Skip to main content

ಹಸು ಮಾತನಾಡಿತು. ಬಖರಃ ಸೂರತಿನಲ್ಲಿರುವ ಘಟನೆ *ಪೂರ್ತಿ ಚರಿತ್ರೆ.....* 〰〰〰〰〰〰〰〰〰 💢ಎಂ.ಕೆ.ಸಿನಾನ್ ಅಜಿಲಮೊಗರು💢

*ಮೂಸಾನಬಿ(ಅ.ಸ)ರ ಕಾಲಘಟ್ಟ........*

ಆ ಊರಲ್ಲೊಬ್ಬ ಕೋಟ್ಯಾಧಿಪತಿˌ
ಸುಖ ಆಢಂಬರದ ಜೀವನˌ
ಮನೆಯಲ್ಲಿ ಅದೆಷ್ಟೋ ಕೆಳಸದಾಳುಗಳು.......
ಸಾಲುಗಟ್ಟಿ ನಿಂತಿರುವ ಕುದುರೆಗಳು.......
ಆದರೆˌ
ಕೋಟ್ಯಾಧಿಪತಿಯಲ್ಲಿದ್ದ ಒಂದೇ ಒಂದು ಕೊರತೆ ಮಕ್ಕಲಿಲ್ಲದಿರುವುದು....
ಕೋಟ್ಯಾಧಿಪತಿಯ ಸಹೋದರನ ಮಕ್ಕಳು ಆತನ ಸಾವನ್ನೇ ಕಾಯುತಿದ್ದರುˌಸಂಪತ್ತಿನ ವಾರೀಸುದಾರರಾಗಲು.......

ಕೋಟ್ಯಾಧಿಪತಿಯ ಸಾವು ಹತ್ತಿರವಿಲ್ಲವೆಂದು ಮನಗಂಡು *ಕೋಟ್ಯಾಧಿಪತಿಯನ್ನು ಕೊಲ್ಲಲು ತೀರ್ಮಾನಿಸಿದರು*......

ಸಹೋದರನ ಇಬ್ಬರು ಮಕ್ಕಳು ಕೊಲ್ಲಲು ಬೇಕಾದ ಸಂಚು ಹಾಕಿದರುˌ
ಮಧ್ಯ ರಾತ್ರಿ........
ಎಲ್ಲವೂ ನಿಶ್ಶಬ್ಧ........
ಅರಮನೆಯಲ್ಲೆಲ್ಲರೂ ಗಾಢನಿದ್ರೆಯಲ್ಲಿದ್ದಾರೆ.......
ರಾತ್ರೋ ರಾತ್ರಿ ದೊಡ್ಡಪ್ಪನನ್ನು ಕೊಲ್ಲಲು ಬೇಕಾಗಿ ಅಸ್ತ್ರದೊಂದಿಗೆ ಮೆಲ್ಲ ಮೆಲ್ಲ ಹೆಜ್ಜೆ ಹಾಕಿದರು
ಕೋಟ್ಯಾಧಿಪತಿಯ ಕಡೆಗೆ..........

ಗಾಢ ನಿದ್ರೆಯಲ್ಲಿದ್ದಾನೆ
ಅರಮನೆ ಒಡೆಯ........

ಯಾರಿಗೂ ಗೊತ್ತಾಗದ ರೀತಿಯಲ್ಲಿ
ಸಹೋದರರಿಬ್ಬರು ಕೊನೆಗೂ ಕೊಂದೇ ಬಿಟ್ಟರು........

ಅರಮನೆಯ ಪಕ್ಕದಲ್ಲಿದ್ದಂತಹ ಮನೆಯ ಮುಂದೆ ಶವವನ್ನು ಬಿಸಾಕಿಬಿಟ್ಟರು........

ಕೋಳಿ ಕೂಗು ಕೇಳತೊಡಗಿತು
ಕತ್ತಲ ಹಿಂದೆ ಅಡಗಿದ್ದಂತಹ ಬೆಳಕು ಪ್ರಕಾಶಮಾನವಾಯಿತು........
ಬೆಳಗ್ಗೆ ಯಾಗುತ್ತಿದ್ದಂತೆಯೇˌ
ಊರಿಡೀ ಪ್ರಚಾರವಾಯಿತು.....
ಊರಿನ ನೇತಾರನ ಸಾವಿನ ಸುಧ್ಧಿ.

ಕೊಲೆಗಾರರ ನಾಟಕವು ಯಾರನ್ನೂ ಸಂಶಯವನ್ನಾಗಿಸಲಿಲ್ಲˌ
ಆಸ್ತಿಗಾಗಿ ಕೊಂದಿರುವುದೆಂದು ಎಲ್ಲರಿಗೂ ಗೊತ್ತು.....
ಕೊಲೆಗಾರ ಯಾರೆಂದು ಗೊತ್ತಿಲ್ಲˌ
ಪರಸ್ಪರ ಅಪವಾದಿಸಲು ತೊಡಗಿದರು
ಕೊಲ್ಲಲ್ಪಟ್ಟ ವ್ಯಕ್ತಿಯ ಸಹೋದರರ ನಡುವೆ ಬಿರುಕು ಉಂಟಾಯಿತುˌ

ಕೊನೆಗೆ ಕೊಲೆಗಾರ ಯಾರೆಂದು ಕಂಡುಹಿಡಿಯಲು ಬೇಕಾಗಿ ಮೂಸಾ ನಬಿ (ಅ.ಸ)ರ ಬಳಿ ತೆರಳಲು ತೀರ್ಮಾನಿಸಿದರು.........

