ಸಾಮಾನ್ಯವಾಗಿ ಸ್ವಾತಂತ್ಯ ಸಂಗ್ರಾಮದ ಕುರಿತಂತೆ ಬರೆಯುವಾಗ,ಮಾತನಾಡುವಾಗ ಪುರುಷ ಹೋರಾಟಗಾರರ ಬಗ್ಗೆ ಮಾತ್ರ ಬರೆಯುವುದು ರೂಢಿಯಾಗಿಬಿಟ್ಟಿದೆ. ಪುರುಷರಷ್ಟೇ ಪರಿಣಾಮಕಾರಿಯಾಗಿ ಅಸಂಖ್ಯಾತ ಮಹಿಳೆಯರೂ ದೇಶ ವಿಮೋಚನೆಗಾಗಿ ಜೀವ ತೆತ್ತಿದ್ದಾರೆ ಎಂಬುವುದನ್ನು ನಾವು ಮರೆತು ಬಿಡುತ್ತೇವೆ.ಒಂದೊಮ್ಮೆ ಹೋರಾಟಗಾತಿ೯ಯರ ವಿಷಯಕ್ಕೆ ಬಂದರೇ ನಮಗೆ ನೆನಪಾಗುವುದು ಝಾನ್ಸಿರಾಣಿ, ಸರೋಜಿನಿ ನಾಯ್ಡು, ಆನಿಬೆಸೆಂಟ್, ಚೆನ್ನಮ್ಮ, ಅಬ್ಬಕ್ಕ ಮುಂತಾದ ಬೆರಳೆಣಿಯ ಹೆಸರುಗಳು ಮಾತ್ರ. ಇಂತಿರುವಾಗ ಮುಸ್ಲಿಂ ಹೋರಾಟಗಾತಿ೯ಯರ ನೆನಪಾಗುವುದಂತೂ ದೂರದ ಮಾತು .
ಮುಸ್ಲಿಂ ವನಿತೆಯರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರೆ!!? ಎಂಬ ಆಶ್ವರ್ಯಭರಿತ ಪ್ರಶ್ನೆ ಹಲವರನ್ನು ಕಾಡಬಹುದು. ಅನೇಕ ದೇಶೀಯ ಇತಿಹಾಸಕಾರರೂ ಸಹ ಮುಸ್ಲಿಂ ಹೋರಾಟಗಾತಿ೯ಯರನ್ನು ಗಣನೆಗೆ ತೆಗೆದು ಕೊಂಡಿಲ್ಲ ಅಥವಾ ಜಾಣ ಮೌನವಹಿಸಿದ್ದಾರೆ.
ಈ ದೇಶದ ಸ್ವಾತಂತ್ರ್ಯಕ್ಕಾಗಿ ಸುಮಾರು 225 ಕ್ಕಿಂತಲೂ ಹೆಚ್ಚಿನ ಮುಸ್ಲಿಂ ಮಹಿಳೆಯರು ವೀರಮರಣವನ್ನಪ್ಪಿದ್ದಾರೆ ಎಂದರೆ ಅಶ್ವಯ೯ವಾಗುವುದಿಲ್ಲವೆ? ಇತಿಹಾಸ ಗಭ೯ದ ಮೂಲೆ ಮೂಲೆಗಳಲ್ಲಿ ಇಂತಹ ಮುಸ್ಲಿಮ್ ವೀರ ವನಿತೆಯರ ಚರಿತ್ರೆಯು ಮಸುಕು ಮಸುಕಾಗಿ ಹುದುಗಿದೆ. ಸ್ವಸ್ಥ ಮನಸ್ಸಿನ ಇತಿಹಾಸಕಾರರು ಅವುಗಳನ್ನು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ.
