Skip to main content

ಇಮಾಂ ಯೂಸೂಫ್ ಬಿನ್ ಇಸ್ಮಾಯೀಲ್ ನಬ್ಹಾನೀ رحمة الله عليه

"عِنْدَ ذَكَرِ الصَّالِحِينَ تَنْزِلُ رَحْمَةٌ"

ಇಮಾಮರುಗಳ ಕಿರು ಪರಿಚಯ

  ಇಮಾಂ ಯೂಸೂಫ್ ಬಿನ್ ಇಸ್ಮಾಯೀಲ್ ನಬ್ಹಾನೀ رحمة الله عليه

✒ ಮುಹಮ್ಮದ್ ಹುಸೈನ್ ರಝಾ

بسم اللّٰہ الرحمٰن الرحیم

اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ

_ಅಲ್ಲಾಹನ ಹಬೀಬ್ صلى الله عليه وسلم ರ ಆಶೀಖೀನ್ ಗಳ ಹೆಸರನ್ನು ಎಣಿಸುವಾಗ ಸಯ್ಯಿದುನಾ ಇಮಾಂ ಯೂಸೂಫ್ ಬಿನ್ ಇಸ್ಮಾಯೀಲ್ ನಬ್ಹಾನಿ رحمة الله عليه ರವರ ಹೆಸರು ಆಶಿಖ್ ಪ್ರಮುಖರಲ್ಲಿ ಬರುತ್ತದೆ. ಕಾರಣ ಅವರು ನಬಿ صلى الله عليه وسلم ರವರ ಸ್ಥಾನ ಘನತೆ ಗೌರವವನ್ನು  ಇಡೀ ಸಮೂಹಕ್ಕೆ ಕಲಿಸಿದ ಮಾಹಾನ್ ನಾಯಕರಾಗಿದ್ದರು. ಹದಿನಾಲ್ಕನೇ ಶತಮಾನದ ಆರಂಭದಲ್ಲಿ ಮುಸ್ಲಿಂ ಜಗತ್ತನ್ನೇ  ಅಲ್ಲೋಲ ಕಲ್ಲೋಲ ಮಾಡಿದಂತಹಾ ವ್ಹಹಾಬಿ ಫಿತ್ನಾವೂ  ತೌಹೀದ್,  ಶಿರ್ಕ್, ಬಿದ್ಅತ್, ಹೆಸರಿನಲ್ಲಿ ಸರ್ವ ಮುಸಲ್ಮಾನರನ್ನು ಕಾಫಿರ್ಗಳಾಗಿಸುತ್ತಾ ಜಗತ್ತಿನಲ್ಲಿ ಕ್ಷೋಭೆ ಹರಡುತ್ತಿರುವಾಗ ಅವರ ಸರ್ವ ವಾದಗಳಿಗೆ ಎದೆ ಗುಂದದೆ ಸಮರ್ಥಕವಾಗಿ ಪುರಾವೆಗಳ ಭಂಡಾರವನ್ನೇ ಕ್ರೂಢೀಕರಿಸಿ ದೊಡ್ಡ ದೊಡ್ಡ ಗ್ರಂಥಗಳನ್ನು ಹಲವು ಭಾಗಗಳಲ್ಲಿ ರಚಿಸಿ ವ್ಹಹಾಬಿಗಳ ಹುಟ್ಟಡಗಿಸಿದ ಮಹಾನ್  ವಿದ್ವತ್ ನಾಯಕರಾದ ಇಮಾಮರುಗಳಲ್ಲಿ ಇಮಾಂ ನಬ್ಹಾನಿ رحمة الله عليه ಕೂಡ ಒಬ್ಬರು. ಭಾರತದಲ್ಲಿ  ಸಯ್ಯಿದುನಾ ಇಮಾಂ ಅಹ್ಮದ್ ರಝಾ ಖಾನ್ رحمة الله عليه ರವರು ತನ್ನ ಉಪದೇಶ ಹಾಗೂ ಲೇಖನಿ ಮೂಲಕ ನೂತನವಾದಿಗಳೊಂದಿಗೆ ಯುದ್ಧ ಸಾರುತ್ತಾ ಇದ್ದ ಅದೇ ಕಾಲದಲ್ಲಿ ಅರೇಬಿಯಾದಲ್ಲಿ ಆ ಕಾರ್ಯವನ್ನು ಕೈಗೆತ್ತಿಕೊಂಡವರು ಸಯ್ಯಿದುನಾ ಇಮಾಂ ಯೂಸೂಫುನ್ನಬ್ಹಾನಿ رحمة الله عليه ರವರಾಗಿದ್ದರು. ಮಹಾನರ ಕುರಿತು ಕೆಲವೊಂದು ವಿಷಯವನ್ನು ತಿಳಿಯೋಣ.._

