*ಮನದಾಳದಲ್ಲಿ ಮದೀನಾ*
ಸಂಚಿಕೆ-0⃣9⃣
✍🏿ಸಿ.ಐ.ಇಸ್ಹಾಕ್ ಫಜೀರ್.
ನಂ30.ವಾದಿ ಜಿನ್ನ್.
ಇದು ಜಗತ್ತಿನ ಎಂಟನೇ ಅದ್ಭುತ ಎನ್ನಬಹುದಾದ ಸ್ಥಳ.
ಸಮತಟ್ಟಾದ ರಾಜಮಾರ್ಗದಲ್ಲಿ ಸುಮಾರು ಕಿ.ಮೀ ನಷ್ಟು ದೂರ ವಾಹನ ಚಾಲನೆ ರಹಿತವಾಗಿ ಶರವೇಗದಲ್ಲಿ ಚಲಿಸುತ್ತದೆ.ಇಲ್ಲಿ ನೀರು ರಸ್ತೆ ಮೇಲೆ ಸುರಿದರೆ ಕೆಳ ಬಾಗಕ್ಕೆ ಇಳಿಯದೆ ವಿರುದ್ಧ ದಿಕ್ಕಿಗೆ ಹರಿಯುತ್ತದೆ.
ಈ ಸ್ಥಳದಲ್ಲಿ ಭೂಮಿಗೆ ಆಯಸ್ಕಾಂತೀಯ ಶಕ್ತಿ ಇದೆ ಎಂದು ಪ್ರಖ್ಯಾತ ಪಾಶ್ಚಾತ್ಯ ಸಂಶೋಧಕರ ಅಭಿಪ್ರಾಯ.
ನಂ.31.ಬೀರ್ ರೌವ್ಹಾ.
ಮದೀನ ದಾಟಿ ಬದ್ರ್ ದಾರಿ ಮದ್ಯೆ ಸಿಗುವ ಒಂದು ಪ್ರದೇಶ.
ಪ್ರವಾದಿ ﷺ ಹಾಗೂ ಅವರ ಪೂರ್ವ ಕಾಲದ ಎಪ್ಪತ್ತಕ್ಕೂ ಮಿಕ್ಕಿದ ಪ್ರವಾದಿಗಳು ನೀರು ಕುಡಿದ ಹಾಗೂ ವುಲೂಹ್ ಮಾಡಿದ ಬಾವಿಯಾಗಿದೆ ಬೀರ್ ರೌವ್ಹಾ.
ಪುನರುತ್ಥಾನ ದಿನ ಬರಲಿರುವ ಈಸಾ ನಭಿ ಕೂಡಾ ಈ ಬಾವಿಯ ನೀರಿನಿಂದ ವುಲೂಹ್ ಮಾಡಿ ಬಳಿಕ ಪಕ್ಕದಲ್ಲಿರುವ ಮಸೀದಿಯಲ್ಲಿ ಎಪ್ಪತ್ತಕ್ಕೂ ಮಿಕ್ಕಿದ ಅಂಬಿಯಾಗಳು ನಮಜ್ ನಿರ್ವಯಿಸಿದ ಜಾಗದಲ್ಲಿ ನಮಾಜ್ ನಿರ್ವಯಿಸಲಿದ್ದಾರೆ ಎಂಬುದು ಇತಿಹಾಸ.
ಈ ಬಾವಿ ಬಹಳ ಆಳವಾಗಿದೆ ಶತ ಶತಮಾನ ಕಳೆದರೂ ಬಾವಿಯಲ್ಲಿ ನೀರು ಬತ್ತದೇ ಈಗಲೂ ದೊರೆಯುತ್ತಿದೆ. ಈ ಪುನೀತ ಜಲ ಕಿಡ್ನಿ ಸ್ಟೋನ್'ಗೆ ಸಿದ್ದೌಷದ ಕೂಡಾ ಆಗಿರುತ್ತದೆ.
ನೂರಾರು ಯಾತ್ರಿಕರು ದಿನವೊಮ್ಮೆ ಸಾವಿರಾರು ಲೀಟರ್ ನೀರು ತಂಬಿಗೆ ತುಂಬಿಸಿ ಕೊಂಡು ಹೋಗುತ್ತಾರೆ.
ನಂ.32.ಶುಹದಾ ಮಖ್ಬರಾ.
ನಲರ್ ಬಿನ್ ಝಿರಾರ" ಎಂಬ ಮಹಾನ್ ಬದ್ರ್ ಶುಹದಾ ಚಿರನಿದ್ರೆ ಹೊಂದಿದ ಸ್ಥಳ.ಇದು ಮೇಲೆ ತಿಳಿಸಿದ ಬೀರ್ ರೌವ್ಹಾ ಪಕ್ಕದಲ್ಲಿ ನೆಲೆಗೊಂಡಿದೆ.
ನಂ.33
ನಾಳಿನ ಸಂಚಿಕೆಯಲ್ಲಿ.
ಬದ್ರ್ ಯುದ್ಧ ಭೂಮಿ.
*✍🏿ಸಿ.ಐ.ಇಸ್ಹಾಕ್ ಫಜೀರ್.*
Comments