*" ಮನದಾಳದಲ್ಲಿ ಮದೀನ."*
✍🏿ಸಿ.ಐ.ಇಸ್ಹಾಕ್ ಫಜೀರ್.
(ಸಂಚಿಕೆ-2)
ನಂ.6
ಮಸ್ಜಿದುಲ್ ಫಸ್'ಹ್.
ಉಹ್ದ್ ಯುದ್ದದಲ್ಲಿ ಪ್ರವಾದಿ (ﷺ)ರವರ ಹಲ್ಲು ಸತ್ಯ ನಿಷೇಧಿಯ ಕಲ್ಲೇಟಿಗೆ ಉದುರಿದಾಗ ಫಾತಿಮಾ ರ.ಅ ರವರು ಶುಶ್ರೂಷೆ ನಡೆಸಿರುವುದು ಹಾಗೂ ಉಹ್ದ್ ಯುದ್ದ ಸಮಯದಲ್ಲಿ ಅಸರ್ ಮತ್ತು ಲುಹರ್ ನಮಾಜನ್ನು ಜಮ್ಮು ಕಸರ್ ಮಾಡಿ ನಮಾಜ್ ನಿರ್ವಹಿಸಿರುವುದು ಮಸ್ಜಿದುಲ್ ಫಸ್'ಹ್'ನಲ್ಲಾಗಿರುತ್ತದೆ.
ಇಲ್ಲಿಯೇ ಪಕ್ಕದಲ್ಲಿ ಮಲಕ್ ಜಿಬ್ರೀಲ್ ಅ.ಸ ರವರು ಪ್ರವಾದಿ (ﷺ) ರವರಿಗೆ ಕುಳಿತು ಕೊಳ್ಳಲು ಶಿಖರವನ್ನು ಸೀಳಿ ಗುಹೆಯೊಳಗೆ ಕುಳಿತು ಕೊಳ್ಳಲು ಬಂಡೆ ಕಲ್ಲನ್ನು ಆಸನ ಮಾಡಿ ಕೊಟ್ಟಿರುವುದನ್ನೂ ಪ್ರವಾದಿ (ﷺ)ರವರನ್ನು ಕೊಲ್ಲಲು ಘನ ಗಾತ್ರದ ಬಂಡೆ ಕಲ್ಲೊಂದನ್ನು ಶತ್ರುವೊರ್ವ ಉರುಳಿಸಿ ಹಾಕಿದಾಗ ತಲೆ ಮೇಲೆ ಬೀಳದೆ ಎರಡು ಶಿಖರಗಳ ನಡುವೆ ಸಿಲುಕಿಕೊಂಡಿರುವುದು ಇಲ್ಲಿ ಕಾಣ ಬಹುದು.
ಇದು ಉಹ್ದ್ ಬೆಟ್ಟದ ಪಕ್ಕದಲ್ಲಿಯೇ ಇದೆ.
ನಂ.7) ಬಿಅ್'ರ್ ಉಸ್ಮಾನ್.
ಈ ಮೊದಲು ಬಿಅ್'ರ್ ರೂಮ ಎಂಬುದಾಗಿತ್ತು ಹೆಸರು.
ಬಿಅ್'ರ್ ಅಂದರೆ ಬಾವಿ.
ರೂಮ.ಬಾವಿ ಮಾಲಕ ಜೂದನ ಹೆಸರು.
ಮದೀನ ಪಟ್ಟಣದಲ್ಲಿ ಒಮ್ಮೆ
ನೀರಿಗೆ ಹಾಹಕಾರ ಉಂಟಾಯಿತು. ನದಿ, ಬಾವಿಗಳೆಲ್ಲ ನೀರಿಲ್ಲದೆ ಬತ್ತಿ ಹೋದವು. ಈ ಸಂಧರ್ಭದಲ್ಲಿ ಬಿಅ್'ರ್ ರೂಮ.ಯಾ ಬಿಅ್'ರ್ ಉಸ್ಮಾನ್ ರವರ ಬಾವಿಯಲ್ಲಿ ನೀರು ಬತ್ತದೆ ತುಂಬಿ ತುಲುಕುತ್ತಿದ್ದವು.
ಈ ಪರಿಸರದಲ್ಲಿ ವಾಸಿಸುತ್ತಿದ್ದ ಸ್ವಹಾಬಿಗಳು ಪ್ರವಾದಿ (ﷺ)ರವರ ಬಳಿ ತೆರಳಿ ನೀರಿನ ಕೊರತೆ ಹಾಗೂ ಬಿಅ್'ರ್ ರೂಮ ದಲ್ಲಿ ತುಂಬಿ ತುಲುಕುವ ಬಾವಿ ತಮಗೆ ದೊರಕ ಬೇಕೆಂದು ಆವಶ್ಯ ಪಟ್ಟರು.
ಅದರಂತೆ ರಸೂಲ್ ಕರೀಂ (ﷺ)ರವರು ಹೇಳಿದರು ಯಾರು ಈ ಬಾವಿಯನ್ನು ರೂಮ ನಿಂದ ಖರೀದಿಸಿ ಮುಸ್ಲಿಮರಿಗೆ ಕೊಡುಗೆಯಾಗಿ ನೀಡುವರೋ ಅವರಿಗೆ ನಾನು ಸ್ವರ್ಗ ವಾಗ್ದಾನ ಮಾಡುವನೆಂದು ಘೋಷಿಸಿದರು. ಈ ವಿಚಾರ ಕೇಳಿದ್ದೇ ತಡ ಹಝ್ರತ್ ಉಸ್ಮಾನ್ ರ.ಅ ರವರು ಕೈ ಎತ್ತಿಯೇ ಬಿಟ್ಟರು.
ಉಸ್ಮಾನ್ ರ.ಅ ರವರು ಜೂದನ ಬಳಿ ತೆರಳಿ ಬಾವಿಯ ಖರೀದಿಸುವ ಬಗ್ಗೆ ವಿಚಾರ ನಡೆಸಿ ಕೊಂಡರು.
ಬಾವಿಯ ಅರ್ಧದಷ್ಟು ಮಾತ್ರ ಮಾರಾಟ ಮಾಡುವುದಾಗಿ ಜೂತ ತಿಳಿಸಿದ. ಇದನ್ನು ಒಪ್ಪಿಕೊಂಡ ಉಸ್ಮಾನ್ ರ.ಅ ಬಾವಿಯ ಅರ್ದ ಭಾಗವನ್ನು ಖರೀದಿಸಿ ಕೊಂಡರು.
ನಂತರದ ದಿನಗಳಲ್ಲಿ ಜೂದ ರೂಮ ಪೂರ್ತಿಯಾಗಿ ಬಾವಿಯನ್ನು ಉಸ್ಮಾನ್ ರ.ಅ ರವರಿಗೆ ಮಾರಿ ಬಿಟ್ಟ.
ಉಸ್ಮಾನ್ ರ.ಅ ರವರು ಪೂರ್ತಿಯಾಗಿ ಖರೀದಿಸಿ ಕೊಂಡರು.
ತದನಂತರ ಬೀರ್ ಉಸ್ಮಾನ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.
__________
ನಾಳಿನ ಸಂಚಿಕೆಯಲ್ಲಿ.
ನಂ.8
ಮಸ್ಜಿದುಲ್ ಖಿಬ್'ಲತೈನಿ.
Comments