ನರಕ ಏಳು ವಿಧ
*1* ಜಹನ್ನಂ : ಸತ್ಯವಿಶ್ವಾಸಿಗಳಲ್ಲಿ ಮಹಾ ಪಾಪ ಎಸಗಿದವರು ವಾಸಿಸುವ ಸ್ಥಳವಿದು. ಪ್ರವಾದಿ(ಸ.ಅ)ರವರಿಂದ ಶಫಾಅತ್ ದೊರೆತರೆ ಮಾತ್ರ ಅವರು ಅದರಿಂದ ಹೊರಬರುವರು.
*2* ಲಳಾ : ಇದು ಘೋರ ಬೆಂಕಿಯಿಂದ ಹೊತ್ತಿ ಉರಿಯುವ ನರಕ. ಇದರ ಬೆಂಕಿಗೆ ಹೊಗೆ ಇರುವುದಿಲ್ಲ. ಇಬ್ಲೀಸ್ ಅವನ ಅನುಚರರು ಮತ್ತು ಮಜೂಸಿ (ಅಗ್ನಿ ಆರಾಧಕ)ಗಳ ವಾಸಸ್ಥಳವಿದು.
*3* ಹುತ್ವಮ : ಇದು ಯಹೂದಿಗಳಿಗಾಗಿ ತಯಾರಿಸಲಾಗಿರುವ ನರಕ.
*4* ಸ'ಈರ್ : ನಿರಂತರವಾಗಿ ಹೊತ್ತಿ ಉರಿಯುವ ಈ ಮಹಾ ಅಗ್ನಿ ಕುಂಡದಲ್ಲಿ ಬೆಂಕಿಯ ಹಾವು, ಚೇಳು ಮತ್ತು ಸಂಕೋಲೆಗಳಿವೆ. ನರಕಗಳ ಪೈಕಿ ಇದು ಅತೀ ಭೀಕರವಾದುದು. ನಸ್ರಾಣಿಗಳು ಅದರ ಅವಕಾಶಿಗಳಾಗಿರುತ್ತಾರೆ.
*5* ಸಖರ್ : ಇದು ಯಹೂದಿಗಳ ಪೈಕಿ ಸ್ವಾಭಿ ಎಂಬ ಒಂದು ವರ್ಗದವರಿಗಾಗಿ ತಯಾರಿಸಲ್ಪಟ್ಟ ನರಕ.
*6* ಜಹೀಮ್ : ಇದರ ಒಂದು ಕೆಂಡವು ಇಡೀಯ ಪ್ರಪಂಚವನ್ನೇ ಭಸ್ಮಗೊಳಿಸಬಲ್ಲದು. ಅತೀ ಕಠೋರ ಮತ್ತು ಅತ್ಯಂತ ನಿಕೃಷ್ಟವಾದ ಈ ನರಕದ ಯಾತನೆಗೆ ಬಹು ದೇವಾರಾಧಕರು ಮತ್ತು ವಿಗ್ರಹಾರಾಧಕರು ಬಲಿಯಾಗುವರು.
*7 ಹಾವಿಯತ್*: ಬಹಳ ಕಠಿಣ ತಾಪವನ್ನು ಹೊಂದಿದ ನರಕ. ಇದನ್ನು ಪ್ರವೇಶಿಸುವವರು ಎಂದೆಂದಿಗೂ ಅಲ್ಲಿಂದ ಹೊರ ಬರುವಂತಿಲ್ಲ. ಈ ನರಕದಲ್ಲಿ ಹಬ್ ಹಬ್ ಎಂಬ ಒಂದು ಬಾವಿಯಿದೆ. ಆ ಬಾವಿಯನ್ನು ತೆರೆದೊಡನೆ ಅದರಿಂದ ಒಂದು ವಿಧದ ಅಗ್ನಿ ಹೊರ ಹೊಮ್ಮುತ್ತದೆ. ಇದರ ತಾಪದಿಂದ ಇತರ ಬೆಂಕಿ ಕೂಡಾ ಅಲ್ಲಾಹನಲ್ಲಿ ಅಭಯ ಯಾಚಿಸುತ್ತದೆ. ಅಗ್ನಿಯಿಂದ ನಿರ್ಮಿತಗೊಂಡ ಸ'ಊದ್ ಎಂಬ ಒಂದು ಪರ್ವತ ಅಲ್ಲಿದೆ. ಅಲ್ಲಾಹುವಿನ ಶತ್ರುಗಳ ಕೈ ಕಾಲುಗಳನ್ನು ಕಟ್ಟಿ ಸಂಕೋಲೆಯಿಂದ ಬಿಗಿಯಾಗಿ ಬಂಧಿಸಿ ಆ ಪರ್ವತದ ಮೇಲೆ 70 ವರ್ಷ ಕಾಲ ಇಡಲಾಗುತ್ತದೆ. ಕಪಟ ವಿಶ್ವಾಸಿ (ಮುನಾಫಿಕ್)ಗಳೇ ಈ ಭೀಕರ ನರಕದ ನಿವಾಸಿಗಳು.
