Skip to main content

ತಾಳ

ತಾಳ
ನಿಷೇಧಿಸುವುದು #ಯಾವಾಗ?

ಮದುವೆ...ಅದೊಂದು ಸುಂದರವಾದ ಪವಿತ್ರವಾದ ದಿನ.ಈ ಕಾಲದ ಮದುವೆ ದಿನಗಳಲ್ಲಿ ಅನಾಚಾರಗಳೇ ಹೆಚ್ಚು ನಡೆಯುತ್ತಿದೆ.ಸಂಗೀತ ರಹಿತ ಹಾಡು ಹಾಗೆಯೇ ಸಂಗೀತದೊಂದಿಗೆ ನೃತ್ಯ ಕೂಡ ಕಾಣಬಹುದು.ಕೇವಲ ನಿಕಾಹ್ ನಡೆಯುವಾಗ ಮಾತ್ರ ಹಾಡಿಗೆ ವಿರಾಮ ಕೊಟ್ಟು ಉಳಿದ  ಇಪ್ಪತ್ತನಾಲಕ್ಕು ಗಂಟೆಯೂ ಹಾಡಿನಿಂದ ಸದ್ದುಹೊಡೆಯುತ್ತಿರುತ್ತುದೆ.ವಿವಿಧ ಬಗೆಯ ವರ್ಥ್ಯ ಭೋಜನಗಳು ಮತ್ತು ತಂಪು ಪಾನೀಯಗಳು.ಇದೆಲ್ಲವೂ ವರಧಕ್ಷಿಣೆಯ ಹಣಗಳಲ್ಲೇ ನಡೆಯುವುದು ಈ ಆಡಂಬರಗಳು.ಮದುವೆ ದಿನ ಹೇಗೋ ಅಂದು ಮುಗಿಯಿತು ಜೊತೆಗೆ ಆ ದಿನದ ರಾತ್ರಿಯಲ್ಲಿ ಈಗ ಹೊಸತೊಂದು ಪದ್ಧತಿ ಶುರುವಾಗಿಬಿಟ್ಟಿದೆ.ಅದರ ಹೆಸರೇ ಈ ಹರಾಮೀ #ತಾಳ.ಮದುಮಗನ ಜೊತೆ ಐದಾರು ಐಷಾರಾಮಿ ವಾಹನಗಳ ಜೊತೆ ಹೊರಟರು ಮದುಮಗಳ ಮನೆಗೆ.ಮನದ ತುಂಬಾ ನೋವಿದ್ದರು ಅಲ್ಪ ನಗುಮುಖದಿಂದ ಸ್ವೀಕರಿಸುತ್ತಾರೆ ಈ ಯುವಕರನ್ನು ಮದುಮಗಳ ಮನೆಯಯವರು.ಎತ್ತುಗಳಿಂತ ಕಡೆಯಾಗಿ ಹೆಣ್ಣಿನ ಮನೆಯೊಳಗೆ ನುಗ್ಗಿ ಶುರುಮಾಡಿಬಿಡುತ್ತಾರೆ ಬಾಯಿಗೆ ಬಂದ ಸಿನಿಮಾ ಹಾಡುಗಳನ್ನು ಉಗುಳಿ ಅಲ್ಲಿ ಹೂವಿನೊಂದಿಗೆ ಅಲಂಕರಿಸಲ್ಪಟ್ಟ ಕೋಣೆಯನ್ನು ಕೆಡಿಸಿ ಇನ್ನೇನೋ ಕಸರತ್ತುಗಳನ್ನು ಮಾಡಿ ಕೊನೆಗೆ ಹೊಟ್ಟೆ ತುಂಬಿಸೋಣವೆಂದು ಕೇಕೆ ಹೊಡೆಯುತ್ತಾ ಹೊರಬರುತ್ತಾರೆ.ಅಲ್ಲಿ ಅವರಿಗಾಗಿ ಮನಸ್ಸಿಲ್ಲದ ಮನಸ್ಸಲ್ಲಿ ನಾನಾ ಬಗೆಯ ತಿಂಡಿತಿನಿಸುಗಳು ರೆಡಿಮಾಡಿರುತ್ತಾರೆ.ಅದನ್ನೆಲ್ಲವನ್ನು ನುಂಗಿ ಕ್ಲೀನ್ ಸ್ವೀಪ್ ಮಾಡಿ ಅಲ್ಲಿಂದ ಬಾಯ್ ಬಾಯ್ ಹೇಳುತ್ತಾ ಹೊರಡಿಬಿಡುತ್ತಾರೆ.
#ಪ್ರಯೋಜನವೇನು #ಬಂತು?
ಹಲವು ಕನಸುಗಳೊಂದಿಗೆ ವಿವಾಹಗೊಂಡು ಆದ್ಯರಾತ್ರಿಯನ್ನು ಕೆಡಿಸಿ ಹೋದರಲ್ಲದೇ ಇತ್ತ ಮದುಮಗಳ ತಂದೆ ಕಣ್ಣೀರ ಸುರಿಸುತ್ತಾ ಟೇಬಲ್ ಶುಚಿಗೊಳಿಸುತ್ತಾ ಬರಿ ಹೊಟ್ಟೆಯಲ್ಲಿ ಮಳಗಿ ಬಿಡುತ್ತಾರೆ.ಕಾರಣ ಅವರು ಮಾಡಿದ ಆಹಾರಗಳನ್ನೆಲ್ಲವನ್ನು ಎತ್ತುಗಳು ತಿಂದು ತೇಗಿ ಹೊರಟಿದೆ..
#ಈ #ಹರಾಮೀ #ತಾಳ ಅದೆಲ್ಲೋ ದೂರದಲ್ಲಿತ್ತು, ಕಿವಿಗೆ ಮಾತ್ರ ಕೇಳಿಸುತ್ತಿತ್ತು,ಈಗ ಆ ಪದ್ಧತಿ ನಮ್ಮೂರಿಗು ಕಾಲಿಟ್ಟಿರುವುದು ತುಂಬಾ ಬೇಸರದ ಸಂಗತಿ.ನಮ್ಮಲಿ ಹಲವಾರು ಯುವಕರ ಸಂಘಟನೆಗಳಿವೆ,ಉತ್ತಮ ಕಾರ್ಯಗಳನ್ನು ಮಾಡುತ್ತಿದೆ.ಆದರೆ ಇಂತಹ ನೀಚ ಪದ್ಧತಿಯನ್ನು ಯಾಕೆ ನಮ್ಮಿಂದ ಕಿತ್ತೆಸೆಯಲು ಅಸಾಧ್ಯವಾಗಿದೆ?.ಮನಸ್ಸು ಮಾಡಿದರೆ ನಮ್ಮಿಂದ ಈ #ತಾಳ ವನ್ನು ಖಂಡಿತವಾಗಿ ಅಳಿಸಲು ಸಾಧ್ಯವಿದೆ.
ಚಿಂತಿಸಿ ಯುವಕರೇ ನಾವ್ಯಾಕೆ ಇನ್ನೊಬ್ಬರ ಕಣ್ಣಲ್ಲಿ ನೀರು ಸುರಿಸಬೇಕು.ನಾವು ಏನಿದ್ದರು ಇನ್ನೊಬ್ಬರ ಕಣ್ಣೀರನ್ನು ಒರೆಸಬೇಕೇ ಹೊರತು ಸುರಿಸಬಾರದು.. ಅಲ್ಲಾಹು ನಮ್ಮೆಲ್ಲಾ ಯುವಕರನ್ನು ಈ ಹರಾಮೀ ತಾಳದಿಂದ ಕಾಪಾಡಲಿ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...