Skip to main content

*" ಮನದಾಳದಲ್ಲಿ ಮದೀನಾ."* ✍🏿ಸಿ.ಐ.ಇಸ್ಹಾಕ್ ಫಜೀರ್. (ಸಂಚಿಕೆ-1)

*" ಮನದಾಳದಲ್ಲಿ ಮದೀನಾ."*
   ✍🏿ಸಿ.ಐ.ಇಸ್ಹಾಕ್ ಫಜೀರ್.
           (ಸಂಚಿಕೆ-1)
"ಮನದಾಳದಲ್ಲಿ ಮದೀನಾ" ಎಂಬ ಹೊಸ ಸಂಚಿಕೆ   ಸೋಷಿಯಲ್ ಮೀಡಿಯಾಗಳಲ್ಲಿ ಇಂದಿನಿಂದ
ವಿನಿಮಯ ವಾಗಲಿದೆ.ಕನ್ನಡಿಗನಿಂದ ಕನ್ನಡಿಗರಿಗಾಗಿ ಕನ್ನಡದಲ್ಲಿ ಬರೆದ ಕಸ್ತೂರಿ ಕನ್ನಡದ ಹೊಸ ಸಂಚಿಕೆ ಓದುಗರ ನಿರೀಕ್ಷೆಯಂತೆ ಇಂದು ಅನಾವರಣಗೊಂಡಿತು.
ನಾನು ಬರೆಯಲು ಹೊರಟ ಇತಿಹಾಸ ಭೂಮಿ ಮದೀನ ಮುನವ್ವರ.!
ಜಾಗತಿಕ ಮುಸಲ್ಮಾನರ ಅಭಯ ಕೇಂದ್ರ,ಮರುಭೂಮಿಯ ಶೀಥಲ ಮಂದ ಮಾರುತಕ್ಕೆ ಮೈ ಚೆಲ್ಲಿ ಸ್ವರ್ಗೀಯ ಉದ್ಯಾನದಲ್ಲಿ ರಾರಾಜಿಸುತ್ತಿರುವ ವಿಶ್ವಾಸಿ ಮುಸಲ್ಮಾನರ ಅಧಿಪತಿಯ ಪರಮ ಪವಿತ್ರ ಸನ್ನಿಧಿ,
ಹೌದು.!
"ಮದೀನಾವನ್ನು ಬಯಸಿ ಬಂದು ಮದೀನಾದಲ್ಲಿ ಮರಣಗೊಂಡಲ್ಲಿ ಸ್ವರ್ಗ ವಾಗ್ದಾನ ಮಾಡುವೆ" ಎಂಬ ಪ್ರವಾದಿ ಸಂದೇಶ ಮದೀನಾದ ಮಹಿಮೆಯನ್ನು ಜಗತ್ತಿಗೆ ತಿಳಿಸುತ್ತದೆ.
ನಾನು ಸಂದರ್ಶನ ಪಡೆದ ಮದೀನಾದ ಕೆಲವು ಸಂದರ್ಶನ ಪ್ರದೇಶವನ್ನು ಈ ಮೂಲಕ ಕನ್ನಡ ಓದುಗ ಪ್ರೀಯರ ಮನ ತಲುಪಿಸುವ ಹೃಸ್ವ ಪ್ರಯತ್ನ.
ಇಂದಿನಿಂದ ಕೆಲವು ದಿನಗಳು ಮಾತ್ರ ಮುಂದುವರಿಯುವ  ಕೆಲವು ಸಂಚಿಕೆಗಳು ನೀವು ಓದಿಕೊಂಡು ಒಂದೊಮ್ಮೆ ಮದೀನಾದ ಚೈತ್ರ ಮಣ್ಣು ಸಂಧರ್ಶನ ಸೌಭಾಗ್ಯ ಸಿಕ್ಕಿದ್ದಲ್ಲಿ ಈ ಎಲ್ಲಾ ಪ್ರದೇಶ ತಲುಪುವ ಪ್ರಯತ್ನ ಮಾಡಿಕೊಳ್ಳಿ.

