ಅಅ್'ಲಾ ಹಝ್ರತ್ ಇಮಾಮೇ ಅಹ್ಲೇ ಸುನ್ನತ್ ಇಮಾಮೇ ಇಷ್ಖೋ ಮುಹಬ್ಬತ್ ಶಾಹ್ ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ
◻▪◻▪◻▪◽▪◻▪◻
✒ ಮುಹಮ್ಮದ್ ಹುಸೈನ್ ರಝಾ.
_*بسم اللّٰہ الرحمٰن الرحیم*_
*_اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ_*
💢 *ಮದೀನಾ ಷರೀಫ್ ಝಿಯಾರತ್ ನಿರ್ಬಂಧವಾಗಿದೆ.!*
_ಆಶಿಖೇ ಮಾಹೇ ರಿಸಾಲತ್ ಇಮಾಮೇ ಇಷ್ಖೋ ಮುಹಬ್ಬತ್ ಆಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ رضی اللّٰہ عنہ ರವರು ತನ್ನ ಎರಡನೇ ಹಜ್ಜ್ ಕರ್ಮವನ್ನು ನೆರವೇರಿಸಿದ ಬಳಿಕ ಅತೀವ ಜ್ವರಭಾದಿತರಾದರು. ಸ್ವತಃ ಆಲಾ ಹಝ್ರತ್ رضی اللّٰہ عنہ ಹೇಳುತ್ತಾರೆ. ನನಗೆ ಜ್ವರ ಹೆಚ್ಚಾದಾಗ ನಬಿ صلی اللّٰہ علیہ وسلم ರವರ ಸನ್ನಿಧಿಗೆ ಹೋಗುವ ಬಗ್ಗೆ ಹೆಚ್ಚು ಚಿಂತೆಗೀಡಾದೆ. ಜ್ವರ ಹೆಚ್ಚಾದಂತೇ ಅದೇ ಸ್ಥಿತಿಯಲ್ಲಿ ನಾನು ಮದೀನಾ ಷರೀಫ್ *زادها الله شرفا و تعظيما* ಯಾತ್ರೆಯ ಸಂಕಲ್ಪವನ್ನು ಮಾಡಿದೆ. ಆಗ ಉಲಮಾಗಳು ವಿರೋಧಿಸಿದರು ಮತ್ತು ಹೇಳಿದರು. ಮೊದಲನೆಯದಾಗಿ ನಿಮ್ಮ ಸ್ಥಿತಿಯು ತುಂಬಾ ಹದಗೆಟ್ಟಿದೆ ಮತ್ತು ಯಾತ್ರೆ ಸುಧೀರ್ಘವಾಗಿದೆ. ನಾನು ಹೇಳಿದೆ. ನಿಜ ಹೇಳಬೇಕೆಂದರೆ (ಹಜ್ಜ್ ಗೆ) ಬಂದ ಯದಾರ್ಥ ಉದ್ದೇಶವು ಮದೀನಾ ಷರೀಫ್ زادها الله شرفا و تعظيما ಝಿಯಾರತ್ತೇ ಆಗಿದೆ. ಎರಡು ಬಾರಿಯೂ ಅದೇ ಸಂಕಲ್ಪದಿಂದಲೇ ಮನೆಯಿಂದ ಹೊರಟೆ. ಮತ್ತು معاذ الله ಇದಲ್ಲದಿದ್ದರೆ (ಮದೀನಾ ಯಾತ್ರೆ ಇಲ್ಲದಿದ್ದರೆ) ಹಜ್ಜ್'ನಲ್ಲಿ ಯಾವುದೇ ಆನಂದವಿರದು. ಅವರು (ಉಲಮಾಗಳು) ಮತ್ತೂ ಒತ್ತಾಯ ಮಾಡಿದರು ನನ್ನ ಸ್ಥಿತಿಯನ್ನು ನೆನಪಿಸಿದರು. ನಾನು ಹದೀಸ್ ಓದಿ ಹೇಳಿದೆ._ *من حج ولم يزرنى فقد جفانى* _*"ಯಾರಾದರೂ ಹಜ್ಜ್ ನಿರ್ವಹಿಸಿ ಬಳಿಕ ನನ್ನ ಝಿಯಾರತ್ ಗೆ ಬರಲಿಲ್ಲವೆಂದಾದರೆ ಅವನು ನನ್ನೊಂದಿಗೆ ಕ್ರೂರತೆ ತೋರಿದನು"*_ (ಕಶ್ಫುಲ್ _ಖಫಾ- ಭಾಗ -2 ಪುಟ 