ಊರಿಡೀಮೂಸಾ ನಬಿ(ಅ.ಸ)ರ ಮನೆಮುಂದೆ ಧಾವಿಸಿತು.......
ಕೊಲೆಗಾರರೂ ಇದ್ದಾರೆ.......

ಮೂಸಾ ನಬಿಯೊಂದಿಗೆ ಕೇಳಿದರು
*ಓ ಮೂಸಾ ನಬಿ ಯವರೇ ನಮ್ಮ ನೇತಾರನನ್ನು ಆಸ್ತಿಗೋಸ್ಕರ ಕುಟುಂಬದಲ್ಲಿನ ಯಾರೋ ಕೊಂದಿದ್ದಾರೆ.ನೀವು ನಿಮ್ಮಅಲ್ಲಾಹನೊಂದಿಗೆ ಕೊಲೆಗಾರ ಯಾರೆಂದು ಕೇಳಬೇಕು.........*

ನಿಜಕ್ಕೂ ಮೂಸಾ ನಬಿ ಗೆ ಇದೊಂದು ಯಕ್ಷಪ್ರಶ್ನೆಯಾಗಿತ್ತು.....
ಮೂಸಾ ನಬಿ ಅಲ್ಲಾಹನೊಂದಿಗೆ ಪ್ರಾರ್ಥಿಸಿದರು
*ಯಾ ಅಲ್ಲಾಹ್ ಇವರ ಪ್ರಶ್ನೆಗೆ ನೀ ಉತ್ತರಿಸಲೇಬೇಕುˌಈಗಾಗಲೇ ನನ್ನನ್ನು ಕಳ್ಳ ಸುಳ್ಳ ಎನ್ನುವಂತಹ ಇವರ ಈ ಪ್ರಶ್ನೆಗೆ ನೀ ಉತ್ತರಿಸದಿದ್ದಲ್ಲಿ ಇವರು ನಿನ್ನೊಂದಿಗೆ ವಿಶ್ವಾಸವಿಡಲಾರರು.....ˌˌ*
ಮೂಸಾ ನಬಿಯ ಪ್ರಾರ್ಥನೆಗೆ ಉತ್ತರ ವಹ್ಯ್ ಮೂಲಕ ಬರುತ್ತದೆ.

ಮೂಸಾ ನಬಿ ಹೇಳಿದರು
ಓ ಜನರೇ ನಿಮ್ಮ ಪ್ರಶ್ನೆಗೆ ಅಲ್ಲಾಹನ ಉತ್ತರ ಲಭಿಸಿದೆ..........
ಎಲ್ಲರೂ ನಿಶ್ಶಬ್ಧವಾಗಿ ಮೂಸಾ ನಬಿಯ ಉತ್ತರಕ್ಕೆ ಕಾಯುತಿದ್ದಾರೆ...

ಮೂಸಾ ನಬಿಯ ಬಾಯಿಯನ್ನೇ ನೋಡುತ್ತಿದ್ದಾರೆˌ
ಪಕ್ಷಿಯ ಚಳಿಪಿಳಿ ಕೇಳುತಿಲ್ಲˌ
ಮರಗಳು ಅಳುಗಾಡುತಿಲ್ಲˌ
ಎಲ್ಲವೂ ನಿಶ್ಶಬ್ಧ............

ಕಾರಣˌ
ಮೂಸಾ ನಬಿ ಸತ್ಯ ಹೇಳಿದರೆ ಮಾತ್ರ ಜನರು ಅಲ್ಲಾಹನಲ್ಲಿ ವಿಶ್ವಾಸವಿಡುವರುˌ
ಮೂಸಾ ನಬಿ ಅಲ್ಲಾಹನ ಧೂತರು ಹೌದೋ ಅಲ್ಲವೋ ಎಂದು ಈ ಮೂಲಕವೇ ವ್ಯಕ್ತವಾಗಬೇಕಾಗಿದೆ.

*ಮೂಸಾರವರು ತನ್ನ ಜನರಲ್ಲಿ ಹೇಳಿದರು(ಕೊಲೆಗಾರ ಯಾರೆಂದು ತಿಳಿಯಬೇಕಾದರೆ) ಒಂದು ಹಸುವನ್ನು ಬಲಿ ಕೊಡಬೇಕೆಂದು ಅಲ್ಲಾಹನು ಅಜ್ಞಾಪಿಸುತ್ತಾನೆ ಎಂದಾಗˌ "ನಮ್ಮನ್ನು ತಮಾಷೆ ಮಾಡುತಿದ್ದೀರಾ?ಎಂದು ಜನರು ಕೇಳಿದರು.ಆಗ ಮೂಸಾ ನಬಿ ಅಲ್ಲಾಹನಿಗೆ ಶರಣು "ನಾನು ತಮಾಷೆಮಾಡುವಂತಹ ಮೂಡನಲ್ಲ"(ಸೂರತುಲ್ ಬಕರಾಃ 2/67)*

ಮೂಸಾ ನಬಿಯ ಮಾತು ಕೇಳಿ ಅವರು ನಕ್ಕರುˌಮಾತ್ರವಲ್ಲ ತಮಾಷೆಮಾಡಿದರುˌಕೊಲೆಗಾರನ ಕಂಡುಹಿಡಿಯಬೇಕಾದರೆˌಹಸುವನ್ನು ಬಲಿಕೊಡಬೇಕೆ.....?
ಮೂಸಾ ನಬಿಯನ್ನು ಹಿಯ್ಯಾಲಿಸತೊಡಗಿದರು.....

