ವಿಸ್ಮಯ ತುಂಬಿದ ಜೀವಜಗತ್ತು 👉 *39*
*ಸಮಾಧಿ ಅಗೆದು ಶವ ತಿನ್ನುವ ಕತ್ತೆಕಿರುಬ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ *ಕತ್ತೆಕಿರುಬ* ಅಥವಾ ಹೈನಾ ಎಂದು ಕರೆಯಲ್ಪಡುವ ಈ ಕ್ರೂರ ಮೃಗದ ಬಗ್ಗೆ ನಮ್ಮಲ್ಲಿ ತಿಳಿದವರು ಬಹುಶಃ ಬಹಳ ಕಡಿಮೆ. ಸುಮಾರು ಇಪ್ಪತ್ತೈದರಿಂದ ಮೂವತ್ತು ವರ್ಷಗಳ ತನಕ ಬದುಕುವ ಈ ಪ್ರಾಣಿಯು ಗರ್ಭಧಾರಣೆಯಾಗಿ ಮೂರು ತಿಂಗಳಾಗುವಾಗ ಒಂದರಿಂದ ನಾಲ್ಕರ ತನಕ ಮರಿಯಿಡುತ್ತದೆ. ಹುಟ್ಟುವ ಮರಿಯ ಕಣ್ಣು ಸಿಂಹ, ನಾಯಿ, ತೋಳದಂತೆಯೇ ಸಂಪೂರ್ಣ ಮುಚ್ಚಿರುತ್ತದೆ. ಒಂದು
ವಾರವಾಗುವಾಗ ತಾನಾಗಿಯೇ ತೆರೆಯುತ್ತದೆ.
▪ *ಹಗಲು* ಹೊತ್ತು ವಿಶ್ರಾಂತಿ ಪಡೆಯುವ ಈ ಕುರೂಪಿ ಪ್ರಾಣಿಯ ಹೊಟ್ಟೆಪಾಡಿಗಾಗಿರುವ ಸಂಚಾರ ಜಾಸ್ತಿಯಾಗಿ ರಾತ್ರಿಯಾಗಿರುತ್ತದೆ. ಮನುಷ್ಯನ ರಕ್ತ ಮತ್ತು ಮಾಂಸವಾಗಿರುತ್ತದೆ ಇದರ ಅಚ್ಚುಮೆಚ್ಚಿನ ಆಹಾರ. ಗಾಡ ನಿದ್ದೆಯಲ್ಲಿರುವ ಒಬ್ಬ ವ್ಯಕ್ತಿಯನ್ನು ಕಂಡರೆ ಯಾವುದೇ ಶಬ್ದ ಮಾಡದೆ ಬಹಳ ಮೌನವಾಗಿ ಅವನ ಹತ್ತಿರ ಬಂದು ಅವನ ಕುತ್ತಿಗೆಯನ್ನು ಬಲವಂತವಾಗಿ ಕಚ್ಚಿಹಿಡಿದು ಸಾಯುವ ತನಕ ಅವನ ಬಿಸಿ ತಾಜಾ ರಕ್ತವನ್ನು ಕುಡಿಯುತ್ತದೆ. ನಂತರ ಆರಾಮವಾಗಿ ಸುಖ ಭೋಜನ ಮಾಡುತ್ತದೆ.
▪ *ಈ ಪ್ರಾಣಿಗೆ* ಹುಲಿ, ಸಿಂಹದಂತೆ ತಾಜಾ ಹಸಿ ಮಾಂಸ ಸಿಗಬೇಕೆಂಬ ನಿಬಂಧನೆ ಇಲ್ಲ. ಸತ್ತ ಶವ ಬಹಳ ಇಷ್ಟ. ಹಗಲು ಹೊತ್ತಿನಲ್ಲಿ ಸಿಂಹದಂತಹಾ ಕ್ರೂರ ಮೃಗಗಳು ತಿಂದು ಬಾಕಿ ಬಿಟ್ಟ ಎಂಜಲಾಗಿರುತ್ತದೆ ಇದರ ಮುಖ್ಯ ಆಹಾರ. ಅತಿ ಸೂಕ್ಷ್ಮ ಘ್ರಾಣಶಕ್ತಿ ಇರುವ ಈ ಕತ್ತೆಕಿರುಬನಿಗೆ ಸತ್ತ ಶವದ ವಾಸನೆ ಎಷ್ಟೋ ದೂರದಿಂದ ತಿಳಿಯುತ್ತದೆ. ಮನುಷ್ಯನ ರಕ್ತ ಮತ್ತು ಅವನ ಮಾಂಸವನ್ನು ಅತಿಯಾಗಿ ಇಷ್ಟಪಡುವ ಈ ಪ್ರಾಣಿ ಕೆಲವೊಮ್ಮೆ ಅವಕಾಶ ದೊರೆತರೆ ಮನುಷ್ಯ ಸಮಾಧಿಯನ್ನು ಕೂಡ ಅಗೆದು ಶವವನ್ನು ತಿನ್ನುತ್ತದೆ ಎಂದು ಹೇಳಲಾಗುತ್ತದೆ.