ನರಕದ ಪ್ರತಿಯೊಂದು ಬಾಗಿಲುಗಳ ಬಳಿ ಸಾವಿರಾರು ಅಗ್ನಿಯ ಪರ್ವತಗಳಿವೆ. ಪ್ರತಿಯೊಂದು ಪರ್ವತಗಳಲ್ಲಿ ಎಪ್ಪತ್ತು ಸಾವಿರ ಅಗ್ನಿಯ ಕಣಿವೆಗಳಿವೆ! ಪ್ರತಿಯೊಂದು ಕಣಿವೆಗಳಲ್ಲಿ ಎಪ್ಪತ್ತು ಸಾವಿರ ಅಗ್ನಿಯ ಅಗ್ನಿಯ ನೆಲ ಮಾಳಿಗೆಗಳಿವೆ, ಪ್ರತಿಯೊಂದು ನೆಲಮಾಳಿಗೆಗಳಲ್ಲಿ ಎಪ್ಪತ್ತು ಸಾವಿರ ಅಗ್ನಿ ನಿವಾಸಗಳಿವೆ. ಪ್ರತಿಯೊಂದು ನಿವಾಸಗಳಲ್ಲಿ ಸಾವಿರ ತರದ ಯಾತನೆಗಳಿವೆ. ನರಕದಲ್ಲಿ ಬೆಂಕಿಯ ಮರಗಳಿವೆ. ಬೆಂಕಿಯಿಂದಲೇ ಬೆಳೆಯುವ ಬೆಂಕಿ ಹಣ್ಣುಗಳು ಕಾಣಲು ಥೆಟ್ ಮಾನವನ ತಲೆಯ ರೂಪದಲ್ಲಿರುತ್ತವೆ.
ಅಲ್ಲಿನ ವೃಕ್ಷಗಳಲ್ಲಿ ಅತ್ಯಂತ ಭೀಕರ ಮತ್ತು ನಿಕೃಷ್ಟವಾದ ವೃಕ್ಷವೊಂದಿದೆ. ಮುಳ್ಳುಗಳಿಂದ ಕೂಡಿದ ವೃಕ್ಷ, ಅದರ ಹೆಸರು ಝಕ್ಕೂಂ. ನರಕದ ಪಾತಾಳದಿಂದ ತಲೆಯೆತ್ತಿ ನಿಂತಿರುತ್ತದೆ. ಅದನ್ನು ನರಕವಾಸಿಗಳಿಗೆ ಹೊಟ್ಟೆ ತುಂಬಿಸಲಾಗುತ್ತದೆ. ಹಾಗೂ ನರಕವಾಸಿಗಳಿಗೆ ಹಮೀಮ್ ಎಂಬ ಪಾನಿಯವನ್ನು ಕುಡಿಸಲಾಗುತ್ತದೆ. ಅದು ಕುದಿಯುವ ಅತ್ಯಂತ ಧುರ್ಗಂದ ದಿಂದ ಕೂಡಿದ್ದು ನರಕ ವಾಸಿಗಳ ಹತ್ತಿರ ಕೊಂಡು ಹೋಗುವಾಗಲೇ ಅವರ ಚರ್ಮಗಳು ಕರಟಿ ಹೋಗುವಂತಹದ್ದಾಗಿದೆ. ನರಕದ ಅವಸ್ಥೆಯು ಭೀಭತ್ಸಕರವಾಗಿದೆ. ಅಲ್ಲಿನ ಝಬಾನಿ ಮಲಕುಗಳು ನರಕವಾಸಿಗಳನ್ನು ಶಿಕ್ಷಿಸುವ ಅವಸ್ಥೆಯು ಅತ್ಯಂತ ಭೀಕರವಾಗಿದೆ.
