Skip to main content

ಕುರ್ ಆನ್ ಮಾತುಗಳು

*ವಿಶ್ವಾದ್ಯಂತ ವಾರ್ತಾ ಮಾದ್ಯಮಗಳು ಇಸ್ಲಾಂ ಮತ್ತು ಕುರಾನ್ ಬಗ್ಗೆ ಬೇಕಾದಷ್ಟು ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಕಾಣುತ್ತಿರುವಾಗ ಅದರ ನೈಜ ಸಂದೇಶವನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ದಯವಿಟ್ಟು ತಾವೆಲ್ಲರೂ ಓಮ್ಮೆ ಓದಿರಿ , ಅನ್ವೇಷಣೆ ನಡೆಸಿರಿ ಮತ್ತು ತಮ್ಮ ತಪ್ಪು ಕಲ್ಪನೆಗಳನ್ನು ನಿವಾರಿಸಿರಿ*
ಕುರ್ ಆನ್ ಮಾತುಗಳು

*1. ಸತ್ಯದೊಂದಿಗೆ ಸುಳ್ಳನ್ನು ಸೇರಿಸ ಬೇಡಿ. (2:42)*

*2. ತಾವು ಸ್ವತಹ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಂಡ ಮೇಲೆ ಇತರರಿಗೆ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳಲು ಹೇಳಿ. (2:44)*

*3. ಭೂಮಿಯ ಮೇಲೆ ದೂಷಣೆ/ಕ್ಷೋಭೆ ಎಸಗದಿರಿ. (2:60)*

*4. ಜನರನ್ನು ಪ್ರಾರ್ಥನಾಲಯಗಳಿಂದ ತಡೆಯ ಬೇಡಿ. (2:114)*

*5. ಯಾರನ್ನು ಹಿಂದುಮುಂದೆ ವಿಚಾರಿಸದೆ ಕಣ್ಣು ಮುಚ್ಚಿ ಅನುಸರಿಸ ಬೇಡಿ. (2:170)*

*6. ಕೊಟ್ಟ ಮಾತು/ವಾಗ್ದಾನವನ್ನು ಉಲ್ಲಂಘಿಸ ಬೇಡಿ (2:177)*

*7. ಲಂಚಗಾರಿಕೆಯಲ್ಲಿ ಶಾಮೀಲಾಗ ಬೇಡಿರಿ. (2:188)*

*8. ನಿಮ್ಮೊಂದಿಗೆ ಸೆಣಸುವವರೊಂದಿಗೆ ಮಾತ್ರ ಹೋರಾಡಿ. (2:190)*

*9. ಯುದ್ಧದ ಶಿಷ್ಟಾಚಾರ/ನಿಯಮಗಳನ್ನು ಪಾಲಿಸಿ. (2:191)*

*10. ತಬ್ಬಲಿಗಳನ್ನು ಸಂರಕ್ಷಿಸಿ. (2:220)*

*11. ಮುಟ್ಟಿನ ಕಾಲಾವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗ ಬೇಡಿ. (2:222)*

*12. ನಿಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ತಿ ಸ್ತನಪಾನ ಮಾಡಿಸಿ. (2:233)*

*13. ಆಳುವವರನ್ನು ಅವರ ಅರ್ಹತೆ ಆಧಾರದಲ್ಲೇ ಆರಿಸಿರಿ. (2:247)*

*14. ಧರ್ಮದಲ್ಲಿ ಯಾವುದೇ ಬಲತ್ಕಾರವಿಲ್ಲ. (2:256)*

*15. ನೆನಪಿನಲ್ಲಿದ್ದೂ ದಾನಧರ್ಮಗಳನ್ನು ರದ್ದು ಮಾಡ ಬೇಡಿ. (2:264)*

*16. ಅರ್ಹರನ್ನು ಹುಡುಕಿ ಸಹಾಯ ಒದಗಿಸಿ. (2;273)*

*17. "ಬಡ್ಡಿ"ಯನ್ನು ಸ್ವೀಕರಿಸ ಬೇಡಿ. (2:275)*

*18. ಸಾಲ ಪಡೆದವರು ಅಸಹಾಯಕ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಹೆಚ್ಚು ಕಾಲಾವಕಾಶ ಕೊಡಿ. (2:280)*

