*" ಮದೀನಾದಲ್ಲೊಂದು ಪಯಣ."*
✍🏿ಸಿ.ಐ.ಇಸ್ಹಾಕ್ ಫಜೀರ್.
(ಸಂಚಿಕೆ-3)
ನಂ.8
ಮಸ್ಜಿದುಲ್ ಖಿಬ್'ಲತೈನಿ.
ಖಿಬ್'ಲತೈನಿ ಅಂದರೆ ಎರಡು ಖಿಬ್'ಲಗಳಿರುವು ಮಸೀದಿ.
ಮೊದಲು ಮಸ್ಜಿದುಲ್ ಅಖ್ಷಾ ಗೆ ಅಭಿಮುಖವಾಗಿ ನಮಾಜ್ ಮಾಡಲಾಗುತ್ತಿತ್ತು.ಆದರೆ ಪ್ರವಾದಿ ﷺರವರಿಗೆ ಮಕ್ಕಾ ಕಹ್'ಬಾ ಶರೀಫ್ ಖಿಬ್'ಲ ಆಗಬೇಕೆಂಬ ಬಯಕೆಯಾಗಿತ್ತು.
ಅದರಂತೆ ಒಮ್ಮೆ ಅಸರ್ ನಮಾಜ್ ನಲ್ಲಿ ತೊಡಗಿಕೊಂಡಿದ್ದ ಪ್ರವಾದಿ ﷺರವರಿಗೆ ಎರಡು ರಕಾಹತ್ ಪೂರ್ತಿಯಾಗುವಷ್ಟರಲ್ಲಿ ವಹ್ಯಿ ತಲುಪುತ್ತವೆ.ಅದರಂತೆ ಪ್ರವಾದಿಯ ಆಗ್ರಹದಂತೆ ನಮಾಜ್ ಮಾಡುತ್ತಿದ್ದಲ್ಲಿಂದ ನೇರ ಹಿಂದೆ ತಿರುಗಿ ಬಾಕಿ ಎರಡು ರಕಾಹತ್ತನ್ನು ಪೂರ್ತಿಗಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಮಸ್ಜಿದುಲ್ ಹರಾಂ ನಲ್ಲಿ ನೆಲೆಗೊಳ್ಳುವ ಕಹ್ಬಾಲಯಕ್ಕೆ ಅಭಿಮುಖ ಮಾಡಿ ನಮಾಜ್ ಮಾಡಲಾಗುತ್ತದೆ.
ಇದು ಪುನರುತ್ಥಾನ ಕಾಲದ ವರೆಗೂ ಚಿರಸ್ಥಾಯಿಯಾಗಲಿವೆ.
ನಂ.8
ಮಸ್ಜಿದುಲ್ ಮಿನಾರತೈನಿ.
ಎರಡು ಮಿನಾರಗಳಿರುವ ಮಸೀದಿ.
ಹಿಂದಿನ ಕಾಲದಲ್ಲಿ ಎರಡು ಮಿನಾರಗಳಿದ್ದ ಮಸೀದಿಯಾಗಿದ್ದವು ಇವು.
ಈ ಮಸೀದಿಯ ನಡುವೆ ಎರಡು ಬೆಟ್ಟಗಳಿದ್ದವು ಇಲ್ಲೊಂದು ಮೇಕೆ ಸತ್ತು ಬಿದ್ದಿದ್ದವು.ಇದನ್ನು ಕಂಡ ಪ್ರವಾದಿ (ﷺ)ರವರು ತನ್ನ ಸ್ವಹಾಬಿಗಲೊಂದಿಗೆ ಕೇಳಿದರು.
ಈ ಮೇಕೆಯನ್ನು ಯಾರು ಹಣಕೊಟ್ಟು ಖರೀದಿಸುವಿರೆಂದು.?
ಸ್ವಹಾಬಿಗಳು ಪ್ರವಾದಿಯೊಂದಿಗೆ ಉತ್ತರಿಸಿದರು ಸತ್ತ ಮೇಕೆ ಯಾರು ತಾನೆ ಖರೀದಿಸಿವರೆಂದು.?
ಪ್ರವಾದಿ (ﷺ) ಹೇಳಿದರು ಆಗಿದ್ದರೆ ಅದೇ ಬೆಲೆಯಾಗಿದೆ ಈ ದುನಿಯಾಗೆ ಈ ದುನಿಯಾ ಸತ್ತ ಮೇಕೆಗೆ ಹೋಲಿಸಿದ ಆವೊಂದು ಘಟನೆಗೆ ಸಾಕ್ಷಿಯಾದ ಸ್ಥಳ. ನಂತರ ಅಲ್ಲಿ ಮಸೀದಿಯೊಂದನ್ನು ನಿರ್ಮಿಸಿ ಎರಡು ಮಿನಾರಗಳನ್ನು ನಿರ್ಮಿಸಲಾಯಿತು.
__________
ನಾಳಿನ ಸಂಚಿಕೆಯಲ್ಲಿ.
ನಂ.9
ಮದೀನ ಝಂಝಂ.
Comments