: ಕಅಬಾ ಎನ್ನುವ ಪದದ ಅರ್ಥವೇನು?
- ಚೌಕಾಕೃತಿಯ ರೂಪ
: ಭೂಮಿಯಲ್ಲಿನ ಪ್ರಥಮ ಮಸ್ಜಿದ್ ಯಾವುದು?
- ಕಅಬಾ
: ಕಅಬಾವನ್ನು ಪ್ರಥಮವಾಗಿ ನಿರ್ಮಿಸಿದವರು ಯಾರು?
- ಮಲಕುಗಳು
: ಕಅಬಾ ಎನ್ನುವುದು ಯಾವುದರ ಪ್ರತಿರೂಪವಾಗಿದೆ?
- ಆಕಾಶದಲ್ಲಿ ಮಲಕುಗಳು ಪ್ರದಕ್ಷಿಣೆ(ತ್ವವಾಫ್) ನಡೆಸುವ 'ಬೈತುಲ್ ಮಅ್'ಮೂರ್" ನ ರೂಪದಲ್ಲಿ
: ನಂತರ ಕಅಬಾ ವನ್ನು ಪುನರ್ ನಿರ್ಮಿಸಿದ್ದು ಯಾರು?
- ಆದಂ (ಅ)
: ಆದಂ(ಅ)ರ ನಂತರ ಪುನರ್ ನಿರ್ಮಾಣ ಮಾಡಿದ್ದು ಯಾರು?
- ಇಬ್'ರಾಹೀಂ(ಅ) ಮತ್ತು ಇಸ್ಮಾಯೀಲ್(ಅ)
: ಪುನರ್ ನಿರ್ಮಾಣಕ್ಕಾಗಿ ಕ'ಅಬಾದ ಗೋಡೆಯನ್ನು ತೆಗೆದದ್ದು ಯಾರು?
- ವಲೀದ್ ಬ್ನು ಮುಗೀರ
: ಇಬ್'ರಾಹೀಂ(ಅ)ಪುನರ್ ನಿರ್ಮಾಣ ಮಾಡಿದ ಕ'ಅಬಾಲಯದ ಅಡಿಪಾಯ ಖುರೈಶಿಗಳು ಪೂರ್ತಿಮಾಡಿದ್ದು ಯಾಕಾಗಿ?
- ಕ'ಅಬಾ ಪುನರ್ ನಿರ್ಮಾಣಕ್ಕಾಗಿ ಒಟ್ಟಗೂಡಿಸಿದ 'ಶುದ್ಧ ಸಂಪತ್ತು' ಮುಗಿದ ಕಾರಣಕ್ಕಾಗಿ
: ಮೇಲ್ಛಾವಣಿ ನಿರ್ಮಿಸದ ಕ'ಅಬಾದ ಆ ಭಾಗದ ಹೆಸರೇನು?
- ಹತ್ವೀಂ
: ಕ'ಅಬಾದ ಮೇಲ್ಛಾವಣಿ ನಿರ್ಮಿಸಲಿಕ್ಕಾಗಿ ಮರವನ್ನು ತರಿಸಿಕೊಂಡದ್ದು ಎಲ್ಲಿಂದ?
- ರೋಮನ್ ವ್ಯಾಪಾರಿಗಳ ಒಂದು ಹಡಗು ಅಪಘಾತಕ್ಕೀಡಾಗಿ ಜಿದ್ದಾ ಬಂದರಿನಲ್ಲಿತ್ತು. ಅದರ ಮರವನ್ನು ಹಣಕೊಟ್ಟು ಖರೀದಿಸಿದ್ದು.
: ಯಾವ ಮರಕೆಲಸದ ವ್ಯಕ್ತಿಯ ನೇತೃತ್ವದಲ್ಲಿ ಕ'ಅಬಾಲಯದ ಮೇಲ್ಛಾವಣಿಯು ನಿರ್ಮಾಣಗೊಂಡಿದೆ?
- ರೋಮನ್ ಹಡಗಿನಲ್ಲಿದ್ದ ಬಾಖುಂ ಎಂಬ ಹೆಸರುಳ್ಳ ವ್ಯಕ್ತಿ
: ಕ'ಅಬಾದ ಉದ್ದ ಮತ್ತು ಅಗಲ?