ಮುಸ್ಲಿಮರು ಹೆಜ್ಜೆ ಹೆಜ್ಜೆಗೂ ತಮ್ಮ ದೇಶನಿಷ್ಠೆಯನ್ನು ಸಾಬೀತು ಪಡಿಸಬೇಕಾದ ಫ್ಯಾಶಿಸ್ಟ್ ಕುತಂತ್ರವು ವ್ಯಾಪಕವಾಗಿರುವಂತಹ ಇಂದಿನ ಸಂಕೀಣ೯ ಕಾಲಘಟ್ಟದಲ್ಲಿ ಶುಧ್ಧ ಚರಿತ್ರೆಯ ಮರು ನಿಮಾ೯ಣ ಬಲು ಅಗತ್ಯವೆಂಬಂತೆ ಕಾಣತ್ತಿದೆ. ಮುಸ್ಲಿಂ ಹೋರಾಟಗಾರರ ಹೋರಾಟದ ಯಶೋಗಾಥೆಗಳ ಪರಿಚಯವು ಶಾಲಾ-ಕಾಲೇಜು ಪಠ್ಯಗಳಲ್ಲಿ ಅಡಕಗೊಳ್ಳಬೇಕಿದೆ. ಮುಗ್ದ ಮಕ್ಕಳ ಮನಸುಗಳಲ್ಲಿ ಕೋಮುವಾದಿಗಳು ಬಿತ್ತಿರುವ ವಿಷ ಬೀಜವು ಮೊಳಕೆಯೊಡೆದು ಬೆಳೆಯದಂತೆ ಮಾಡಲು ಇವುಗಳು ಸಹಕಾರಿಯಾಗಬಲ್ಲವು.
ಮುಸ್ಲಿಮ್ ಮಹಿಳೆಯರೆಂದರೆ ನಾಲ್ಕು ಗೋಡೆಗಳಿಗೆ, ಪದಾ೯ ನಕಾಬ್‍ಗಳಿಗೆ ಸೀಮಿತರಾಗಿದ್ದರು ಎಂಬ ತಪ್ಪು ನಂಬಿಕೆಯನ್ನು ಹೋಗಲಾಡಿಸಲು ಸ್ವಾತಂತ್ರ್ಯ ಸಂಗ್ರಾಮದ ಮುಸ್ಲಿಂ ವೀರ ವನಿತೆಯರ ಹೋರಾಟದ ಚರಿತ್ರೆಯ ಮೇಲೆ ಕಣ್ಣಾಡಿಸಿದರೆ ಖಂಡಿತ ಸಾಧ್ಯವಿದೆ.ಅಂದಿನ ವೀರನಾರಿಯರಲ್ಲಿ ಅನೇಕ ಇಸ್ಲಾಮೀ ಧಾಮಿ೯ಕ ವಿದ್ವಾಂಸರ ಪತ್ನಿಯರು , ಮಕ್ಕಳು ,ಮಾತೆಯರೂ ಇದ್ದರು. ಶಾ ಅಬ್ದುಲ್ ಅಝಿಝ ದೆಹಲವಿ ಎಂಬ ಇಸ್ಲಾಮೀ ವಿದ್ವಾಂಸ ಬ್ರಿಟಿಷರ ವಿರುದ್ಧ ಜಿಹಾದ್‌ಗೆ ಕರೆ ಕೊಟ್ಟಂತಹ ಸಂದಭ೯ದಲ್ಲಿ ದೇಶದ ಮೂಲೆ ಮೂಲೆಗಳಿಂದ ಮುಸ್ಲಿಂ ಯುವಕರು, ಧಾಮಿ೯ಕ ವಿದ್ವಾಂಸರು ಹೋರಾಟದ ಕಣಕ್ಕೆ ಧುಮುಕಿದ್ದರು. ಮುಸ್ಲಿಂ ಮಹಿಳೆಯರೂ ದೇಶ ವಿಮೋಚನೆಯ ಹೋರಾಟಕ್ಕೆ ಧುಮುಕಲು ತಡ ಮಾಡಿರಲಿಲ. 1857 ರಿಂದ 1947 ವರೆಗಿನ 90 ವಷ೯ಗಳ ಹೋರಾಟದಲ್ಲಿ ಮುಸ್ಲಿಮ್ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಮಾತ್ರವಲ್ಲದೆ ತಮ್ಮ ಗಂಡ ,ತಂದೆ, ಮಕ್ಕಳನ್ನೂ ಹೋರಾಟದಲ್ಲಿ ಸಕ್ರಿಯವಾಗುವಂತೆ ಪ್ರೊತ್ಸಾಹಿಸಿದರು. ಕೆಲವರು ಅಹಿಂಸಾತ್ಮಕ ಚಳವಳಿಯಲ್ಲಿ ಪಾಲ್ಗೊಂಡರು, ಇನ್ನು ಕೆಲವರು ನೇರವಾಗಿ ಹಿಂಸಾತ್ಮಕ ಹೋರಾಟದ ಕಣಕ್ಕೆ ಧುಮುಕಿದರೆ ಇನ್ನು