_(ಇದು ಅಲ್ಲಾಹನ ಕಲ್ಪನೆಯಾಗಿತ್ತುˌಜನರು ಹಸುವನ್ನು ಬಲಿ ನೀಡಿದರೆ ಸತ್ಯ ಗೊತ್ತಾಗಬಹುದಿತ್ತು.........)_

ಆದರೆ ಆ ಜನರಿಗೆ ಕೊಲೆಗಾರನ ಕಂಡು ಹಿಡಿಯಬೇಕಾಗಿತ್ತುˌˌ
ಬೇರೆ ವಿಧಿಯಿಲ್ಲದೇ ಮೂಸಾ ನಬಿಯರ ಮಾತನ್ನು ವಿಶ್ವಾಸವಿಡಬೇಕಾಗಿ ಬಂತು.......

*ಅವರು ಹಸುವನ್ನು ಬಲಿ ಕೊಡುವರೇ.........❓*ˌ
*ಅಥವಾ ಮೂಸಾ ನಬಿಯನ್ನು ಧಿಕ್ಕರಿಸುವರೇ.........❓*
ಎಂದು ತಿಳಿಯುವುದಕ್ಕಿಂತ ಮುಂಚೆ.......ಇನ್ನೊಂದು ಘಟನೆ ಇಲ್ಲಿ ಅನಿವಾರ್ಯವಾಗಿದೆˌಅದೇನು........?

👇�👇�👇�👇�👇�

ಅದೊಂದು ಪುಟ್ಟ ಗ್ರಾಮˌ
ಅಲ್ಲೊಂದು ಸಣ್ಣ ಕುಟುಂಬˌ
ತಂದೆˌತಾಯಿ ಹಾಗೂ ಒಂದು ಗಂಡು ಮಗು..........
ತಂದೆ ದೊಡ್ಡ ಆಬಿದ್(ದೈವಭಕ್ತ) ಆಗಿದ್ದರು........
ಅಲ್ಲಾಹನ ಜ್ಞಾನದಲ್ಲೇ ಜೀವಿಸುತಿದ್ದರು.........
ತಂದೆ ಮರಣ ಹೊಂದುವ
ಸಂಧರ್ಭದಲ್ಲಿ ತಾಯಿಯನ್ನು
ಕರೆದು ಹೇಳಿದರು...........
"ಪ್ರಿಯತಮೆ ನನ್ನ ಮರಣ ಸಮೀಪಿಸಿದೆˌ
ನನ್ನ ಮಗನಿಗೆ ಬೇಕಾಗಿ ನಾನು ಏನೂ(ಆಸ್ತಿ) ಮಾಡಲಿಲ್ಲ
ನನ್ನ ಒಂದು ಪಶು(ಹಸು)ಕಾಡಿನಲ್ಲಿ ಬಿಟ್ಟಿದ್ದೇನೆˌದಷ್ಟಪುಷ್ಟವಾಗಿ ಬೆಳೆಯುತಿದೆ ಅದುˌ
ನನ್ನ ಮಗ ದೊಡ್ಡವನಾದ ಮೇಲೆ ಆ ಪಶುವಿನ ಕುರಿತು ಹೇಳಿ ಕೊಡುˌಕಷ್ಟಕಾಲದಲ್ಲಿ ಆ ಪಶುವಿಂದ ನಿಮಗೆ ಸಹಾಯವಾಗಬಹುದು........"
ಎಂದು ಹೇಳಿ ತಂದೆ ಮರಣ ಹೊಂದಿದರು.......

ಮಗು ಯುವಕನಾದˌ
ತಂದೆಯ ಅದೇ ಸ್ವಭಾವ
ಅಲ್ಲಾಹನಲ್ಲಿ ಅತ್ಯಂತ ಭಯಬಕ್ತಿˌˌ
ವಯಸ್ಸಾದ ತಾಯಿಯ ಸೇವನೆ ಮಾಡುವುದೇ ಆತನ ಖುಷಿˌ
ರಾತ್ರಿಯನ್ನು ಮೂರು ಭಾಗಗಳನ್ನಾಗಿ ಮಾಡಿˌ
ಒಂದು ಭಾಗ ನಿದ್ರೆಗೆˌ
ಇನ್ನೊಂದು ಭಾಗ ಅಲ್ಲಾಹನ ಇಬಾದತ್ಗೆˌ
ಇನ್ನೊಂದು ಭಾಗ ತಾಯಿ ಸೇವನೆಗೆˌ
ಇದಲ್ಲದೇ ಆತನ ರಾತ್ರಿಯಲ್ಲಿ ಬೇರೇನೂಇಲ್ಲ........

ಬೆಳಗ್ಗೆಯಾಗುತ್ತಲೇ ಕಾಡಿಗೆ ತೆರಳಿ ಸೌದೆಯನ್ನು ಕಡಿದುˌತಲೆ ಮೇಲೆ ಹೊತ್ತು ತಂದುˌಪೇಟೆಯಲ್ಲಿ ಮಾರುವರುˌ
ಸಂಪಾದಿಸುವ ಹಣವನ್ನು ಮೂರು ಪಾಲು ಮಾಡುವರು
ಒಂದುಪಾಲು ತಾಯಿಯ ಖರ್ಚಿಗೆˌ
ಇನ್ನೊಂದು ಪಾಲು ತನ್ನ ಖರ್ಚಿಗೆˌ
ಮತ್ತೊಂದು ಪಾಲು ಬಡವರಿಗೆ.

