Skip to main content

ಸಜ್ಜನರ_ಮಖ್ಬರ_ಬಳಿ‌_ಸಹಾಯಾಚನೆ_ಮಾಡುವುದು ಬಹುದೈವರಾಧನೆ(ಶಿರ್ಕ್) ಆಗುತ್ತದೆಯೇ

ಸಜ್ಜನರ_ಮಖ್ಬರ_ಬಳಿ‌_ಸಹಾಯಾಚನೆ_ಮಾಡುವುದು ಬಹುದೈವರಾಧನೆ(ಶಿರ್ಕ್) ಆಗುತ್ತದೆಯೇ?
       
ವಹ್ಹಾಬಿಗಳ_ಪುರಾವೆ_ಮತ್ತು_ಸತ್ಯಾಂಶ

*ಸೂಕ್ತ-3*
chapter: 7 verse: 194
إِنَّ ٱلَّذِينَ تَدْعُونَ مِن دُونِ ٱللَّهِ عِبَادٌ أَمْثَالُكُمْ ۖ فَٱدْعُوهُمْ فَلْيَسْتَجِيبُوا۟ لَكُمْ إِن كُنتُمْ صَٰدِقِينَ
ಅಲ್ಲಾಹನ ಹೊರತಾಗಿ ನೀವು ಆರಾಧಿಸುವ ಯಾರೇ ಆದರೂ ಅವರು ನಿಮ್ಮಂತಿರುವ ದಾಸ ರೇ ಆಗಿರುತ್ತಾರೆ. (ಅವರು ಆರಾಧ್ಯರುಗಳೆಂಬ ವಾದದಲ್ಲಿ) ನೀವು ಸತ್ಯವಂತರಾಗಿದ್ದರೆ ನೀವು ಅವರನ್ನೊಮ್ಮೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾರೋ ನೋಡಿರಿ.
chapter: 7 verse: 195
أَلَهُمْ أَرْجُلٌۭ يَمْشُونَ بِهَآ ۖ أَمْ لَهُمْ أَيْدٍۢ يَبْطِشُونَ بِهَآ ۖ أَمْ لَهُمْ أَعْيُنٌۭ يُبْصِرُونَ بِهَآ ۖ أَمْ لَهُمْ ءَاذَانٌۭ يَسْمَعُونَ بِهَا ۗ قُلِ ٱدْعُوا۟ شُرَكَآءَكُمْ ثُمَّ كِيدُونِ فَلَا تُنظِرُونِ
ಅವರಿಗೆ ನಡೆಯಲು ಕಾಲುಗಳಿವೆಯೇ? ಅವ ರಿಗೆ ಹಿಡಿಯಲು ಕೈಗಳಿವೆಯೇ? ಅವರಿಗೆ ನೋ ಡಲು ಕಣ್ಣುಗಳಿವೆಯೇ? ಅವರಿಗೆ ಕೇಳಲು ಕಿವಿಗಳಿವೆಯೇ?⁸² (ಓ ಪೈಗಂಬರರೇ ಇವ ರೊಡನೆ) ಹೇಳಿರಿ; ನಿಮ್ಮ ಭಾಗೀದಾರ ರನ್ನು ಕರೆದು ಕೊಳ್ಳಿರಿ. ತರುವಾಯ ನೀವು ನನ್ನ ವಿರುದ್ಧ ಏನೇ ಕುತಂತ್ರ ಪ್ರಯೋಗಿಸಿರಿ ಮತ್ತು ನನಗೆ ಕಿಂಚಿತ್ತೂ ಕಾಲಾವಕಾಶ ಕೊಡಬೇಡಿರಿ.
chapter: 7 verse: 196
إِنَّ وَلِۦِّىَ ٱللَّهُ ٱلَّذِى نَزَّلَ ٱلْكِتَٰبَ ۖ وَهُوَ يَتَوَلَّى ٱلصَّٰلِحِينَ
ನಿಸ್ಸಂದೇಹವಾಗಿ ಗ್ರಂಥವನ್ನು ಅವತೀರ್ಣ ಗೊಳಿಸಿದ ಅಲ್ಲಾಹನೇ ನನ್ನ ಉಸ್ತುವಾರಿದಾರನು. ಅವನು ಸಜ್ಜನರನ್ನು ಸಂರಕ್ಷಿಸುತ್ತಾನೆ.
chapter: 7 verse: 197
وَٱلَّذِينَ تَدْعُونَ مِن دُونِهِۦ لَا يَسْتَطِيعُونَ نَصْرَكُمْ وَلَآ أَنفُسَهُمْ يَنصُرُونَ
ನೀವು ಅಲ್ಲಾಹನ ಹೊರತಾಗಿ ಯಾರನ್ನು ಆರಾಧಿಸುತ್ತೀರೋ ಅವರು ನಿಮಗೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿಲ್ಲ ಮತ್ತು ತಮಗೆ ಸ್ವಯಂ ಸಹಾಯಕರಾಗಲೂ ಅವರಿಂದಾಗದು.

