ನೋವು ನೋವು ನೋವು..ಯಾರಾದರೂ ಈ ನೋವನ್ನು ಇಲ್ಲದ ಹಾಗೆ ಮಾಡುತ್ತಾರಾ.....???
*ಒಂದು ದಿನವಿದೆ. ಆ ದಿನ ಶರೀರಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಕಣ್ಣಿಗೆ ಕಾಣದ ರೂಹ್ ಎಂಬ ಅಮೂಲ್ಯ ನಿಧಿಯನ್ನು ಹಿಡಿದು ಹೊರಗೆ ಎಳೆಯುವ ದಿನ....*
*ಆ ಒಂದು ದಿನ ಕಾಲಿನ ಬೆರಳ ತುದಿಯಿಂದ ಪ್ರಾರಂಭವಾಗುವ ಅಸಹ್ಯ ನೋವು ಗಂಟಲವರೆಗೆ ತಲುಪಿ ಕೊನೆಗೊಳ್ಳುತ್ತದೆ....*
*ಆ ಒಂದು ದಿನ ಹೃದಯವು ಸಂಪರ್ಕ ಮುರಿಯುವ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ನೂರಾರು ಕಿ.ಮಿ ಉದ್ದವಿರುವ ನಮ್ಮ ಶರೀರದ ನಾಡಿ ನರಗಳು ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ವೊಂದು ದಿನ ಹೊಟ್ಟೆಯ ಕರುಳು ಬಳ್ಳಿಗಳಲ್ಲಿ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ಎರಡು ಕಿಡ್ನಿಯಲ್ಲಿ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ಮೆದುಳಿನಲ್ಲಿ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ಶರೀರದ ಮಾಂಸದಲ್ಲಿ ಅಂಟಿಕೊಂಡಿರುವ ಶರೀರದ ಅಸ್ತಿ (skeleton) ಇಡೀ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ಬೆರಳು, ಕೈ ಕಾಲು, ಕಣ್ಣು, ಮೂಗು, ಕಿವಿ, ಬಾಯಿ, ಹಲ್ಲು, ಎಲ್ಲಾ ಅವಯವಗಳೂ ಅಸಹ್ಯ ನೋವು ತಿನ್ನಲಿಕ್ಕಿದೆ....*
*ಆ ಒಂದು ದಿನ ಇಡೀ ಶರೀರವು ಅದರ ಒಂದೇ ಒಂದು ಚುಕ್ಕೆಯಷ್ಟು ಕೂಡಾ ಬಿಡದೆ ಅಸಹ್ಯ ಯಾತನೆ ಅನುಭವಿಸಲಿಕ್ಕಿದೆ....*
*ಯಾವುದಾದರೂ ಒಂದು ಭಾಗಕ್ಕೆ ಸಣ್ಣ ಇರುವೆ ಕಚ್ಚಿದರೂ ಅಸಹ್ಯ ಯಾತನೆಯಾಗುವ ಈ ಶರೀರಕ್ಕೆ ಒಂದೇ ಸಮಯದಲ್ಲಿ ಎಲ್ಲಾ ಅವಯವಗಳು ನೋವು ತಿನ್ನುವಾಗ ಅದನ್ನು ಹೇಗೆ ಸಹಿಸುವುದೂ ಅಲ್ಲಾಹನೇ ಬಲ್ಲ....*
ಮಲಕುಲ್ ಮೌತ್ ರೂಹ್ ಹಿಡಿಯುವ ಸಂದರ್ಭದಲ್ಲಿ ಸಹಾಯಕ ಮಲಕ್ ಗಳೇನಾದರೂ ನಮ್ಮ ಶರೀರವನ್ನು ಹಿಡಿಯದಿದ್ದರೆ ನೋವಿನ ತೀವ್ರತೆಯಿಂದ ಎಲ್ಲೆಲ್ಲಿಗೂ ಓಡಿ ಓಡಿ ನರಳಿ ನರಳಿ ಮರಣಹೊಂದುತ್ತಿದ್ದೆವು. ಆದರೆ ರೂಹ್ ಬೇರ್ಪಡಿಸುವ ಸಂಧರ್ಭ ಮಲಕ್ ಗಳ ಶಕ್ತಿಯುತವಾದ ಹಿಡಿತ ಇರುವುದರಿಂದ ಶಾಂತವಾಗಿ ಏನೂ ಆಗಿಲ್ಲ ಎಂಬುವಂತೆ ಮರಣ ಹೊಂದುತ್ತೇವೆ....