- ನಲವತ್ತು ಅಡಿ ಉದ್ದ, ಮೂವತ್ತೈದು ಅಗಲ ಮತ್ತು ಐವತ್ತು ಅಡಿ ಎತ್ತರದ ಚೌಕಾಕೃತಿಯ ರೂಪದಲ್ಲಿ
: ಕ'ಅಬಾದ ಎತ್ತರ ಮೀಟರ್ ಲೆಕ್ಕದಲ್ಲಿ ಎಷ್ಟು?
- ಹದಿನೈದು ಮೀಟರ್ ಎತ್ತರ
: ಕ'ಅಬಾದ ಬಾಗಿಲನ್ನು ಎಷ್ಟು ಎತ್ತರದಲ್ಲಾಗಿದೆ ಖುರೈಶಿಗಳು ಸ್ಥಾಪಿಸಿರುವುದು?
- ಎರಡೂವರೆ ಮೀಟರ್ ಎತ್ತರದಲ್ಲಿ
: ಕ'ಅಬಾಲಯದ ಪುನರ್ ನಿರ್ಮಾಣ ನಡೆಯುವಾಗ ನಬಿ(ಸ) ಕಲ್ಲನ್ನು ಹೊತ್ತು ತಂದಿರುತ್ತಿದ್ದದ್ದು ಯಾವ ರೀತಿಯಲ್ಲಿ?
- ನಗ್ನವಾದ ತನ್ನ ಭುಜದಲ್ಲಿ
: ಬೇರೆ ಬಾಲಕರ ರೀತಿಯಲ್ಲಿ ಉಟ್ಟ ವಸ್ತ್ರ ತಗೆದು ಭುಜದಲ್ಲಿ ಇಡಲು ಹೇಳಿದ ಪಿತೃಸಹೋದರ ಅಬ್ಬಾಸ್(ರ), ನಬಿ(ಸ)ರ ಉಟ್ಟ ವಸ್ತ್ರ ತೆಗೆಯಲು ಶ್ರಮಿಸಿದಾಗ ಸಂಭವಿಸಿದ್ದೇನು?
- ನಬಿ(ಸ)ರವರು ಪ್ರಜ್ಞೆ ತಪ್ಪಿ ಬಿದ್ದರು
: ಹಜರುಲ್ ಅಸ್ವದ್ ಸ್ಥಾಪಿಸಲು ಉಂಟಾದ ತರ್ಕವನ್ನು ಖುರೈಶಿಗಳು ಪರಿಹರಿಸಿದ್ದು ಹೇಗೆ?
- ನಾಳೆ ಬೆಳಗ್ಗೆ ಮೊದಲು ಯಾರು ಕ'ಅಬಾಲಯಕ್ಕೆ ಪ್ರವೇಶಿಸುವರೋ ಅವರನ್ನೇ ಮುಂದಾಳಾಗಿ ಆರಿಸುವುದು ಎಂಬ ತೀರ್ಮಾನದಲ್ಲಿ
: ಯಾರಾಗಿದ್ದಾರೆ ಈ ಆಶಯವನ್ನು ಜನರ ಮುಂದಿರಿಸಿದ್ದು?
- ಹುದೈಫಾ ಎಂಬ ಹೆಸರುಳ್ಳ ಅಬೂ ಉಮಯ್ಯ(ಇವರು ನಬಿ(ಸ)ರ ಪತ್ನಿ ಉಮ್ಮು ಸಲಮ(ರ)ರವರ ತಂದೆಯಾಗಿದ್ದಾರೆ)
: ಬಾಬುಬನೀಶೈಬಾ(ಇವತ್ತಿನ ಬಾಬುಸ್ಸಲಾಂ)ದ ಮೂಲಕ ಮರುದಿನ ಮೊದಲು ಕ'ಅಬಾಲಯಕ್ಕೆ ಪ್ರವೇಶಿಸಿದ್ದು ಯಾರು?
- ಅಲ್ ಅಮೀನ್
: ಹಜರುಲ್ ಅಸ್ವದನ್ನು ನಬಿ(ಸ)ರು ಸ್ಥಾಪಿಸಿದ್ದು ಹೇಗೆ?
