Skip to main content

ತನ್ನ ಮೊಟ್ಟೆಯನ್ನು ಎಣಿಸಿ ನೋಡುವ ಬಾತುಕೋಳಿ


ವಿಸ್ಮಯ ತುಂಬಿದ ಜೀವಜಗತ್ತು 👉 *42*

*ತನ್ನ ಮೊಟ್ಟೆಯನ್ನು ಎಣಿಸಿ ನೋಡುವ ಬಾತುಕೋಳಿ!!!*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119

   ▪ *ಮೊಟ್ಟೆಯೊಡೆದು* ಮೊಟ್ಟೆಯಿಂದ ಹೊರಬಂದ ಕೂಡಲೇ ನೀರಿನಲ್ಲಿ ಚೆನ್ನಾಗಿ ಈಜಲು ಸಾಮರ್ಥ್ಯವಿರುವ ಒಂದು ಜೀವಿಯಾಗಿದೆ ಬಾತುಕೋಳಿ ಅಥವಾ ಹಂಸ.
   ▪ *ಬಾತು ಎರಡು* ತರ. ಒಂದು ಸಾಧಾರಣ ಬಾತುಕೋಳಿ. (Duck) ಮತ್ತೊಂದು ಶರೀರದಲ್ಲಿ ಸ್ವಲ್ಪ ದೃಡಕಾಯವಾಗಿರುವ ಹೆಬ್ಬಾತು. (Goose) ಅಂತೆಯೇ ಉದ್ದನೆಯ ಕಾಲಿರುವ ಬಹಳ ಅಪರೂಪವಾಗಿ ಕಾಣಸಿಗುವ ರಾಜಹಂಸ (Flamingo) ಕೂಡ ಬಾತುಕೋಳಿ ವಿಭಾಗದಲ್ಲಿ ಒಳಪಡುತ್ತದೆ.
   ▪ *ಹೆಬ್ಬಾತು*   ತನ್ನ ಮೊಟ್ಟೆಗಳಿಗೆ ಹತ್ತೊಂಬತ್ತು ದಿನಗಳ ತನಕ ಕಾವು ಕೊಡುತ್ತದೆ. ಈ ಕಾವು ಕೊಡುವ ಸಮಯದಲ್ಲಿ ಬಾಳ ಸಂಗಾತಿಯಾದ ಗಂಡು ಹೆಬ್ಬಾತು ತನ್ನ ಎಲ್ಲಾ ಶೆಡ್ಯೂಲ್‌ಗಳನ್ನು ತಾತ್ಕಾಲಿಕ ರದ್ದು ಮಾಡಿ ಒಂದು ನಿಮಿಷವೂ ಕಣ್ಣು ತಪ್ಪದೆ ಅಲ್ಲಿ ಕಾವಲು ನಿಲ್ಲುತ್ತದೆ. ಮಾತ್ರವಲ್ಲ ಗೂಡಿಗೆ ಬೇಕಾದ ಆಹಾರ ಕೂಡ ಸರಬರಾಜು ಮಾಡುತ್ತದೆ. ಸಾಧಾರಣ ಒಂಬತ್ತು ಅಥವಾ ಹನ್ನೊಂದು ಮೊಟ್ಟೆಯಿಡುವ ಇದು ಕಾವು ಕೊಡುವ ಸಮಯವಾದರೆ ಮೊಟ್ಟೆಯನ್ನು ಎಣಿಸಿ ನೋಡುತ್ತದೆ. ಕೆಲವೊಮ್ಮೆ ಮೊಟ್ಟೆಯು ಅದಕ್ಕಿಂತ ಹೆಚ್ಚಿದ್ದರೆ ತನ್ನ ಅದೃಷ್ಟ ಸಂಖ್ಯೆ ಎಂಬಂತೆ ಒಂಬತ್ತು ಅಥವಾ ಹನ್ನೊಂದಕ್ಕೆ ಮಾತ್ರ ಪರಿಗಣನೆ ಕೊಟ್ಟು, ಜಾಸ್ತಿ ಇರುವುದನ್ನು ಸ್ವೀಕರಿಸದೆ ದೂರ (Reject) ಮಾಡುತ್ತದೆ. ಸುಬ್‌ಹಾನಲ್ಲಾಹ್..! ಇದೆಂತಹಾ ವಿಸ್ಮಯ ತುಂಬಿದ ಜೀವ ಜಗತ್ತು...?