ನರಕವನ್ನು ಕಾಯುವ ಮಲಕ್ ಮಾಲಿಕ್(ಅ) ರನ್ನು ಕರೆದು ನರಕವಾಸಿಗಳು ಕರೆದು ಹೇಳುವರು; ಓ ಮಾಲಿಕ್, ಇಲ್ಲಿಯ ಶಿಕ್ಷೆಯು ಅತ್ಯಂತ ಕಠಿಣವಾಗಿದೆ. ಇಲ್ಲಿಯ ತಾಪ ಕಠಿಣವಾಗಿದೆ. ನಮಗೆ ಇದರಿಂದ ಸಹಿಸಲೂ ಸಾಧ್ಯವಿಲ್ಲದಾಗಿದೆ ಈ ನರಕದಿಂದ ನಮಗೆ ಸ್ವಲ್ಪ ರಕ್ಷಣೆಯನ್ನಾದರೂ ನೀಡಿ, ಎಂದು ಮಾಲಿಕ್ (ಅ) ರಲ್ಲಿ ಹೇಳುವಾಗ ಮಾಲಿಕ್(ಅ) ವರ್ಷಗಳ ಕಾಲ ಉತ್ತರವಿರುವುದಿಲ್ಲ. ನಂತರ ಮಾಲಿಕ್(ಅ) ಹೇಳುವರು, ನೀವು ಭೂಮಿಯಲ್ಲಿ ಮಾಡಿದ ಫಲವಾಗಿದೆ ಇದು. ಈಗ ಇದರ ರುಚಿಯನ್ನು ಅನುಭವಿಸಿರಿ ಎಂದು ಉತ್ತರಿಸುವರು. ನಂತರ ನರಕವಾಸಿಗಳಿಗೆ ಇನ್ನು ನಮಗೆ ರಕ್ಷಣೆ ಇಲ್ಲ ಎಂದು ಗೊತ್ತಾಗುತ್ತದೆ. ಮತ್ತೆ ನರಕವಾಸಿಗಳ ನರಳಾಟ, ಚೀರಾಟ, ಆಕ್ರಂಧನ ಮಾತ್ರವಾಗಿರುತ್ತದೆ.
ಅಲ್ಲಾಹನು ಕುರ್'ಆನಿನಲ್ಲಿ ಹೇಳುತ್ತಾನೆ,
*ಸತ್ಯವಿಶ್ವಾಸಿಗಳೇ, ನೀವು ಸ್ವಶರೀರಗಳನ್ನೂ, ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಮನುಷ್ಯರು ಮತ್ತು ಕಲ್ಲುಗಳು ಅದರ ಇಂಧನವಾಗಿರುವುದು. ಅದರ ಮೇಲೆ ಅತ್ಯಂತ ಕಠೋರ ಮತ್ತು ಬಲಾಡ್ಯರಾದ ದೇವಚರರು(ಮಲಕುಗಳು) ನಿಯುಕ್ತರಾಗಿರುವರು. ಅವರೆಂದೂ ಅಲ್ಲಾಹನ ಆಜ್ಞೋಲ್ಲಂಘನೆ ಮಾಡುವುದಿಲ್ಲ. ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಅವರು ಪಾಲಿಸುತ್ತಾರೆ.(ಸೂರಾ : ಅತ್ತಹ್'ರೀಮ್ 6)*
ಸೂರತುಲ್ ಹಾಕ್ಕ್ವದಲ್ಲಿ ಅಲ್ಲಾಹನು ಹೇಳುವುದನ್ನು ನೋಡಿರಿ.