_ಮೌಲಾನಾ ಅಬುನ್ನೂರ್ ಮುಹಮ್ಮದ್ ಬಶೀರ್  ಸಿಯಾಲ್ ಕೋಟ್ ರವರ ತಂದೆಯವರಾದ ಹಝ್ರತ್ ಮೌಲಾನಾ ಷರೀಫ್ ಸಿಯಾಲ್ ಕೋಟ್ رحمة الله عليه ( ಸಿಯಾಲ್ ಕೋಟ್ ಈಗಿನ ಪಾಕಿಸ್ತಾನದ ಒಂದು ನಗರ) ರವರು ಆಲಾ ಹಝ್ರತ್ ಇಮಾಂ ಅಹ್ಮದ್ ರಝಾ  ಖಾನ್ ಬರೇಲ್ವಿ رحمة الله عليه ರವರ ಖಲೀಫರಾಗಿದ್ದರು. ಇಮಾಂ ಯೂಸೂಫುನ್ನಬ್ಹಾನಿ رحمة الله عليه ರವರ ಕುರಿತು ಅವರ  ಹೇಳಿಕೆಯನ್ನು ಮೌಲಾನಾ (ಅಬುನ್ನೂರ್) ರವರು ಹೀಗೆ ಬರೆಯುತ್ತಾರೆ. ನನ್ನ ತಂದೆಯವರು ಒಮ್ಮೆ ನನ್ನಲ್ಲಿ ಹೇಳಿದರು. ನಾನು ಹಜ್ಜ್ ನಿರ್ವಹಿಸಲು ಹೋದಾಗ ಹಜ್ಜ್ ಬಳಿಕ ಮದೀನಾ ತ್ವಯ್ಯಿಬಾ ಮತ್ತು ರೌಳಾ ಷರೀಫ್ ಝಿಯಾರತ್ ಸಂದರ್ಭದಲ್ಲಿ ನಾನು ಬಾಬುಸ್ಸಲಾಮ್ ಹಾಗೂ ಗುಂಬದ್ ಖಳರಾದ ಮುಂಭಾಗದಲ್ಲಿ ಉದ್ದನೆಯ ಬಿಳಿ ಗಡ್ಡ ಹಾಗೂ ಪ್ರಕಾಶವನ್ನು ಸ್ಪುರಿಸುವ ಮುಖದ ಒಬ್ಬರು ಮಹಾನರನ್ನು ಕಂಡೆ. ಅವರನ್ನು ಕಾಣುತ್ತಲೇ ಪ್ರೇರಿತನಾದೆ ಮತ್ತು ಅವರ ಬಳಿ ಹೋಗಿ ಕುಳಿತುಕೊಂಡೆ ಮತ್ತು ಅವರೊಂದಿಗೆ ಮಾತು ಆರಂಭಿಸಿದೆ. ಅವರು ನನ್ನತ್ತ ಗಮನ ಕೊಡಲಿಲ್ಲ ಆಗ ನಾನು ಅವರಲ್ಲಿ ಹೇಳಿದೆ ನಾನು ಭಾರತದಿಂದ ಬಂದಿದ್ದೇನೆ ಹಾಗೂ ತಮ್ಮ  *ಹುಜ್ಜತುಲ್ಲಾಹಿ ಅಲಲ್ ಆಲಮೀನ್* ಮತ್ತು *ಜವಾಹಿರುಲ್ ಬಿಹಾರ್*   ಗ್ರಂಥಗಳನ್ನು ಓದಿದ್ದೇನೆ ಆ ಕಾರಣ ತಮ್ಮ ಮೇಲೆ ನನ್ನ ಹೃದಯದಲ್ಲಿ ತುಂಬಾ ಅಭಿಮಾನ ಉಂಟಾಗಿದೆ ಎಂದೆ ಅದನ್ನು ಕೇಳಿ ಅವರು ಈತನೊಬ್ಬ ನೈಜ ವಿಶ್ವಾಸಿ (ಸುನ್ನೀ) ವಿದ್ವಾಂಸನೆಂದು ತಿಳಿದು ಕೊಂಡರು ಹಾಗೂ ನನ್ನೆಡೆಗೆ ಪ್ರೀತಿಯಿಂದ ತಿರುಗಿ ಮುಸಾಫಹಕ್ಕಾಗಿ ತನ್ನ ಹಸ್ತವನ್ನು ಚಾಚಿದರು. ಮುಂದುವರಿದು ನನ್ನ ತಂದೆಯವರು ಹೇಳಿದರು. ಆಗ ನಾನು ಅವರಲ್ಲಿ ಕೇಳಿದೆ ಹುಝೂರ್.. ತಾವು ಇಷ್ಟು ದೂರವೇಕೆ ಕುಳಿತುಕೊಂಡಿದ್ದೀರಿ.? ಅದಕ್ಕವರು ಅಳುತ್ತಾ ಹೇಳಿದರು. *ಹತ್ತಿರ ಹೋಗುವಷ್ಟು ಅರ್ಹತೆ ನನಗೆಲ್ಲಿದೆ.!* (ಸುಬ್ಹಾನಲ್ಲಾಹ್. !)   ಬಳಿಕ ನಾನು ನಿರಂತರವಾಗಿ ಅವರು ಇರುವ ಕೊಠಡಿಗೆ ಹೋಗುತ್ತಿದ್ದೆ ಮತ್ತು ಅವರಿಂದ ಹದೀಸ್ ಸನದನ್ನೂ ಕೂಡ ಪಡೆದುಕೊಂಡೆ._

ಹೆಸರು  _*ಯೂಸೂಫ್ ಬಿನ್ ಇಸ್ಮಾಯೀಲ್ ಬಿನ್ ಯೂಸೂಫ್ ಬಿನ್ ಇಸ್ಮಾಯೀಲ್ ಬಿನ್ ಮುಹಮ್ಮದ್ ನಾಸಿರುದ್ದೀನ್ ಬಿನ್ ನಬ್ಹಾನೀ رحمۃ اللّٰہ علیہ*_