   ▪ *ಬಾತು ಮತ್ತು* ಹೆಬ್ಬಾತಿನ ಮಾಂಸ ತೇವಾಂಶದಿಂದ ಕೂಡಿದ್ದು ಬಹಳ ಉಷ್ಣವಾಗಿರುತ್ತದೆ. ಮಾಂಸವು ಬಹಳ ಪೌಷ್ಟಿಕವಾಗಿದ್ದು ಕೊಬ್ಬಿನ ಅಂಶ ಜಾಸ್ತಿಯಿರುವುದರಿಂದ ಶಾರೀರಿಕ ಪ್ರಕೃತಿಯಲ್ಲಿ ಉಷ್ಣಾಂಶ ಜಾಸ್ತಿ ಇರುವವರು ಇದನ್ನು ತಿನ್ನುವುದರಿಂದ ಸ್ವಲ್ಪ ತೊಂದರೆಯಾಗುತ್ತದೆ. ಕಫ ಜಾಸ್ತಿಯಾಗುತ್ತದೆ. ಕೆಲವೊಮ್ಮೆ ಜ್ವರ ಕೂಡ ಬರುತ್ತದೆ. ಆದ್ದರಿಂದ ಇದನ್ನು ದ್ಸಬಹ್ ಮಾಡುವ ಮೊದಲು ಇದಕ್ಕೆ ಸ್ವಲ್ಪ ಸೋಡಾಪುಡಿ ತಿನ್ನಿಸಬೇಕು. ಬಾಯಿ ತೆರೆದು ಸೋಡಾಪುಡಿಯನ್ನು ಒಳಗೆ ತೂರಿಸುವುದು ಬಹಳ ಉತ್ತಮ ಮಾರ್ಗ. ದ್ಸಬಹ್ ಮಾಡಿ ಮಾಂಸ ಮಾಡಿದ ನಂತರ ಮಾಂಸವನ್ನು ಸ್ವಲ್ಪ ಸಮಯಕ್ಕೆ ಎಣ್ಣೆಯಲ್ಲಿ ಮಿಶ್ರಣ ಮಾಡಿಡಬೇಕು. ನಂತರ ಪಲ್ಯ ಮಾಡಬೇಕು. ಹೀಗೆ ಮಾಡುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಮಾತ್ರವಲ್ಲ ಬೇಗನೆ ಜೀರ್ಣವಾಗದ ಮಾಂಸವಾದ್ದರಿಂದ ಇತ್ಯಾದಿ ಕರ್ಮಗಳನ್ನು ಮಾಡುವುದರಿಂದ ಬೇಗ ಜೀರ್ಣವಾಗುವುದಕ್ಕೂ ಸಹಾಯ ಮಾಡುತ್ತದೆ.
   ▪ *ಪಾರ್ಶ್ವವಾಯು* ಮತ್ತು ಕೂದಲು ಉದುರುವುದು ಅಂತೆಯೇ ಬೊಕ್ಕಸತಲೆಗೆ ಇದರ ಕೊಬ್ಬನ್ನು ಸವರುವುದರಿಂದ ಬಹಳ ವ್ಯತ್ಯಾಸ ಕಾಣುತ್ತದೆ. ಮಾತ್ರವಲ್ಲ ವಿಪರೀತ ಚಳಿಯಿಂದಾಗಿ ತುಟಿ, ಕಾಲಿನ ಹಿಮ್ಮಡಿ ಅಥವಾ ದೇಹದ ಇತರ ಭಾಗಗಳು ಸೀಳುವ ಅಭ್ಯಾಸವಿರುವವರು ಇದರ ಕೊಬ್ಬನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಸವರಿದರೆ ಅದು ಸಂಪೂರ್ಣ ಗುಣವಾಗುತ್ತದೆ.