- ಒಂದು ವಸ್ತ್ರ ಹರಡಿ ಅದರಲ್ಲಿ ಹಜರುಲ್ ಅಸ್ವದ್ ಇಟ್ಟು, ಖುರೈಶಿಗಳ ಒಂದೊಂದು ಕುಟುಂಬದ ನೇತಾರರೊಡನೆ ವಸ್ತ್ರ ಹಿಡಿದು ಎತ್ತಲು ಹೇಳಿದರು. ಅವರೆಲ್ಲರೂ ಹಜರುಲ್ ಅಸ್ವದ್ ಇರುವ ವಸ್ತ್ರವನ್ನು ಎತ್ತಿದೊಡನೆ ನಬಿ(ಸ)ರು ಹಜರುಲ್ ಅಸ್ವದನ್ನು ಅದರ ಯಥಾ ಸ್ಥಾನದಲ್ಲಿ ಸ್ಥಾಪಿಸಿದರು.
: ಕಅಬಾಲಯದ ಹೆಸರುಗಳೇನು?
- ೧) ಕ'ಅಬಾ ೨) ಅಲ್ ಬೈತ್ ೩) ಬೈತುಲ್ಲಾಹ್ ೪) ಅಲ್ ಬೈತುಲ್ ಹರಂ ೫) ಅಲ್ ಬೈತುಲ್ ಅತೀಕ್ ೬) ಖಿಬ್'ಲಾ
: ಕಅಬಾಲಯದ ಪುನರ್ ನಿರ್ಮಾಣ ಕಾರ್ಯ ಎಷ್ಟು ಬಾರಿ ನಡೆದಿದೆ?
- ಪ್ರಧಾನವಾಗಿ ಹನ್ನೆರಡು ಬಾರಿ
: ಪುನರ್ ನಿರ್ಮಾಣ ಮಾಡಿದವರು ಯಾರು?
- ೧)ಮಲಕುಗಳು ೨)ಆದಂ(ಅ) ೩)ಶೀಸ್(ಅ) ೪) ಇಬ್'ರಾಹೀಂ(ಅ) ೫)ಅಮಾಲಿಖಃ ೬)ಜುರ್'ಹುಂ ೭)ಖುಸಯ್ಯಿಬ್ನು ಕಿಲಾಬ್ ೮)ಖುರೈಶ್ ೯)ಅಬ್ದುಲ್ಲಾಹ್ ಇಬ್ನು ಝುಬೈರ್(ರ) ೧೦)ಹಜ್ಜಾಜ್ ಇಬ್ನು ಯೂಸುಫ್ ೧೧)ಸುಲ್ತಾನ್ ಮುರಾದ್ ಅಲ್ ಉಸ್ಮಾನಿ ೧೨)ಖಾದಿಮುಲ್ ಹರಮೈನ್ ಫಹದ್ ಇಬ್ನು ಅಬ್ದುಲ್ ಅಝೀಝ್
: ಮೇಲೆ ಹೆಸರಿಸಿದವರ ಪುನರ್ ನಿರ್ಮಾಣಗಳು ಎಂದು?
- ಖುರೈಶಿಗಳು* ಹಿಜ್ರಾ ಕ್ಕಿಂತ 18 ವರ್ಷಗಳ ಮೊದಲು
- ಅಬ್ದುಲ್ಲಾಹ್ ಇಬ್ನು ಝುಬೈರ್* ಹಿಜ್ರಾ 65 ರಲ್ಲಿ
- ಹಜ್ಜಾಜ್ ಇಬ್ನು ಯೂಸುಫ್* ಹಿಜ್ರಾ 74 ರಲ್ಲಿ
- ಸುಲ್ತಾನ್ ಮುರಾದುಲ್ ಉಸ್ಮಾನಿ* ಹಿಜ್ರಾ 1040 ರಲ್ಲಿ
- ಫಹದ್ ಇಬ್ನು ಅಬ್ದುಲ್ ಅಝೀಝ್* ಹಿಜ್ರಾ 1417 ರಲ್ಲಿ
: ಪುರಾತನ ಕಾಲದಲ್ಲಿ ಕಅಬಾದ ಹೊರಗಾಗಿ ಎಷ್ಟು ಬಾಗಿಲುಗಳಿದ್ದವು?