*ಜನನ ಹಾಗೂ ವಿದ್ಯಾರ್ಜನೆ*

_ಇಮಾಂ ಯೂಸೂಫುನ್ನಬ್ಹಾನೀ رحمۃ اللّٰہ علیہ ರವರು ಹಿಜರಿ 1265 ಈಸವೀ 1848 ರಲ್ಲಿ ಫೆಲೆಸ್ತೀನಿನಲ್ಲಿ ಜನಿಸಿದರು. ಅರಬ್ ಪ್ರದೇಶದ *ಬನೂ ನಬ್'ಹಾನ್* ವಂಶಸ್ಥರಾದ್ದರಿಂದ ನಬ್ಹಾನೀ ಎಂದು ಕರೆಯಲ್ಪಟ್ಟರು. ತಂದೆಯವರಾದ ಶೈಖ್  ಯೂಸೂಫ್ ನಬ್ಹಾನಿ رحمۃ اللّٰہ علیہ ಯವರಲ್ಲಿ ಖುರ್ಆನ್ ಷರೀಫ್ ಕಲಿತರು. (ತಂದೆಯ ಹೆಸರೂ ಕೂಡ ಅದೇ ಆಗಿದೆ) ಅವರು 80 ವರ್ಷದ ಪ್ರಾಯವಾಗಿದ್ದರೂ ಕೂಡ  ಆರೋಗ್ಯವಂತರಾಗಿದ್ದರು. ಎಲ್ಲಾ ಸಮಯದಲ್ಲೂ ಅಲ್ಲಾಹನ ಆರಾಧನೆಯಲ್ಲಿ ತೊಡಗಿಕೊಂಡಿರುತ್ತಿದ್ದರು. ಮೊದಲು ಪ್ರತೀ ದಿನ ಒಂದು ಖತಮ್ ಖುರ್ಆನ್ ಓದಿ ಮುಗಿಸುತ್ತಿದ್ದರು ನಂತರ ದಿನಗಳಲ್ಲಿ ವಾರಕ್ಕೆ ಮೂರು ಖತಮ್ ಮುಗಿಸುತ್ತಿದ್ದರು. ಮತ್ತು ಇದು ಅಲ್ಲಾಹನು ಅವರೀಗೆ ನೀಡಿದ ಮಹಾ ಅನುಗ್ರಹವಾಗಿತ್ತು. ಇಮಾಂ ನಬ್'ಹಾನಿ رحمۃ اللّٰہ علیہ ರವರು ಹೆಚ್ಚಿನ ಜ್ಞಾನಾರ್ಜನೆಗಾಗಿ ಮಿಸ್ರ್'ನ ಜಾಮಿಯಾ ಅಝ್ಹರಿಯಾ ಜ್ಞಾನ ಕೇಂದ್ರಕ್ಕೆ ಸೇರಿದರು. ಹಿಜರಿ 1283 ರ ಮುಹರ್ರಮುಲ್ ಹರಾಮ್ ನಿಂದ ಸುಮಾರು ಹಿಜರಿ 1289 ರಜಬ್ ವರೆಗೆ ವ್ಯಾಸಂಗವನ್ನು ಮುಂದುವರಿಸಿದರು. ಜಾಮಿಯಾ ಅಝ್ಹರಿಯಾದ ಅಧ್ಯಾಪಕರ ಬಗ್ಗೆ  ಇಮಾಂ ಯೂಸೂಫ್ ನಬ್ಹಾನೀ رحمۃ اللّٰہ علیہ ರವರು ಹೇಳುತ್ತಾರೆ.  ನಾನು ಅಲ್ಲಿ ಎಂತಹಾ ಮುಹಕ್ಖಿಕ್'ಗಳಾದ ಉಸ್ತಾದರುಗಳಲ್ಲಿ ವಿದ್ಯಾರ್ಜನೆ ಗೈದೆನೆಂದರೆ ಅವರಲ್ಲಿ ಒಬ್ಬರಾದರೂ ವಿಲಾಯತ್'ನಲ್ಲಿ ಇರುವವರಾಗಿದ್ದರೆ ಅಲ್ಲಿಯ ಜನರನ್ನು ಸ್ವರ್ಗದ ಮಾರ್ಗದಲ್ಲಿ ಮುನ್ನಡೆಸಲು ಸಾಕಾಗುವುದು ಮತ್ತು ಎಲ್ಲಾ ರೀತಿಯ ಜ್ಞಾನಗಳಿಂದ ಜನರ ಅಗತ್ಯಗಳನ್ನು ಒಂಟಿಯಾಗಿ ಪೂರ್ತಿಗೊಳಿಸುವಲ್ಲಿ ಸಕ್ತರು.!  ಕೆಲವು ಉಸ್ತಾದರುಗಳ ಹೆಸರುಗಳು ಹೀಗಿದೆ. ಅಲ್ಲಾಮಾ ಸಯ್ಯಿದ್ ಮುಹಮ್ಮದ್ ಶಾಫಿಈ, ಅಲ್ಲಾಮಾ ಶೈಖ್ ಇಬ್ರಾಹೀಮುಝ಼ರೂ, ಶೈಖ್ ಅಹ್ಮದುಲ್ಅಜ್ಹೋರಿ ಶಾಫಿಈ, ಶೈಖ್ ಮುಹ್ಸಿನುಲ್ ಅದವೀ ಮಾಲಿಕೀ, ಶೈಖ್ ಸಯ್ಯಿದ್ ಅಬ್ದುಲ್ ಹಾದೀ ನಜಾ ಅಲ್ ಅಬ್'ಯಾರೀ, ಶೈಖ್ ಶಂಸುದ್ದೀನ್ ಮುಹಮ್ಮದುಲ್ ಅಂಬಾಬೀ ಶಾಫಿಈ, ಶೇಖ್ ಅಬ್ದುರ್ರಹ್ಮಾನ್ ಅಶ್ರಬೀನೀ ಶಾಫಿಈ, ಶೈಖ್ ಅಬ್ದುಲ್ ಖಾದಿರ್ ಆರ್ರಾಫಿಈ, ಶೈಖ್ ಯೂಸೂಫ್ ಬರ್ಖಾವೀ ಹಂಬಲೀ, ಶೈಖುಲ್ ಮಾಶಾಯಿಖ್ ಇಬ್ರಾಹೀಮುಸ್ಸಖಾ ಅಷ್ಶಾಫಿಈ,_  *رحمة الله تعالٰی علیہم اجمعین* 
_ಇಮಾಂ ಯೂಸೂಫ್ ನಬ್ಹಾನಿ رحمۃ اللّٰہ علیہ ರವರು ಗುರುಗಳ ಪೈಕಿ  ಶೈಖ್ ಇಬ್ರಾಹೀಮುಸ್ಸಖಾ رحمۃ اللّٰہ علیہ ರವರಲ್ಲಿ ಹೆಚ್ಚು ನಂಟು ಹೊಂದಿದ್ದರು ಏಕೆಂದರೆ ಇಮಾಮರು ಅವರಲ್ಲಿ ಶೈಖುಲ್ ಇಸ್ಲಾಮ್ ಝಕರಿಯ್ಯಾ ಅನ್ಸಾರಿ رحمۃ اللّٰہ علیہ ರವರ ಗ್ರಂಥ ಶರಹ್ ತಹ್ರೀರ್ ಹಾಗೂ ಶರಹ್ ಮನ್ಹಜ್  ಗ್ರಂಥಗಳನ್ನು ಮತ್ತು  ಅಲ್ಲಾಮಾ ಶರ್ಖಾವೀ رحمۃ اللہ علیہ ಮತ್ತು ಬುಜೈರಿಮಿ رحمۃ اللّٰہ علیہ ಬರೆದ ಅದರ ವ್ಯಾಖ್ಯಾನ ಗ್ರಂಥಗಳನ್ನು ಶೈಖ್ ಇಬ್ರಾಹೀಮುಸ್ಸಖಾ رحمۃ اللّٰہ علیہ ರವರಲ್ಲಿ ಕಲಿತರು ಮತ್ತು ಮೂರು ವರ್ಷಗಳ ಕಾಲ ಅವರಲ್ಲಿ ಜ್ಞಾನವನ್ನು ಕರಗತ ಮಾಡಿದರು. ಹಾಗೂ ಶೈಖ್ ರವರು ಇಮಾಮರಿಗೆ ಸನದ್ ನೀಡುವಾಗ ತುಂಬಾ ಗೌರವಾಧಾರದೊಂದಿಗೆ ಗೌರವ ನಾಮಗಳೊಂದಿಗೆ ಹರಸುತ್ತಾ ಸನದ್ ನೀಡಿದ್ದರು._