ಬಡತನದಲ್ಲೇ ಬದುಕುತಿದ್ದ ಈಯುವಕನ ಸಂಪಾದನೆಯ ಒಂದು ಪಾಲು ತನ್ನಂತಿರುವ ಬಡವರಿಗೆˌ

*ತಾಯಿಯೆಂದರೆ ಈ ಯುವಕನಿಗೆ ಪ್ರಾಣˌತಾಯಿಯೇ ಸರ್ವಸ್ವˌತಾಯಿ ಮಾತನ್ನುಎಂದೂ ಮೀರಿದವರಲ್ಲ..........*

ಒಂದು ದಿನ ತಾಯಿ ಮಗನನ್ನುಕರೆದುಹೇಳಿದರುˌ
_"ಓ ಮಗನೇ ನೀನು ತುಂಬಾ ಕಷ್ಟಪಡುವೆˌನಿನ್ನ ತಂದೆ ಮರಣಹೊಂದುವ ಮುಂಚೆ ವಸಿಯ್ಯತ್ ಮಾಡಿದ್ದಾರೆˌನಿನ್ನ ಕಷ್ಟಕಾಲದಲ್ಲಿ ನಿನ್ನನ್ನು ಈ ಕಷ್ಟದಿಂದ ರಕ್ಷಿಸುವ ದಷ್ಟಪುಷ್ಟವಾಡ ಹಸುವೊಂದು ಕಾಡಿನಲ್ಲಿದೆಯಂತೆˌಹೋಗಿ ಆ ಹಸುವನ್ನು ಹಿಡಿದು ತಾ.........."_

ಮಗನಿಗೆ ಆಶ್ಚರ್ಯವಾಯಿತುˌ
"ಅಮ್ಮಾˌ ನಮ್ಮ ಒಂದು ಹಸು ಕಾಡಿನಲ್ಲಿದೆಯೇˌಅದರ ಒಡೆಯನಾಗುವುದರಲ್ಲಿ ನನಗೆ ಸಂತೋಷವಿದೆˌಆದರೆ ಅಷ್ಟೊಂದು ದೊಡ್ಡ ಕಾಡಿನಲ್ಲಿ ನಮ್ಮ ಹಸುವನ್ನು ಹೇಗೆ ಹುಡುಕಲಿ.......?"

"ಮಗನೇ ಅದು ನಿನಗೆ ಪ್ರಾಯಸವಲ್ಲˌನೀನು ಕಾಡಿಗೆ ಹೋಗಿ ಅಲ್ಲಾಹನ ನಾಮವನ್ನು ಉಚ್ಛರಿಸುˌನಂತರ ದೊಡ್ಡ ಶಬ್ಧದಲ್ಲಿ ಹಸುವನ್ನು ಕರೆ.........

ಕಾಡಿಗೆ ಹೊಗಿ ಜೋರಾಗಿ ಹಸುವನ್ನು ಆ ಯುವಕ ಕರೆದರುˌ
*ಹಸು ಬರಲಿಲ್ಲ*
ಮರುದಿನವೂ ಅಲ್ಲಾಹನಾನಾಮವನ್ನು ಉಚ್ಚರಿಸಿ ಜೋರಾಗಿ ಹಸುವನ್ನು ಕರೆದರುˌ
ಅವತ್ತೂ ಹಸು ಬರಲಿಲ್ಲ
ಆ ಯುವಕನಿಗೆ ಬಲವಾದ ನಂಬಿಕೆಯಿದೆ
ತಾಯಿ ಮಾತು ಎಂದೂ ಸುಳ್ಳಾಗಲ್ಲ
ಮೂರನೇ ದಿನ ಜೋರಾಗಿ ಕರೆದಾಗ
*ಸುಂದರ ಮೈಕಟ್ಟನ್ನು ಹೊಂದಿರುವಂತಹ ದಷ್ಟಪುಷ್ಟವಾದˌನೋಡುಗರಿಗೆ ಆಕರ್ಷನೀಯವಾಗುವಂತಹ ಹಸುವೊಂದು ಬಂದುˌಗುರುವಿನ ಮುಂದೆ ಶಿಷ್ಯ ತಲೆಬಾಗುವಂತಹ ರೀತಿಯಲ್ಲಿ ಯುವಕನ ಮುಂದೆ ತಲೆ ಬಾಗಿ ನಿಂತುಕೊಂಡಿತು .*

ಯುವಕ ಆಶ್ಚರ್ಯಚಕಿತನಾಗಿ ಹಸುವಿನೊಂದಿಗೆ ಕೇಳಿದರು
"ಮನೆಗೆ ಹೋಗೋನವೇ".........❓
ಮನುಷ್ಯರು ತಲೆ ಅಲ್ಲಾಡಿಸುವಂತೆ ತಲೆ ಅಲ್ಲಾಡಿಸಿತು.........!