*19. ಕೊಟ್ಟ ಸಾಲವನ್ನು ಬರವಣಿಗೆಯಲ್ಲಿ ಇಡಿ. (2:282)*

*20. ವಿಶ್ವಾಸ/ಭರವಸೆ/ನಂಬಿಗೆ ಇಡಿ. (2:283)*

*21. ಗೂಢಾಚಾರಿಕೆ/ಬೇಹುಗಾರಿಕೆ ಮತ್ತು ಚಾಡಿ ಹೇಳುವುದು ಮಾಡ ಬೇಡಿ. (2:283)*

*22. ಎಲ್ಲಾ ಕಾಲದ ಪ್ರವಾದಿಗಳಲ್ಲಿ ವಿಶ್ವಾಸ ಇರಿಸಿ. (2:285)*

*23. ಒಬ್ಬರನ್ನು ಅವರ ಸಾಮರ್ಥ್ಯಕ್ಕಿಂತ ಅಧಿಕ ಪೀಡಿಸ ಬೇಡಿ. (2:286)*

*24. ಒಕ್ಕಟ್ಟನ್ನು ಮುರಿದು ಬೇರ್ಪಡ ಬೇಡಿ. (3:103)*

*25. ಕೋಪ/ಆಕ್ರೋಶವನ್ನು ನಿಗ್ರಹುಸಿ. (3:134)*

*26. ಮಾತಿನಲ್ಲಿ ಉದ್ಧಟತನ ತೋರದಿರಿ. (3:159)*

*27. ಈ ಭುವನ ಸೃಷ್ಟಿಯಲ್ಲಿ ಅಡಕವಾಗಿರುವ ವಿಸ್ಮಯಗಳನ್ನು ಆಳವಾಗಿ ಅರಿಯಿರಿ. (3:191)*

*28. ಪುರುಷರು ಮತ್ತು ಮಹಿಳೆಯರಿಗೂ ಸಮಾನ ಪ್ರತಿಫಲಗಳಿವೆ. (3:195)*

*29. ಮರಣ ಹೊಂದಿದವರ ಸಂಪತ್ತನ್ನು ಅವರ ಕುಟುಂಬದವರಲ್ಲಿ ಹಂಚಲ್ಪಡ ಬೇಕು. (4:7)*

*30. ಮಹಿಳೆಗೂ ಪೂರ್ವಜರ ಆಸ್ತಿಯಲ್ಲಿ ಉತ್ತರಧಿಕಾರವಿದೆದೆ. (4:7)*

*31. ತಬ್ಬಲಿಗಳ ಹಕ್ಕನ್ನು ಕಬಳಿಸ ಬೇಡಿ. (4:10)*

*32. ತನ್ನ ರಕ್ತ ಸಂಬಂಧಿಗಳನ್ನು ವರಿಸ ಬೇಡಿ. (4:23)*

*33. ಬೇರೆಯವರ ಸ್ವತ್ತನ್ನು ಅನ್ಯಾಯವಾಗಿ ಕಬಳಿಸ ಬೇಡಿ. (4:29)*
*34. ಪುರುಷನು ಕುಟುಂಬದ ಯಜಮಾನನು. (4:34)*