   ▪ *ಆಗಾಗ್ಗೆ* ಕಾಡುತ್ತಿರುವ ತಲೆನೋವು ಅಥವಾ ತಲೆಯ ಒಂದು ಭಾಗದ ಸಿಡಿತಕ್ಕೆ (ಚೆನ್ನಿಕುತ್ತು) ಇದರ ಪಿತ್ತಕೋಶವನ್ನು ಜಜ್ಜಿ ನೇರಳೆ ಮರದ ಎಣ್ಣೆಯಲ್ಲಿ ಮಿಶ್ರಣ ಮಾಡಿ ಅದರ ವಾಸನೆಯನ್ನು ತನ್ನ ಮೂಗಿನ ಮೂಲಕ ಎಳೆಯುವುದರಿಂದ ಒಳ್ಳೆಯ ಫಲ ಕಾಣುತ್ತದೆ.
   ▪ *ಒಣ ಕೆಮ್ಮುಗೆ* (dry cuff) ಇದರ ಪಿಟ್ಟೆಯನ್ನು ಒಣಗಿಸಿ, ಚೆನ್ನಾಗಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಕೆಮ್ಮು ಬೆಟ್ಟ ಹತ್ತುತ್ತದೆ.
  
  ▪ *ತಾನರಿಯದೆಯೇ* ಮೂತ್ರ ಸೋರಿಕೆ ಇರುವವನು ಇದರ ನಾಲಗೆಯನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ಸಂಪೂರ್ಣ ಗುಣವಾಗುತ್ತದೆ.
   ▪ *ಇದರ* ಮೊಟ್ಟೆಯು ಬಹಳ ಉಷ್ಣ ಮತ್ತು ಪೌಷ್ಟಿಕವಾಗಿರುತ್ತದೆ. ಆದರೂ ತಲೆಸುತ್ತುವಿಕೆ ಮತ್ತು ವಾಯಿ ಸಂಬಂಧಿಸಿದ ತೊಂದರೆ ಇರುವವರಿಗೆ (ಗ್ಯಾಸ್ ಟ್ರಬಲ್) ಅಂತೆಯೇ ಕರುಳು ಸಂಬಂಧವಾದ ರೋಗ ಇರುವವರಿಗೆ ಇದರ ಮೊಟ್ಟೆಯನ್ನು ತಿನ್ನುವುದರಿಂದ ತೊಂದರೆಯಾಗುತ್ತದೆ. ಅಂತವರು ಇದನ್ನು ಝಾತಾರ್ ಮಿಶ್ರಣ ಮಾಡಿ ತಿಂದರೆ ಯಾವುದೇ ತೊಂದರೆ ಆಗುವುದಿಲ್ಲ.
   ▪ *ಹೆಬ್ಬಾತಿನ* ಹೊಟ್ಟೆಯಲ್ಲಿ ಸ್ವಾಭಾವಿಕವಾಗಿ ಉಂಟಾಗುವ ಒಂದು ತರ ಸ್ಪಟಿಕ (ಕಲ್ಲು) ದ್ಸಬಹ್ ಮಾಡಿದ ನಂತರ ಅದರ ಹೊಟ್ಟೆಯಲ್ಲಿ ಕಾಣ ಸಿಗುತ್ತದೆ. ಅತಿಸಾರ ಅಥವಾ ಜುಲಾಬಿಗೆ ಇದನ್ನು ಹುಡಿಮಾಡಿ ಕುಡಿದರೆ ತಕ್ಷಣ ನಿಲ್ಲುತ್ತದೆ. ಮಾತ್ರವಲ್ಲ ಒಂದು ಸಿಧ್ಧ ಔಷದ ಕೂಡ ಆಗಿದೆ.