_ನೀವು ನನ್ನ ಬೆನ್ನ ಮೇಲೆ ಕೂರಿರಿ.ನಡೆದು ಪ್ರಯಾಣಿಸುವುದು ಪ್ರಯಾಸಕರವಲ್ಲವೇ....?_
*ಪಶು ಮಾತನಾಡಿತು..........!*

ಅಧ್ಭುತಗಳ ಮೇಲೆ ಅಧ್ಭುತ.......!

*"ಇಲ್ಲ ನಾನು  ನಿನ್ನ ಬೆನ್ನ ಮೇಲೆ ಏರಲಾರೆ.ನನ್ನಾತಾಯಿಯಿಂದ ಆ ನಿರ್ದೇಶನ ಸಿಕ್ಕಿಲ್ಲ.ನಿನ್ನನ್ನು ಕರೆದುಕೊಂಡು ಬರಲು ಮಾತ್ರ ತಾಯಿ ಹೇಳಿದ್ದು"*
(ಆತ ಹಸುವಿನ ಮೇಲೆ ಕೂರಲಿಲ್ಲˌತಾಯಿ ಅನುಮತಿಯಿಲ್ಲದ ಕಾರಣ)

ಆದರೆˌಇಬ್ಲೀಸನಿಗೆ ಬೇಜಾರುˌ
ಹೇಗಾದರು ಮಾಡಿ ತಾಯಿ ಮಾತಿಗೆ ವಿರುಧ್ಧವಾಗಿ ನಡೆಯುವಂತೆ ಮಾಡಬೇಕುˌಇಬ್ಲೀಸ್ ಆಡುಮೇಯಿಸುವವನ ರೂಪದಲ್ಲಿ ಯುವಕನ ಮುಂದೆ ಪ್ರತ್ಯಕ್ಷಗೊಂಡ

*ಅರೇˌ ನೀನೇಕೆ ಕಷ್ಟಪಟ್ಟು ನಡೆದು ಕೊಂಡು ಹೋಗುವೆˌಅದು ಹಸುˌಅದಕ್ಕೆ ಭಾರವಾಗುವುದಿಲ್ಲˌಅದರ ಮೇಲೆ ಕುಳಿತುಕೊಂಡು ಪ್ರಯಾಣಿಸಬಹುದಲ್ಲವೇ.....❓*
ಯುವಕನ ಉತ್ತರ *ಅದಕ್ಕೆ ತಾಯಿಯ ಸಮ್ಮತವಿಲ್ಲ*ಎಂದಾಗಿತ್ತು.........
ಇಬ್ಲೀಸ್ ಪರಾಜಯಿಯಾದ.

ಕೊನೆಗೂ ಹಸು ಮನೆ ತಲುಪಿತುˌ
ಯುವಕನ ತಾಯಿಯ ಸಂತೋಷಕ್ಕೆ ಪಾರವಿಲ್ಲ.

ಕೆಲವು ದಿವಸಗಳ ನಂತರ.......
ತಾಯಿ  ಮಗನನ್ನು ಕರೆದು ಹೇಳಿದರುˌ
"ಕಾಡಿಗೆಹೋಗಿ ಸೌದೆಕಡಿಯುವುದು ಕಷ್ಟದ ಕೆಳಸವಲ್ಲವೇ...?ˌಈ ಪಶುವನ್ನು ಮಾರಿದರೆˌಅದರಿಂದ ಬರುವ ಹಣದಿಂದ ಸುಖವಾಗಿ ಸಂತೋಷವಾಗಿ ಜೀವಿಸಬಹುದುˌ

*ತಾಯಿಯ ಆಗ್ರಹವನ್ನು ನಿರಾಶೆಗೊಳಿಸಿದವನಲ್ಲ ಮಗˌ ತಾಯಿಯೊಂದಿಗೆ ಕೇಳಿದ ಎಷ್ಟು ಬೆಲೆಗೆ ಮಾರಲಿ......?ಎಂದು ಕೇಳಿದ.*
 
ಮಗನೇˌ.....ಅದು ಅತ್ಯಂತ ಸುಂಧರವಾದ ಹಸುˌಒಳ್ಳೆಯ ಬೆಲೆಗೆ  ಮಾತ್ರ ಅದನ್ನು ಮಾರಬೇಕು.ಮೂರು ಸ್ವರ್ಣನಾಣ್ಯ ಸಿಕ್ಕರೆˌಅದನ್ನು ಮಾರಿಬಿಡು.ಆದರೆˌವ್ಯಾಪಾರಕ್ಕೆ ಮುಂಚೆ ನನ್ನ ಅನುಮತಿಪಡೆಯಬೇಕು........

_ಮರುದಿನ ಯುವಕ ಹಸುವನ್ನು ಮಾರುಕಟ್ಟೆಗೆ ಕೊಂಡು ಹೋದˌದಾರಿ ಮಧ್ಯೆ ಒಬ್ಬರು ಬಂದು ಹಸುವಿನ ಬೆಲೆ ಕೇಳಿದರುˌ_
ಯುವಕ ಅದರ ಬೆಲೆಯನ್ನು ಹೇಳಿದರುˌ(ಮೂರು ಸ್ವರ್ಣ ನಾಣ್ಯ)
ಅವರು ಮೂರು ಸ್ವರ್ಣ ನಾಣ್ಯ ಕೊಡಲು ತಯಾರಾದರುˌ
ಯುವಕ ಹೇಳಿದರು"ಮೂರು ಸ್ವರ್ಣ ನಾಣ್ಯ ನೀವು ಕೊಡಲು ತಯ್ಯಾರಾಗಿದ್ದೀರಿˌಆದರೆ ನನ್ನ ತಾಯಿಯ ಅನುಮತಿಯ ಪಡೆದ ನಂತರವೇˌಈ ಹಸುವನ್ನು ನೀಡುವೆ"