▪ *ಯಾವಾಗಲೂ* ಒಕ್ಕೂಟವಿಲ್ಲದೆ ಒಂಟಿಯಾಗಿ ಬದುಕುವ ಈ ಪ್ರಾಣಿಯ ಕೂಗು ಕಾಡಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಬಹಳ ವಿಚಿತ್ರವಾಗಿದೆ. ಅಟ್ಟಹಾಸದಿಂದ ಕೇಕೆಹಾಕಿ ನಗುವಂತಿರುವ ಇದರ ಕೂಗು ಬಹಳ ಭಯಾನಕವಾಗಿದೆ.
▪ *ಇದರ* ಬೇರೊಂದು ಅದ್ಭುತವೆಂದರೆ, ಇದು ಒಂದು ವರ್ಷ ಗಂಡಾಗಿ ಬೀಜ ಉತ್ಪತ್ತಿ ಮಾಡಿದರೆ ಎರಡನೇ ವರ್ಷ ಹೆಣ್ಣಾಗಿ ಹೆರಿಗೆ ಮಾಡುತ್ತದೆ. ವರ್ಷಗಳುರುಳಿದಂತೆ ಅದು ತಿರುಗುತ್ತಾ ಮರುಗುತ್ತಾ (ರೊಟೇಟ್) ಇರುತ್ತದೆ. ಇಮಾಮ್ ಝಮಕ್‌ಶರೀ, ವಿಶ್ವವಿಖ್ಯಾತ ತತ್ವಜ್ಞಾನಿ ಜಾಹಿದ್, ಇಮಾಮ್ ಖಝ್‌ವೀನಿ, ಅಂತೆಯೇ ಬಿನ್‌ಸಲಾಹ್ ಮುಂತಾದ ಪೌರಾಣಿಕ ಉಲಮಾಗಳು ಈ ಅದ್ಭುತ ವಿಷಯದ ಬಗ್ಗೆ ಅವರವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
▪ *ಕತ್ತೆಕಿರುಬನಿಗೆ* ನಾಯಿಯು ಕಟ್ಟಾ ವೈರಿ. ನಾಯಿಯ ನೆರಳನ್ನು ಕೂಡ ನೋಡದು. ಅಷ್ಟಕ್ಕೂ ವೈರಾಗ್ಯ. ಎಷ್ಟರ ತನಕವೆಂದರೆ, ಎತ್ತರದ ಪರ್ವತ, ಬೆಟ್ಟ ಮುಂತಾದ ಜಾಗದಲ್ಲಿ ರಾತ್ರಿ ಚಂದ್ರನ ಬೆಳಕಿನಲ್ಲಿ ನಾಯಿಯೊಂದು ನಡೆಯುತ್ತಿರುವಾಗ ಅದರ ನೆರಳು ಬೆಟ್ಟದ ಕೆಳಗೆ ನಡೆಯುತ್ತಿರುವ ಕತ್ತೆಕಿರುಬನ ಮೇಲೆ ಬಿದ್ದರೆ ನನ್ನ ಶತ್ರು ನಾಯಿಯ ನೆರಳು ನನ್ನ ಮೇಲೆ ಬಿತ್ತಲ್ವಾ ಎಂಬ ಸಿಟ್ಟಿನಿಂದ ನಾಯಿಯ ಮೇಲೆ ಹಾರಿ ನಾಯಿಯನ್ನು ಕೊಂದು ತಿನ್ನುತ್ತದೆ. ನಾಯಿಯಾದರೆ ಕತ್ತೆಕಿರುಬನ ಕೂಗು ಕೇಳಿದರೆ ಹೆದರಿ ಮೂತ್ರ ಒಯ್ಯುತ್ತದೆ. ಮಾತ್ರವಲ್ಲ ಮುಖಾಮುಖಿಯಾಗಿ ಕಂಡರೆ ಕೆಲವೊಮ್ಮೆ ಪ್ರಜ್ಞೆ ತಪ್ಪಿ ಬೀಳುತ್ತದೆ.
▪ *ಕತ್ತೆಕಿರುಬನ* ಮಾಂಸ ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ಧ.
▪ *ಮನೆ* ವಠಾರದಲ್ಲಿ ಎಲ್ಲಿಯಾದರೂ ಕತ್ತೆಕಿರುಬನ ಚರ್ಮವನ್ನು ತೂಗುಹಾಕಿದರೆ ಆ ಪರಿಸರದಲ್ಲಿ ನಾಯಿಯನ್ನು ಕಾಣಸಿಗದು.