   ▪ *ಒಮ್ಮೆ* ಪ್ರವಾದಿ ದಾವೂದ್ (ಅ) ರವರ ಪುತ್ರ ಪ್ರವಾದಿ ಸುಲೈಮಾನ್ (ಅ) ರವರ ಬಳಿ ಒಬ್ಬರು ಬಂದು ಹೇಳಿದರು. *"ಪ್ರವಾದಿಯವರೇ.., ನಾನು ಮನೆಯಲ್ಲಿ ಸಣ್ಣ ಮಟ್ಟಿಗೆ ಬಾತುಕೋಳಿ ಸಾಕಣೆ ಮಾಡುತ್ತಿದ್ದೇನೆ. ಆದರೆ ಆಗಾಗ್ಗೆ ನಮ್ಮ ಮನೆಯ ಬಾತುಕೋಳಿ ಗೂಡಿನಿಂದ ಬಾತುಗಳು ಕಳವಾಗುತ್ತದೆ. ಇವತ್ತೂ ಕೂಡ ಒಂದು ಬಾತು ಕಾಣುವುದಿಲ್ಲ. ಯಾರೋ ನನ್ನ ನೆರೆಮನೆಯವನ ಕೆಲಸವೆಂಬ ಗುಮಾನಿಯಿದೆ.‌ ಆಗಾಗ್ಗೆ ಕಳವಾಗುತ್ತದೆ. ಯಾರೆಂದು ತಿಳಿಯುವುದಿಲ್ಲ."*
   ▪ *ದೂರು* ಕೊಡಲು ಬಂದ ಬಡಪಾಯಿಯಲ್ಲಿ ಬಹಳ ಬುದ್ಧಿವಂತನಾದ ಸುಲೈಮಾನ್ (ಅ) ರವರು ಹೇಳಿದರು. *"ನೀನು ಗಾಬರಿ ಪಡಪೇಡ. ನಮಗೆ ವ್ಯವಸ್ಥೆ ಮಾಡುವ. ಕಳ್ಳನನ್ನು ಹಿಡಿಯುವ ತಂತ್ರ ನನ್ನಲ್ಲಿದೆ. ಸ್ವಲ್ಪ ತಾಳ್ಮೆ ಮಾಡು."*
   ▪ *ಆ ದಿನ* ಮಸೀದಿಯಲ್ಲಿ ನಮಾಝು ಮುಗಿದ ಕೂಡಲೇ ಹಝ್ರತ್ ಸುಲೈಮಾನ್ (ಅ) ರವರು ಎದ್ದು ನಿಂತು ಒಂದು ಗಂಭೀರ ಭಾಷಣ ಮಾಡಿದರು. ಭಾಷಣದ ಮಧ್ಯೆ ಅವರು ಹೇಳಿದರು. *"ಮಹನಿಯರೇ..., ನಿಮ್ಮಲ್ಲಿ ಒಬ್ಬ ನೆರೆಮನೆಯವನ ಮನೆಯಿಂದ ಆಗಾಗ್ಗೆ ಬಾತುಕೋಳಿ ಕದಿಯುತ್ತಾನೆ. ಇವತ್ತೂ ಕೂಡ ಕದ್ದು ಮಸೀದಿಗೆ ಬಂದಿದ್ದಾನೆ. ಆದರೆ ಕದಿಯುವ ಗೌಜಿಯಲ್ಲಿ ಬಾತುಕೋಳಿಯ ಗರಿಗಳು ಅವನ ತಲೆ ಕೂದಲಲ್ಲಿ ಸಿಲುಕಿದ್ದು ಮಾತ್ರ ಅವನಿಗೆ ತಿಳಿಯದೆ ಹೋದದ್ದು ಬಹಳ ನಾಚಿಕೆಯ ವಿಷಯ."*