ಕೆಲ ಮಹಿಳೆಯರು ಸ್ವರಾಜ್ಯ ಪರ ಪ್ರಚಾರಾಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧೆಡೆ ತಿರುಗಾಡಿ ಜನರ ಮನದಲ್ಲಿ ಸ್ವಾತಂತ್ಯದ ಕಿಚ್ಚು ಹೊತ್ತುವಂತೆ ಮಾಡಿದ್ದಾರೆ. ಹೋರಾಟದಲ್ಲಿ ವಿದ್ಯಾವಂತ, ನಗರ ಪ್ರದೇಶದ ಮಹಿಳೆಯರಲ್ಲದೆ ಅನಕ್ಷರಸ್ಥ ಗ್ರಾಮೀಣ ಮುಸ್ಲಿಂ ಮಹಿಳೆಯರೂ ಸಕ್ರಿಯರಾಗಿದ್ದರು.
ಸ್ವಾತಂತ್ರ್ಯಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದಂತಹ ಮಹಿಳೆಯರಲ್ಲಿ ಭೀ ಅಮ್ಮ ಆಬಾದಿ ಬೇಗಮ್‌ರ ಹೋರಾಟದ ಕಿಚ್ಚನ್ನು ವಿವರಿಸಲಾಗಿದೆ..
ಮೌಲಾನಾ ಮುಹಮ್ಮದ್ ಅಲಿ ಮತ್ತು ಮೌಲಾನ ಶೌಕತ್ ಅಲೀಯವರ ತಾಯಿ ಭೀ ಅಮ್ಮ ರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಎಲ್ಲರೂ ಅವರನ್ನು ಭೀಅಮ್ಮ ಎಂದೇ ಕರೆಯುತ್ತಿದ್ದರು. ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಭೀ ಅಮ್ಮ ರವರ 5ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. 28ನೇ ವಯಸ್ಸಿನಲ್ಲಿ ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿನಲ್ಲೆ ಆಬಾದಿ ಬೇಗಮ್ ವಿಧವೆಯಾದರು 6 ಗಂಡು 1 ಹೆಣ್ಣು 7 ಮಕ್ಕಳ ಅಷ್ಟೇನು ಸ್ಥಿತಿವಂತರಲ್ಲದ ಜೀವನ ವಾಗಿತ್ತು ಆದರೆ ಅವರು ಧೃತಿಗೆಡಲಿಲ್ಲ. ಈ ಸಂಕಷ್ಟವನ್ನು ಧೈಯ೯ ದಿಂದ ಎದುರಿಸಿದರು ತಮ್ಮ ಸವ೯ಸ್ವವನ್ನು ಮಕ್ಕಳ ಪಾಲನೆ ಪೋಷಣೆಗಾಗಿ ಧಾರೆ ಎರೆದರು. ಇದ್ದ ದುಡ್ಡಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ಮಹಮ್ಮದ್ ಅಲಿ ತಮ್ಮ ತಾಯಿಯವರ ಬಗ್ಗೆ ಈ ರೀತಿ ಹೇಳುತ್ತಿದ್ದರು"ನನ್ನ ತಾಯಿ ಅಷ್ಟೊಂದು ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ ಆದರೆ ಅವರಷ್ಟು ವ್ಯವಹಾರ ಚತುರೆಯನ್ನು ನಾನೆಲೂ ಕಂಡಿಲ್ಲ."