ಗ್ರಾಹನಾಗಿ ಬಂದಂತಹ ಆವ್ಯಕ್ತಿ ನಕ್ಕರು.......
ಅಯ್ಯೋˌಇದೆಂತಾ ಅವಸ್ಥೆˌ
ಮೂರು ಸ್ವರ್ಣನಾಣ್ಯವಲ್ಲವೇ ಅದರ ಬೆಲೆˌತಾಯಿಯ ಅನುಮತಿ ಯಾಕೆ........?
ಹೋಗಲಿˌ
ನನಗೆ ಈ ಹಸು ತುಂಬಾ ಇಷ್ಟವಾಗಿದೆˌ
ನಾನು  ಆರು ಸ್ವರ್ಣನಾಣ್ಯವನ್ನು ನೀಡುವೆˌ

ಯುವಕ ನಿರಾಕರಿಸಿದರುˌ
ಗ್ರಾಹಕ ಹನ್ನೆರಡು ಸ್ವರ್ಣನಾಣ್ಯವನ್ನು ನೀಡುವುದಾಗಿ ಹೇಳುತ್ತಾರೆ.........!

*ಹನ್ನೆರಡು ಸ್ವರ್ಣನಾಣ್ಯ ಸಿಗುತ್ತದೆ ಎಂದು ಅತಿಯಾಸೆಯಿಂದ ತಾಯಿಯಾಅನುಮತಿಯನ್ನು ಪಡೆಯದೇˌಹಸುವನ್ನು ಮಾರುವರೇ...........❓*
*ಕೊಲೆಗಾರನನ್ನು ಕಂಡುಹಿಡಿಯಬೇಕಾದರೆˌಮೂಸಾ ನಬಿ ಹಸುವನ್ನು ಬಲಿ ಕೊಡಬೇಕೆಂದು ತಿಳಿಸಿದ್ದಾರೆ....ಹಸುವನ್ನು ಬಲಿ ಕೊಟ್ಟರೇ.......❓*

ಹೌದು........!
ಹನ್ನೆರಡು ಸ್ವರ್ಣ ನಾಣ್ಯಕ್ಕೆ ಹಸುವನ್ನು ನೀಡಲೇˌ
ತಾಯಿಯ ಅನುಮತಿ ಪಡೆಯಬೇಕೇ...........
ಇಬ್ಲೀಸ್ ವಸ್ವಾಸ್ ಮಾಡುತಿದ್ದಾನೆˌ

ಆದರೆˌ
ಯುವಕನ ಮಾತುˌ
*ತಾಯಿಯೇ ನನ್ನ ಸರ್ವಸ್ವˌತಾಯಿ ಮಾತ ನಾ ಮೀರಲಾರೆˌ*
ಇಲ್ಲ ನೀವೆಷ್ಟೇ ಸ್ವರ್ಣನಾಣ್ಯ ನೀಡಿದರೂ ತಾಯಿಯ ಅನುಮತಿಯಿಲ್ಲದೇ ಹಸುವನ್ನು ನೀಡಲಾರೆ........!
ಗ್ರಾಹಕ ಹಿಂದಿರಿಗು ಹೋದರು
ಯುವಕ ಹಸುವನ್ನು ಮಾರದೆˌಮನೆಗೆ ಮರಳಿದರು........!
ನಡೆದ ಘಟನೆ ತಾಯಿಯೊಂದಿಗೆ ವಿವರಿಸಿದರು..........ˌ

ಮಗನೆˌ
ಆ ಸಿಕ್ಕ ಗ್ರಾಹಕ
*ಅದು ಮನುಷ್ಯ ನಲ್ಲ ಮನುಷ್ಯ ರೂಪದಲ್ಲಿ ಬಂದ ಮಲಕ್ ಅವರು* *ನಿನ್ನನ್ನು ಪರೀಕ್ಷಿಸಿದರು ಅವರ ಪರೀಕ್ಷೆಯಲ್ಲಿ ನೀ ಪಾಸಾದೆ ಮಗನೇ..........*

ಮಗನ ಸಂತೋಷಕ್ಕೆ ಪಾರವಿಲ್ಲˌ
"ಅಮ್ಮಾ ನಾಳೆಯೂ ಅವರು ನನಗೆ ಸಿಗುವರೇ.........."?

ಖಂಡಿತವಾಗಿಯೂ ಸಿಗುವರುˌ
ನಾಳೆ ಸಿಕ್ಕರೆˌಅವರೊಂದಿಗೆ ನೀ ಕೇಳಬೇಕು "ಹಸುವನ್ನು ಮಾರಲೇˌ
ಅಥವಾ ಸಾಕಲೇ.......?ಎಂದು

ಮರುದಿನ ಯುವಕ ಅದೇ ದಾರಿಯಲ್ಲಿ ಕಾದು ನಿಂತರು
ನಿನ್ನೆ ಪ್ರತ್ಯಕ್ಷಗೊಂಡ ಅದೇ ಮಲಕ್ ಮನುಷ್ಯ ರೂಪದಲ್ಲಿ ಹಾಜರಾದರು..........!
ಯುವಕ ಕೇಳಿದˌ
ನೀವು ಅಲ್ಲಾಹನ ಮಲಕ್ ಎಂದು ನನಗೆ ತಿಳಿದಿದೆˌನಮ್ಮ ಹಸುವನ್ನೇನು ಮಾಡಲಿ.........?ಮಾರಲೇ........?ಅಥವಾ ಸಾಕಲೇ............?