   ▪ *ಇದು* ಹೇಳಿದಾಕ್ಷಣ ಸಭೆಯಿಂದ ಒಬ್ಬನು ತನ್ನ ಕೈಯಿಂದ ತಲೆಯನ್ನು ಸವರಿ ನೋಡಿದ. ಕೂಡಲೇ ಸುಲೈಮಾನ್ (ಅ) ಹೇಳಿದರು. *" ಹೆ.. ಹೇ... ನಿನ್ನ ಬಾತುಕೋಳಿ ಕಳ್ಳ ಇತನೇ.. ಇವನನ್ನು ಹಿಡಿದುಕೊಳ್ಳು."*
   ▪ *ಬಾತು* ವಿಭಾಗದ ಮೂರನೇ ಪಕ್ಷಿಯಾದ ರಾಜಹಂಸದ (Flamingo) ಜೀವನ ಶೈಲಿಯು ಬಾತುಕೋಳಿ ಮತ್ತು ಹೆಬ್ಬಾತಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಹಾರಾಟ ಸಮಯದಲ್ಲಿ ಏಕಾಂಗಿಯಾಗಿಯೂ ಕೂಟವಾಗಿಯೂ ಹಾರುವುದಾದರೂ ರಾತ್ರಿಯ ನಿದ್ದೆ ಮಾತ್ರ ಒಂದೇ ಕಡೆಯಲ್ಲಿ ಬಹಳ ವ್ಯವಸ್ತಿತ ರೂಪದಲ್ಲಿ ಸಾಲು ಸಾಲಾಗಿ ಕೂಟವಾಗಿಯಾಗಿರುತ್ತದೆ. ಗಂಡು ರಾಜಹಂಸಗಳು ನಿದ್ದೆ ಮಾಡುವಾಗ ಹೆಣ್ಣು ರಾಜಹಂಸಗಳು ಗಂಡು ರಾಜಹಂಸಗಳನ್ನು ತನ್ನ ಲೈಂಗಿಕ ಚಟುವಟಿಕೆಗೆ ಬಳಸಿ ಕೊಳ್ಳಲು ಬೇಕಾದ ಎಲ್ಲಾ ಕಸರತ್ತುಗಳನ್ನು ಮಾಡಿ ತನ್ನ ಬಲೆಯಲ್ಲಿ ಬೀಳಿಸುತ್ತದೆ. ಬಲೆಗೆ ಬೀಳದೆ ನಿರಾಕರಣೆ ಮಾಡಿದರೆ ಅದನ್ನು ಬಿಟ್ಟು ಹತ್ತಿರದಲ್ಲಿ ಮಲಗಿರುವ ಬೇರೊಂದನ್ನು ಸಮೀಪಿಸುತ್ತದೆ. ಹೆಣ್ಣು ರಾಜಹಂಸೆಗೆ ನಿದ್ದೆ ಬಹಳ ಕಡಿಮೆ. ಬೆಳಗಾಗುವ ತನಕ ಮದುಮಗಳಾಗಿಯೇ ಇರುತ್ತದೆ.