ಒಂದು ಘಟನೆ ಇಲ್ಲಿ ಸ್ಮರಣೀಯವಾಗಿದೆ.ಗುಪ್ತಚರ ವಿಭಾಗದ ನಿದೇಶಕರಾಗಿದ್ದ ಸರ್ ಚಾಲ್ಸ್೯ ಲೆಂಡ್ ಡೆಪ್ಯೂಟಿ ಸುಪರಿಂಟೆಂಡೆಂಟ್ ಆಫ್ ಪೋಲಿಸ್ ಅಬ್ದುಲ್ ಮಜೀದ್ರ ಮುಖಾಂತರ ಅಲಿ ಸಹೋದರರಿಗೆ ಒಂದು ಪತ್ರವನ್ನು ರವಾನಿಸಿದ್ದರು .ಈ ಪತ್ರದಲ್ಲಿ ಬ್ರಿಟಿಷ್ ಸರಕಾರದ ಶರತ್ತುಗಳನ್ನು ಒಪ್ಪಿಕೊಂಡರೆ ಎರಡೂವರೆ ವಷ೯ಗಳ ಕಠಿಣ ಸೆರೆಮನೆಯ ಶಿಕ್ಷೆಯನ್ನು ಕೊನೆ ಗೊಳಿಸುವ ಪ್ರಸ್ತಾವನೆ ಇತ್ತು. ಮಹಮ್ಮದಲಿ ಪತ್ರವನ್ನು ಓದಿದ ನಂತರ ಕಾಗದದ ಮೇಲೆ ಏನೋ ಬರೆಯಲಾರಂಭಿಸಿದರು. ಅಲ್ಲೇ ಅಡ್ಡಾಡುತ್ತಿದ್ದ ಭೀ ಅಮ್ಮ ಡಿ.ಎಸ್.ಪಿ ಯವರನ್ನು ಉದ್ದೇಶಿಸಿ ಹೇಳಿದರು "ಸರಕಾರ ನನ್ನ ಮಕ್ಕಳನ್ನು ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ ಕಳೆದ 30 ತಿಂಗಳಿನಿಂದ ಜೈಲಿನಲ್ಲಿ ಅವರು ಎಷ್ಟು ಸಂಕಷ್ಟಗಳಿಗೆ ಈಡಾಗಿದ್ದಾರೆ ಮತ್ತು ಎಷ್ಟು ಸಹನೆಯಿಂದ ಅವುಗಳನ್ನು ಎದುರಿಸಿದ್ದಾರೆಂಬುದನು ನಾನು ಚೆನ್ನಾಗಿ ಬಲ್ಲೆ . ಸರಕಾರ ಅವರೊಂದಿಗೆ ಕರಾರು ಮಾಡಿಕೊಳ್ಳಬಯಸಿದೆಯೆಂದು ನನ್ನ ಗಮನಕ್ಕೆ ಬಂದಿದೆ . ಮಹಮ್ಮದಲೀ ಮತ್ತು ಶೌಕತ್ ಅಲೀ ಇಸ್ಲಾಮಿನ ಸಿಪಾಯಿಗಳು ಖಂಡಿತವಾಗಿ ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಅವರು ಮಾಡಲಾರರು ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಜೈಲಿನಿಂದ ಬಿಡುಗಡೆ ಹೊಂದಲಿಕ್ಕಾಗಿ ಇಂತಹ ಕಾಯ೯ ಮಾಡಲು ಅವರು ಮುಂದಾಗಿರುವರು ಎಂದು ನನಗೆ ತಿಳಿದು ಬಂದಲ್ಲಿ ಅವರ ಕತ್ತು ಹಿಸುಕಿ ಕೊಲ್ಲುವಷ್ಟು ಶಕ್ತಿ ನನ್ನ ರಟ್ಟೆಗಳಲ್ಲಿ ಇನ್ನೂ ಇದೆ." ಎಂದರು.