- ಎರಡು
: ಈಗ ಕಅಬಾದ ಹೊರಗಾಗಿ ಎಷ್ಟು ಬಾಗಿಲುಗಳಿವೆ?
- ಒಂದು
: ಯಾರಾಗಿದ್ದಾರೆ ಕಅಬಾದ ಒಂದು ಬಾಗಿಲನ್ನು ಮುಚ್ಚಿದ್ದು?
- ಖುರೈಶಿಗಳು
: ಖುರೈಶಿಗಳು ಕಅಬಾಲಯಕ್ಕೆ ಮೇಲ್ಛಾವಣಿ ನಿರ್ಮಿಸಲು ಕಾರಣ?
- ಹಲವು ಕಳ್ಳರು ಕಅಬಾಲಯದಲ್ಲಿ ಸಂರಕ್ಷಿಸಲ್ಪಟ್ಟಿದ್ದ ನಿಧಿಯನ್ನು ಹೊತ್ತೊಯ್ದಿದ್ದರು
☄ಹಜರುಲ್ ಅಸ್ವದ್ ✨
: ಹಜರುಲ್ ಅಸ್ವದ್ ನ ಅರ್ಥವೇನು?
- ಕಪ್ಪು ಶಿಲೆ
: ಹಜರುಲ್ ಅಸ್ವದ್ ನ ಯಥಾ ಸ್ಥಳ?
- ಸ್ವರ್ಗ
: ಸ್ವರ್ಗದಿಂದ ಇಳಿಸಲ್ಪಟ್ಟಾಗ ಹಜರುಲ್ ಅಸ್ವದ್ ನ ಬಣ್ಣ ಯಾವುದಾಗಿತ್ತು?
- ಅಪ್ಪಟ ಬಿಳಿ
: ಬಿಳಿ ಶಿಲೆ ಹೇಗೆ ಕಪ್ಪು ವರ್ಣದ ಶಿಲೆಯಾಯಿತು?
- ಆದಂ(ಅ) ಸಂತತಿಗಳು ಪಾಪಗಳ ಪ್ರತಿಫಲವಾಗಿ
: ಇಬ್ನು ಝುಬೈರ್(ರ)ರವರು ಕಅಬಾಲಯವನ್ನು ಪುನರ್ ನಿರ್ಮಿಸಿದಾಗ ಅದರ ಗೋಡೆಯಲ್ಲಿ ಪ್ರಕಾಶಿಸಿದ ಭಾಗ ಬಿಳಿ ವರ್ಣದಲ್ಲಿ ಕಂಡದ್ದು ಯಾರು?
- ಮುಜಾಹಿದ್(ರ)
: ಕಅಬಾಲಯದ ಗೋಡೆಯಲ್ಲಿ ಹಜರುಲ್ ಅಸ್ವದ್ ನ್ನು ಪ್ರತಿಷ್ಟಿಸಿದಾಗ ಅದರಲ್ಲಿದ್ದ ಕಲ್ಲುಗಳೆಷ್ಟು?
- ಒಂದು ಮಾತ್ರ
: ಈಗ ಹಜರುಲ್ ಅಸ್ವದ್ ಎಷ್ಟು ತುಂಡುಗಳಾಗಿದೆ?
- ಹೊರಗಿನ ಭಾಗ ಎಂಟು ತುಂಡುಗಳು
: ಹಜರುಲ್ ಅಸ್ವದ್ ಒಡೆದು ಹೋಗಿದ್ದು ಯಾವಾಗ?
- ಹಿಜ್ರಾ 319 ರಲ್ಲಿ
: ಹಜರುಲ್ ಅಸ್ವದ್ ನ್ನು ಒಡೆದದ್ದು ಯಾರು?
- ಖಿರಾಮಿತ್ವೀಗಳು
: ಯಾರಾಗಿದ್ದಾರೆ ಖಿರಾಮಿತ್ವೀಗಳು?