*35. ಪರರೊಂದಿಗೆ ಎಂದೂ ಹಿತವಂತರಾಗಿರಿ. (4:36)*

*36. ಜಿಪುಣರಾಗ ಬೇಡಿ. (4:37)*

*37. ಹೊಟ್ಟೆಕಿಚ್ಚು ಪಡಬೇಡಿ. (4:54)*

*38. ಜನರ ನಡುವೆ ನ್ಯಾಯವಂತಿಕೆಯಿಂದ ನಿರ್ಣಯ ಕೊಡಿ. (4:58)*

*39. ಒಬ್ಬರನ್ನೊಬ್ಬರು ಕೊಲ್ಲ ಬೇಡಿ. (4:92)*

*40. ಮೋಸ/ವಂಚನೆಯ ವಕಾಲತ್ತು ವಹಿಸ ಬೇಡಿ. (4:105)*

*41. ನ್ಯಾಯದಲ್ಲಿ ಧೃಢವಾಗಿ ನಿಲ್ಲಿ. (4:135)*

*42. ಒಳಿತಿನಲ್ಲಿ ಒಬ್ಬರಿಗೊಬ್ಬರು ಸಹಕರಿಸಿ. (5:2)*

*43. ಪಾಪ/ಕಳಂಕ/ದುಶ್ಕರ್ಮ ಮತ್ತು ಆಕ್ರಮಣಗಳಲ್ಲಿ ಸಹಕರಿಸದಿರಿ. (5:2)*

*44. ಮೃತ ಪ್ರಾಣಿಗಳು, ರಕ್ತ ಮತ್ತು ಹಂದಿ ಮಾಂಸ ನಿಷಿದ್ಧಗೊಳಿಸಲಾಗಿದೆ. (5:3)*

*45. ನ್ಯಾಯವನ್ನು ಪ್ರತಿಪಾದಿಸಿ. (5:8)*

*46. ಪಾಠದಾಯಕವಾಗಿರುವಂತೆ ಅಪರಾಧಿಗಳನ್ನು ಶಿಕ್ಷಿಸಿ. (5:38)*

*47. ಪಾಪ ಕೃತ್ಯ ಮತ್ತು ಅನ್ಯಾಯದ ವಿರುದ್ಧ ಸದಾ ಹೋರಾಡಿ. (5:63)*

*48. ಶರಾಬು ಮತ್ತು ಅಮಲು ಬರಿಸುವ ವಸ್ತುಗಳನ್ನು ವರ್ಜಿಸಿ. (5:90)*

*49. ಜೂಜಾಡ ಬೇಡಿ. (5:90)*

*50. ಬೇರೆಯವರ ದೇವರನ್ನು ತೆಗಳ/ಹೀಯಾಳಿಸ ಬೇಡಿ. (6:108)*

*51. ಒಂದು ವಿಷಯದಲ್ಲಿ ಬಹುಸಂಖ್ಯಾತರಾಗಿರುವುದು ಸತ್ಯಕ್ಕೆ ಪುರಾವೆ/ಧೃಡೀಕರಣ ಅಲ್ಲ. (6:116)*

*52. ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸಿ ಜನರನ್ನು ವಂಚಿಸದಿರಿ. (6:152)*