ಮಹಾತ್ಮ ಗಾಂಧೀಜಿಯವರು ಆಬಾದಿ ಬೇಗಮ್‍ರ ಕುರಿತಂತೆ ಆಗಾಗ ಹೇಳುತಿದ್ದ ಮಾತು ಇಂತಿದೆ "ಆಕೆ ಬಿಸಿರಕ್ತದ ಯುವಕರಷ್ಟು ಸಾಮಥ್ಯ೯ವಿರುವ ವೃದ್ಧ ಮಹಿಳೆ"
ಈ ನೆಲವು ವಿದೇಶಗಳ ಕಪಿ ಮುಷ್ಟಿಯಿಂದ ವಿಮೋಚನೆಗೊಂಡು ಸ್ವತಂತ್ರ ದೇಶವಾಗಿ ಕಾಣುವ ಕನಸಿನಲ್ಲಿ ಸದಾ ಲೀನರಾಗಿರುತ್ತಿದ್ದರು. ಅವರು ಸ್ವತ ಖಾದಿ ಬಟ್ಟೆಗಳನ್ನು ನೇಯ್ದು ಅವುಗಳನ್ನೆ ಧರಿಸುತಿದ್ದರು .ಮಾತ್ರವಲ್ಲ ಖಾದಿಯ ಕುರಿತಂತೆ ಪ್ರಚಾರಾಂದೋಲನವನ್ನು ಕೈ ಗೊಂಡಿದ್ದರು .ಅವರು ಹಿಂದೂ-ಮುಸ್ಲಿಂ ಐಕ್ಯಾತೆಗಾಗಿ ಬಹುವಾಗಿ ಶ್ರಮಿಸಿದ್ದರು.ಧಾಮಿ೯ಕ ಸೌಹಾದ೯ತೆಗಾಗಿ ಶ್ರಮಿಸುವುದು ಧರ್ಮದ ಭಾಗವೆಂದೇ ಅವರು ಬಗೆದಿದ್ದರು.
ಸ್ವಾತಂತ್ರ್ಯ ಸಂಗ್ರಾಮದ ಕಾಯ೯ಕತ೯ರ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು.ಈ ಬಗ್ಗೆ ಅವರು ಬರೆದಿದ್ದ ಪತ್ರ ಅವರ ಮಾನವ ಪ್ರೇಮವನ್ನು ಎತ್ತಿ ತೋರಿಸುತ್ತದೆ.