*ಅದ್ದೌಲತುಲ್ ಮಕ್ಕೀಯ್ಯಾ ಕ್ಕೆ ಪ್ರಶಂಸೆ*

_ಸಯ್ಯಿದುನಾ ಯೂಸೂಫ್ ಅನ್ನಬ್ಹಾನೀ رحمة الله عليه ರವರು ಆಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ رحمة الله عليه ರವರ ಪ್ರಸಿದ್ಧ ಗ್ರಂಥವಾದ *ಅದ್ದೌಲತುಲ್ ಮಕ್ಕೀಯ್ಯಾ ಬಿಲ್ ಮಾದತಿಲ್ ಗೈಬೀಯ್ಯ*  ಕ್ಕೆ ಪ್ರಶಂಸೆ ವ್ಯಕ್ತ ಪಡಿಸುತ್ತಾ ಹೀಗೆ ಹೇಳುತ್ತಾರೆ. *ಈ ಬಾರಿ ಸಯ್ಯಿದ್ ಅಬ್ದುಲ್ ಬಾರೀ رحمة الله عليه  (ಇಬ್ನ್ ಸಯ್ಯಿದ್ ಅಮೀನ್ ರಿಝ್ವಾನ್ ಮದನೀ رحمة الله عليه ) ಯವರು ಈ ಗ್ರಂಥವನ್ನು ನನಗೆ ಕಳುಹಿಸಿ ಕೊಟ್ಟರು. ನಾನು ಇದನ್ನು (ಅದ್ದೌಲತುಲ್ ಮಕ್ಕೀಯ್ಯಾ) ಆದಿಯಿಂದ ಅಂತ್ಯದ ವರೆಗೆ ಪೂರ್ತಿಯಾಗಿ ಓದಿದೆ. ಮತ್ತು ಎಲ್ಲಾ ದೀನೀ ಗ್ರಂಥಗಳಲ್ಲಿ ಇದು ಅತ್ಯಂತ ಉಪಯುಕ್ತ ಹಾಗೂ ಪರಿಪೂರ್ಣವೆಂದು ಕಂಡೆ ಇದರ ಪುರಾವೆಗಳು ಅತ್ಯಂತ ಬಲಿಷ್ಠವಾಗಿದೆ. ಇದು ಒಬ್ಬರು ದೊಡ್ಡ ಇಮಾಂ ಹಾಗೂ  ಅಲ್ಲಾಮಾ ವ್ಯಕ್ತಿಯಿಂದಲೇ ಹೊರಬರಲು ಸಾಧ್ಯ.!  ಅಲ್ಲಾಹನು ಈ ಗ್ರಂಥಕರ್ತರನ್ನು ತೃಪ್ತಿಪಡಲಿ ಮತ್ತು ತನ್ನ ಕಾರುಣ್ಯದಿಂದ ಅವರನ್ನು ತೃಪ್ತಿಪಡಿಸಲಿ. ಮತ್ತು ಅವರ ಎಲ್ಲಾ ಉತ್ತಮ ಆಗ್ರಹವನ್ನು ಪೂರ್ತಿಗೊಳಿಸಲಿ. ನಬೀಯೇ ಕರೀಂ ರಊಫು ರ್ರಹೀಮ್ صلى الله عليه وسلم ರ ತವಸ್ಸುಲ್ ನಿಂದ ಅಲ್ಲಾಹನಲ್ಲಿ ದುಆ ಬೇಡುವೆ  ಅಲ್ಲಾಹು ಈ ಗ್ರಂಥಕರ್ತರಂತಹಾ  ವ್ಯಕ್ತಿಗಳನ್ನು ಹೆಚ್ಚು ಹೆಚ್ಚು ಸೃಷ್ಟಿಸಲಿ ಇಮಾಮರುಗಳ ಉತ್ತರಾಧಿಕಾರಿ ಇಸ್ಲಾಮಿನ ಸಹಾಯಿ ಮತ್ತು ಕುಫ್ಫಾರ್'ಗಳ ಹಾಗೂ ನೂತನವಾದಿಗಳೊಂದಿಗೆ ಹೋರಾಡುವ ಇಂತಹಾ ಮಹಾನ್ ಮುಜಾಹಿದ್ಗಳು ದೀನಿನ ರಕ್ಷಕರಾಗಿದ್ದಾರೆ.*_

