ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
{ಭಾಗ 3}
ಶೃಂಗೇರಿ ಮಠ ಲೂಟಿ
ಸಂಘ ಪರಿವಾರದವರಿಗೆ ಇಂದು ಸ್ಫೂರ್ತಿಯಾಗಿರುವ ಶಿವಾಜಿಯ ಹಿಂಗಾಮಿಗಳಾದ ನಾನಾ ಪೇಶ್ವೆಗಳು ಶೃಂಗೇರಿ ಮಠಕ್ಕೆ ದಾಳಿ ಮಾಡಿ ಸ್ವಾಮಿಗಳನ್ನು ಓಡಿಸಿದರು.
ಸಂಪತ್ತನ್ನು ವಿಗ್ರಹಗಳನ್ನು ಕೊಳ್ಳೆ ಹೊಡೆದರು. ಮತಾಂಧನೆಂದು ಸಂಘ ಪರಿವಾರದವರು ಹೇಳುತ್ತಿರುವ ಟಿಪ್ಪು ಸುಲ್ತಾನ್ ಮಠಗಳನ್ನು ಕಾಪಾಡಿ, ಸ್ವಾಮಿಗಳನ್ನು ಆಹ್ವಾನಿಸಿ ಗೌರವಿಸಿದರು. ಮಠಗಳ ಕಾಪಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದರು.
ಬ್ರಿಟಿಷ್ ಇತಿಹಾಸಕಾರರು ಮೈಸೂರು ಹುಲಿ 'ಫತೇ ಅಲಿ' ಟಿಪ್ಪುರವರನ್ನು ಮತಾಂಧನಾಗಿ ಚಿತ್ರಿಸಿದರು.
"ಟಿಪ್ಪು ಸುಲ್ತಾನ್ ಮೂರು ಸಾವಿರ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರ್ಬಂಧಿಸಿದಾಗ ಅವರೆಲ್ಲ ಆತ್ಮಹತ್ಯೆಗೈದರು" ( ಇಸ್ಲಾಂ ಆ್ಯಂಡ್ ಇಂಡಿಯನ್ ಕಲ್ಚರ್- ಕಲ್ಕತ್ತ ವಿಶ್ವವಿದ್ಯಾನಿಲಯದ ಸಂಸ್ಕೃತ ಮೇಧಾವಿ ಡಾ। ಹರಿಪ್ರಸಾದ್ ಗೆಜೆಟ್ನಲ್ಲಿ ಈ ರೀತಿ ಗೀಚಲಾಗಿದೆ.)
ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆಯಾಗಿದೆ. ಆ ಕಾಲದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದ, ಸ್ನೇಹದಿಂದ ಜೀವಿಸುತ್ತಿದ್ದರು. ಈ ಬಗ್ಗೆ ಮಹಾತ್ಮ ಗಾಂಧೀಜಿಯವರು 1945ರಲ್ಲಿ ಈ ರೀತಿ ಬರೆದಿದ್ದರು. "ಆಗ ಹಿಂದೂ ಮುಸ್ಲಿಮರ ಬಾಂಧವ್ಯ ಸ್ನೇಹ ಮಯವಾಗಿತ್ತು. ಇದು ಸತ್ಯಾಂಶ! ಟಿಪ್ಪುವಿನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು. ಅದೊಂದು ಆನಂದ ಮೂಲ, ಅದೊಂದು ಸ್ಫೂರ್ತಿದಾಯಕ, ಆ ಕಾಲದಲ್ಲಿ ಹಿಂದೂ ಮುಸ್ಲಿಮರು ವಿದೇಶಿ ಶತ್ರುಗಳನ್ನು ಗುರುತಿಸದೆ ಉದಾಸೀನ ಮಾಡಿದರು. ತಮ್ಮಲ್ಲಿ ತಾವೇ ಹೊಡೆದಾಡಲು ಆರಂಭಿಸಿದರು. ಮಹಾರಾಜ ಟಿಪ್ಪುವಿನ ಮಂತ್ರಿ ಒಬ್ಬ ಹಿಂದೂವಾಗಿದ್ದ. ಸ್ವತಂತ್ರ್ಯವಾಗಿ ಟಿಪ್ಪುವನ್ನು ಬ್ರಿಟಿಷರಿಗೆ ಹಿಡಿದು ಒಪ್ಪಿಸಿದ ಸ್ವಾಮಿ ದ್ರೋಹಿ ಈತನೇ ಎಂಬುದನ್ನು ನಾವು ನಾಚಿಕೆಯಿಂದ ಒಪ್ಪಿಕೊಳ್ಳಬೇಕು."
ಶೃಂಗೇರಿ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯರಿಗೆ ಹೈದರಲಿ, ಟಿಪ್ಪು ಸುಲ್ತಾನ್ ಇಬ್ಬರೂ ಪತ್ರಗಳನ್ನು ಬರೆದಿದ್ದಾರೆ. ಆ ಪತ್ರಗಳೆಲ್ಲವೂ ಕನ್ನಡದಲ್ಲಿಯೇ ಇದೆ. ಅದರಲ್ಲಿ ಶ್ರೀಗಳನ್ನು ಮರ್ಯಾದೆಗಾಗಿ ಸಂಭೋಧಿಸಲಾಗಿದೆ. ಪತ್ರಗಳೆಲ್ಲವೂ ಶ್ರೀ ಮತ್ಪರಮಹಂಸಾದಿ ಯಥೇಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಬಾದಶಾಹ ಟಿಪ್ಪು ಸುಲ್ತಾನ್ ಅವರ ಸಲಾಂ" ಎಂದು
ಆರಂಭಗೊಳ್ಳುತ್ತದೆ.
ಟಿಪ್ಪು ಬರೆದ ಒಂಬತ್ತನೆಯ ಪತ್ರ (54)ರಿಂದ ಅಮೂಲ್ಯ ಅಂಶಗಳು ತಿಳಿದು ಬರುತ್ತದೆ. "ಮಠದಿಂದ ಅರುವತ್ತು ಲಕ್ಷ ರೂಪಾಯಿ ಸಂಪತ್ತುಗಳನ್ನು ಮರಾಠರು ಲೂಟಿ ಮಾಡಿರುವುದಾಗಿ ತಿಳಿಸಿದ್ದೀರಷ್ಟೇ. ಈ ತಾಕೀತು ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು ಎಂಬುದಾಗಿ ಕೇಳುವುದು. ಸಾಮಾನು ಕೊಟ್ಟರೆ ಸರಿ ಇಲ್ಲವಾದರೆ ತಾಕೀತು ಹಿಂದಕ್ಕೆ ತೆಗೆದುಕೊಳ್ಳುವ ಸಾಬೀತು ಅಪ್ಪಣೆ ಕೊಡಿಸಿ" ಎಂಬುದಾಗಿ ಮರಾಠರ ವಿರುದ್ಧ ಕಾರ್ಯಾಚರಣೆಗೆ ಮಠಾದೀಶರಿಂದ ಅಪ್ಪಣೆ ಪಡೆದು ಪುಣೆಯ ಪೇಶ್ವೆಗೆ ಬರೆದು ಪರಿಹಾರ ಪಡೆದು, ಶೃಂಗೇರಿ ಶಾರದಮ್ಮ ಪುನರ್ ಪ್ರತಿಷ್ಠೆಗೆ ನೆರವಾಗಿದ್ದರು ಟಿಪ್ಪು ಸುಲ್ತಾನ್.
( ಮುಂದುವರಿಯುವುದು)
Comments