*53. ಅಹಂಕಾರಿಗಳಾಗಿ ಇರ ಬೇಡಿ. (7:13)*

*54. ತಿನ್ನಿರಿ, ಕುಡಿಯಿರಿ ಆದರೆ ದುಂದುಗಾರಿಕೆ ಎಸೆಯದಿರಿ. (7:31)*

*55. ಪ್ರಾರ್ಥನೆಯ ವೇಳೆಯಲ್ಲಿ ಒಳ್ಳೆಯ ಶುಭ್ರ ಬಟ್ಟೆಗಳನ್ನು ಉಡಿರಿ. (7:31)*

*56. ಇತರರ ತಪ್ಪುಗಳನ್ನು ಕ್ಷಮಿಸಿ/ಮನ್ನಿಸಿರಿ. (7:199)*

*57. ಯುದ್ಧಗಳಲ್ಲಿ ಬೆನ್ನು ತೋರಿಸುವ ಹೇಡಿಗಳಾಗದಿರಿ. (8:15)*

*58. ಸಹಾಯ ಯಾಚಿಸಿದವರಿಗೆ ಸಹಾಯ ಮಾಡಿ ಅವರನ್ನು ಸಂರಕ್ಷಿಸಿರಿ. (9:6)*

*59. ಶುಚಿತ್ವ/ಸ್ವಚ್ಛತೆ ಪಾಲಿಸಿ. (9:108)*

*60. ಅಲ್ಲಾಹನ ಕೃಪೆಯಿಂದ ಎಂದೂ ನಿರಾಶರಾಗದಿರಿ. (12:87)*

*61. ತಿಳುವಳಿಕೆಯ ಕೊರತೆಯಿಂದ ಮಾಡಿದ ತಪ್ಪನ್ನು ಅಲ್ಲಾಹನು ಕ್ಷಮಿಸುವನು. (16:119)*

*62. ದೇವಮಾರ್ಗದ ಆಮಂತ್ರಣವನ್ನು ಒಳ್ಳೆಯ ಬೋಧನೆ ಮತ್ತು ಜಾಣತನದಿಂದ ಮಾಡಿ. (16:125)*

*63. ಒಬ್ಬರ ಪಾಪದ ಬಾಧ್ಯತೆ ಇನ್ನೊಬ್ಬರಿಗಿಲ್ಲ. (17:15)*

*64. ಪೋಷಕ/ಮಾತಾಪಿತರೊಂದಿಗೆ ಕರ್ತವ್ಯತತ್ಪರರಾಗಿರಿ. (17:23)*

*65. ಮಾತಾ ಪಿತರೊಂದಿಗೆ ಎಂದೂ ಅಗೌರವ/ಅವಮಾನದ ವರ್ತನೆ ತೋರದಿರಿ. (17:23)*

*66. ಎಂದೂ ಹಣದ ದುಂದು ವೆಚ್ಚ ಮಾಡ ಬೇಡಿ. (17:29)*

*67. ಬಡತನದ ಭಯದಿಂದ ಎಂದೂ ತನ್ನ ಮಕ್ಕಳನ್ನು ಕೊಲ್ಲ ಬೇಡಿ. (17:31)*

*68. ಎಂದೂ ವ್ಯಭಿಚಾರದತ್ತ ಸುಳಿಯ ಬೇಡಿ. (17:32)*

*69. ಎಂದೂ ತನಗೆ ತಿಳಿಯದಿರುವ ವಿಷಯದ ಕುರಿತು ಬೆನ್ನು ಹತ್ತಿ ಹೋಗ ಬೇಡಿ. (17:36)*

*70. ಎಂದೂ ಜನರೊಂದಿಗೆ ಸೌಮ್ಯತೆಯಿಂದ ಮಾತನಾಡಿ. (20:44)*

*71. ಹುರುಳಿಲ್ಲದ/ನಿರರ್ಥಕ/ನಿಶ್ಪ್ರಯೋಜಕ/ಪೊಳ್ಳು ವಿಷಯಗಳಿಂದ ದೂರ ಇರಿ. (23:3)*

*72. ಅನುಮತಿ ಇಲ್ಲದೇ ಇತರರ ಮನೆಗಳನ್ನು ಪ್ರವೇಶಿಸ ಬೇಡಿ. (24:27)*

*73. ಯಾರು ಕೇವಲ ಅಲ್ಲಾಹನಲ್ಲಿ ರಕ್ಷಣೆ ಯಾಚಿಸುತ್ತಾರೋ ಅಲ್ಲಾಹನು ಅವರಿಗೆ ರಕ್ಷಣೆಯನ್ನೀಯುವನು. (24:55)*