ಎಷ್ಟೇ ದೊಡ್ಡ ಕುಲಪತಿಯಾದರೂ ಎಷ್ಟೇ ದೊಡ್ಡ ಚಕ್ರವರ್ತಿಯಾದರೂ, ಎಷ್ಟೇ ದೊಡ್ಡ ಶ್ರೀಮಂತನಾದರೂ, ಎಷ್ಟೇ ದೊಡ್ಡ ಮಾಸ್ಟರ್ ಮೈಂಡ್ ಇರುವವನಾದರೂ ಇದರರಿಂದ ಮುಕ್ತಿ ಹೊಂದಿದ್ದಾರಾ..... ನೋವು ತಿನ್ನದೆ ಮರಣ ಹೊಂದಿದ್ದಾರಾ....?
ಇಲ್ಲಿ ಎಷ್ಟೇ ಸಂಶೋಧನೆಯಾದರೂ ಕೆಲವೊಂದು ಕಾರ್ಯಗಳ ಬಗ್ಗೆ ಒಂದು ಅನುವಿನಷ್ಟೂ ಬದಲಾವಣೆ ತರಲು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ, ಅದು ಪ್ರಾರಂಭದಲ್ಲಿ ಹೇಗಿತ್ತೂ ಅದೇ ರೀತಿ ಈಗಲೂ ಇದೆ ಮುಂದೆಯೂ ಹೀಗೆಯೇ ಇರುತ್ತದೆ.... ಅದೆಲ್ಲಾ ಇಲಾಹನ ನಿಯಂತ್ರಣದಲ್ಲಿ ಇರುತ್ತದೆ. ಅದನ್ನು ಮನುಷ್ಯನಿಗೆ ನಿಯಂತ್ರಿಸಲು ಸಾಧ್ಯವೇ ಇಲ್ಲ.....
*(ನನಗೆ ಏನಾದರೂ ಸಿಗಬೇಕಾದರೆ ಅದಕ್ಕಾಗಿ ಕಷ್ಟಪಡಬೇಕು. ಪ್ರೀತಿಸಬೇಕು. ಆದರೆ ಮರಣಕ್ಕೆ ಜನನ ಎಂಬ ಕಾರಣ ಬಿಟ್ಟರೆ ಬೇರೇನೂ ಇಲ್ಲ.... ಜನಿಸಿದರೆ ಸಾಕು ಮರಣ ನನ್ನ ಬಳಿ ಬಂದು ಬಿಡುತ್ತದೆ. ನಾನು ಮರಣವನ್ನು ಎಷ್ಟೇ ದ್ವೇಷಿಸಿದರೂ ಮರಣ ನನ್ನನ್ನು ಪ್ರೀತಿಸುತ್ತದೆ. ಅದು ನನ್ನ ಬಳಿ ಬಂದೇ ಬರುತ್ತದೆ. ನಾನು ಮರಣ ಹೊಂದಬಾರದು ಎಂದರೆ ನಾನು ಜನಿಸಲೇ ಬಾರದಿತ್ತು. ಆದರೆ ನಾ ಜನಿಸಿಯಾಗಿದೆ.)*
*ಅಲ್ಲಾಹುವೆ ಕಾಮಿಲಾದ ಈಮಾನ್ ಸಹಿತವಲ್ಲದೆ ನಮ್ಮ ರೂಹನ್ನು ಹಿಡಿಯದಿರು....*
*صلى الله عليك يا رسول الله صلى الله عليه وسلم*
*امين يا رب العالمين*
✒ಅಬ್ದುಲ್ ನಾಸಿರ್ ಕಾವೂರು🍇
➖➖➖➖➖➖➖➖➖
Comments