   ▪ *ಹೆಣ್ಣು* ಮೊಟ್ಟೆಯಿಟ್ಟರೆ ಮೊಟ್ಟೆಗೆ ಕಾವು ಕೊಡುವುದಿಲ್ಲ. ಬದಲಾಗಿ ಗಂಡು ರಾಜಹಂಸ ಅದರ ಮೇಲೆ ಪಿಟ್ಟೆಯಿಡುತ್ತದೆ. (ಮಲ ವಿಸರ್ಜನೆ) ಪಿಟ್ಟೆಯ ತಾಪದಿಂದ ಕೆಲವು ದಿನಗಳ ನಂತರ ಮೊಟ್ಟೆಯೊಡೆದು ಮರಿ ಹೊರ ಬರುತ್ತದೆ. ಹೊರಬರುವ ಮರಿಗೆ ಯಾವುದೇ ಚಲನವಲನವಿರುವುದಿಲ್ಲ. ನಂತರ ತಾಯಿ ರಾಜಹಂಸವು ಅದರ ಬಾಯಿ ತೆರೆದು ಅದರ ಕೊಕ್ಕಿನ ಮೂಲಕ ಅದರ ಬಾಯಿಯೊಳಗೆ ಊದುತ್ತದೆ. ತಾಯಿಯ ಬಿಸಿ ವಾಯು ಪುಟ್ಟ ಮರಿಯ ಶರೀರದ ಒಳಗೆ ತಲುಪಿದಾಗ ಕಂಪನ ಶುರುವಾಗುತ್ತದೆ. ಸುಬ್‌ಹಾನಲ್ಲಾಹ್.... ಈ ಪ್ರಪಂಚದಲ್ಲಿ ನಾವರಿಯದ ಅದೆಷ್ಟೋ ಅಚ್ಚರಿಗಳು.!!
   ▪ *ಬಾತು* ಮತ್ತು ಹೆಬ್ಬಾತಿಗಿಂತ ಇದರ ಮಾಂಸ ಬಹಳ ರುಚಿಕರವೂ, ಪುಷ್ಟಿಕರವೂ ಸ್ವಾದಿಷ್ಟವೂ ಆಗಿದೆ. ಆಗಾಗ್ಗೆ ತಿಂದರೆ ಶರೀರಕ್ಕೆ ಒಳ್ಳೆಯ ಪುಷ್ಟಿ ಮತ್ತಷ್ಟು ಶಕ್ತಿ ದೊರಕುತ್ತದೆ. ಶರೀರದಲ್ಲಿ ರೋಗ ನಿರೋಧಕ ಶಕ್ತಿಗಳು ಉಂಟಾಗುತ್ತದೆ. ಅಲ್ಲದೆ ಬಹಳ ಉಷ್ಣವೂ ಆಗಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ವೀರ್ಯಾವನ್ನು ವರ್ಧಿಸುತ್ತದೆ. ಪ್ರವಾದಿ ಮುಹಮ್ಮದ್ (ಸ) ರ ಸನ್ನಿಧಿಗೆ ಒಬ್ಬರು ಸ್ವಾಹಾಬಿ ರಾಜಹಂಸದ ಮಾಂಸ ತಂದಾಗ ಪ್ರವಾದಿಯವರು ಅದನ್ನು ತಿಂದು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಹದೀಸಿನಲ್ಲಿ ವರದಿಯಾಗಿದೆ.
   ▪  *"ಈ ಪಕ್ಷಿಯ ಮಾಂಸದ ರುಚಿ ಮತ್ತು ಸ್ವಾದಿಷ್ಟ ಪಕ್ಷಿ ವರ್ಗದಲ್ಲಿ ಈ ಪ್ರಪಂಚದಲ್ಲಿ ಬೇರೆ ಯಾವ ಪಕ್ಷಿಗೂ ಇಲ್ಲ"* ಎಂದು ವೈದ್ಯ ಲೋಕದ ನಕ್ಷತ್ರಗಳಾದ ವಿಖ್ಯಾತ ಪಂಡಿತ *ಬಿನ್ ಬಯ್‌ತಾರ್* ಮತ್ತು *ಬಿನ್ ಮಾಸವಯ್‌ಹ್* ರವರು ತಮ್ಮ ಗ್ರಂಥಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಸಂಗ್ರಹ ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್,* ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್* ಮತ್ತು ತತ್ವಜ್ಞಾನಿ ಜಾಹಿಳ್‌ರ *ಕಿತಾಬುಲ್ ಹಯವಾನ್*  ಎಂಬ ಗ್ರಂಥಗಳು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...