Skip to main content

*"ಮನದಾಳದಲ್ಲಿ ಮದೀನ."* ✍🏿ಸಿ.ಐ.ಇಸ್ಹಾಕ್ ಫಜೀರ್. (ಸಂಚಿಕೆ-7)

*"ಮನದಾಳದಲ್ಲಿ ಮದೀನ."*
   ✍🏿ಸಿ.ಐ.ಇಸ್ಹಾಕ್ ಫಜೀರ್.
         (ಸಂಚಿಕೆ-7)

ನಂ.18. ಶತಮಾನದ ಮಸ್ಜಿದ್.
ಇದು ಇಪ್ಪತ್ತನೇ ಶತಮಾನದಲ್ಲಿ
ಕಪ್ಪು ಕಲ್ಲಿನಿಂದ ಕಟ್ಟಲ್ಪಟ್ಟ ಬೃಹತ್ ಮಸ್ಜಿದನ್ನು ಮೂಲತ ಟರ್ಕಿಯವರು ಕಟ್ಟಿ ಸೌದಿ ಅರೇಬಿಯಾಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ.

ನಂ19.ಮಸ್ಜಿದ್ ಸುಖಿಯಾ.
ಇಲ್ಲಿಂದಾಗಿರುತ್ತದೆ ಬದ್ರ್ ಯುದ್ದಕ್ಕೆ ಚಾಲನೆ ಗೊಂಡಿರುವುದು.

ನಂ.20 ಸನೀಯತುಲ್ ವದಾ.
ತ್ವಾಲಾಅಲ್ ಬದ್ರು ಅಲೈನಾ
ಮಿನ್'ಸನಿಯಾತಿಲ್ ವದಾಈ
ಸನಿಯತುಲ್ ವದಾ‌
ಅಂದರೆ ಮದೀನಾದ ಒಂದು ಪ್ರದೇಶದ ಹೆಸರು.
ಇದು ಪ್ರವಾದಿ (ﷺ)ರವರು ಮಕ್ಕಾ ಬಿಟ್ಟು ಮದೀನ ತಲುಪಿದಾಗ ಮದೀನ ಅನ್ಸಾರಿಗಳು ಅವರನ್ನು ಮೇಲೆ ತಿಳಿಸಿದ ಪ್ರಸಿದ್ಧ  ಹಾಡಿನ ಮೂಲಕ ಸ್ವೀಕರಿಸಿದ ಸ್ಥಳ.

ನಂ21
ಮಸ್ಜಿದ್ ಅಬೂ ದ್ಸರ್( ಸಜದ)
ಮಸ್ಜಿದ್ ಅಬೂ ದ್ಸರ್.
ಇಂದು ಮಸ್ಜಿದ್ ಸಜದ ಎಂಬ ಹೆಸರಿನಿಂದ ಪ್ರಸಿದ್ಧಿಗೊಂಡಿದೆ.
ಒಮ್ಮೆ ಪ್ರವಾದಿ (ﷺ)ರವರು ಈ ಮಸೀದಿಯಲ್ಲಿ ಒಂದು ದೀರ್ಘ  ಸುಜೂದ್' (ಸಾಷ್ಟಾಂಗ) ದಲ್ಲಿ ಲೀನರಾದರು.
ಹಿಂಬದಿಯಿದ್ದ ಸ್ವಹಾಬಿಯೋರ್ವರು ಪ್ರವಾದಿ (ﷺ)ರವರು ಸುಜೂದ್'ನಿಂದ ತಲೆ ಉದ್ಧರಿಸುವುದನ್ನು ಕಾಣಲಾಗದಾಗ ಅಳ ತೊಡಗಿದರು.
ದೀರ್ಘ ಸುಜೂದ್'ನ ಬಳಿಕ ತಲೆ ಎತ್ತಿದ ಪ್ರವಾದಿ ಹಿಂತಿರುಗಿ ನೋಡುವಾಗ ಸ್ವಹಾಬಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರು.
ಯಾಕಾಗಿ ಅಳುತ್ತಿದ್ದೀರಿ ಸ್ವಹಾಬಿ ವರ್ಯರೇ ಎಂದು ಪ್ರಶ್ನಿಸಿದಾಗ.
ತಾವು ದೀರ್ಘ ಕಾಲ ಸುಜೂದ್ ನಿಂದ ತಲೆ ಎತ್ತದೇ ಇದ್ದಾಗ ತಾವು ವಫಾತ್'ಆಗಿಯರೋ ಅಂದುಕೊಂಡು ಅಳು ಬಿಕ್ಕಳಿಸಿ ಬಂದವು ಅಂದರು.
ಇದು ಕೇಳಿದ ಪ್ರವಾದಿ (ﷺ)ರವರು ಹೇಳಿದರು ಈಗಷ್ಟೇ ಬಂದು ಹೋದ ಜಿಬ್ರರೀಲ್ ಅ.ಸ ರವರು ಒಂದು ಹದೀಸ್ ವಯ್ಯಿ ಮೂಲಕ ತಿಳಿಸಿದರು ಅದೇ‌ನಂದರೆ ( ಮನ್ ಸ್ವಲ್ಲಾ ಅಲೆಯ್ಯ ಸ್ವಲಾತನ್ ಸ್ವಲ್ಲಲ್ಲಾಹು ಅಲೈಹಿ ಬಿಹಾ ಅಶ್ರಾ.)
ಯಾರಾದರೂ ನನ್ನ ಮೇಲೆ ಒಂದು ಸಲಾತ್ ಹೇಳಿದರೆ ಆತನ ಮೇಲೆ ಹತ್ತು ಗುಣಗಳನ್ನು ಅಲ್ಲಾಹನು ನೀಡುವನು.ಎಂಬ ಸುವಾರ್ತೆ ನನ್ನನು ಅತೀವ ಸಂತೋಷಕ್ಕೀಡು ಮಾಡಿತು. ನನ್ನ ಉಮ್ಮತ್ತಿಗೆ ದೊರಕಿದ ಈ ಮೊತ್ತದ ಅಮೋಘ ಆಫರ್'ನ ಸಲುವಾಗಿ ಶುಕ್'ರಿನ
ಸುಜೂದ್ ಮಾಡಿದೆ ಅಂದುಕೊಂಡರು. ಪ್ರಸ್ತುತ ಈ ಹದೀಸ್ ಅವತೀರ್ಣಗೊಂಡಿರುವುದು ಮಸ್ಜಿದ್ ಅಬೂ ದ್ಸರ್ ನಲ್ಲಾಗಿದೆ ಬಳಿಕ ಮಸ್ಜಿದ್ ಸಜದ ಎಂದು ಪ್ರಖ್ಯಾತಿ ಪಡೆಯಿತು.
ಮಲಯಾಳಿಗಳ ಪ್ರಸಿದ್ಧ ಹೋಟೆಲಾದ ಮದೀನ ಹೋಟೆಲಿನ ಪಕ್ಕದಲ್ಲಿಯೇ ಈ ಮಸೀದಿ ನೆಲೆಗೊಂಡಿದೆ.

ನಾಳಿನ ಸಂಚಿಕೆಯಲ್ಲಿ
ನಂ.21
ಅಜ್ವಾ ತೋಟ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...