ನಮಾಜಿನ ನಂತರ ಮೂರು ಸ್ವಲಾತ್ ಅನಿಸ್ಲಾಮಿಕವೇ❓❓❓
※ಯೂಸುಫ್ ಸಖಾಫಿ ಬಪ್ಪಳಿಗೆ
ಇಂದು ಹಲವಾರು ಮಸೀದಿಗಳಲ್ಲಿ ನಮಾಜಿನ ನಂತರ ಮೂರು ಸ್ವಲಾತ್ ಹೇಳುವ ಸಂಪ್ರದಾಯ ಕಂಡು ಬರುತ್ತಿದ್ದು ಇದು ಸ್ವಲಾತ್ ಹೇಳುವವರಿಗೆ ಉತ್ತಮ ಪ್ರೇರಣೆಯಾಗಿದೆ. ಆದರೆ ಕೆಲವೊಬ್ಬರು ಇದನ್ನು ಬಿದ್ಅತ್ತೆಂದೂ ಕರಾಹತ್ತೆಂದೂ ನಿಷಿಧ್ಧವೆಂದೂ ಹೇಳುತ್ತಿದ್ದಾರೆ.ಇದರ ಕರಿತು ಇಸ್ಲಾಮಿನ ನಿಲುವೇನೆಂದು ತಿಳಿಯುವುದು.
ಅಲ್ಲಾಹನು ಹೇಳುತ್ತಾನೆ
"إِنَّ اللَّهَ وَمَلَائِكَتَهُ يُصَلُّونَ عَلَى النَّبِيِّ ۚ يَا أَيُّهَا الَّذِينَ آمَنُوا صَلُّوا عَلَيْهِ وَسَلِّمُوا تَسْلِيمًا"(الاحزاب ٥٦)
ನಿಶ್ಚಲವಾಗಿಯೂ ಅಲ್ಲಾಹನು ಮತ್ತು ಅವನ ಮಲಕುಗಳು ಪ್ರವಾದಿವರ್ಯ( ﷺ)ರ ಮೇಲೆ ಸ್ವಲಾತ್ ಹೇಳುತ್ತಾರೆ ಆದ್ದರಿಂದ ಓ ಸತ್ಯ ವಿಶ್ವಾಸಿಗಳೇ ನೀವೂ ಆ ಪ್ರವಾದಿವರ್ಯ ﷺರ ಮೇಲೆ ಸ್ವಲಾತ್ ಹೇಳಿರಿ"....
ಈ ಆಯತ್ತಿನಲ್ಲಿ ಸ್ವಲಾತ್ ಹೇಳಲು ಪ್ರತ್ಯೇಕ ಸಂಖ್ಯೆ, ಸಮಯ,ರೂಪವನ್ನು ತಿಳಿಸಿಲ್ಲ.
ಅಂದರೆ ಯಾವ ಸಮಯದಲ್ಲಿಯೂ ಯಾವ ರೂಪದಲ್ಲಿಯೂ ಎಷ್ಟು ಬೇಕಾದರೂ ಸ್ವಲಾತ್ ಹೇಳಬಹುದೆಂಬುದಾಗಿದೆ ಈ ಆಯತ್ತಿನ ತಾತ್ಪರ್ಯ.
