Skip to main content

ಎಸ್ಸೆಸ್ಸೆಫ್ ಧ್ವಜಾರೇೂಹಣಕ್ಕೆ ಮುನ್ನ


🎓🎓 *ಮಾಸ್ಟರ್ ಮೈಂಡ್* 🎓🎓

*ಧ್ವಜಾರೇೂಹಣಕ್ಕೆ ಮುನ್ನ*

    ಇದೇ ಬರುವ ಸೆಪ್ಟಂಬರ್ 19 ಎಸ್ಸೆಸ್ಸೆಫ್ ನ ಧ್ವಜ ದಿನ ಆಚರಣೆಗೆ ಎಲ್ಲಾ ಘಟಕಗಳು ಸಜ್ಜಾಗಿ ನಿಂತಿದೆ.

1973 ಎಪ್ರಿಲ್ 29 ಎಸ್ಸೆಸ್ಸೆಫ್ ಕೇರಳ ಮಣ್ಣಲ್ಲಿ ಹುಟ್ಟಿದ ದಿನ. ಇಂದಿಗೆ 46 ವರ್ಷ.

1989 ಸೆಪ್ಟಂಬರ್ 19 ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಅಧಿಕೃತ ಚಾಲನೆಗೊಂಡ ದಿನ.
ಅಂದರೆ 30 ವರ್ಷ ತುಂಬಿದೆ.

ಇದೀಗ ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತಿರುವ ಎಸ್ಸೆಸ್ಸೆಫ್ ಇನ್ನು 4 ವರ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತನ್ನ 50 ನೇ ವರ್ಷದ Golden Jubilee ಆಚರಣೆ ಮಾಡಲಿದೆ.

ಆದ್ದರಿಂದ ಕೆಳಘಟಕಗಳೆಲ್ಲವೂ  ನ್ಯಾಶನಲ್ ಎಸ್ಸೆಸ್ಸೆಫ್ ನ ವರ್ಷವನ್ನೇ ಪ್ರಚಾರದಲ್ಲಿ ಬಳಸಬೇಕೆಂದೂ, ತಮ್ಮ ಘಟಕಗಳ ಹುಟ್ಟಿದ ದಿವಸವನ್ನು ಎಲ್ಲಿಯೂ ಪ್ರಚಾರದಲ್ಲಿ ಬಳಸಬಾರದೆಂಬುದು ಎಸ್ಸೆಸ್ಸೆಫ್ ನ್ಯಾಶನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ|| ಫಾರೂಕ್ ನಈಮಿಯವರ ಕರೆ.

ಅಂದ ಹಾಗೆ ಎಸ್ಸೆಸ್ಸೆಫ್ ನ ಧ್ವಜದಿನದ ಧ್ವಜಾರೇೂಹಣ ದಿನದ ನಮ್ಮ ವಸ್ತ್ರಧಾರಣೆಯ ಕಡೆ ಗಮನವಿಡುವುದು ಉತ್ತಮ.

ನಮ್ಮಲ್ಲಿ ಹಲವರು ಧ್ವಜಾರೇೂಹಣಕ್ಕೆ ಬರುವುದು ನೈಟ್ ಪ್ಯಾಂಟ್ಸ್ ,ಹಳೆಯ ಲುಂಗಿ ಮತ್ತು ಟೀಶರ್ಟ್ ಧರಿಸಿಕೊಂಡು ಎಂದರೆ ತಪ್ಪಲ್ಲ.
ಅದರಲ್ಲಿಯೇ ಪೊಟೇೂಕ್ಕೆ ಫೇೂಸ್ ಬೇರೆ.
ಜಗತ್ತಿನಾದ್ಯಂತ ಎಲ್ಲರ ಕೈಗೂ ನಿಮಿಷಾರ್ಧದಲ್ಲಿ ವಾಟ್ಸಪ್ ಈ  ಪಿಕ್ ತಲುಪಿಸಿ ಬಿಡುತ್ತದೆ.
ಇದರಿಂದ ಎಸ್ಸೆಸ್ಸೆಫ್ ನ ಬಾಹ್ಯ ಸೌಂದರ್ಯಕ್ಕೆ ಧಕ್ಕೆಯಾಗುವುದರಲ್ಲಿ ಸಂದೇಹವಿಲ್ಲ.

ಆದ್ದರಿಂದ ಕಾರ್ಯಕರ್ತರು ಈ ಬಗ್ಗೆ ಗಮನ ಹರಿಸುವುದು ಅನಿವಾರ್ಯ.

✍ *Musthafa Master Ullal*
*======================*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...