*ಬಿಡುವಿಲ್ಲದ ಮುಬಾರಕ್ ಜೀವನ.!*

_ಇಮಾಂ ಯೂಸೂಫುನ್ನಭ್ಹಾನಿ رحمۃ اللّٰہ علیہ ರವರ ಇಲ್ಮ್ ಹಿರಿಮೆಯ ಸುದ್ದಿ ಜನರೆಡೆಯಲ್ಲಿ ವ್ಯಾಪಕವಾದಾಗ  ಬೈರೂತ್ ನಲ್ಲಿ ಮುಖ್ಯ ಖಾಝಿಯಾಗಿ ಆರಿಸಲಾಯಿತು. ಕೆಲವು ವರ್ಷಗಳ ಕಾಲ ಖಾಝಿಯಾಗಿ ಸೇವೆಯನ್ನು ನೆರವೇರಿಸಿದರು. ನಂತರ ತನ್ನ ಕೊನೆಯ ಕಾಲದಲ್ಲಿ ತನ್ನ ಎಲ್ಲಾ ಸಮಯವನ್ನು ಆರಾಧನೆ ಗ್ರಂಥರಚನೆ ಹಾಗೂ ದೀನೀ ಸೇವೆಗಾಗಿ ಮೀಸಲಿಟ್ಟರು. ಏಳು ವರ್ಷಗಳ ಕಾಲ ಮದೀನಾ ತ್ವಯ್ಯಿಬಾದಲ್ಲಿ ವಾಸವಾಗಿದ್ದರು. ಇಮಾಂ ನಬ್ಹಾನಿ رحمۃ اللّٰہ علیہ ರವರು ತನ್ನ ಬಿಡುವಿಲ್ಲದ ಜೀವನದಲ್ಲಿಯೂ ಗ್ರಂಥರಚನೆಯನ್ನು ಕೈ ಬಿಡಲಿಲ್ಲ. ಅವರ ಎಲ್ಲಾ ಗ್ರಂಥಗಳೂ ಪರಿಪೂರ್ಣ ಮತ್ತು ಜನರೆಡೆಯಲ್ಲಿ ಅತ್ಯಂತ ಸ್ವೀಕೃತವಾಗಿತ್ತು  ಅದು ಹೇಗೆತಾನೆ ಸ್ವೀಕೃತವಾಗದಿರಳು ಸಾಧ್ಯ.? ಅವರ ಎಲ್ಲಾ ಗ್ರಂಥಗಳು ಹದೀಸ್ ಷರೀಫ್ ಮತ್ತು ಅದಕ್ಕೆ ಸಂಬಂಧಿಸಿದ್ದಾಗಿತ್ತು ಹದೀಸ್ ಷರೀಫ್ ಹೊರತು ಸೀರತ್ ಮುಬಾರಕಾ,  ಅಕಾಬಿರ್ ಉಲಮಾಗಳ ತಝ್ಕಿರ, ಅಹ್ಲುಬೈತ್ ಶ್ರೇಷ್ಠತೆ, ಸ್ವಲಾತ್ ಮತ್ತು ಶ್ರೇಷ್ಠತೆ, ಹಾಗೂ ನಬಿ صلی اللّٰہ علیہ وسلم ರವರ ಖಸೀದಾಗಳನ್ನೊಳಗೊಂಡ ಗ್ರಂಥಗಳೂ ಶಾಮೀಳಾಗಿದೆ. ಅವರ ಗ್ರಂಥಗಳ ಸ್ವೀಕೃತಿಯೂ ಯಾವ ಹಂತಕ್ಕೆ ತಲುಪಿತೆಂದರೆ.  ಅವರ ಎಲ್ಲಾ ಗ್ರಂಥಗಳೂ ಪ್ರಕಾಶನೆಗೊಂಡವು ಮಾತ್ರವಲ್ಲ ಅದರಲ್ಲಿ ಹಲವು ಗ್ರಂಥಗಳು ಹಲವು ಬಾರಿ ಮರು ಮುದ್ರಣಗೊಂಡವು ಈಗಲೂ ಮರು ಮುದ್ರಣಗೊಳ್ಳುತ್ತಿದೆ.  ಅಲ್ಲಾಮಾ ಇಮಾಂ ನಬ್ಹಾನಿ رحمۃ اللّٰہ علیہ ರವರು  750 ಕವಿತೆಗಳನ್ನೊಳಗೊಂಡ  ಒಂದು ಗ್ರಂಥವನ್ನು ಬರೆದಿದ್ದಾರೆ. ಅದರಲ್ಲಿ ದೀನ್ ಇಸ್ಲಾಮ್ ಬಗ್ಗೆ ಹಲವು ವಿಶ್ಲೇಷಣೆಗಳನ್ನು ಹಾಗೂ ಈಸಾಯಿಗಳನ್ನು ವಿವರಣಾತ್ಮಕವಾಗಿ ರದ್ದು ಮಾಡಿದ್ದಾರೆ. ಏಕೆಂದರೆ  ಈಸಾಯಿಗಳು ಇಸ್ಲಾಮಿನ ಬಗ್ಗೆ ಷಡ್ಯಂತ್ರಗಳನ್ನು ರಚಿಸುತ್ತಿದ್ದರು.  ಇನ್ನೊಂದು ಖಸೀದಾ ಗ್ರಂಥವೂ ಬರೆದರು ಅದರಲ್ಲಿ 550 ಕವಿತೆಗಳಿದ್ದು  ಸುನ್ನತ್ ಮುಬಾರಕಾದ ಪ್ರಕೀರ್ತನೆ ಮತ್ತು ಬಿದ್ಅತ್ ಬಗ್ಗೆ  ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಸ್ವತಃ ಇಜ್ತಿಹಾದಿನ ದಾವೆ ಮಾಡುವ ಹಾಗೂ ಭೂಮಿ ಮೇಲೆ ಕ್ಷೋಭೆ ಹರಡುವ ಬಿದ್ಅತ್ ಗಾರರನ್ನು ಶಕ್ತವಾಗಿ ವಿರೋಧಿಸಿದ್ದಾರೆ. ಆ ಖಸೀದಾಗಳನ್ನೇ ಬಂಡವಾಳವಾಗಿಸಿದ ಕೆಲವು ಕಾಫಿರ್ ಹಾಗೂ ಕಪಠಿಗಳು ತುರ್ಕೀ ಸುಲ್ತಾನ್ ಅಬ್ದುಲ್ ಹಮೀದ್  ನ ಕಿವಿಯನ್ನು ಊದಿದರು ಇಮಾಂ ನಬ್ಹಾನಿ رحمۃ اللّٰہ علیہ ಯವರು ನಿಮ್ಮ ವಿರುದ್ಧ ಕವಿತೆ ಮೂಲಕ ಫಿತ್ನಾ ಉಂಟುಮಾಡುತ್ತಿದ್ದಾರೆ ಎಂದು. ತರುವಾಯ ಹಿಜರಿ1330   ಈಸವೀ 1912ರಲ್ಲಿ  ಇಮಾಮರು ಮದೀನಾಕ್ಕೆ ಹೋದಾಗ ಅಲ್ಲಿ ಸುಲ್ತಾನನ ಆದೇಶದ ಪ್ರಕಾರ ಬಂಧಿಸಲಾಯಿತು. ಇಮಾಂ ನಬ್ಹಾನಿ رحمۃ اللّٰہ علیہ ರವರು ಸ್ವತಃ ಆ ಘಟನೆ ಬಗ್ಗೆ ಹೀಗೆ ಹೇಳುತ್ತಾರೆ. ನನ್ನನ್ನು ಮದೀನಾದಲ್ಲಿ ಒಂದು ವಾರದ ವರೆಗೆ  ಬಂಧನೆಯಲ್ಲಿಡಲಾಯಿತು ಆದರೆ ಗೌರವಾಧಾರದೊಂದಿಗೆ.  ಹೇಗೆ ಬಂಧನದಲ್ಲಿಡಲಾಯಿತು.?  ಮತ್ತು ಹೇಗೆ ಬಂಧನ ಮುಕ್ತರಾದರು ಎಂದು ತಿಳಿಯೋಣ. ಅಲ್ಲಾಹು ತೌಫೀಕ್ ನೀಡಲಿ..._