ಆದ್ದರಿಂದಲೇ ಪ್ರವಾದಿವರ್ಯﷺರ ಕಾಲದಲ್ಲಿಲ್ಲದ ತರಾವೀಹಿನ ನಡುವೆ ಹೇಳುವ ಸ್ವಲಾತಿನ ಕುರಿತು ಮಹಾನರಾದ ಇಬ್ನು ಹಜರ್(ರ)ರೊಂದಿಗೆ ಕೇಳಲ್ಪಟ್ಟಾಗ ಮಹಾನರು ಉತ್ತರಿಸಿದ್ದು ಈ ರೀತಿಯಾಗಿತ್ತು
وسئل العلامة ابن حجر الهيتمي رحمه الله تعالى: هل تسن الصلاة عليه صلى الله عليه وسلم بين تسليمات التراويح أو هي بدعة ينهى عنها؟ (فأجاب): بقوله: الصلاة في هذا المحل بخصوصه لم نر شيئاً في السنة ولا في كلام أصحابنا فهي بدعة ينهى عنها من يأتي بها بقصد كونها سنة في هذا المحل بخصوصه دون من يأتي بها لا بهذا القصد، كأن يقصد أنها في كل وقت سنة من حيث العموم
ತರಾವೀಹಿನ ಪ್ರತೀ ಸಲಾಮುಗಳ ನಡುವೆ ಸ್ವಲಾತ್ ಪ್ರತ್ಯೇಕ ಸುನ್ನತ್ತಿದೆ ಎಂಬ ವಿಶ್ವಾಸದಲ್ಲಿ ಒಬ್ಬ ಸ್ವಲಾತ್ ಹೇಳುವುದಾದರೆ ಅದು ವಿರೋಧಿಸಲ್ಪಟ್ಟ ಬಿದ್ಅತ್ತಾಗಿದೆ.ಇನ್ನು ಯಾವ ಸಮಯದಲ್ಲೂ ಸ್ವಲಾತ್ ಸುನ್ನತ್ತಿದೆ ಎಂಬ ನೆಲೆಯಲ್ಲಿ ಹೇಳುವುದಾದರೆ ಅದು ಸುನ್ನತ್ತಾಗಿದೆ.
ಆದ್ದರಿಂದ ನಮಾಜಿನ ನಂತರ ದುಆ ಮುಗಿದ ಮೇಲೆ ಸ್ವಲಾತ್ ಹೇಳುವುದು ಪ್ರತ್ಯೇಕ ಸುನ್ನತ್ತಾಗಿದೆಯೆಂಬ ನೆಲೆಯಲ್ಲಿ ಸುನ್ನತ್ತಿಲ್ಲದಿದ್ದರೂ ಯಾವ ಸಮಯದಲ್ಲಿಯೂ ಸ್ವಲಾತ್ ಹೇಳಬಹುದೆಂಬ ನೆಲೆಯಲ್ಲಿ ಸ್ವಲಾತ್ ಹೇಳುವುದು ಸುನ್ನತ್ತಾಗಿದೆ.
*ರೂಪ ಮತ್ತು ಸಂಖ್ಯೆ*
ಸ್ವಲಾತ್ ಹೇಳುವುದಕ್ಕೆ ಕೆಲವೊಂದು ರೂಪಗಳು ಹದೀಸುಗಳಲ್ಲಿ ಸ್ಪಷ್ಟವಾಗಿದ್ದು ಅದೇ ಆಗಬೇಕೆಂಬ ನಿಬಂಧನೆಯಿಲ್ಲ.
ಸ್ವಲಾತ್ ಅಂದರೆ ಅದರ ಉದ್ದೇಶ ಪ್ರವಾದಿವರ್ಯﷺರ ಮೇಲೆ ದುಆ ಮಾಡುವುದು ಎಂದಾಗಿದೆ. ಆ ಉದ್ದೇಶ ಕರಗತವಾಗುವುದಾದರೆ ಯಾವ ಪದ ಪ್ರಯೋಗದ ಮೂಲಕ ಸ್ವಲಾತ್ ಹೇಳಿದರೂ(صلاة ಎಂಬ ಪದವು ಇಲ್ಲಿ ಕಡ್ಡಾಯವಾಗಿದೆ//ಜಮಲ್ 1/16) ಅದರ ಪುಣ್ಯವು ಲಭ್ಯವಾಗುತ್ತದೆ.(ಫತ್ಹುಲ್ ಬಾರಿ 11/166)
و ذهب الجمهور الى الاجتزاء بكل لفظ أدى المراد بالصلاة على النبي
(فتح البارى ١١/١٦٦)
ಆದ್ದರಿಂದ ಹದೀಸುಗಳಲ್ಲಿ ವರದಿಯಾಗದ ಹಲವಾರು ಸ್ವಲಾತುಗಳು ಇಂದು ಚಾಲ್ತಿಯಲ್ಲಿದ್ದು ಅವುಗಳೆಲ್ಲವೂ ಪುಣ್ಯದಾಯಕವಾಗಿದೆ.