*ಯಾವನ ಕರ್ಮಗ್ರಂಥವನ್ನು ಅವನ ಎಡಗೈಯ್ಯಲ್ಲಿ ಕೊಡಲಾಗುವುದೋ ಅವನು ಹೇಳುವನು ಅಯ್ಯೋ! ನನ್ನ ಕರ್ಮಗ್ರಂಥವನ್ನು ನನಗೆ ಕೊಡದೆ ಇರುತ್ತಿದ್ದರೆ!*
*ಮತ್ತು ನನ್ನ ವಿಚಾರಣಾ ಫಲವೇನೆಂದು ನನಗೆ ತಿಳಿಯದೇ ಇರುತ್ತಿದ್ದರೆ ಉತ್ತಮವಿತ್ತು.*
*ಅಯ್ಯೋ ನನ್ನ ಮರಣವೇ ಅಂತಿಮವಾಗಿರುತ್ತಿದ್ದರೆ ಉತ್ತಮವಾಗಿತ್ತು.*
*ನನ್ನ ಸಂಪತ್ತು ಇಂದು ನನಗೇನೂ ಪ್ರಯೋಜನ ಕೊಡಲಿಲ್ಲ.*
*ನನ್ನ ಅಧಿಕಾರವೆಲ್ಲವೂ ನನಗೆ ನಷ್ಟಗೊಂಡಿತು*
*(ದೇವಚರರೊಂದಿಗೆ ಅಲ್ಲಾಹು ಹೇಳುವನು) ಅವನನ್ನು ಹಿಡಿಯಿರಿ ಮತ್ತು ಅವನಿಗೆ (ಕೈ ಕೊರಳಿಗೆ) ಬೇಡಿ ತೊಡಿಸಿರಿ.*
*ಅನಂತರ ಅವನನ್ನು ನರಕದೊಳಕ್ಕೆ ಪೂರ್ಣವಾಗಿ ಮುಳುಗಿಸಿರಿ*
*ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯಲ್ಲಿ ಬಿಗಿಯಿರಿ.*
*ಅವನು ಮಹಾನನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುತ್ತಿರಲಿಲ್ಲ.*
*ಮತ್ತು ಬಡವರಿಗೆ(ಮಿಸ್ಕೀನರಿಗೆ) ಆಹಾರ ಕೊಡಲು ಪ್ರೇರೇಪಿಸುತ್ತಲೂ ಇರಲಿಲ್ಲ.*
*ಆದುದರಿಂದ ಇಂದು ಅವನಿಗೆ ಇಲ್ಲಿ ಬಂಧುಗಳು ಯಾರೂ ಇಲ್ಲ.*
*ಗಿಸ್ಲೀನ್(ನರಕದಲ್ಲಿ ಮಡುಗಟ್ಟುವ ರಕ್ತ, ಕೀವು, ಕೊಳಚೆ ನೀರುಗಳ ಸಂಗ್ರಹ) ಹೊರತು ಅವನಿಗೆ ಬೇರೆ ಯಾವ ಆಹಾರವೂ ಇಲ್ಲ.(ಸೂರಾ : ಹಾಕ್ಕ್ವಾ)*
ಇನ್ನು ಅನೇಕ ಕಡೆ ನರಕದ ಕುರಿತು ಕುರ್'ಆನ್ ಹೇಳಿದೆ.
ನರಕದ ಕುರಿತು ಅಲ್ಲಿಯ ಭೀಕರ ಶಿಕ್ಷೆಯ ಕುರಿತು ಎಷ್ಟು ಹೇಳಿದರೂ ತೀರದು. ಇಲ್ಲಿ ಸ್ಯಾಂಪಲ್ ಮಾತ್ರ ಹೇಳಿದ್ದು.
*ಅಲ್ಲಾಹನು ನರಕದ ಭಯಾನಕ ಶಿಕ್ಷೆಯಿಂದ ನಮ್ಮನ್ನೂ, ನಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರನ್ನೂ, ಸಹಪಾಠಿಗಳನ್ನೂ, ಕುಟುಂಬಗಳನ್ನೂ, ನಮ್ಮಲ್ಲಿ ದುಅ ಮಾಡಲು ಹೇಳಿದವರನ್ನೂ, ನಮ್ಮ ಗುರುಗಳನ್ನೂ, ಸರ್ವ ಮುಸ್ಲಿಂ ಸಮುದಾಯವನ್ನೂ ರಕ್ಷಿಸಲಿ. ಆಮೀನ್.*
Comments