- ಅಬೂತ್ವಾಹಿರ್ ಅಲ್ ಖಿರಾಮಿತ್ವೀ ಎಂಬ ಮುಖಂಡನ ಕೆಳಗೆ ಒಂದುಗೂಡಿದ ಶಿಯಾಗಳು
: ಶಿಯಾಗಳಲ್ಲಿ ಯಾವ ವಿಭಾಗದವರಾಗಿದ್ದಾರೆ ಖಿರಾಮಿತ್ವಿಗಳು?
- ಇಸ್ಮಾಯೀಲಿಯತುಲ್ ಬಾತ್ವಿನೀಯ್ಯ ವಿಭಾಗದವರು
: ಖಿರಾಮಿತ್ವಿ ನಡೆಸಿದ ಅಕ್ರಮಗಳೇನು?
- ಕಅಬಾಲಯವನ್ನು ಅತಿಕ್ರಮಿಸಿ ಹಜರುಲ್ ಅಸ್ವದ್ ನ್ನು ಕೊರೆದು ಹೊರತೆಗೆದರು
: ಹಜರುಲ್ ಅಸ್ವದ್ ನ್ನು ಅವರು ಹೊತ್ತೊಯ್ದದ್ದು ಎಲ್ಲಿಗೆ?
- ಅಹ್'ಸಾಅ್ ಎಂಬ ಪ್ರದೇಶಕ್ಕೆ
: ನಂತರ ಯಾವಾಗ ಹಜರುಲ್ ಅಸ್ವದ್ ನ್ನು ಪನರ್ ಸ್ಥಾಪಿಸಿದ್ದು?
- ಹಿಜ್ರಾ 339 ರಲ್ಲಿ
: ಹಜರುಲ್ ಅಸ್ವದ್ ನ ಕಾಣುವ ಹೊರಭಾಗದ ಒಂದೊಂದು ತುಂಡುಗಳ ಅಳತೆ ಎಷ್ಟು?
- ಅತ್ಯಂತ ದೊಡ್ಡ ಗಾತ್ರವು ಒಂದು ಖರ್ಜೂರದ ಅಳತೆಯಲ್ಲಾಗಿದೆ
🍁❗ಕೆಲವರು ತಿಳಿದಿರುವುದು ಹಜರುಲ್ ಅಸ್ವದ್ ಎನ್ನುವುದು ಬೆಳ್ಳಿಯ ಕವಚದೊಳಗಿರುವ ದೊಡ್ಡ ಕಪ್ಪು ಕಲ್ಲು ಎಂದು! ಅದಲ್ಲ, ಆ ಕಪ್ಪು ಕಲ್ಲಿನ ಒಳಗಿರುವ ಎಂಟು ಸಣ್ಣ-ಸಣ್ಣ ತುಂಡುಗಳು(ಚಿತ್ರವನ್ನು ಕೆಳಗೆ ಕೊಟ್ಟಿದ್ದೇನೆ)❗🍁
: ಹಜರುಲ್ ಅಸ್ವದ್ ನ ತುಂಡುಗಳನ್ನು ಈಗ ಅಂಟಿಸಿರುವುದು ಯಾವುದರಲ್ಲಿ?
- ಬೆಳ್ಳಿಯ ಕವಚದೊಳಗಿರುವ, ಅಂಟಿಸಿದ ಇನ್ನೊಂದು ದೊಡ್ಡ ಶಿಲೆಯಲ್ಲಿ
: ಹಜರುಲ್ ಅಸ್ವದ್ ನ ಕೆಲವು ವಿಶೇಷತೆಗಳು?