218- ಹದೀಸ್- 245) ಅವರು ಹೇಳಿದರು. ನೀವು (ಹಿಂದೆ) ಒಮ್ಮೆ ಝಿಯಾರತ್ ಮಾಡಿದ್ದೀರಲ್ವಾ. ನಾನು_ _ಹೇಳಿದೆ. ನನ್ನ ಪ್ರಕಾರ ಹದೀಸಿನ ಅರ್ಥ ಜೀವನದಲ್ಲಿ ಎಷ್ಟೇ ಹಜ್ಜ್ ನಿರ್ವಹಿಸಿದರೂ ಮದೀನಾ ಝಿಯಾರತ್ ಕೇವಲ ಒಮ್ಮೆ ಮಾತ್ರ ಸಾಕು ಎಂದಲ್ಲ ಬದಲು ಪ್ರತೀ ಹಜ್ಜ್ ನಲ್ಲಿಯೂ ಝಿಯಾರತ್ ನಿರ್ಬಂಧವಾಗಿದೆ!_ _ಇನ್ನು ನಾನು ನಬಿ صلی اللّٰہ علیہ وسلم ರವರ ಬಳಿ ತಲುಪಲು. ತಾವು ದುಆ ಮಾಡಿರಿ ರೌಳಾ ಶರೀಫಿಗೆ ಒಂದು ನೋಟವು ನೋಡುವಂತಾಗಲಿ ಬಳಿಕ ತಕ್ಷಣವೇ ಪ್ರಾಣ ಹೊರಟು ಹೋದರೂ ಸರಿ._
(ಮಲ್ಫೂಝಾತೇ ಆಲಾ ಹಝ್ರತ್. ಭಾಗ-2ಪುಟ-201)
*اے کاش مدینے میں مجھے موت یوں آئے*
*ಬಹುಶಃ ಮದೀನಾದಲ್ಲಿ ನನಗೆ ಮರಣವೂ ಹೀಗೆ ಬರಬೇಕು!*
*قدموں میں تیرے سر ہو میری روح چلی ہو*
*ತಮ್ಮಯ ﷺ ಪಾದಗಳಲ್ಲಿ ನನ್ನ ತಲೆ ಇರಬೇಕು ನನ್ನ ಆತ್ಮವು ಬೇರ್ಪಡಬೇಕು*
( *ವಸಾಯಿಲೇ ಬಕ್ಶಿಷ್*.ಅಮೀರೇ ಅಹ್ಲೇ ಸುನ್ನತ್ ಇಲ್ಯಾಸ್ ಅತ್ತಾರ್ ಖಾದ್ರಿ. )
_ಬಳಿಕ ಮದೀನಾ ತ್ವಯ್ಯಿಬಾ زادها الله شرفا و تعظيما ತೆರಳಿ ಅಲ್ಲಿ ನಬಿ صلى الله عليه وسلم ರವರ ಸನ್ನಿಧಿಯಲ್ಲಿ ಹಾಜರಾಗಿ ಝಿಯಾರತ್ ನೆರವೇರಿಸಿದರು ಹಾಗೂ *ಖಸೀದಾಯೇ ಜಾನೇ ನೂರ್* (ಶುಕ್ರೇ ಖುದಾ ಕೀ ಆಜ್ ಘಡಿ ಉಸ್ ಸಫರ್ ಕಿ ಹೈ) ಎಂಬ ಉರ್ದು ಕವಿತೆ ರಚಿಸಿದರು. ಮತ್ತು ಸಯ್ಯಿದೇ ಖೌನೈನ್ صلى الله عليه وسلم ರವರನ್ನು ಎಚ್ಚರದ ಕಣ್ಣುಗಳಲ್ಲಿ ನೇರವಾಗಿ ಕಾಣುವ ಭಾಗ್ಯದಿಂದ ಅನುಗ್ರಹಿಸಲ್ಪಟ್ಟರು. ಅಲ್ಲಾಹು ಇಮಾಮರ ಜಾಹ್ ಬರಕತ್'ನಿಂದ ನಮ್ಮೆಲ್ಲರ ಇಹ ಪರ ಕಷ್ಟಗಳನ್ನು ನಿವಾರಿಸಲಿ ಮಕ್ಬೂಲ್ ಮಬ್ರೂರ್ ಆದ ಹಜ್ಜ್ ಉಮ್ರಾ ನಿರ್ವಹಿಸಲು ಹಾಗೂ ಪವಿತ್ರ ರೌಳಾ ಷರೀಫ್ ಝಿಯಾರತ್ ಮಾಡಲೂ ನಮಗೂ ನಮ್ಮ ಕುಟುಂಬ ಬಂಧುಮಿತ್ರಾಧಿಗಳಿಗೂ ತೌಫೀಕ್ ನೀಡಲಿ ಆಮೀನ್ ಯಾ ರಬ್ಬಲ್ ಆಲಮೀನ್..._
_*صَلُّوا عَلَى الْحَبِيب ...*_
_*صَلَّى اللهُ تعالى عَلَى مُحَمَّدٍﷺ*_
Comments