*ಸಂಕ್ಷಿಪ್ತ ವಿವರಣೆ...👇🏻*
.ಅರ್ಥಾತ್ ಉಪಕಾರ ಅಥವಾ ಉಪದ್ರವ ಮಾಡಲು ಅಶಕ್ತರು ಹಾಗೂ ಅಲ್ಲಾಹನ ರಾಜಾಧಿಕಾರದಲ್ಲಿ ಅವನಿಗೆ ವಿಧೇಯರು ಎಂಬ ನೆಲೆಯಲ್ಲಿ ಮನುಷ್ಯರೊಂದಿಗೆ ಸಮಾನತೆಯನ್ನು ಹೊಂದುವ ವಿಗ್ರಹಗಳನ್ನು ನೀವು ಆರಾಧ್ಯರೆಂದು ಕರೆಯುತ್ತೀರಿ ಹಾಗೂ ಆರಾಧನೆಯನ್ನು ಅರ್ಪಿಸುತ್ತೀರಿ. 'ದಾಸರು' ಎಂಬ
ಪ್ರಯೋಗವನ್ನು ಮಾಡಲು ಕಾರಣ ಮನುಷ್ಯ ರೂಪಗಳಲ್ಲಿ ವಿಗ್ರಹಗಳನ್ನು ನಿರ್ಮಿಸಿದ್ದರಿಂದಾಗಿತ್ತು.
ನೀವು ಅವುಗಳನ್ನು
ಆರಾಧಿಸುತ್ತಿರುವುದು ಉಪಕಾರ ಪಡೆಯುವ ಹಾಗೂ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ
ತಾನೇ? ನೀವು ಸತ್ಯವಾದಿಗಳಾಗಿದ್ದರೆ ಅವುಗಳು
ಉತ್ತರಿಸಲಿ ಎಂದು ಸವಾಲು ಹಾಕಲಾಗಿದೆ.ಈ