- 1) ಸ್ವರ್ಗದ ಕಲ್ಲು
- 2) ಇಬ್ರಾಹಿಮ್(ಅ) ಸ್ಥಾಪಿಸಿದ್ದು
- 3) ನಬಿ(ಸ)ರವರ ಪಾವನ ಹಸ್ತದಿಂದ ಪುನಃ ಸ್ಥಾಪಿಸಲ್ಪಟ್ಟಿದ್ದು
- 4) ನಬಿ(ಸ)ರ ಚುಂಬನ ಲಭಿಸಿದ ಕಲ್ಲು
- 5) ಹಲವು ಪ್ರವಾದಿಗಳ ಚುಂಬನ ಲಭಿಸಿದ ಕಲ್ಲು
- 6) ಪ್ರದಕ್ಷಿಣೆ(ತ್ವವಾಫ್)ಯ ಆರಂಭ ಮತ್ತು ಅವಸಾನ
- 7) ಕೋಟ್ಯಾಂತರ ಪಂಡಿತ ಮಹಾಶಯರ ತುಟಿ ಸ್ಪರ್ಶಿಸಿದ ಕಲ್ಲು
- 8) ಪ್ರಾರ್ಥನೆಗೆ ಉತ್ತರ ಲಭಿಸುವ ಸ್ಥಳ
- 9) ಅಭಿನಂದನೆ ಸಲ್ಲಿಸಿದವರಿಗೆ ಅಂತ್ಯ ದಿವಸದಲ್ಲಿ ಸಾಕ್ಷಿ ನಿಲ್ಲುವ ಕಲ್ಲು
: ಹಜರುಲ್ ಅಸ್ವದ್ ಗೆ ಪ್ರಥಮವಾಗಿ ಬೆಳ್ಳಿಯ ಕವಚ ನಿರ್ಮಿಸಿದವರು ಯಾರು?
- ಅಬ್ದುಲ್ಲಾಹ್ ಇಬ್ನು ಝುಬೈರ್
☄ಮುಲ್ತಝಮ್ ✨
: ಮುಲ್ತಝಂ ಎಂದರೆ ಏನು?
- ಹಜರುಲ್ ಅಸ್ವದ್ ಮತ್ತು ಕಅಬಾದ ಬಾಗಿಲಿನ ಮಧ್ಯೆ ಇರುವ ಸ್ಥಳ
: ಈ ಸ್ಥಳಕ್ಕಿರುವ ವಿಶೇಷತೆ ಏನು?
- ಪ್ರಾರ್ಥನೆಗೆ ಖಂಡಿತಾ(ಇನ್'ಶಾ ಅಲ್ಲಾಹ್) ಉತ್ತರ ಲಭಿಸುವ ಸ್ಥಳ. ನಬಿ(ಸ) ಪ್ರಾರ್ಥನೆ ನಡೆಸಿದ ಸ್ಥಳ.
☄ಹತ್ವೀಮ್ ✨
: ಹತ್ವೀಮ್ ಎಂದರೇನು?
- ಕಅಬಾಲಯದ ಹೊರಗೆ ಕಾಣುವ ಅರ್ಧ ವೃತ್ತಾಕಾರದ ಅರ್ಧಗೋಡೆ
: ಇದು ಕಅಬಾಲಯದ ಪರಿಧಿಯಲ್ಲಿ ಸೇರಿದ್ದಾಗಿದೆಯಾ?
- ಹೌದು
: ಯಾಕಾಗಿ ಅದಕ್ಕೆ ಮೇಲ್ಛಾವಣಿ ನಿರ್ಮಿಸದಿರುವುದು?
- ಖುರೈಶಿಗಳ ಕೈಯಲ್ಲಿ 'ಶುದ್ಧ ಹಣ' ಮುಗಿದದ್ದರಿಂದ
: ಹತ್ವೀಮಿನ ಅಳತೆ?
- ಅಂದಾಜು 3 ಮೀಟರ್ ಉದ್ದ
☄ಮೀಝಾಬ್ ✨
: ಮೀಝಾಬ್ ಎಂದರೇನು?
- ಕಅಬಾದ ಮೇಲೆ ಬೀಳುವ ನೀರು ಕೆಳಗೆ ಹರಿಯಲು ಸ್ವರ್ಣದಲ್ಲಿ ನಿರ್ಮಿಸಿದ ಕೊಳವೆ
: ಮೀಝಾಬ್ ನ್ನು ಮೊದಲು ನಿರ್ಮಿಸಿದವರು ಯಾರು?
- ಖುರೈಶಿಗಳು
: ಮೀಝಾಬಿನ ವಿಶೇಷತೆ?
- ಇದರ ಕೆಳಗಡೆ ಪ್ರಾರ್ಥಿಸಿದರೆ ಉತ್ತರ ಲಭಿಸುವುದು
☄ರುಕ್ನುಲ್ ಯಮಾನಿ ✨
: ರುಕ್ನುಲ್ ಯಮಾನಿ ಎಂದರೇನು?
