Skip to main content

ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ ✍🏻ಹಾರಿಸ್ ಪೆರಿಯಪಾದೆ {ಭಾಗ 4}

ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
{ಭಾಗ 4}

*ಪರಮತ ಸಹಿಷ್ಣು ಟಿಪ್ಪು ಸುಲ್ತಾನ್*
    ಗುರುವಾಯೂರು ದೇವಸ್ಯ ಮಂಡಳಿಗೆ ಭೂಮಿಯನ್ನು ನೀಡಿದ ಟಿಪ್ಪು ಸುಲ್ತಾನರ ಅರಮನೆಯ 150 ಗಜಗಳ ದೂರದಲ್ಲೇ ಶ್ರೀರಂಗನಾಥ ದೇವಾಲಯವಿದೆ. ಅರಮನೆಯ ಜನನಾ ಪಕ್ಕದಲ್ಲೇ ಇದೆ ಗಂಗಾಧರೇಶ್ವರ ಗುಡಿ ಮರಾಠರು ಉರುಳಿಸಿದ ಶ್ರೀರಂಗ ದೇವಾಲಯದ ಗೋಡೆಯನ್ನು ಜೀರ್ಣೋದ್ದಾರ ಮಾಡಿಸಿದ್ರು. ಟಿಪ್ಪುಸುಲ್ತಾನರ ಆಡಳಿತದಲ್ಲಿ ಕಂದಾಯ ಆರ್ಥಿಕ ಹಾಗೂ ಖಜಾನೆ ಇಲಾಖೆಗಳಲ್ಲಿ ಮುಖ್ಯವಾಗಿ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದರು. ಇಂತಹ ಮತ ಸಹಿಷ್ಣು ಟಿಪ್ಪು ಮತಾಂಧ, ದೇಶದ್ರೋಹಿಯಾಗಿ ಹಿಂದೂ ದ್ವೇಷಿಯಾಗಿ ಕಂಡದ್ದು ವಿಪರ್ಯಾಸವೇ ಸರಿ.

*ದೇಶದ್ರೋಹಿಗಳ ಸ್ವಾಮಿ ದ್ರೋಹ*

ಬ್ರಿಟಿಷರನ್ನು ಶತಾಯಗತಾಯ ಸೋಲಿಸಲು ಭಾರತೀಯ ಅರಸರ ಸಹಾಯವನ್ನು ಅಪೇಕ್ಷಿಸಿದಂತೆಯೇ ವಿದೇಶ ಅರಸರ ಸಹಕಾರವನ್ನು ಟಿಪ್ಪು ಸುಲ್ತಾನ್ ಬಯಸಿದ್ದರು. ಫ್ರಾನ್ಸ್ ಇರಾನ್ ತುರ್ಕಿ ಅಪಘಾನಿಸ್ಥಾನಗಳೊಂದಿಗೆ ರಾಯಭಾರಿಗಳನ್ನು ಕಳುಹಿಸಿ ಮೈಸೂರಿಗೆ ವಿಶ್ವ ಭೂಪಟದಲ್ಲಿ ಸ್ಥಾನ ಕಲ್ಪಿಸಿದ ಪ್ರಥಮ ವಿದೇಶಾಂಗ ನೀತಿಜ್ಞರಾಗಿದ್ದರು ಟಿಪ್ಪು ಸುಲ್ತಾನ್.
1784 ರಲ್ಲಿ ಮಂಗಳೂರಿನಲ್ಲಿ ಬ್ರಿಟಿಷರನ್ನು ಮಣ್ಣು ಮುಕ್ಕಿಸಿದ ಟಿಪ್ಪು ಸುಲ್ತಾನರು ಅವರೊಂದಿಗೆ ಕರಾರು ಬರೆಯಿಸಿದರು. ಮರಾಠರಿಗೆ ಇದರಿಂದ ಬಹಳ ಅಸಮಾಧಾನವಾಯಿತು. ಇದರಿಂದ ಟಿಪ್ಪುವಿನ ಕೀರ್ತಿ ಹೆಚ್ಚಿತೆಂದು ಮರಾಠರ ಅಸೂಯೆ ಅವರು ಕಾಲ್ಕೆರೆದು ಟಿಪ್ಪುವಿನೊಂದಿಗೆ ಜಗಳ ಆರಂಭಿಸಿದರು. ಟಿಪ್ಪು ವಾದರೆ ಅವರ ಸ್ನೇಹವನ್ನು ಬಯಸಿದ್ದರು. ಆದರೆ ಮರಾಟರು ಯುದ್ಧವನ್ನು ಆರಂಭಿಸಿದರು. ಬಾದಾಮಿಗೆ ಮುತ್ತಿಗೆ ಹಾಕಿದರು. 1786-87 ಒಂದು ವರ್ಷಗಳ ಕಾಲ ಯುದ್ಧ ನಡೆಯಿತು. ವೀರಾವೇಶದಿಂದ ಹೋರಾಡಿದ ಟಿಪ್ಪುವಿನ ಯರು ಎದುರು ಮರಾಠರು ಸೋತು ಸುಣ್ಣವಾದರು.

1787ರಲ್ಲಿ ಈ ಬಗ್ಗೆ ಒಪ್ಪಂದವಾಯಿತು. ವಿಜಯ ಶೀಲನಾದ ಟಿಪ್ಪು ಸುಲ್ತಾನ್
ಮರಾಠರಿಗೆ ಕಠಿಣ ಶರ್ತ ಒಡ್ಡುವ ಬದಲು ಅವರ ಸ್ನೇಹ ಬಯಸಿದರು. ತನ್ನ ರಾಜ್ಯದ ಕೆಲವು ಭಾಗಗಳನ್ನು ಮರಾಠರಿಗೆ ಒಪ್ಪಿಸಿದರು. ಏನು ಕೊಟ್ಟರೂ ನಾಯಿ ಬಾಲದಂತೆ ಮರಾಠರು ಭಾರತದ ವೈರಿಗಳೊಂದಿಗೆ ಸ್ನೇಹ ಬೆಳೆಸಿದರು. ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನರಿಗೆ ದ್ರೋಹ ಬಗೆದರು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ತನ್ನ ಎರಡು ಮಕ್ಕಳನ್ನು ಬ್ರಿಟಿಷರಲ್ಲಿ ಅಡವಿಬೇಕಾಗಿ ಬಂತು. ಆ ಸಮಯದಲ್ಲಿ ಹರಿಪಂತ (ಮರಾಟ ಪ್ರತಿನಿಧಿ) ನಲ್ಲಿ ಟಿಪ್ಪು ರಹಸ್ಯವಾಗಿ ಭೇಟಿ ಮಾಡಿ ಚೆನ್ನಾಗಿ ತಿಳಿದುಕೊಳ್ಳಿ "ಖಂಡಿತವಾಗಿಯೂ ನಾನು ನಿಮ್ಮ ಶತ್ರುವಲ್ಲ ನಿಮ್ಮ ನಿಜವಾದ ಶತ್ರು ಇಂಗ್ಲಿಷಿನವ ಅವನ ಕುರಿತು ಎಚ್ಚರದಿಂದಿರಿ" ಎಂದು ಹೇಳಿ ಕಡೆಯವರೆಗೂ ಮರಾಠರ ಸ್ನೇಹ ಗಳಿಸಲು ಪ್ರಯತ್ನಿಸಿದರು.

(ಮುಂದುವರಿಯುವುದು)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...