ಮಗೂˌಹಸು ಸದ್ಯಕ್ಕೆ ಮಾರಬೇಡˌ
ನಿನ್ನ ಮನೆಗೆ ಒಂದು ಸಂಘವು ಬಂದು ಹಸುವನ್ನು ಕೇಳಬಹುದುˌ
ಆಗ ನೀನು ಹಸುವನ್ನು ಅದರಚರ್ಮದಲ್ಲಿ ತುಂಬುವಷ್ಟು ಸ್ವರ್ಣಕ್ಕೆ ಮಾರಾಟಮಾಡು"ಎಂದು ಹೇಳಿ ಮಲಕ್ ಅಪ್ರತ್ಯಕ್ಷಗೊಂಡರು.......!
ಯುವಕ ಸಂತೋಷದಿಂದ ಮನೆಗೆ ಮರಳುವರು.........!

(ನೆನಪಿಸಿಕೊಳ್ಳಿˌ
ಮೂಸಾ ನಬಿ(ಅ ಸ)ಜನರೊಂದಿಗೆ ˌಕೊಲೆಗಾರನನ್ನು
ಕಂಡುಹಿಡಿಯಬೇಕಾದರೆˌಹಸುವನ್ನು ಬಲಿ ನೀಡುವಂತೆ ಹೇಳಿದ್ದಾರೆ)

ನೇತಾರನನ್ನು ಕೊಂದಿದ್ದಾರೆ
ಕೊಲೆಗಾರ ಯಾರೆಂದು ಕಂಡುಹಿಡಿಯಬೇಕಾಗಿದೆˌ..........
ಜನರು ಹಸುವನ್ನು ಬಲಿಕೊಟ್ಟರು ಕೊಲೆಗಾರ ಯಾರೆಂದು ತಿಳಿಯಬಹುದಿತ್ತುˌ
ಅಲ್ಲಾಹನ ಆಜ್ಞೆ ತಾನೆˌ........ˌˌ
ಆದರೆˌಆ ಜನರು ಮೂಸಾ ನಬಿಯನ್ನು ಗೇಲಿ ಮಾಡುತ್ತಾˌ
*ಯಾವ ತರಹದ ಹಸುವೆಂದು ನಿಮ್ಮ ಪ್ರಭುವಿನೊಂದಿಗೆ ಕೇಳಿ ಎಂದವರು ಹೇಳಿದರು*
ಮೂಸಾ ನಬಿಗೆ ಅಲ್ಲಾಹನ ದಿವ್ಯ ಸಂದೇಶ ಬರುತ್ತದೆ
*ಎಳೆಯ ವಯಸ್ಸಿನದ್ದೋ ಮುದಿ ಪ್ರಾಯದ್ದೋಅಲ್ಲˌಮದ್ಯವಯಸ್ಸಿನ ಹಸುವನ್ನು ಬಲಿ ನೀಡಲುಅಲ್ಲಾಹನು ಆಜ್ಙಾಪಿಸಿದ್ದಾನೆˌಅದರಂತೆ ನೀವು ಕಾರ್ಯಶೀಲರಾಗಿರಿ(ಸೂರತುಲ್ ಬಕರಾಃ 2/68)*
 
ಆದರೆˌಅಂತಹ ಮದ್ಯವಯಸ್ಸಿನ ಹಸು ತುಂಬಾ ಇದೆ ಮೂಸಾನಬಿಯವರೇˌ
*ನಿಮ್ಮ ಪ್ರಭುವಿನಲ್ಲಿ ನಮಗಾಗಿ ಕೇಳಿ,ಅವನು ಅದರ ಬಣ್ಣವನ್ನು ವ್ಯಕ್ತಗೊಳಿಸಲಿˌಎಂದವರು ಕೇಳಿದರುˌ ಆಗ ಮೂಸಾ ನಬಿ ನೋಡುಗರಿಗೆ ಕೌತುಕವನ್ನು ಉಂಟುಮಾಡುವ ಬಂಗಾರಬಣ್ಣದ ಹಸುವೆಂದು ಅವನು ಹೇಳುತಿದ್ದಾನೆ ಎಂದರು(ಸೂರತುಲ್ ಬಕರಾಃ 2/69)*

ಆದರೆˌಆ ಜನರ ಸಂಶಯ ಮುಗಿಯಲಿಲ್ಲˌ
*ಯಾವ ತರಹದ ಹಸುವೆಂದು ಇನ್ನಷ್ಟು ಸ್ಪಷ್ಟಗೊಳಿಸಲಿˌಒಂದಕ್ಕೊಂದು ಹೋಲುವ ಹಸುಗಳಿಂದ ನಾವು ಪೇಚೆಗೀಡಾಗಿದ್ದೇವೆˌಅಲ್ಲಾಹು ಇಚ್ಚಿಸಿದರೆˌನಮಗೆ ನೇರ ದಾರಿ ಸಿಗಬಹುದು"ಎಂದವರು ಹೇಳಿದರು(ಸೂರತುಲ್ ಬಕರಾಃ2/70)*