ನಂ 1. ರೌಳ ಶರೀಫ್.
ಜಗತ್ತಿನ ಪರಮೋನ್ನತ ಮೂರು ಮಸೀದಿಗಳಲ್ಲಿ ಒಂದಾಗಿದೆ ಮಸ್ಜಿದುನ್ನಭವಿ ಅಥವಾ ಮದೀನ ಮಸೀದಿ.
ಪ್ರವಾದಿ (ﷺ) ರವರು ಸತ್ಯ ನಿಷೇಧಿಗಳ ಉಪಟಳ ತಾಳಲಾರದೆ ಮನೆ,ಮಠ, ಬಂಧು,ಬಳಗ ಬಿಟ್ಟು ಬೇಸತ್ತು ಹೊರಟಾಗ ಹಾಡಿನ ಮೂಲಕ ಸ್ವಾಗತಿಸಿ ಬರಮಾಡಿಕೊಂಡವರೆ ಮದೀನ ನಿವಾಸಿಗಳು.
ತನ್ನ ಐವತ್ತಮೂರನೇ ವಯಸ್ಸಿನಲ್ಲಿ ಮಕ್ಕಾ ಬಿಟ್ಟು ಬಂದು ಮದೀನಾದಲ್ಲಿ ಕೇವಲ ಹತ್ತು ವರ್ಷಗಳ ಕಾಲ ಮಾತ್ರ ಬದುಕಿ‌. ಜೀವನದ ಕಡೆಯ ಕ್ಷಣವನ್ನು ಅಲ್ಲಿಯೇ ಮುಗಿಸಿ ಮತ್ತೆ ಅಲ್ಲಿಯೇ ಚಿರನಿದ್ರೆಗೊಂಡರು.
ನಂತರ ಅವರ ಪಾವನ ಪಾರ್ಥಿವ ಶರೀರವನ್ನು ಮಸ್ಜಿದುನ್ನಭವಿಯಲ್ಲಿಯೇ ದಫನ ಮಾಡಲಾಯಿತು.

2)ರಿಯಾಳುಲ್ ಜನ್ನಾ
ಪ್ರವಾದಿ (ﷺ)ರವರ ಮನೆ ಹಾಗೂ ಮಿಂಬರ್ ಮಧ್ಯೆ ಇರುವ ಪವಿತ್ರ ಸ್ಥಳ ಭೂ ಲೋಕದ ಸ್ವರ್ಗವೆಂದು ಬಿಂಬಿಸಲಾಗಿದ.ಈ ಸ್ಥಳವನ್ನು ರಿಯಾಳುಲ್ ಜನ್ನಾ ಸ್ವರ್ಗೀಯ ಹೂದೋಟ ಎಂದು ಕರೆಯಲ್ಪಡುತ್ತದೆ.

3) ಸ್ಸುಫ್ಫ
ಪ್ರವಾದಿ (ﷺ)ರವರು ತನ್ನ ಸ್ವಹಾಬಿ ಶಿಷ್ಯಂದಿರುಗಳಿಗೆ ದರ್ಸ್ ನಡೆಸಿದ ಸ್ಥಳ ಪ್ರಸ್ತುತ ಮಸ್ಜಿದುನ್ನಭವಿಯಲ್ಲಿ ಸ್ಥಿರಗೊಂಡಿದೆ.

4)_ಜನ್ನತುಲ್ ಬಖೀಹ್.
ಸ್ವಹಾಬಿ ಉಸ್ಮಾನ್ ರ.ಅ, ಮುಹಮ್ಮದ್ (ﷺ)
ರವರ ಪುತ್ರಿ ಫಾತಿಮಾ ರ.ಅ,ಪ್ರವಾದಿ(ﷺ)ರವರಿಗೆ ಎದೆ ಹಾಲುಣಿಸಿದ ಮಹದಿ ಅಲೀಮ ರ.ಅ,
ಇಮಾಂ ಮಾಲೀಕ್ ರ.ಅ ಸೇರಿದಂತೆ ಲಕ್ಷಾಂತರ ಮಹಾನುಭಾವಿಗಳು, ಸತ್ಯವಿಶ್ವಾಸಿಗಳು ಸ್ವಹಾಬಿಗಳು ಚಿರ ನಿದ್ರೆಗೊಂಡ ಮಕ್ಬರ.