ಅದೇ ರೀತಿ ಸ್ವಲಾತ್ ಹೇಳುವುದಕ್ಕೆ ಸಂಖ್ಯೆ ನಿಗದಿಪಡಿಸುವುದಕ್ಕೂ ಯಾವುದೇ ತೊಂದರೆಯಿಲ್ಲ
*ಸ್ವಲಾತ್ ಹೇಳಲು ಪ್ರತ್ಯೇಕ ಸಮಯ ನಿಶ್ಚಯಿಸುವುದು*
ಸ್ವಲಾತ್ ಹೇಳಲು ಪ್ರತ್ಯೇಕ ಸಮಯ ಮತ್ತು ಸ್ಥಳ ನಿಗದಿಪಡಿಸಿದ್ದು ಹದೀಸ್ಗಳಲ್ಲಿ ವ್ಯಕ್ತವಾಗಿದ್ದು ಆದರೆ ಇಂತಹ ಸಂದರ್ಭದಲ್ಲಿ ಸ್ವಲಾತ್ ಹೇಳಬಾರದೆಂಬ ನಿಯಮವು ಇಸ್ಲಾಮಿನಲ್ಲಿಲ್ಲ
عَنْ أُبَيِّ بْنِ كَعْبٍ رضي الله عنه قَالَ : قُلْتُ : يَا رَسُولَ اللَّهِ إِنِّي أُكْثِرُ الصَّلَاةَ عَلَيْكَ فَكَمْ أَجْعَلُ لَكَ مِنْ صَلَاتِي ؟ فَقَالَ : مَا شِئْتَ . قَالَ قُلْتُ الرُبُعَ ؟ قَالَ : مَا شِئْتَ فَإِنْ زِدْتَ فَهُوَ خَيْرٌ لَكَ . قُلْتُ النِّصْفَ ؟ قَالَ : مَا شِئْتَ فَإِنْ زِدْتَ فَهُوَ خَيْرٌ لَكَ . قَالَ قُلْتُ فَالثُّلُثَيْنِ ؟ قَالَ : مَا شِئْتَ فَإِنْ زِدْتَ فَهُوَ خَيْرٌ لَكَ . قُلْتُ أَجْعَلُ لَكَ صَلَاتِي كُلَّهَا ؟ قَالَ : إِذًا تُكْفَى هَمَّكَ وَيُغْفَرُ لَكَ ذَنْبُكَ(رواه الترمذى)
ಮಹಾನರಾದ ಉಬಯ್ಯುಬ್ನು ಕಅಬ್(ರ.ಅ) ಪ್ರವಾದಿ ﷺ ರೊಂದಿಗೆ ಹೇಳುತ್ತಾರೆ " ಓ ಪ್ರವಾದಿವರ್ಯರೇﷺ
ತಮ್ಮ ಮೇಲಿನ ಸ್ವಲಾತನ್ನು ಅಧಿಕಗೊಳಿಸಲು ನಾನು ಬಯಸಿದ್ದೇನೆ ಎಷ್ಟು ಹೇಳಲಿ
ಆಗ ಪ್ರವಾದಿವರ್ಯರುﷺ
"ನೀನು ನಿರ್ಧರಿಸಿದಷ್ಟು ಹೇಳು" ಎಂದರು.
"ನಾಲ್ಕನೇ ಒಂದು ಭಾಗ"
"ನೀನು ನಿರ್ಧರಿಸಿದಷ್ಟು ಅಧಿಕಗೊಳಿಸಿದರೆ ಅದು ನಿನಗೆ ಉತ್ತಮ"
"ಅರ್ಧದಷ್ಟು ಭಾಗ"
"ನೀನು ನಿರ್ಧರಿಸಿದಷ್ಟು ಅಧಿಕಗೊಳಿಸಿದರೆ ಅದು ನಿನಗೆ ಉತ್ತಮ"
"ಮೂರನೇ ಎರಡು ಭಾಗ "
"ನೀನು ನಿರ್ಧರಿಸಿದಷ್ಟು ಅದಿಕಗೊಳಿಸಿದರೆ ಅದು ನಿನಗೆ ಉತ್ತಮ"
ಆಗ ನಾನು ಹೇಳಿದೆ "ಹಾಗಾದರೆ ನನ್ನ ಅತ್ಯಾವಶ್ಯಕವಲ್ಲದ ಎಲ್ಲಾ ಸಮಯವನ್ನೂ ತಮ್ಮ ಮೇಲಿನ ಸ್ವಲಾತಿಗಾಗಿ ಮೀಸಲಿಡುತ್ತೇನೆ"
ಆಗ ಪ್ರವಾದಿﷺರು" ಹಾಗಾದರೆ ಅದು ನಿನ್ನ ಎಲ್ಲಾ ಪಾಪಗಳಿಗೆ ಕ್ಷಮೆಯೂ ಮತ್ತು ಕಷ್ಟಗಳಿಗೆ ಪರಿಹಾರವೂ ಆಗಿದೆ" ಎಂದರು.(ತುರ್ಮುದಿ)
ಈ ಹದೀಸಿನಲ್ಲಿ ಸ್ವಲಾತಿಗಾಗಿ ಪ್ರತ್ಯೇಕ ಸಮಯ ನಿಗದಿಪಡಿಸಿದ್ದನ್ನು ಕಾಣಬಹುದು.