*74. ಎಂದೂ ಪೋಷಕರ ಕೊಠಡಿಯನ್ನು ಅವರ ಅನುಮತಿ ಪಡೆಯದೇ ಪ್ರವೇಶಿಸ ಬೇಡಿ. (24:58)*

*75. ಭೂಮಿಯಲ್ಲಿ ನಮ್ರತೆಯಿಂದ ನಡೆದಾಡಿ. (25:63)*

*76. ಈ ಭೂಮಿಯಲ್ಲಿ ನಿಮ್ಮ ಪಾಲನ್ನು ಉಪೇಕ್ಷಿಸ ಬೇಡಿ. (28:77)*

*77. ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿಸದಿರಿ. (28:88)*

*78. ಸಲಿಂಗ ಕಾಮದಲ್ಲಿ ತೊಡಗ ಬೇಡಿ. (29:29)*

*79. ಸರಿಯನ್ನು ಪ್ರತಿಪಾದಿಸಿ, ತಪ್ಪನ್ನು ನಿಷೇಧಿಸಿ. (31:17)*

*80. ಭೂಮಿಯಲ್ಲಿ ದರ್ಪದಿಂದ ನಡೆದಾಡದಿರಿ. (31:18)*

*81. ಧ್ವನಿಯನ್ನು ತಗ್ಗಿಸಿ ಮಾತನಾಡಿ. (31:19)*

*82. ಮಹಿಳೆಯರು ತಮ್ಮ ಶೃಂಗಾರವನ್ನು ಪ್ರಕಟಿಸ/ತೋರ್ಪಡಿಸಬಾರದು. (33:33)*

*83. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ. (39:53)*

*84. ಅಲ್ಲಾಹನ ಕರುಣೆಯಿಂದ ಎದೆಗುಂದದಿರಿ. (39:53)*

*85. ಕೆಡುಕನ್ನು ಒಳಿತಿನ ಮೂಲಕ ಹೆಮ್ಮೆಟ್ಟಿಸಿ. (41:34)*

*86. ವಿಷಯ/ಸಂಗತಿಗಳನ್ನು ಜನರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸಿ. (42:38)*

*87. ಜನರ ಮಧ್ಯೆ ವಿಷಯಗಳನ್ನು ಇತ್ಯರ್ಥ ಗೊಳಿಸಲು ಪ್ರಯತ್ನಿಸಿ. (49:9)*

*88. ಇತರರನ್ನು ಮೂದಲಿಸಿ ಅಪಹಾಸ್ಯ ಗೈಯದಿರಿ. (49:11)*

*89. ಅನುಮಾನ/ಸಂದೇಹಗಳನ್ನು ನಿವಾರಿಸಿ. (49:12)*

*90. ಬೇಹುಗಾರಿಕೆ ಮತ್ತು ಚಾಡಿ ಮಾಡದಿರಿ. (49:12)*

*91. ನಿಮ್ಮಲ್ಲಿ ಅತೀ ಧರ್ಮಶೀಲನಾಗಿರುವವನೇ ಅತೀ ಉತ್ತಮನು. (49:13)*

*92. ಅತಿಥಿಗಳನ್ನು ಗೌರವಿಸಿ. (51:26)*

*93. ಸಂಪತ್ತನ್ನು ದಾನದಲ್ಲಿ ವ್ಯಯಿಸಿ. (57:7)*

*94. ಯಾವುದೇ ಸನ್ಯಾಸತ್ವವು ಧರ್ಮವಲ್ಲ. (57:27)*

*95. ಸತ್ಯ ವಿಶ್ವಾಸ ಮತ್ತು ಜ್ನಾನವುಳ್ಳವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು. (58:11)*

*96. ಮುಸ್ಲಿಮೇತರರನ್ನು ಕರುಣೆ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಿ. (60:8)*

*97. ಮನಸ್ಸಿನ ಸಂಕುಚಿತತೆಯಿಂದ ಸುರಕ್ಷಿತರಾಗಿರುವವರು ಮಾತ್ರ ಎಶಸ್ವಿಗಳು. (64:16)*

*98. ಅಲ್ಲಾಹನಿಂದ ಕ್ಷಮೆ ಕೋರಿ, ಅವನು ಕ್ಷಮಿಸುವವನು ಮತ್ತು ಕರುಣಾಮಯಿ ಆಗಿದ್ದಾನೆ. (73:20)*

*99. ಪ್ರಶ್ನಿಸುವವರನ್ನು/ಕೇಳುವವರನ್ನು ಹಿಮ್ಮೆಟ್ಟಿಸ ಬೇಡಿ. (93:10)*

*100. ಬಡವರಿಗೆ ಉಣಿಸುವವರನ್ನು ಹುರಿದಿಂಬಿಸಿ. (107:3)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...