Skip to main content

ಶಿಹಾಬುದ್ದೀನ್" ಅಹ್ಮದ್ ಕೋಯ ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.

ಶಿಹಾಬುದ್ದೀನ್" ಅಹ್ಮದ್ ಕೋಯ ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​

✍ ಗಫೂರ್ ಬಾಯಾರ್

ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ವಿದ್ವಾಂಸಗಳಲ್ಲಿ ಒಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.

ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.

ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.

1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ವಿದ್ವಾಂಸರ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.

ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.

ಸುನ್ನೀ ಉಲಮಾಗಳನ್ನು ಕಂಡಳಾಗದ ನೂತನವಾದಿಗಳು ಫರೇೂಕ್ ಎಂಬ ಸ್ಥಳದಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.

ಮಹಾನರಾದ 'ಶಿಹಾಬುದ್ದೀನ್' ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ)ರವರು ನೂರಕ್ಕೂ ಅಧಿಕ ಇಸ್ಲಾಮಿಕ್ ಗ್ರಂಥಗಳನ್ನು ರಚಿಸಿದ್ದು ಅವುಗಳ ಪೈಕಿ ನಲವತ್ತು ಗ್ರಂಥಗಳು ಮಾತ್ರ ಪ್ರಕಾಶನಗೊಂಡಿದೆ. ಧಾರ್ಮಿಕ ರಂಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಾಲಿಯಾತ್ತಿ (ಖ.ಸಿ)ರವರ ಗ್ರಂಥಗಳಲ್ಲಿ ಎಲ್ಲ ರೀತಿಯ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳಿವೆ.

ಶಾಲಿಯಾತ್ತಿ (ರ) ವಿರಚಿತ ಮೌಲಿದುಗಳು, ಮರ್ಸಿಯ್ಯತ್ತುಗಳು, ಅಭಿನಂದನಾ ಕಾವ್ಯಗಳು, ಮಹಾನರ ಹಸ್ತಾಕ್ಷರಗಳನ್ನೊಳಗೊಂಡ ಪತ್ರಗಳು, ಕೃತಿಗಳು, ಸುರಿಯಾಣಿ, ಉರ್ದು ಭಾಷೆಗಳಲ್ಲಿರುವ ಅಪೂರ್ವ ಗ್ರಂಥಗಳು, ಪತ್ರಿಕೆಗಳು ಇತರ ಧರ್ಮಗಳ ವೇದ ಗ್ರಂಥಗಳು, ಎಂಜಿನಿಯರಿಂಗ್, ವೈದ್ಯಶಾಸ್ತ್ರ, ಖಗೊಳಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ಮತ್ತು ದೇಶ ವಿದೇಶಗಳ ಪುರಾತನ ಭೂಪಟಗಳು ಸೇರಿದಂತೆ ಸಾವಿರಾರು ಗ್ರಂಥಗಳನ್ನು ಶೇಖರಿಸಿ ವಿದ್ಯಾರ್ಥಿಗಳಿಗೂ ವಿಧ್ವಾಂಸರಿಗೂ ಸಂಶೇೂಧಕರಿಗೂ ಉಪಕಾರಪ್ರದವಾಗಲೆಂಬ ದೂರಾಲೇೂಚನೆಯಿಂದ ಮಹಾನರೇ ಕಲ್ಲಿಕೇೂಟೆ ಜಿಲ್ಲೆಯ "ಚಾಲಿಯಂ" ಎಂಬ ಸ್ಥಳದಲ್ಲಿ ಸ್ಥಾಪಿಸಿದ *ಅಝ್ಹರಿಯ್ಯ ಖುತ್ಬು ಖಾನೆ* ಎಂಬ ಗ್ರಂಥಾಲಯದಲ್ಲಿ ಗತ ಇತಿಹಾಸದ ವೈಭವವನ್ನು ಸಾರಿ ಹೇಳುತ್ತಿವೆ.

ನಾಲ್ಕು ಮದ್ಸ'ಹಬ್'ಗಳಲ್ಲೂ ಹಿಡಿತವಿದ್ದ ಮಹಾನರು ನಾಲ್ಕು ಮದ್ಸ್'ಹಬ್'ಗಳಲ್ಲೂ  ಫತ್ವಾ ನೀಡುತ್ತಿದ್ದರು.

*1964ರಲ್ಲಿ ತಬ್ಲಿಗ್ ಜಮಾಅತ್ತ್'ನಿಂದಾಗಿ ಸಮಸ್ಯೆಯೊಂದು ಎದುರಾದಾಗ ಮಹಾನರಾದ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ:ಸಿ) ರವರು ಸದರಿ ಸಮಸ್ಯೆಯನ್ನು ಪರಿಹರಿಸಲು ಶಾಲಿಯಾತ್ತಿ (ರ)ರವರು ತಮ್ಮ ಉರ್ದು ಕೃತಿಯೊಂದರಲ್ಲಿ ಸೂಚಿಸಿದ್ದ ಸಲಹೆಯೊಂದು ನಿರ್ಣಾಯಕ ಪಾತ್ರ ವಹಿಸಿತ್ತು*

ಮಹಾನರು ನಾಲ್ಕು ಮದ್ಸ್'ಹಬ್'ಗಳಿಗೂ ಸಂಬಂಧಿಸಿದಂತೆ ಹೊರಡಿಸಿದ್ದ ಸುಮಾರು 159ರಷ್ಟಿದ್ದ ಫತ್ವಾಗಳ ಸಂಗ್ರಹವಾದ *"ಅಲ್ ಫತಾವಲ್ ಅಝ್ಹರಿಯ್ಯ* ಎಂಬ ಗ್ರಂಥವನ್ನು "ಪಾಲಾಯಿ ಹಿದಾಯ" ಎಂಬ ಮುದ್ರಣಾಲಯ 1993ರಲ್ಲಿ ಹೊರ ತಂದಿದೆ.

ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಇಮಾಮ್ ಸಯ್ಯಿದ್ ಅಹ್ಮದ್ ರಝಾ ಖಾನ್ (ರ) ರವರ ಶಿಷ್ಯರಾಗಿದ್ದ ಮಹಾನರು ನಿಝಾಮಿಯ್ಯ ಸಿಲಬಸ್ ಅನ್ನು ಕೇರಳಕ್ಕೆ ಪರಿಚಯಿಸಿದರು.

ಮೌಲಾನಾ ಮುಫ್ತಿ ಮಹ್ಮೂದುಲ್ ಮುಫ್ತಿ (ರ) ಅಶ್ಶೈಖ್ ರಹ್ಮತ್ತಿಲ್ಲಾಹಿಲ್  ಖಾದಿರಿ ನಾಗೂರಿ (ರ) ಮತ್ತು ತಮ್ಮ ತಂದೆಯಾದ ಇಮಾಮುದ್ದೀನ್ ಅಲಿ ಮುಸ್ಲಿಯಾರರ ಮಾರ್ಗದರ್ಶದಲ್ಲಿ ಬೆಳೆದ ಶಾಲಿಯಾತ್ತಿ (ಖ.ಸಿ)ರವರು ಮಕ್ಕಾದ ಮುಫ್ತಿ ಶೈಖ್ ಮುಹಮ್ಮದ್ ಹಿಸ್ಬುಲ್ಲಾಹಿ ಇಬ್ನು ಶೈಖ್ ಸುಲೈಮಾನುಲ್ ಮಕ್ಕಿ (ರ)ರವರಿಂದ ಖಾದಿರಿಯ್ಯಾ ತ್ವರೀಖತ್'ನ ಅನುಮತಿ ಪಡೆದಿದ್ದರು.

*ಕೇರಳ ಮುಸ್ಲಿಂ ಜಮಾಅತ್ತ್'ನ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ. ಪಿ. ಉಸ್ತಾದರ ಸಹಯೇೂಗದೊಂದಿಗೆ ಇಂದು ದೇಶ ವಿದೇಶಗಳಲ್ಲಿಯೂ, ಸಾವಿರಾರು ಮಹಲ್ಲುಗಳಲ್ಲಿಯೂ ನಡೆಯುತ್ತಿರುವ 'ಮಹಲರತ್ತುಲ್ ಬದ್ರಿಯ್ಯ' ದ 'ಖಸ್ವಿದ'ಗಳು ಮರ್ಹೂಂ ಶಾಲಿಯಾತ್ತಿ (ರ) ರವರ ರಚನೆಯಾಗಿದೆ.*

ಹೀಗೆ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಮಹಾನರು  ತಮ್ಮ 72ನೇ ವಯಸ್ಸಿನಲ್ಲಿ ಅಂದರೆ 1954 ಸೆಪ್ಟಂಬರ್ 26ಕ್ಕೆ (ಹಿಜರಿ 1374 ಮುಹರಂ 27)ರಂದು ಇಹಲೋಕ ತ್ಯಜಿಸಿದರು.

ಶಾಲಿಯಾತ್ತಿ(ರ)ರವರೇ ಸ್ಥಾಪಿಸಿದ್ದ ಮಸೀದಿ ಹಾಗೂ ಖುತುಬು ಖಾನೆಯ ಸಮೀಪ ಅಂದರೆ ಬರೇಲ್ವಿಯ ಇಮಾಂ ರಝಾ ಖಾನ್ (ರ)ರವರ ಮಖಾಮಿನ ಗುಂಬಝನ್ನೇ ಹೇೂಲುವ ಮಖಾಮಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.

ಮಹಾನರ ಬರ್ಕತ್ತಿನಿಂದ ಈಮಾನ್, ಇಲ್ಮು ನೀಡಿ ನಮ್ಮೆಲ್ಲರನ್ನೂ ಕರುಣಾನಿಧಿಯಾದ ಅಲ್ಲಾಹನು ಅನುಗ್ರಹಿಸುವುದರೊಂದಿಗೆ ನಮ್ಮನ್ನಗಲಿದ ಎಲ್ಲರಿಗೂ ಮಗ್ಫಿರತ್ತ್, ಮರ್ಹಮತ್ತ್  ನೀಡಿ ಅನುಗ್ರಹಿಸಲಿ  ಆಮೀನ್..

ದಾರಿ: ಫರೊಖ್-ಚಾಲಿಯಂ. ಕಲ್ಲಿಕೋಟೆ ಜಿಲ್ಲೆ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...