"ನನ್ನ ಮನಸ್ಸು ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ನಿರಪರಾಧಿ ಯುವಕರ ಬಗ್ಗೆ ರೋಧಿಸುತ್ತದೆ. ಜೀವನದ ಅವಶ್ಯಕತೆಗೆ೪ಗಾಗಿ ಸಂಪಾದನೆ ಮಾಡುವ ಸ್ವಾತಂತ್ರ್ಯವನ್ನು ಅವರು ಕಳೆದುಕೊಂಡಿದ್ದಾರೆ. ನಮ್ಮ ಹೋಮ್ ರೂಲ್ ಲೀಗ್ ಸಂಘಟನೆಯು ಪ್ರಮುಖ ಖೈದಿಗಳಲ್ಲದೆ ಇತರ ಸಾಮಾನ್ಯ ಕೈದಿಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿದೆಯೇ ? ಅವರು ಮತ್ತು ಅವರ ಸಂಬಂಧಿಕರು ಹಸಿವೆಯಿಂದ ಏಕೆ ನರಳಬೇಕು? ಅವರ ಸಹಾಯಾಥ೯ ಮನವಿ ಮಾಡಿದಲ್ಲಿ ಭಾರತದ ಪ್ರತಿಯೊಂದು ಮನೆಯಿಂದಲೂ ಏನಾದರು ಸಹಾಯ ಖಂಡಿತ ಒದಗಿ ಬರುತ್ತದೆಂಬ ವಿಶ್ವಾಸ ನನಗಿದೆ" ಎಂದಿದ್ದರು
1917 ಡಿಸೆಂಬರ್ 18 ರಂದು ಮಾಂಟಿಗೋರನ್ನು ಭೇಟಿ ಮಾಡಲು ನಿಯುಕ್ತಗೊಂಡಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರಾಗಿದ್ದರು. 1917 ಡಿಸೆಂಬರ್ 12 ರಂದು ಕಲ್ಕತ್ತಾದಲ್ಲಿ ನಡೆದ 2ನೇ ಸಮ್ಮೆಳನದಲ್ಲಿ ಭೀ ಅಮ್ಮ ಉಪಸ್ಥಿತರಿದ್ದರು. ಬಿಳಿಯ ಬುಖಾ೯ ಧರಿಸಿ , ಕೋಲು ಹಿಡಿದು ಸಂಭಾಷಣಕ್ಕೆ ಬಂದಾಗ ಅವರ ಸಹಾಯಕ್ಕೆ ಅನ್ನಿಬೆಸೆಂಟ್ ಧಾವಿಸಿದ್ದರು.
ಅನ್ನಿಬೆಸೆಂಟ್ ಭಾಷಣ ಮಾಡುತ್ತ... " ಮಹಮ್ಮದ್ ಅಲೀ ಮತ್ತು ಶೌಕತ್ ಅಲೀ ಯವರ ಮಾತೆ ನಮ್ಮೊಂದಿಗಿದ್ದಾರೆ. ಅವರು ನೈಜ ಮುಸ್ಲಿಮರು, ನಿಷ್ಟಾವಂತ ದೇಶ ಪ್ರೇಮಿ ಆಗಿರುವರು. ಅವರಲ್ಲಿ ಮಾತೃ ವಾತ್ಸಲ್ಯವಿದ್ದರೂ ಅವರ ಹೃದಯ ಸಿಂಹದ ಹೃದಯ. ಅವರಿಗೆ ದುಃಖ ಮತ್ತು ಸಂಕಟ ಭಾಧಿಸುವುದಿಲ್ಲ. ಅವರ ಮಕ್ಕಳು ದೇಶದ ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವುದು ಅವರಿಗೆ ಹಷ೯ವನ್ನೂದಗಿಸಿದೆ".
ಖಿಲಾಫತ್ ಚಳುವಳಿಯಲ್ಲಿ ಭೀ ಅಮ್ಮ ವಹಿಸಿದ ಪಾತ್ರದ ಕುರಿತು ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು".... ಅವರು ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸುತ್ತಿದ್ದರು.ಖಿಲಾಫತ್ ಮತ್ತು ದೇಶದ ಸ್ವಾತಂತ್ರಕ್ಕಾಗಿ ದೇಶದಾದ್ಯಂತ ಸಂಚರಿಸಿದ್ದರು. ಭೀ ಅಮ್ಮ ಇಸ್ಲಾಮಿನ ಕಟ್ಟಾ ಅನುಯಾಯಿಗಳಾಗಿದ್ದರು. ಹಿಂದೂ- ಮುಸ್ಲಿಂ ಐಕ್ಯತೆ ಅವರಿಲ್ಲದೇ ಸಾಧ್ಯವಿರಲಿಲ್ಲ.ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದರು".