ಶ್ಲೋಕವನ್ನು ನೂತನವಾದಿಗಳು ಅಂಬಿಯಾ, ಔಲಿಯಾಗಳಿಗೆ ಅನ್ವಯಗೊಳಿಸುತ್ತಾರೆ.
ಅಂಬಿಯಾ,ಔಲಿಯಾಗಳು ಕೂಡಾ
ಎಲ್ಲರಂತೆಯೇ ಅಲ್ಲಾಹನ ದಾಸರೆಂದೂ ಅವರಿಂದ ವಿಶೇಷ ಕಾರ್ಯ ಏನೂ ಸಾಧ್ಯವಿಲ್ಲವೆಂದೂ ಖುರ್‌ಆನ್‌ನಲ್ಲಿ ಇದೆ.ಎನ್ನುತ್ತಾ ಈ ಶ್ಲೋಕವನ್ನು ತೋರಿಸುತ್ತಾರೆ.
ವಾಸ್ತವದಲ್ಲಿ ಈ ಶ್ಲೋಕವು ಅಂಬಿಯಾ,ಔಲಿಯಾಗಳಿಗೆ ಅನ್ವಯವಲ್ಲ.ಬರೇ ವಿಗ್ರಹಗಳ
ಬಗ್ಗೆ ಎನ್ನುವುದು ಸತ್ಯ. ಮಹಾತ್ಮರಿಗೆ ಅನ್ವಯವಾಗುವುದಾದರೆ 195ನೇ ಶ್ಲೋಕಕ್ಕೆ ಅರ್ಥವಿರುವುದಿಲ್ಲ. ಅವರಿಗೆ ನಡೆಯುವ ಕಾಲು,
ಹಿಡಿಯುವ ಕೈ, ಕಾಣುವ ಕಣ್ಣು, ಕೇಳಿಸಿಕೊಳ್ಳುವ ಕಿವಿಗಳು ಇರುವುದರಿಂದ ಅವರಿಗೆ ಈ
ಶ್ಲೋಕವು ಅನ್ವಯವಾಗುವುದಿಲ್ಲ.
“ಮರಣಾನಂತರ ಮಹಾತ್ಮರಿಗೆ ಇಂಥಹದ್ದು ಯಾವುದೂ ಇರುವುದಿಲ್ಲ.ಹಾಗಾಗಿ
ಅನ್ವಯವಾಗುತ್ತದೆ” ಎಂಬ ತರ್ಕವೂ ನಿರರ್ಥಕ.
ಮಹಾತ್ಮರಿಗೆ ಮರಣಾನಂತರದಲ್ಲಿ
ಮರಣಪೂರ್ವಕ್ಕಿಂತ ಹೆಚ್ಚು
ಕ್ರಿಯಾಶೀಲತೆಯಿರುವ ಬಗ್ಗೆ ಹದೀಸ್‌ಗಳಲ್ಲಿ ಸಾಬೀತಾಗಿದೆ. ಮೂಸಾ ನಬಿ ಯವರು
ಜೀವಂತ ಇದ್ದಾಗ ಆರನೇ ಆಗಸಕ್ಕೆ ಹೋದಚರಿತ್ರೆ ಇಲ್ಲ.ಆದರೆ ಮರಣಾನಂತರ ಆರನೇ
ಆಗಸದಲ್ಲಿ ಪ್ರವಾದಿವರ್ಯರನ್ನು
ಮಿಅ್'ರಾಜ್‌ನ ರಾತ್ರಿ ಭೇಟಿಯಾಗಿ ಐವತ್ತು ಹೊತ್ತು ನಮಾಜನ್ನು ಐದು ಹೊತ್ತಿಗೆ ಇಳಿಸುವಂತೆ ಮಾಡಿ ಇಡೀ ಮುಸ್ಲಿಮ್ಸ ಮುದಾಯಕ್ಕೆ ದೊಡ್ಡ ಉಪಕಾರ(ಸಹಾಯ)
ಮಾಡಿರುತ್ತಾರೆ.ಅಲ್ಲದೆ ಅದೇ
ಇಸ್ರಾ-ಮಿಅ್'ರಾಜ್‌ನಂದು ಪ್ರವಾದಿಯವರು ಮೂಸಾ ನಬಿ ಯವರನ್ನು ಅವರ ಕಬ್ರಿನೊಳಗೆ ನಮಾಜು ನಿರತರಾಗಿರುವುದನ್ನು
ಕಂಡರು.ಇದು ಬುಖಾರಿ ಮುಸ್ಲಿಮ್‌ನಲ್ಲಿರುವ
ಹದೀಸ್.ಆಮೇಲೆ ಮುಸ್ಲಿದುಲ್ ಅಖ್ಸಾದಲ್ಲಿ ಒಂದೂ ಕಾಲು ಲಕ್ಷ ಗತ ಪ್ರವಾದಿಗಳೆಲ್ಲ ಸೇರಿ
ಪ್ರವಾದಿ ಯವರ ಹಿಂದೆ ಅಣಿನೆರೆದು ನಮಾಜು ಮಾಡಿದರು. ತದನಂತರ ಪ್ರವಾದಿಯವರು ಆಗಸಕ್ಕೆ ತಲುಪಿದಾಗ ಅದೇ
ಪ್ರವಾದಿಗಳ ಪೈಕಿ ಕೆಲವು ಪ್ರವಾದಿಗಳು ಅಲ್ಲಿ
ಎದುರುಗೊಳ್ಳಲು ಸಿದ್ದರಾಗಿದ್ದರು. ಮದುಲ್ ಅಖ್ಸಾದಲ್ಲಿ ಪ್ರವಾದಿಯವರ ಹಿಂದೆ ನಿಂತು
ಆದಮ್ ನಬಿ ಯವರು ನಮಾಜು
ಮಾಡಿದ್ದರು. ತರುವಾಯ ಪ್ರವಾದಿಯವರು
ಒಂದನೇ ಆಗಸಕ್ಕೆ ತಲುಪಿದಾಗ ಅಲ್ಲಿ ಆದಮ್ ನಬಿಯವರು ಸ್ವಾಗತಕ್ಕೆ ಸಜ್ಜಾಗಿ ನಿಂತಿದ್ದರು.
ಅಂದರೆ ಪ್ರವಾದಿಯವರಿಗೆ ಮೊದಲೇ ಆದಮ್ ನಬಿ ಯವರು ಮದುಲ್ ಅಖ್ಸಾದಿಂದ ಅಲ್ಲಿಗೆ ತಲುಪಿದ್ದರು! ಇಂತಹ
ಅದ್ಭುತ ಕ್ರಿಯಾಶಕ್ತಿಯುಳ್ಳ ಮಹಾತ್ಮರ ಬಗ್ಗೆ “ಅವರಿಗೆ ನಡೆಯುವ ಕಾಲು ಇದೆಯೆ, ಕಾಣುವ ಕಣ್ಣು ಇದೆಯೆ?” ಎಂದು ಅಲ್ಲಾಹು ಕೇಳುತ್ತಾನೆಂದು ನಂಬುವುದು ಶುದ್ಧ ಮೂರ್ಖತನ. ಆ ಪ್ರಶ್ನೆಗಳೂ ಇಲ್ಲಿನ ಎಲ್ಲ
ಪ್ರತಿಪಾದನೆಗಳೂ ವಿಗ್ರಹಗಳ ಬಗ್ಗೆ ಅನ್ನುವುದು ಸ್ಪಷ್ಟ.

*📚(ರಾಝಿ15/75,ಬಗ್ವಿ 2/186 ರೂಹುಲ್ ಬಯಾನ್ 3/295)*
*✍🏻Straight_Path_Ahlu_Sunnah*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...