*ಕೆಲವೊಂದು ಸಂಶಯಗಳು ಮತ್ತು ಉತ್ತರ*
1.▶ಇಂದು ಎಲ್ಲಾ ಮಜ್ಲಿಸ್ ಗಳ ಕೊನೆಯಲ್ಲಿ ದುಆದ ನಂತರ ಮೂರು ಸ್ವಲಾತ್ ಹೇಳಿ ವಿರಮಿಸುವುದು ರೂಢಿಯಲ್ಲಿದೆ (ಉದಾ: ಮೌಲಿದ್,ಸ್ವಲಾತ್ ಮಜ್ಲಿಸ್,ಊಟದ ನಂತರದ ದುಆ,ಇನ್ನಿತರ) ಇದು ಪ್ರತ್ಯೇಕ ಸುನ್ನತ್ತಾಗಿದೆಯೇ ❓
ಉ:👉🏻 ದುಆದ ಸುನ್ನತ್ ಎಂಬ ನೆಲೆಯಲ್ಲಿ ಅದು ಸುನ್ನತ್ತಿಲ್ಲದಿದ್ದರೂ ಮಜ್ಲಿಸ್ನಿಂದ ವಿರಮಿಸುವಾಗ ಸ್ವಲಾತ್ ಹೇಳುವುದು ಪ್ರತ್ಯೇಕ ಸುನ್ನತ್ತಾಗಿದೆ.
12/836- وعنه عن النبيِّ صَلّى اللهُ عَلَيْهِ وسَلَّم قَالَ: مَا جَلَسَ قَومٌ مَجْلِسًا لَمْ يَذْكرُوا الله تَعَالَى فِيهِ ولَم يُصَّلُّوا عَلَى نَبِيِّهم فِيهِ إلاَّ كانَ عَلَيّهمْ تِرةٌ، فإِنْ شاءَ عَذَّبَهُم، وإنْ شَاءَ غَفَرَ لَهُم رواه الترمذي وقال حديث حسن.
ಪ್ರವಾದಿﷺಹೇಳುತ್ತಾರೆ: ಅಲ್ಲಾಹನನ್ನು ಸ್ಮರಿಸದ ಪ್ರವಾದಿﷺ ರ ಮೇಲೆ ಸ್ವಲಾತ್ ಹೇಳದ ಎಲ್ಲಾ ಸಭೆಗಳು
ನಷ್ಟ ಹೊಂದಿದ ಅಥವಾ ಖೇದಕರವಾದ ಸಭೆಗಳಾಗಿವೆ.
ಈ ಹದೀಸಿನಲ್ಲಿ ಸಭೆಗಳಿಂದ ಅಥವಾ ಮಜ್ಲಿಸ್ಗಳಿಂದ ವಿರಮಿಸುವುದು ಎಂಬ ನೆಲೆಯಲ್ಲಿ ಸ್ವಲಾತ್ ಹೇಳುವುದು ಪ್ರತ್ಯೇಕ ಸುನ್ನತ್ತಾಗಿದೆ.