1921 ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು .ಈ ಸಂದಭ೯ದಲ್ಲಿ ಒಬ್ಬರು ಸದಾಯೆ ಖಾತೂನ್(ಮಹಿಳೆಯ ಧ್ವನಿ) ಎ೦ಬ ಶೀಷಿ೯ಕ್ಕೆಯಡಿಯಲ್ಲಿ ಕವನವನ್ನು ರಚಿಸಿದ್ದರು. ಕೆಲವೇ ದಿನಗಳಲ್ಲಿ ಈ ಕವನ ಎಲ್ಲಾ ಜನರಿಗೂ ಸುಪರಿಚಿತವಾಯಿತು ಇಂದಿಗೂ ಈ ಕವನ ಉದು೯ ವಲಯದಲ್ಲಿ ಪ್ರಸಿದ್ಧವಾಗಿದೆ.
ಈ ಕವನ ಹೀಗಿದೆ:
🌸ಬೋಲಿ ಅಮ್ಮ ಮಹಮ್ಮದಲೀ ಕೀ
ಸಾತ್ ತೇರೇ ಹೈ ಶೌಕತ್ ಅಲಿ ಭೀ
ಜಾನ್ ಬೇಟಾ ಖಿಲಾಫತ್ ಪೆ ದೇದೊ
ಜಾನ್ ಬೇಟಾ ಖಿಲಾಫತ್ ಪೆ ದೇದೋ
ಸಬರ್‌ಸೆ ಜೈಲ್ ಖಾನೆಮೆ ರೆಹನಾ
ಕುಚ್ ಯೆ ಅಪ್‌ನೀ ಅಮ್ಮಕಾ ಕೆಹನಾ
ಜೋ ಮುಸೀಬತ್ ಪಡೇ ಉಸ್ಕೋ ಸಹನಾ
ಜಾನ್ ಬೇಟಾ ಖಿಲಾಫತ್ ಪೆ ದೇದೋ
ಫಾಂಸಿ ಆಯೆ ಅಗರ್ ತುಮ್ ಕೋ ಜಾನಿ
ಕಲಿಮಾ ಪಡ್ಪಡ್ಕೆ ಫಾಂಸಿ ಪೆ ಚಡ್ನಾ
ಮಾಂಗ್‌ನಾ ಮತ್ ಹುಕೂಮತ್ ಸೆ ಪಾನಿ
ಜಾನ್ ಬೇಟಾ ಖಿಲಾಫತ್ ಪೆ ದೇದೋ
ಆಬಾದಿ ಬೇಗಮ್ ರವರು ನವೆಂಬರ್ 1924 ರಲ್ಲಿ ನಿಧನ ಹೊಂದಿದರು.ಅವರ ನಿಧನದ ಕುರಿತು ಗಾಂಧೀಜಿ, ಯಂಗ್ ಇಂಡಿಯಾದಲ್ಲಿ ಈ ರೀತಿ ಬರೆದರು" ಭೀ ಅಮ್ಮ ಇನ್ನಿಲ್ಲವೆಂದು ನಂಬುವುದು ಕಷ್ಟಕರವಾಗಿದೆ .ಅವರ ವ್ಯಕ್ತಿತ್ವದಿಂದ ಮತ್ತು ಸಾವ೯ಜನಿಕ ಸಭೆಗಳಲ್ಲಿ ಅವರ ಪ್ರಭಾವಪೂಣ೯ ಭಾಷಣಗಳಿಂದ ಪ್ರಭಾವಿತರಾಗದೇ ಉಳಿದವರಾರೂ ಇಲ್ಲ. ಅವರ ನಿಧನದ ವೇಳೆ ಅವರ ಸನಿಹವಿದ್ದುದು ನನ್ನ ಅದೃಷ್ಟವಾಗಿತ್ತು.
(ಸಂಗ್ರಹ)
ಅತ್ತಾವುಲ್ಲಾ ಕಣ್ಣೂರು # ಹೊ೦ಬೆಳಕು #
www.fb.com/hombellaku
Comments