- ಯಮನಿನೊಡನೆ ಅಭಿಮುಖವಾಗಿರುವ ಕಅಬಾದ ಮೂಲೆಯಾಗಿದೆ ರುಕ್ನುಲ್ ಯಮಾನಿ
: ರುಕ್ನುಲ್ ಯಮಾನಿಯ ವಿಶೇಷತೆಯೇನು?
- ನಬಿ(ಸ)ರವರು ರುಕ್ನುಲ್ ಯಮಾನಿಯನ್ನು ಚುಂಬಿಸುತ್ತಿದ್ದರು
☄ಶಾದಿರ್'ವಾನ್ ✨
: ಶಾದಿರ್'ವಾನ್ ಎಂದರೇನು?
- ಕಅಬಾದ ಅಡಿಪಾಯದೊಡನೆ ಸೇರಿ ನಿರ್ಮಿಸಿದ ಸಣ್ಣ ಗೋಡೆ
: ಅದರ ಅಳತೆ?
- 13 ಸೆಂ.ಮೀ ಎತ್ತರ ಮತ್ತು 45 ಸೆಂ.ಮೀ ಅಗಲ
☄ಕಅಬಾದ ಒಳಭಾಗ ✨
: ಕಅಬಾದ ಒಳಭಾಗದಲ್ಲಿ ಎಷ್ಟು ಕಂಬಗಳಿವೆ?
- ಮೂರು
: ಅದನ್ನು ನಿರ್ಮಿಸಿದ್ದು ಯಾವುದರಲ್ಲಿ?
- ಮರದಲ್ಲಿ
: ಕಅಬಾದ ಒಳಭಾಗದಲ್ಲಿ ನಬಿ(ಸ) ನಮಾಝ್ ನಿರ್ವಹಿಸಿದ ಸ್ಥಳದಲ್ಲಾಗಿದೆ
_ _ _ _ _ ಇರುವುದು.
- ಮಿಹ್'ರಾಬ್
: ಕಅಬಾದ ಒಳಗೆ ಯಾವ ದಿಕ್ಕಿಗೆ ತಿರುಗಿ ನಮಾಝ್ ನಿರ್ವಹಿಸುವುದು?
- ಯಾವ ದಿಕ್ಕಲ್ಲಾದರೂ ನಮಾಝ್ ನಿರ್ವಹಿಸಬಹುದು
☄ಕಅಬಾದ ಬಾಗಿಲು ✨
: ಇಬ್ರಾಹಿಮ್(ಅ) ರವರು ಕಅಬಾ ನಿರ್ಮಿಸುವಾಗ ಎಷ್ಟು ಬಾಗಿಲುಗಳಾಗಿತ್ತು?
- ಎರಡು ಬಾಗಿಲುಗಳು
: ಯಾವ ಭಾಗದಲ್ಲಾಗಿತ್ತು ಆ ಬಾಗಿಲುಗಳು?
- ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ
: ಅಂದಿನ ಬಾಗಿಲುಗಳು ಎರಡು ಕಡೆಯಿಂದ(ಎರಡರ್ಧ) ತೆರೆಯಬಹುದಾಗಿತ್ತಾ?
- ಇಲ್ಲ, ಕೇವಲ ಒಂದು ಸಂಪೂರ್ಣ ಬಾಗಿಲು ಮಾತ್ರ
: ಆ ಕಾಲದಲ್ಲಿ ಜನರು ಯಾವ ಬಾಗಿಲುಗಳ ಮೂಲಕ ಪ್ರವೇಶಿಸುತ್ತಿದ್ದರು?
- ಪೂರ್ವ ಬಾಗಿಲಿನ ಮೂಲಕ ಪ್ರವೇಶಿಸಿ ಪಶ್ಚಿಮ ಬಾಗಿಲಿನಿಂದ ಹೊರಬರುತ್ತಿದ್ದರು.
: ಈ ಬಾಗಿಲುಗಳು ಎಷ್ಟು ಎತ್ತರದಲ್ಲಾಗಿತ್ತು?