5)ಉಹ್ದ್ ಬೆಟ್ಟ.
ಮದೀನ ಮಸ್ಜಿದ್'ನಿಂದ ಸ್ವಲ್ಪ ಕ್ರಮಿಸಿದರೆ ಕಾಣ ಸಿಗುತ್ತದೆ.
ಇಸ್ಲಾಮಿನ ಪ್ರಮುಖ ಯುದ್ಧಗಳಲ್ಲಿ ಉಹ್ದ್ ಕೂಡಾ ಒಂದು.
ಉಹ್ದ್ ಬೆಟ್ಟದ ಮೇಲೆಯಾಗಿದೆ ಯುದ್ಧ ನಡೆದಿರುವುದು.
ಯುದ್ಧದ ಆರಂಭದಲ್ಲಿ ಪ್ರವಾದಿಯವರು ಈ ರೀತಿ ಘೋಷಿಸಿದ್ದುಃ
ಉಹ್ದ್'ನಲ್ಲಿ ನಾವು ಗೆದ್ದರೂ ಸೋತರೂ ನನ್ನ ಅನುಮತಿ ವಿನಃ ಬೆಟ್ಟದಿಂದ ಕೆಳಗಿಳಿಯ ಬಾರದೆಂದು.
ಯುದ್ದದಲ್ಲಿ ಮುಸ್ಲಿಮರಿಗೆ ಜಯ ದೊರಕಿತು. ಇದು ಕೇಳಿದ್ದೇ ತಡ. ಆವೇಶ ಭರಿತರಾಗಿ ಸ್ವಹಾಬಿಗಳು ಪ್ರವಾದಿ (ﷺ)ರವರು
ಈ ಮೊದಲು ಅಜ್ಙಾಪಿಸಿದ ಮಾತನ್ನು ಮರತು ಉಹ್ದ್ ಬೆಟ್ಟದ ಮೇಲಿಂದ ಕೆಳಗಿಳಿದರು.ಇದನ್ನು ವೀಕ್ಷಿಸಿಸುತ್ತಿದ್ದ ಸತ್ಯ ನಿಷೇಧಿಗಳು ಏಕಾಏಕಿಯಗಿ ಉಹ್ದ್ ಬೆಟ್ಟದ ತುದಿಗೇರಿ ಬೆಟ್ಟದ ಮೇಲಿದ್ದ ಎಪ್ಪತ್ತಕ್ಕೂ ಮಿಕ್ಕ ಸ್ವಹಾಬಿಳನ್ನು ವಧಿಸಿ ಬಿಟ್ಟರು.
ಶಹೀದ್ ಗಳಾದ ಸ್ವಹಾಬಿಗಳಲ್ಲಿ ಪ್ರಮುಖರಾದ ನಾಲ್ಕು ಮಂದಿಯನ್ನು ಪ್ರತ್ಯೇಕವಾಗಿ ದಫನ ಮಾಡಿ ಮಿಕ್ಕ ಸ್ವಹಾಬಿಗಳನ್ನು ಒಂದೇ ಖಬರಿನಲ್ಲಿ ದಫನ ಮಾಡಲಾಯಿತು.
ಪ್ರತ್ಯೇಕ ವಾಗಿ ದಫನ ಮಾಡಲಾದ ಪ್ರಮುಖ ನಾಲ್ವರು.
1)ಹಂಝತುಲ್ ಕರ್ರಾರ್.
2)_ಮಿಸ್ಹ್'ಅಬ್ ಇಬ್ನ್ ಉಮೈರ್.
3)ಅಬ್ದುಲ್ಲಾ ಇಬ್ನ್ ಜಹ್ಸ್
4)ಸಮ್ಮಾಸ್ ಇಬ್ನ್ ಉಸ್ಮಾನ್.

ವುಹ್ದ್ ಬೆಟ್ಟವನ್ನು ಸ್ವರ್ಗೀಯ ಬೆಟ್ಟವೆಂದೂ ಪ್ರವಾದಿ (ﷺ)ರವರು ಪ್ರೀತಿಸಿದ ಬಣ್ಣಿಸಿದ ಬೆಟ್ಟವೆಂದೂ ಚರಿತ್ರೆಗಳಿಂದ ತಿಳಿಯಬಹುದು.
      __________
     
ನಾಳಿನ ಸಂಚಿಕೆಯಲ್ಲಿ
ನಂ.6
ಮಸ್ಜಿದುಲ್ ಫಸಹ್.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...