_ಖುತುಬೇ ಮದೀನಾ ಮೌಲಾನಾ ಝಿಯಾಉದ್ದೀನ್ ಮದನಿ رحمۃ اللہ علیہ ರವರು ಇಮಾಂ ಯೂಸೂಫುನ್ನಬ್ಹಾನಿ رحمۃ اللّٰہ علیہ ರವರನ್ನು ಬಂಧಿಸಲಾದಾಗ ಮದೀನಾ ಶರೀಫಿನಲ್ಲಿ ಇದ್ದು ಪ್ರತ್ಯಕ್ಷದರ್ಶಿಯಾಗಿದ್ದಾರೆ.  (ಅವರ ಖಬರ್ ಷರೀಫ್ ಮದೀನಾದ ಖಬರಿಸ್ತಾನವಾದ ಜನ್ನತುಲ್ ಬಖೀನಲ್ಲಿದೆ) ಇಮಾಮರ ಬಂಧನದ ಬಗ್ಗೆ ಅವರು ವಿವರವಾಗಿ ಹೇಳಿದ್ದು ಅದನ್ನು  ಮೌಲಾನಾ ಮನ್ಶಾ ತಾಬಿಶ್ ಖುಸೂರಿಯವರು ಬರೆದಿದ್ದಾರೆ ಅದು ಏನೆಂದು ನೋಡೋಣ._

_** ಮ್ಮೆ ಸುಲ್ತಾನ್ ಅಬ್ದುಲ್ ಹಮೀದ್ ಮದೀನಾ ಮುನವ್ವರಾದ ಗವರ್ನರ್ ರಿಗೆ  ಇಮಾಂ ನಬ್ಹಾನಿ رحمۃ اللّٰہ علیہ  ರವರನ್ನು ಬಂಧಿಸಲು ಆಜ್ಞೆಯನ್ನು ನೀಡುತ್ತಾನೆ. ಗವರ್ನರ್ ರವರು ಇಮಾಮರನ್ನು ತುಂಬಾ ಪ್ರೀತಿಸುವವರಾಗಿದ್ದರು ಅವರು ಇಮಾಂ ನಬ್ಹಾನಿ رحمۃ اللّٰہ علیہ ರವರ ಬಳಿ ಹೋಗಿ ಸುಲ್ತಾನನ ಪತ್ರವನ್ನು ತೋರಿಸಿದರು ಇಮಾಂ ಯೂಸೂಫ್ ನಬ್ಹಾನಿ رحمۃ اللّٰہ علیہ ಅದನ್ನು ತೆಗೆದು ನೋಡಿ ಹೇಳಿದರು. *ನಾನು ಕೇಳಿಸಿಕೊಂಡೆ ಮತ್ತು ಓದಿದೆ ಹಾಗೂ ಅನುಸರಿಸಿದೆ*_

