Skip to main content

*ಮನದಾಳದಲ್ಲಿ ಮದೀನ.* ✍🏿ಸಿ.ಐ.ಇಸ್ಹಾಕ್ ಫಜೀರ್. ( ಸಂಚಿಕೆ-8)

*ಮನದಾಳದಲ್ಲಿ ಮದೀನ.*
  ✍🏿ಸಿ.ಐ.ಇಸ್ಹಾಕ್ ಫಜೀರ್.
          ( ಸಂಚಿಕೆ-8)

ನಂ.21 ಅಜ್ವಾ ತೋಟ.
ಮದೀನದಲ್ಲಿ ಅಜ್ವಾ ಖರ್ಜೂರಕ್ಕೆ ಅತ್ಯಂತ ಬೇಡಿಕೆ.ಇದು ಪ್ರವಾದಿ ﷺ
ಅಮೃತ ಹಸ್ತದಿಂದ ನೆಟ್ಟ ಮರವಾಗಿದೆ. ಖರ್ಜೂರ ಮರಗಳು ಸಾಮಾನ್ಯವಾಗಿ ತೆಂಗಿನ ಮರದಂತೆ ಎತ್ತರವಾಗಿ ಬೆಳೆಯುತ್ತದೆ.ಆದರೆ ಅಜ್ವಾ ಖರ್ಜೂರ ಮರ ಮಾತ್ರ ಚಿಕ್ಕ ಗಿಡದಲ್ಲಿ ಫಲಕೊಡುವುದು ವಿಶೇಷವಾಗಿದೆ.

ನಂ22. ಮಸ್ಜಿದುಲ್ ಖುಬಾ
ಇದು ಪ್ರವಾದಿ ﷺರವರು ಮಕ್ಕಾ
ಬಿಟ್ಟು ಮದೀನಾ ತಲುಪಿದಾಗ ಮದೀನಾದಲ್ಲಿ ಮೊದಲು ನಿರ್ಮಿಸಿದ ಮಸೀದಿ.

"ತಮ್ಮ ಮನೆಯಲ್ಲಿ ವುಲೂಹ್ ಮಾಡಿ ಈ ಮಸೀದಿಯಲ್ಲಿ ಎರಡು ರಕಾಹತ್ ಸುನ್ನತ್ ನಮಾಜ್ ಮಾಡಿದ್ದಲ್ಲಿ ಪ್ರವಾದಿ ﷺರವರೊಂದಿಗೆ ಉಮ್ರಾ ನಿರ್ವಯಿಸಿದ ಪ್ರತಿ ಫಲ" ಎಂದು ಗೋಡೆ ಮೇಲೆ ಬರೆದಿಟ್ಟ ಹದೀಸ್ ಇಲ್ಲಿ ಕಾಣ ಬಹುದು.
ಪರಿಶುದ್ಧ ಖುರ್'ಆನಿನಲ್ಲಿ ಮಸ್ಜಿದ್ ಖುಬಾ ಬಗ್ಗೆ ವಿವರಿಸಲಾಗಿದೆ.

ನಂ.23. ಮಸ್ಜಿದ್ ಲಿರಾರ್.
ಇದು ಮಸ್ಜಿದ್ ಖುಬಾ ಬಳಿ ಸತ್ಯ ನಿಷೇಧಿಗಳು ನಿರ್ಮಿತ ಮಸೀದಿ.
ಹೆಸರಿಗೆ ಮಾತ್ರ ಮುಸಲ್ಮಾನರಾಗಿದ್ದ ಸತ್ಯ ನಿಷೇಧಿಗಳು ಖುಬಾ ವಿರುದ್ಧ ಮಸೀದಿಯೊಂದನ್ನು ಕಟ್ಟಿ ಉದ್ಘಾಟನಾ ಕಾರ್ಯಕ್ಕೆ ಪ್ರವಾದಿಯವರನ್ನು ಆಮಂತ್ರಿಸಿ ಅವರ ಮೋಸದ ಬಲೆಯಲ್ಲಿ ಸಿಲುಕಿಸ ಬೇಕೆಂದು ಹವಣಿಸುತ್ತಿದ್ದರು.
ಪ್ರವಾದಿಯವರು ಇನ್ನೇನು ಅತ್ತ ಕಡೆ ಗಮನ ಹರಿಸುವಷ್ಟರಲ್ಲಿ ಮಸ್ಜಿದು ಲಿರಾರ್ ವಿರುದ್ಧ ವಯ್ಯಿ ಬಂದು ತಲುಪುತ್ತವೆ. ನಂತರ ಪ್ರವಾದಿ ﷺರವರು ಆ ಮಸೀದಿಯನ್ನು ವಿರೋದಿಸಿದರು ನಂತರದ ದಿನಗಳಲ್ಲಿ ಆ ಮಸೀದಿಯನ್ನು ನೆಲಸಮ ಮಾಡಲಾಯಿತು.

ನಾಳಿನ ಸಂಚಿಕೆಯಲ್ಲಿ.
ನಂ24
ವಾದಿ ಜಿನ್ನ್.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...