*ಆಗಮೂಸಾರವರು"ಹೊಲ ಉಳಲೋˌಕ್ರಷಿಗೆ ಬಳಸದˌಸರ್ವಾಂಗಪೂರ್ಣ ಕಳೆರಹಿತವಾದ ಹಸು ಎಂದುಅಲ್ಲಾಹು ಹೇಳುತಿದ್ದಾನೆ"(ಸೂರತುಲ್ ಬಕರಾಃ2/71)*
 
ಇಷ್ಟೊಂದು ಮಹತ್ವವಿರುವ ಒಂದೇಒಂದು ಹಸು ಮಾತ್ರ ಇದೆˌ
*ಆ ಹಸು ಯುವಕನ ಬಲಿಯಿರುವಂತಹ  ಹಸುವಾಗಿದೆ..............*

ಜನರು ಆ ಯುವಕನ ಬಲಿ ಜನರು ತೆರಳಿದರು.............
ಹಸುವಿನ ಬೆಲೆ ಕೇಳಿ ಜನರು ತಬ್ಬಿಬ್ಬಾದರು..........
ಆ ಹಸುವಿನ ಬೆಲೆˌಹಸುವಿನ ಚರ್ಮದಲ್ಲಿ ತುಂಬುವಷ್ಟು ಸ್ವರ್ಣನಾಣ್ಯ..........
ಆದರೆˌಹಸುವಿನ ಪಡೆಯದೇ ನಿರ್ವಾಹವಿಲ್ಲˌಕೊಲೆಗಾರನನ್ನು ಕಂಡುಹಿಡಿಯಬೇಕಿಗಿದೆˌಹಸುವಿನ ಚರ್ಮತುಂಬುವಷ್ಟು ಸ್ವರ್ಣನಾಣ್ಯವನ್ನು ನೀಡಿˌಆ ಜನರು ಹಸುವನ್ನು ಪಡೆದರು..............!

ಮೂಸಾ ನಬಿ ತಿಳಿಸಿದಂತೆˌಹಸುವನ್ನು ಬಲಿ ನೀಡಿˌಅದರ ಬಾಲದಿಂದˌಕೊಲ್ಲಲ್ಪಟ್ಟ ನೇತಾರನ ಶರೀರಕೆಹೊಡೆದಾಗ *ಮಯ್ಯಿತ್ ಎದ್ದು ನಿಂತಿತುˌಕೊಲೆಗಾರರ ಹೆಸರನ್ನು ತಿಳಿಸಿˌಕಣ್ಣು ಮುಚ್ಚಿತು..........*

ನೇತಾರನನ್ನು ಕೊಂದಂತಹ ಸಹೋದರನ ಮಕ್ಕಳಿಬ್ಬರನ್ನೂ ಪರಸ್ಯವಾಗಿ ಕೊಂದರು............!

ಪ್ರಸ್ತುತ ಚರಿತ್ರೆಯು ಅಲ್ಲಾಹನು ಬಕರಾಃ ಸೂರದಲ್ಲಿ ಪರಾಮರ್ಶಿಸಿದ್ದಾನೆˌ

*ಈ ಚರಿತ್ರೆಯಲ್ಲಿ ಮೂರು ನೀತಿ ಪಾಠಗಳಿವೆ.............*

1—ಆಸ್ತಿಯ ವಾರಿಸುದಾರರಗಲು ಬೇಕಾಗಿ ನೇತಾರನಾಗಿದ್ದಂತಹ ದೊಡ್ಡಪ್ಪನನ್ನು ಕೊಂದಂತಹ ಸಹೋದರರಿಬ್ಬರನ್ನೂ ಕೊಲ್ಲಬೇಕಾಗಿ ಬಂತು *ಅತಿ ಆಸೆ ಗತಿಕೇಡು*
2—ತಾಯಿಯನ್ನು ಪ್ರೀತಿಸಿˌ *ತಾಯಿ* *ಮಾತನ್ನು ಮೀರದಂತಹ* *ಯುವಕನಿಗೆ ಸಿಕ್ಕ ಫಲ............*
(ಸ್ವರ್ಣನಾಣ್ಯಗಳ ರಾಶಿ)
3—ಮೂಸಾ ನಬಿ ಹಸುವನ್ನು ಬಲಿ ನೀಡಬೇಕೆಂದು ಹೇಳಿದಾಗ ಯಾವುದಾದರೊಂದು ಹಸುವನ್ನು ಬಲಿ ನೀಡಿದರೆ ಸಾಕಿತ್ತುˌಆದರೆಆ ಜನರು *ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದ ಕಾರಣದಿಂದ ಉಂಟಾದ ದುರ್ಗತಿ.........*
(ಸ್ವರ್ಣನಾಣ್ಯರಾಶಿ ಕೊಟ್ಟು ಹಸುಪಡೆಯಬೇಕಾಗಿ ಬಂತು.....)

ಆದ್ದರಿಂದ
*ಅತಿ ಆಸೆ ಪಡದಿರಿ...........*
*ತಾಯಿ ಮಾತು ಮೀರದಿರಿ.........* *ಅನಾವಶ್ಯಕವಾಗಿ ಪ್ರಶ್ನೆಯ ಮೇಲೆ ಪ್ರಶ್ನಿಸದಿರಿ......*

+919743861243

💢ಎಂ.ಕೆ.ಸಿನಾನ್ ಅಜಿಲಮೊಗರು💢

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...