_ಗೌವರ್ನರ್ ವಿನಯದಿಂದ ಹೇಳಿದರು ಹುಝೂರ್.. ಬಂಧನ ಬರೀ ಒಂದು ನೆಪ ಮಾತ್ರವಾಗಿದೆ. ತಾವು ನನ್ನಲ್ಲಿಗೆ  (ಗವರ್ನರ್ ಹೌಸ್) ಬನ್ನಿ ಅಲ್ಲಿ ತಾವು ಅತಿಥಿಯಾಗಿಯೇ ಇರುವಿರಿ ಈ ಕಾರಣದಲ್ಲಿ ನನಗೆ ತಮ್ಮ ಸೇವೆಯ ಭಾಗ್ಯವು ಸಿಗುವುದು. ತಮ್ಮನ್ನು ಸಂದರ್ಶಿಸಲು ಬರುವ ಉಲಮಾಗಳು ಆತ್ಮೀಯರು ಎಲ್ಲರೂ ನನ್ನದೇ ಅತಿಥಿಯಾಗಿರುವರು. ತಮ್ಮ ಅಭಿಮಾನಿಗಳಿಗೆ ಗವರ್ನರ್  ಕೊಠಡಿಯ ಬಾಗಿಲು ಸದಾ ಸಮಯ ತೆರೆದಿರುವುದು ತಮ್ಮ ಗವರ್ನರ್ ಹೌಸ್'ನಲ್ಲಿ ಇರುವಿಕೆಯು ಬಂಧನವಲ್ಲ ಬದಲು ಸುಲ್ತಾನರ ಆಜ್ಞೆಯನ್ನು ಪಾಲಿಸುವ ಒಂದು ರೂಪ ಮಾತ್ರವೇ ಆಗಿದೆ. ಇಮಾಂ ಯೂಸೂಫ್ ನಬ್'ಹಾನಿ رحمۃ اللّٰہ علیہ ರವರು ಮುಸ್ಲಿಂ ಸಾಮ್ರಾಜ್ಯದ ಮಹಾನ್ ವ್ಯಕ್ತಿತ್ವವಾಗಿದ್ದರು. ಇಮಾಮರ ಬಂಧನದ ವಾರ್ತೆಯೂ ಬೆಂಕಿಯಂತೆ ಹರಡಿತು ಆದರೆ ಇಮಾಮರು ಮಾತ್ರ ನಿಶ್ಚಿಂತೆಯಿಂದ ಇದ್ದರು. ಆದರೂ ಉಲಮಾಗಳು ಹಿತೈಷಿಗಳು ಇಮಾಮರನ್ನು ಭೇಟಿಯಾದಾಗ ಹೇಳಿದರು ತಾವು ಒಪ್ಪಿಗೆ ಕೊಟ್ಟರೆ ಸುಲ್ತಾನರಲ್ಲಿ ತಮ್ಮ ಬಿಡುಗಡೆ ಬಗ್ಗೆ ಶಿಫಾರಸ್ಸು ಮಾಡುವೆವು. ಇಮಾಂ ಯೂಸೂಫುನ್ನಬ್ಹಾನಿ رحمۃ اللّٰہ علیہ ರವರು ಹೇಳಿದರು. ನಿಮಗೆ ನನ್ನ ಬಗ್ಗೆ ಶಿಫಾರಸ್ಸು ಮಾಡಲೇ ಬೇಕೆಂದಿದ್ದರೆ ಈಗಿನ ಸುಲ್ತಾನರ ಬದಲು ಸುಲ್ತಾನೇ ಕೌನೈನ್ صلی اللّٰہ علیہ وسلم ರ ಪವಿತ್ರ ಸನ್ನಿಧಿಯಲ್ಲಿ ಸ್ವಲಾತ್ ಸಲಾಂ ಹೇಳುತ್ತಾ ಈ ರೀತಿ ಇಸ್ತಿಗಾಸ ಮಾಡಿರಿ._

_*صلى الله على النبي الأمى* *صلى الله و سلم  صلاة و سلاما*_
_*عليك يا رسول الله قلت حيلتى انت وسيلتى أدركنى يا سيدى يا رسول الله.*_

_ಹಝ್ರತ್ ಝಿಯಾಉದ್ದೀನ್ ಮದನಿ رحمۃ اللّٰہ علیہ ಹೇಳುತ್ತಾರೆ. ನಾವು ಇಮಾಮರು ಹೇಳಿದಂತೆ ಸ್ವಲಾತಿನೊಂದಿಗೆ ಇಸ್ತಿಗಾಸವನ್ನು ಮಾಡುತ್ತಾ ಮೂರು ದಿನಗಳಷ್ಟೇ ಕಳೆದಿತ್ತು ಗವರ್ನರಿಗೆ ಸುಲ್ತಾನರ ಪತ್ರ ಬಂತು ಇಮಾಂ ನಬ್ಹಾನಿ رحمۃ اللّٰہ علیہ ಯವರನ್ನು  ಗೌರವದೊಂದಿಗೆ ಬಿಡುಗಡೆ ಮಾಡಬೇಕೆಂದು ಬಳಿಕ ಆದರ ಪೂರ್ವಕ ಬಿಡುಗಡೆ ಗೊಳಿಸಲಾಯಿತು. ತನ್ನ ಬಿಡುಗಡೆ ಸಂಬಂಧಿಸಿ ಇಮಾಂ ನಬ್ಹಾನಿ رحمۃ اللّٰہ علیہ  ಹೇಳುತ್ತಾರೆ.  ನಾನು ಇಖ್ಲಾಸಿನೊಂದಿಗೆ ದೀನ್ ಇಸ್ಲಾಮಿನ ಸೇವೆ ಮಾಡುತ್ತಿದ್ದೇನೆ ಮತ್ತು ನಬಿ صلی اللّٰہ علیہ وسلم ರ ಅನುಸರಣೆಯನ್ನೇ ಮಾಡುತ್ತಿದ್ದೇನೆ ಎಂಬ ವಿಷಯವುನ್ನು ತಿಳಿದಾಗ ನನ್ನ ಬಿಡುಗಡೆಗೆ ಆಜ್ಞಾಪಿಸಲಾಯಿತು ಮತ್ತು ಆಡಳಿತ ವರ್ಗದ ಹಿರಿಯ ವ್ಯಕ್ತಿಯೂ ನನ್ನಲ್ಲಿ ಕ್ಷಮೆಯನ್ನೂ ಕೇಳಿದರು._

