Skip to main content

ಟಿಪ್ಪು ಸುಲ್ತಾನ್ ಮಹಾನ್ ದೇಶಪ್ರೇಮಿ ✍🏻ಹಾರಿಸ್ ಪೆರಿಯಪಾದೆ {ಭಾಗ 1}

ಟಿಪ್ಪು ಸುಲ್ತಾನ್ ಮಹಾನ್ ದೇಶಪ್ರೇಮಿ

✍🏻ಹಾರಿಸ್ ಪೆರಿಯಪಾದೆ
{ಭಾಗ 1}

*ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷರು ಭಾರತ ಉಪಖಂಡದ ಸಾಮ್ರಾಜ್ಯವನ್ನು ಸ್ಥಾಪಿಸಲು ಹೊರಟಿರುವುದನ್ನು ಎಲ್ಲರಿಗಿಂತ ಮೊದಲೇ ಗುರುತಿಸಿದವರು ಮೈಸೂರಿನ ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಇಲ್ಲಿ ನೆಲೆಯೂರಲು ಬಿಡಬಾರದೆಂದು ಅವರೊಡನೆ ಛಲದಿಂದ ಹೋರಾಡಿದರು.

ಭಾರತದ ಇತಿಹಾಸದಲ್ಲೇ ನೌಕಾ ಬಲ ಹೊಂದಿದ್ದ ನೌಕಾಪಡೆ ಹೈದರಾಲಿಯದ್ದು . ಆಗಿನ ಕಾಲದ ಭಾರತದ ಅರಸರು ನೌಕಾ ಪಡೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದರೆ, ಹೈದರಲಿ ಮತ್ತು ಟಿಪ್ಪು ಇದಕ್ಕೆ ಅಪವಾದ ಟಿಪ್ಪು ಸುಲ್ತಾನರ ನೌಕಾಪಡೆ ಬಲಪಡಿಸುವ ಮತ್ತು ವಿದೇಶ ರಾಯಭಾರಗಳಿಂದ ಭಾರತಕ್ಕೆ ವಿಶ್ವ ಭೂಪಟದಲ್ಲಿ ಒಂದು ಸ್ಥಾನವನ್ನು ಕೊಟ್ಟಿದ್ದರು

ಭಾರತದಿಂದ ಬ್ರಿಟಿಷರನ್ನು ಹೊಡೆದೋಡಿಸಲು ಅಖಿಲ ಭಾರತ ಯೋಜನೆಯನ್ನು ಹೈದರಾಲಿ 1779 ರಲ್ಲಿ ಪ್ರಕಟಿಸಿದ ನಿಜಾಮರನ್ನೂ, ಮರಾಠರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ. ಮಹಾರಾಷ್ಟ್ರ ಹೈದರಾಬಾದ್, ಮೈಸೂರು ರಾಜ್ಯಗಳ ಮುಖ್ಯಸ್ಥರು ಶ್ರೀರಂಗಪಟ್ಟಣದಲ್ಲಿ ಸೇರಿ ಒಪ್ಪಂದ  ಏರ್ಪಡಿಸಿದರು. ಬ್ರಿಟಿಷರ ಪಾಲಿಗದು ಮರಣ ಗಂಟೆಯಾಗಿತ್ತು.

ವೀರಕೇಸರಿಯಂತೆ ಹೈದರಾಲಿಯು ಬ್ರಿಟಿಷರ ವಿರುದ್ಧ   ಸಂಗ್ರಾಮ ಪ್ರಾರಂಭಿಸಿದ್ದ. ಆದರೆ ಭಾರತದ ದುರ್ದೈವ, ಮರಾಠರೂ ನಿಜಾಮರೂ ಕ್ರಮವಾಗಿ ಬ್ರಿಟಿಷರ ವಂಚನೆಗೆ ಒಳಪಟ್ಟರು. ಶ್ರೀರಂಗಪಟ್ಟಣದ ಒಪ್ಪಂದವನ್ನು ನಿರ್ಲಕ್ಷಿಸಿದರು. ಅನಾರೋಗ್ಯದ ನೆಪವೊಡ್ಡಿದ ಹೈದರಾಬಾದಿನ ನಿಜಾಮ ತನ್ನ ಅರಮನೆಯಲ್ಲಿಯೇ ಬಾಕಿಯಾದರೆ, ಮರಾಠರು ಮುಂಬಯಿಯ ಬ್ರಿಟಿಷ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಲವು ತುಂಡರಸರ ರಾಜ್ಯಗಳನ್ನು ವಶಪಡಿಸಿಕೊಂಡರು. ಹಾಗೂ ಹೈದರಾಲಿಯ ಸಹಾಯಕ್ಕೆ ಹೋಗದೆ ಮೋಸ ಮಾಡಿದರು. ಏಕೈಕ ವೀರನಾಗಿ ಹೈದರಲಿ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಯಾವ ಒಬ್ಬ ಅರಸ ಅವರ ಸಹಾಯಕ್ಕೆ ಹೋಗಲಿಲ್ಲ ಆದರೆ ಸಮರ ತಂತ್ರಜ್ಞತೆಯಲ್ಲಿ ನಿಪುಣನಾಗಿದ್ದ ಹೈದರಾಲಿಯು ಬ್ರಿಟಿಷರನ್ನು ಸದೆಬಡಿದು ಅವರ ಕೀರ್ತಿ ಪ್ರತಾಪವನ್ನು ಮಣ್ಣುಪಾಲು ಮಾಡಿ ಸೋಲಿನ ಸವಿಯುಣಿಸಿದರು.
ಮದ್ರಾಸಿಗೆ ಮುತ್ತಿಗೆ ಹಾಕಿದ್ದ ಹೈದರಾಲಿಯೊಂದಿಗೆ ಬ್ರಿಟಿಷರು ಸಂಧಿಗೆ ಬದ್ಧರಾದರು. ಪರಸ್ಪರ ಸಹಾಯದ ಒಪ್ಪಂದಕ್ಕೆ ನಡೆದುಕೊಳ್ಳದೆ ದ್ರೋಹ ಎಸಗಿದಾಗ ಬ್ರಿಟಿಷ್ ರಾಯಭಾರಿಗೆ "ಆಂಗ್ಲರ ಹೆಸರನ್ನು ಕರ್ನಾಟಕದಿಂದಲೇ ಅಳಿಸಿ ಹಾಕಿ ಬಿಡುತ್ತೇನೆ ಎಂದು ಬಿರುಸಾಗಿ ಗುಡುಗಿದ ಹೈದರಾಲಿಯು ಅಂದಿನಿಂದ ಬ್ರಿಟಿಷರ ಬದ್ಧ ವೈರಿಯಾಗಿ ಅವರನ್ನು ಭಾರತದಿಂದ ಹೊಡೆದೋಡಿಸುವ ಪಣ ತೊಟ್ಟಿದ್ದ! ಮಗ ಟಿಪ್ಪು ಸುಲ್ತಾನರಲ್ಲಿ ಬ್ರಿಟಿಷರು ಭಾರತದ ಶಾಶ್ವತ ಶತ್ರುಗಳೆಂದು ಶಪಥ ಮಾಡುವಂತೆ ಉಪದೇಶ ನೀಡಿದ ಮಹಾನ್ ದೇಶಭಕ್ತ ಹೈದರಾಲಿ.

(ಮುಂದುವರಿಯುವುದು)
*✍🏻 ಹಾರಿಸ್ ಪೆರಿಯಪಾದೆ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...