ಅದೇ ರೀತಿ ಸ್ವಲಾತ್ ಹೇಳಲು ಪ್ರತ್ಯೇಕ ಸುನ್ನತ್ತಾದ ಸಮಯವನ್ನು ವಿವರಿಸುತ್ತಾ ಮಹಾನರಾದ ಇಬ್ನು ಹಜರ್ (ರ) ಹೇಳುತ್ತಾರೆ:
"وعند تفرق القوم بعد إجتماعهم"
"ಸಭೆಯಿಂದ ವಿರಮಿಸುವಾಗ ಸ್ವಲಾತ್ ಪ್ರತ್ಯೇಕ ಸುನ್ನತ್ತಿದೆ" (الدر المنظود لابن حجر )
2. ▶ನಮಾಜಿನ ನಂತರದ ದುಆಗೂ ಇದು ಭಾಧಕವೇ ❓
ಉ:👉🏻 ನಮಾಜು ಕೂಡಾ ಬಾಂಗೆಂಬ ಆಹ್ವಾನದ ಮೂಲಕ ಆಗಮಿಸಿ ಇಖಾಮತ್ತಿನಿಂದ ಪ್ರಾರಂಭಿಸಿ ದುಆದ ಮೂಲಕ ಕೊನೆಗೊಳಿಸುವ ಒಂದು ಪ್ರತ್ಯೇಕ ಮಜ್ಲಿಸಾದುದರಿಂದ ಇಲ್ಲಿಯೂ ದುಆದ ಕೊನೆಯಲ್ಲಿ ಸ್ವಲಾತ್ ಸುನ್ನತ್ತಿದೆ.
3.▶ದುಆದಲ್ಲಿಯೇ ಪ್ರತ್ಯೇಕ ಹೇಳುವ ಸ್ವಲಾತ್ ಮಜ್ಲಿಸಿನಿಂದ ವಿರಮಿಸುವಾಗ ಹೇಳುವ ಸ್ವಲಾತಿಗೆ ಸಮಾನವಾಗುವುದಿಲ್ಲವೇ❓
ಉ :👉🏻 ದುಆದ ಪ್ರಾರಂಭ, ಮಧ್ಯೆ ಮತ್ತು ಕೊನೆಯಲ್ಲಿ ಸ್ವಲಾತ್ ಸುನ್ನತ್ತಿದ್ದರೂ ಅದು ದುಆದ ಸುನ್ನತ್ತಾಗಿದೆ. ಇಲ್ಲಿ ಹೇಳುವ ಸ್ವಲಾತ್ ಮಜ್ಲಿಸಿನಿಂದ ವಿರಮಿಸುವಾಗ ಹೇಳುವ ಸ್ವಲಾತಾಗಿದೆ.
4.▶ ಈ ಸ್ವಲಾತ್ ಕರಾಹತ್ ಅಥವಾ ಬಿದ್ಅತ್ ಅನ್ನುವವರಿಗೆ ಏನಾದರೂ ಆಧಾರವಿದೆಯೇ❓
ಉ:👉🏻 ಅದು ಆಧಾರ ರಹಿತ ವಾದವಾಗಿದೆ.
*ಕೊನೆಯಲ್ಲಿ ಒಂದು ಮಾತು*
قال زين العابدين على بن حسن بن على رضي الله عنه انه قال " علامة اهل السنة كثرة الصلاة على النبي( الدر المنظود لا بن حجر)
ಪ್ರವಾದಿﷺರ ಮೊಮ್ಮಗ ಹಸನ್ (ರ)ರಿಂದ ಮಗ ಝೈನುಲ್ ಆಬಿದೀನ್ (ರ) ರು ಹೇಳುತ್ತಾರೆ *"ಸ್ವಲಾತ್ ಅಧಿಕಗೊಳಿಸುವುದು ಅಹ್ಲು ಸ್ಸುನ್ನದ ಚಿಹ್ನೆಯಾಗಿದೆ"*
*اللهم صل على محمد اللهم صل عليه وسلم*
🌲🌲🌲🌲🌲🌲🌲🌲🌲

Comments
http://brtaslim.com/wp-content/uploads/2015/09/40b44f21989492f25337e2fcde667deb.mp3
339) Benefit about saying swalat upon Rasool(ﷺ)? ರಸೂಲರ ಮೇಲೆ ಸ್ವಲಾತ್ ಹೇಳುವುದರ ಪ್ರಯೋಜನವೇನು?
http://brtaslim.com/wp-content/uploads/2016/03/cbfb4ff3629b54e19bf86a6c1eee803d.mp3
357) How to say swalat upon Rasool(ﷺ)? ಯಾವ ರೀತಿಯಿಂದ ಪ್ರವಾದಿ(ﷺ)ಗಳ ಮೇಲೆ ಸ್ವಲಾತ್ ಹೇಳಬೇಕು?
http://brtaslim.com/wp-content/uploads/2016/03/10562df3326cb81d13d39a56ed1c6ed9.mp3