ಮಾತಾಪಿತರಿಗಾಗಿ ಹೋರಾಡು
ಸ್ವಹಾಬೀ ಪ್ರಮುಖರಾದ ಅಬ್ದುಲ್ಲಾಹಿ ಬಿನು ಉಮರ್(ರ) ರವರಿಂದ ವರದಿ;
ಮಹಾತ್ಮರು ಹೇಳುತ್ತಾರೆ. "ವ್ಯಕ್ತಿಯೊಬ್ಬರು ಪ್ರವಾದಿವರ್ಯರಾದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳುತ್ತಾರೆ. "ಓ ಅಲ್ಲಾಹನ ರಸೂಲರೇ, ನಾನು ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧ ನಡೆಸಲು ತೆರಳಲೇ?!". ತಕ್ಷಣ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮರುಪ್ರಶ್ನೆ, "ನಿಮ್ಮ ಮಾತಾಪಿತರು ಈಗ ಬದುಕಿದ್ದಾರೆಯೇ?". ಉತ್ತರ, "ಹೌದು,ಅವರು ಜೀವಂತವಿದ್ದಾರೆ". "ಹಾಗಾದರೆ ನೀನು ಅವರನ್ನು ಗಮನಿಸಿ, ಅವರಿಗೆ ಆರೈಕೆ ಮಾಡುವುದಕ್ಕಾಗಿ ಹೋರಾಡು" ಎಂದಾಗಿತ್ತು ಪುಣ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ.(ತಂಬೀಹುಲ್ ಗಾಫಿಲೀನ್)
ಮಾತಾಪಿತರೊಂದಿಗಿನ ಬಾಧ್ಯತೆ,ಹಕ್ಕುಗಳಾಗಿದೆ ಅತ್ಯಂತ ಮಹತ್ವದ್ದು. ಅದನ್ನು ಪಾಲಿಸದೆ ಅವರಿಬ್ಬರನ್ನು ನೋಯಿಸಿ ನೀನು ಬೇರೆ ಯಾವುದೇ ಘನಕೆಲಸಕ್ಕಿಳಿದರೂ ಅದರ ಫಲಶೂನ್ಯ.
*ಜುನೈದ್ ಸಖಾಫಿ ಜೀರ್ಮುಕ್ಕಿ*
ದ್ಸಿಕ್ರಾ ದರ್ಸ್,ಮೂಡಬಿದ್ರೆ
Comments