- ನೆಲಕ್ಕೆ ಸಮನಾಗಿ
: ಕಅಬಾವನ್ನು ಮುಚ್ಚುವ ಮತ್ತು ತೆರೆಯುವಂತ ಬಾಗಿಲುಗಳನ್ನು ಸ್ಥಾಪಿಸಿದವರು ಯಾರು?
- ಯಮನ್ ನ ಮೂರನೆಯ ರಾಜರಾಗಿದ್ದ ಅಸ್'ಅದ್ ತುಬ್ಬ'ಅ್
: ಕಅಬಾದ ಪಶ್ಚಿಮ ಭಾಗದ ಬಾಗಿಲನ್ನು ಮುಚ್ಚಿದವರು ಯಾರು?
- ಖುರೈಶಿಗಳು
: ಪೂರ್ವ ಭಾಗದ ಬಾಗಿಲನ್ನು ಖುರೈಶಿಗಳು ಎಷ್ಟಾಗಿ ಎತ್ತರಿಸಿದ್ದರು?
- ಎರಡು ಮಿಸ್ವಾರ'ಅ್
: ಖುರೈಶಿಗಳು ಒಂದು ಬಾಗಿಲನ್ನು ಮುಚ್ಚಿ, ಇನ್ನೊಂದನ್ನು ಎತ್ತರಿಸಿದ್ದು ಯಾಕಾಗಿ?
- ಅವರಿಗೆ ಇಷ್ಟವಿರುವವರನ್ನು ಒಳಬಿಡಲು, ಅಲ್ಲದವರನ್ನು ತಡೆಯಲು
☄ಬಾಬುತ್ತೌಬಾ ✨
: ಬಾಬುತ್ತೌಬಾ ಎಂದರೇನು?
- ಕಅಬಾಲಯದ ಒಳಗಡೆಯಿರುವ ಬಾಗಿಲಿರುವ ಬಲಭಾಗದಲ್ಲಿನ ಛಾವಣಿಗೆ ಏರಲು ಏಣಿ ಮತ್ತು ಬಾಗಿಲು ಇದೆ. ಈ ಬಾಗಿಲನ್ನಾಗಿದೆ ಬಾಬುತ್ತೌಬಾ ಎನ್ನುವುದು. ಇದು ಕಅಬಾದ ಒಳಭಾಗದಲ್ಲಾಗಿದೆ. ಇದನ್ನು ಪರದೆಯಿಂದ ಮುಚ್ಚಿದ ಸ್ಥಿತಿಯಲ್ಲಿದೆ
: ಕಅಬಾದ ಬಾಗಿಲುಗಳನ್ನು ನಿರ್ಮಿಸಿದ ಲೋಹ?
- ಅಪ್ಪಟ ಚಿನ್ನ
: ಸ್ವರ್ಣ ಬಾಗಿಲುಗಳ ಕೆಲಸ ಪೂರ್ತಿಯಾಗಿದ್ದು ಎಂದು?
- ಹಿಜ್ರಾ 1399 ರಲ್ಲಿ
⏩ ವಿಜ್ಞಾನವೆಂಬ ಅರಿವುಗಳನ್ನು ಪ್ರಚುರಪಡಿಸುವುದು ಒಂದು ಪುಣ್ಯವಾಗಿದೆ. ಅದನ್ನು ಬೇರೆಯವರಿಗೆ ವರ್ಗಾಯಿಸುವುದು ಕೂಡ ಪುಣ್ಯಗಳು ಲಭಿಸುತ್ತಲೇ ಇರುತ್ತದೆ. ಈ ವಿಜ್ಞಾನವನ್ನು ತಮ್ಮ ಸ್ನೇಹಿತರಿಗೂ ತಲುಪಿಸಲು ಮರೆಯಬೇಡಿ ⏪
ಅಲ್ಲಾಹು ತೌಫೀಖ್ ನೀಡಲಿ, ಆಮೀನ್ ಯಾ ರಬ್ಬಲ್ ಆಲಮೀನ್...
🍁 ನಮ್ಮೆಲ್ಲರ ಪ್ರೀತಿಯ ಕಣ್ಮಣಿಯಾದ ನಬಿ ﷺ ರವರ ಮೇಲೆ ಒಂದು ಸ್ವಲuಾತ್ 🍁
🍁🍁اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه🍁🍁
Comments