*ವಫಾತ್*

_ಆಲಾ ಹಝ್ರತ್ رحمة الله عليه ರವರ ಖಲೀಫಾ ಹಝ್ರತ್ ಖುತುಬೇ ಮದೀನಾ ಮೌಲಾನಾ  ಝಿಯಾಉದ್ದೀನ್ ಮಹಾಜಿರ್ ಮದನಿ رحمة الله عليه ಹೇಳುತ್ತಾರೆ. ಹಝ್ರತ್ ಯೂಸೂಫ್ ನಬ್ಹಾನಿ رحمة الله عليه ರವರ ಪತ್ನಿ رحمۃ اللّٰہ علیہا ರವರಿಗೆ ಎಂಭತ್ತನಾಲ್ಕು ಬಾರಿ ನಬಿ صلى الله عليه وسلم ರನ್ನು ಕಾಣುವ ಭಾಗ್ಯವು ಲಭಿಸಿದೆ. ಇಮಾಂ ನಬ್ಹಾನಿ رحمة الله عليه ರವರು ನಬೀಯೇ ರಹ್ಮತ್ صلى الله عليه وسلم ರ ಆಶಿಖ್  ಸ್ವಾದಿಖ್ ಫನಾ ಫಿರ್ರಸೂಲ್ ಆಗಿದ್ದರು ಹೀಗಿರುವಾಗ ಅವರ ಬಗ್ಗೆ ಹೇಳಲು ಪದಗಳು ಸಿಗದು.  ಇಮಾಂ ಯೂಸೂಫ್ ನಬ್ಹಾನಿ رحمة الله عليه ರವರ ವಫಾತ್ ಬಗ್ಗೆ   ಹಝ್ರತ್ ಝಿಯಾಉದ್ದೀನ್ ಮದನಿ رحمة الله عليه ಹೇಳುತ್ತಾರೆ. *ಜವಾಹಿರುಲ್ ಬಿಹಾರ್* ಗ್ರಂಥ ರಚನೆಯ ಕೆಲವೇ ವರ್ಷಗಳ ಬಳಿಕ ನಬೀಯೇ ರಹ್ಮತ್ ಶಫೀಯೇ ಉಮ್ಮತ್ صلى الله عليه وسلم ರನ್ನು ಕನಸಿನಲ್ಲಿ ಝಿಯಾರತ್ ಭಾಗ್ಯವು ಸಿಕ್ಕಿತು  ನಬೀಯೇ ಕರೀಂ صلى الله عليه وسلم ರವರು ಜವಾಹಿರುಲ್ ಬಿಹಾರನ್ನು ತುಂಬಾ ಇಷ್ಟಪಟ್ಟರು ಮತ್ತು ಇಮಾಂ ನಬ್ಹಾನಿ رحمة الله عليه ರವರನ್ನು  ಪ್ರೀತ್ಯಾಧಾರದಿಂದ ತನ್ನ ಎದೆಗೆ ಅಪ್ಪಿಕೊಂಡರು. ( ಸುಬ್ಹಾನಲ್ಲಾಹ್..!  ಇಡೀ ಜೀವನವನ್ನು ಆ ಹಬೀಬರ ದೀನಿಗಾಗಿ ಧಾರೆ ಎರೆದ ಆ ಬಡಜೀವಕ್ಕೆ ಇನ್ನೇನು ಬೇಕಿತ್ತು.?  ಅಲ್ಲಾಹ್..)  ಇಮಾಂ ನಬ್ಹಾನಿ رحمة الله عليه ರವರು ನಬೀಯೇ ಕರೀಂ صلى الله عليه وسلم ರೊಂದಿಗೆ ಹೇಳಿದರು ಯಾ ರಸೂಲಲ್ಲಾಹ್ صلى الله عليه وسلم.. ಇನ್ನು  ವಿರಹದ ವೇದನೆಯನ್ನು ಸಹಿಸುವ ಶಕ್ತಿಯು ನನಗಿಲ್ಲ.! ಬಳಿಕ ಅದೇ ಸ್ಥಿತಿಯಲ್ಲಿ ಅವರು ವಫಾತ್ ಆದರು.  *إِنَّا لِلَّهِ وَإِنَّا إِلَيْهِ رَاجِعُونَ*  ಸಯ್ಯಿದುನಾ ಇಮಾಂ ಯೂಸೂಫ್ ಬಿನ್ ಇಸ್ಮಾಯೀಲ್ ನಬ್ಹಾನಿ رحمة الله عليه ರವರ ಮರಣಾ ನಂತರ ಶಿಷ್ಯರೊಬ್ಬರು ಅವರನ್ನು ಕನಸಿನಲ್ಲಿ ಕಂಡರು ಅದರಲ್ಲಿ ಇಮಾಂ رحمة الله عليه ರವರು ತನ್ನ ವಫಾತ್ ಬಗ್ಗೆ ಹೇಳಿದ ಸಂಭವವೂ ಈ ಮೇಲೆ ತಿಸಿದ ಘಟನೆಯಂತೆಯೇ ಜನರೆಡೆಯಲ್ಲಿ ಪ್ರಸಿದ್ಧವಾಗಿದೆ. ಇಮಾಂ ಯೂಸೂಫುನ್ನಬ್ಹಾನಿ رحمة الله عليه ರವರು ಇಮಾಂ ಅಹ್ಮದ್ ರಝಾ ಖಾನ್ ಬರೇಲ್ವಿ رحمة الله عليه ರವರ ವಫಾತಿನ ಹತ್ತು ವರ್ಷಗಳ ಬಳಿಕ 1350ಹಿಜರಿ 1931ಈಸವೀ ಯಲ್ಲಿ  ವಫಾತ್ ಆದರು ಹಾಗೂ ಫಾಲಸ್ತೀನಿನ ತನ್ನ ಹುಟ್ಟೂರಲ್ಲೇ ಅವರನ್ನು ದಫನ ಮಾಡಲಾಯಿತು_

_*ಮಹಾನುಭಾವರ ಮೇಲೆ ಅಲ್ಲಾಹನ ಕಾರುಣ್ಯವೂ ಸದಾ ಕಾಲ ಉಂಟಾಗಲಿ ಅವರ ಬರಕತ್'ನಿಂದ  ಅಲ್ಲಾಹನು ನಮ್ಮೆಲ್ಲರನ್ನೂ ಸಜ್ಜನರ ಸಾಲಿನಲ್ಲಿ ಸೇರಿಸಲಿ ಈಮಾನಿನೊಂದಿಗೆ ಜೀವಿಸಿ ಈಮಾನಿನೊಂದಿಗೆ ಮರಣಹೊಂದವ ಭಾಗ್ಯವನ್ನು ಕರುಣಿಸಲಿ...*_
_*رَبَّنَا تَقَبَّلْ مِنَّا إِنَّكَ أَنْتَ السَّمِيعُ العَلِيمُ آمین یارب العالمین بجاہ سید النبی الامین الکریم الرؤف الرحیم صلی اللّٰہ تعالیٰ علیہ واٰلہٖ وصحبہ وبارک وسلّم اجمعین*_

_*صَلُّوا عَلَى الْحَبِيب ...*_ 

_*صَلَّى اللهُ تعالى عَلَى مُحَمَّدٍﷺ*_

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...