▪ *ನಾಯಿಯ* ಉಪದ್ರವ ಇರುವ ಪ್ರದೇಶಕ್ಕೆ ಹೋಗುವಾಗ ಕತ್ತೆಕಿರುಬನ ಚರ್ಮವನ್ನು ಕೈಯಲ್ಲಿ ಹಿಡಿದುಕೊಂಡರೆ ಯಾವ ಘೋರ ನಾಯಿಯ ತೊಂದರೆಯೂ ಇರಲಿಕ್ಕಿಲ್ಲ. ಅಂತೆಯೇ ಇದರ ಕೊಬ್ಬನ್ನು ಶರೀರಕ್ಕೆ ಹಚ್ಚಿ ಯಾವ ಪರಿಣಿತ ನಾಯಿಯ ಹತ್ತಿರ ಹೋದರೂ ಮೌನವಾಗಿರುವುದು.
▪ *ಶೈತಾನನಿಂದ* ಬರುವ *ವಸ್‌ವಾಸ್* ಜಾಸ್ತಿ ಇರುವವನು ಇದರ ರಕ್ತವನ್ನು ಕುಡಿದರೆ *ವಸ್‌ವಾಸ್* ತಾನಾಗಿಯೇ ಹೋಗುತ್ತದೆ. ಇದು ಪರೀಕ್ಕಿಸಿ ನೋಡಿದ ಒಂದಾಗಿದೆ. ನೂರಕ್ಕೆ ನೂರು ಫಲಕಾರಿಯಾಗಿರುತ್ತದೆ.
▪ *ಓದುವಾಗ* ಕಣ್ಣು ಬಲೆಕಟ್ಟಿದಂತಾಗುವುದು, ಕಣ್ಣಲ್ಲಿ ನೀರು ಬರುತ್ತಾ ಇರುವುದು, ದೂರದೃಷ್ಟಿ ಕಡಿಮೆಯಿರುವುದು ಇತ್ಯಾದಿ ತೊಂದರೆ ಇರುವವರು ಕತ್ತೆಕಿರುಬನ ಪಿತ್ತಕೋಶವನ್ನು ಒಣಗಿಸಿ ಅದನ್ನು ಚೆನ್ನಾಗಿ ಪುಡಿಮಾಡಿ ಆ ಹುಡಿಯನ್ನು ಕಣ್ಣಿಗೆ ಸುರುಮ ಹಾಕುವಂತೆ ಕೆಲವು ದಿನಗಳ ಕಾಲ ಹಾಕುವುದಾದರೆ ಅದು ವಾಸಿಯಾಗುವುದಲ್ಲದೆ ಕಣ್ಣಿನ ಗೋಚರಶಕ್ತಿ ಜಾಸ್ತಿಯಾಗುತ್ತದೆ. ಮಾತ್ರವಲ್ಲ ಕಣ್ಣು ಬಹಳ ಸೊಗಸಾಗುತ್ತದೆ.
▪ *ಪುಟ್ಟ ಮಗು* ಆಗಾಗ್ಗೆ ಅಸ್ವಸ್ಥ ಆಗುವುದಾದರೆ ಈ ಪ್ರಾಣಿಯ ಕತ್ತಿನ ಹಿಂಬಾಗದ ಕೂದಲನ್ನು ಸುಟ್ಟು ನಿರಂತರ ಏಳು ದಿನಗಳ ಕಾಲ ಹೊಗೆ ಹಿಡಿಯುವುದಾದರೆ ಮಗು ಬಹಳ ಚುರುಕು ಮತ್ತು ಚಾಣಾಕ್ಷನಾಗುವುದು.
▪ *ಒಬ್ಬನಿಗೆ* ಕತ್ತೆಕಿರುಬನ ಮಾಂಸವನ್ನು ತಿನ್ನುವ ಕನಸು ಕಂಡರೆ ಅವನನ್ನು ಯಾರೋ ಸಿಹ್‌ರ್ (ಮಾಟ) ಮಾಡಿರುತ್ತಾರೆ ಎಂಬುದರ ನಿಸಾನೆಯಾಗಿದೆ. ಆದ್ದರಿಂದ ಕೂಡಲೇ ಮಾಡಲ್ಪಟ್ಟ ಸಿಹ್‌ರಿಗೆ ಚಿಕಿತ್ಸೆ ಮಾಡುವುದು ಒಳಿತು.
▪ *ಕಿರುಬನ ಹಾಲು* ಕುಡಿದ ಕನಸು ಬಿದ್ದರೆ ಯಾರದೋ ವಂಚನೆ ಪಿತೂರಿಗೆ ಬಲಿಯಾಗುತ್ತಾನೆ ಎಂಬುದರ ಸಂಕೇತವಾಗಿದೆ.
ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್*
ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಮತ್ತು ಇಮಾಮ್ ನಾಬುಲ್‌ಸಿಯ ತಅ‌್‌ತೀರುಲ್ ಅನಾಮ್ ಎಂಬ ಗ್ರಂಥ.

Comments