅವ್ವಲ್ ತಿಂಗಳಲ್ಲಿ *ಖಸೀದಾಯೇ ಹುಝೂರೇ ಜಾನೇ ನೂರ್* ಎಂಬ ಕವಿತೆಯನ್ನು ಬರೆದರು.
★ ಹಾಗೂ *ಎಚ್ಚರದಲ್ಲಿಯೇ ಮುಸ್ತ್ವಫಾ ಜಾನೇ ರಹ್ಮತ್ صلى الله عليه وسلم ರ ದರ್ಶನ ಭಾಗ್ಯದಿಂದ ಅನುಗ್ರಹಿಸಲ್ಪಟ್ಟರು.*
★ ಮತ್ತು *ಹುಸ್ಸಾಮುಲ್ ಹರಮೈನ್* ಗ್ರಂಥ ರಚನೆ.
★ 1330 ಹಿ 1912 ಈ. 58 ವರ್ಷ ಪ್ರಾಯದಲ್ಲಿ ಖುರ್'ಆನ್ ಶರೀಫಿನ ಉರ್ದು ಅರ್ಥ ವ್ಯಾಖ್ಯಾನ ಗ್ರಂಥ *ಕಂಝುಲ್ ಈಮಾನ್* ರಚನೆ.
★ 1330 ಹಿ ರಬೀಉಲ್ ಅವ್ವಲ್ 1912 ಈ. ಶೈಖ್ ಮೂಸಾ ಶಾಮಿ ಅಲ್ ಅಝ್ಹರಿ رحمة الله عليه ಯವರಿಂದ *ಇಮಾಮುಲ್ ಅಇಮ್ಮ* ಎಂಬ ಬಿರುದು ನಾಮ ಲಭಿಸಿತು.
★ 1330 ಹಿ 1912 ಹಾಫಿಳ್ ಸಯ್ಯಿದ್ ಇಸ್ಮಾಯೀಲ್ ಖಲೀಲುಲ್ ಮಕ್ಕೀ رحمة الله عليه ರವರಿಂದ *ಖಾತಿಮುಲ್ ಫುಖಹಾಯಿ ವಲ್ ಮುಹದ್ದಿಸೀನ್* ಎಂಬ ಬಿರುದು ನಾಮ ಲಭಿಸಿತು.
★1331 ಹಿ 1913 ಈ. ಅಲಿಘಡ್ ಮುಸ್ಲಿಂ ಯೂನಿವರ್ಸಿಟಿಯ ಕುಲಪತಿಯಾಗಿದ್ದ ಡಾ. ಸರ್ ಝಿಯಾಉದ್ದೀನ್ ರವರಿಗೆ ತಲೆನೋವಾಗಿದ್ದ *ಗಣಿತ ಸಮಸ್ಯೆಯನ್ನು ಬಗೆಹರಿಸಿದರು.*
★ 1334 ಹಿ 1916 ಈ. *ಬ್ರಿಟಿಷ್ ನ್ಯಾಯಾಲಯಕ್ಕೆ ಹಾಜರಾಗಳು ನಿರಾಕರಣೆ.*
★1336 ಹಿ 1917 ಈ. 64 ವರ್ಷ ಪ್ರಾಯದಲ್ಲಿ *ಜಮಾಅತ್ ರಝಾಯೇ ಮುಸ್ತಫಾ* ಕ್ಕೆ ಶಂಕುಸ್ಥಾಪನೆ.
★ 1337 ಹಿ 1918 ಈ. 65 ವರ್ಷ ಪ್ರಾಯದಲ್ಲಿ ಖಬರ್'ಗೆ ಸುಜೂದ್ ಮಾಡುವುದನ್ನು ವಿರೋಧಿಸಿ *ಅಝ್ಝುಬ್ದತುಝ್ಝುಕಿಯ್ಯ ಲಿತಹ್ರೀಮಿ ಸುಜೂದಿತ್ತಹೀಯ್ಯ* ಎಂಬ ಗ್ರಂಥವನ್ನು ರಚಿಸಿದರು.
★1338 ಹಿ 1920 ಈ. 66 ವರ್ಷ ಪ್ರಾಯದಲ್ಲಿ ಸೂರ್ಯನ ಸನಿಹ ನಕ್ಷತ್ರಗಳು ಸಂಗಮಿಸುವುದರ ಪರಿಣಾಮ ಭೂಪ್ರಳಯ ಉಂಟಾಗುವುದೆಂಬ ವಿಜ್ಞಾನಿಯೊಬ್ಬನ ಹೇಳಿಕೆಯನ್ನು ವಿರೋಧಿಸಿ *ಫೌಝೇ ಮುಬೀನ್ ದರ್ ರದ್ದೇ ಹರ್ಕತ್ ಝಮೀನ್* ಎಂಬ ಗ್ರಂಥವನ್ನು ಈಚಿಸಿದರು.
★ ಮತ್ತು ಐಸಾಕ್ ನ್ಯೂಟನ್ ಮತ್ತು ಐನಸ್ಟೈನ್ ಗಳ ದೃಷ್ಟಿಕೋನದ ವಿರುದ್ಧ ಸತ್ಯಶೋಧನೆ.
★ 1339 ಹಿ 1921ಈ. 67 ವರ್ಷ ಪ್ರಾಯದಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸುವುದು ಮತ್ತು ಅವರೊಂದಿಗೆ *ಪಕ್ಷಪಾತ ಧೋರಣೆ ಆರೋಪವನ್ನು ತಳ್ಳಿ ಹಾಕಿ ಐತಿಹಾಸಿಕ ಭಾಷಣ.*
★1340 ಹಿ ಸಫರ್ 1921 ಈ. 68 ವರ್ಷ ಪ್ರಾಯದಲ್ಲಿ *ಕೊನೆಯ ವಸೀಯತ್ ನಾಮೆ* ಯನ್ನು ಬರೆಸಿದರು.
ಬಳಿಕ ಅದೇ ವರ್ಷ (ವಫಾತ್)
★ *1340 ಹಿಜರಿ ಸಫರ್ 25 1921ಈಸವಿ ಆಕ್ಟೊಬರ್ 28 ರಂದು ಸರ್ವ ರೀತಿಯ ಜ್ಞಾನವನ್ನು ತುಂಬಿಕೊಂಡಿದ್ದ ಆ ಮಹಾನ್ ವಿದ್ವಾಂಸ ಗುರು ಜ್ಞಾನ ಸಾಗರ ಮಹೋನ್ನತ ಗುರು ಅನುಗ್ರಹೀತವಾದ ತನ್ನ 68 ವರ್ಷಗಳ ಪರಿಶುದ್ಧ ಜೀವನವನ್ನು ಅಲ್ಲಾಹ್ ಮತ್ತು ರಸೂಲ್ ರ ತೃಪ್ತಿಯೊಂದಿಗೆ ನಿಷ್ಕಳಂಕವಾದ ಧರ್ಮಸೇವೆಯಲ್ಲಿ ವ್ಯಯಿಸಿ ಈ ನಶ್ವರ ಲೋಕಕ್ಕೆ ಕೊನೆಯ ವಿಧಾಯವನ್ನು ಹೇಳುತ್ತಾ ಅನಶ್ವರ ಲೋಕಕ್ಕೆ ಪಯಣವನ್ನು ಮುಂದುವರಿಸಿದರು.*
*إِنَّا لِلَّهِ وَإِنَّا إِلَيْهِ رَاجِعُونَ*
_*صَلُّوا عَلَى الْحَبِيب ...*_
_*صَلَّى اللهُ تعالى عَلَى مُحَمَّدٍﷺ*_
Comments