Skip to main content

*" ಮನದಾಳದಲ್ಲಿ ಮದೀನ ."* ✍ಸಿ.ಐ.ಇಸ್ಹಾಕ್ ಫಜೀರ್. (ಸಂಚಿಕೆ-11)

*" ಮನದಾಳದಲ್ಲಿ ಮದೀನ ."*
✍ಸಿ.ಐ.ಇಸ್ಹಾಕ್ ಫಜೀರ್.
       (ಸಂಚಿಕೆ-11)

*ನಂ.33.the battle of Badr.*
ಮದೀನಾದಿಂದ ಸುಮಾರು 150 ಕಿ.ಮೀ.ದೂರ ಕ್ರಮಿಸಿದರೆ ಸಿಗುವ ನೀರವ ಪ್ರದೇಶವೇ ಬದ್ರ್ ಯುದ್ಧ ಭೂಮಿ.
ಇಸ್ಲಾಮಿನ ಪ್ರಮುಖ ಯುದ್ಧಗಳಲ್ಲಿ ಮಹತ್ತರವಾದದ್ದು ಬದ್ರ್.
ಪ್ರವಾದಿ ﷺ ರವರ ನೇತೃತ್ವದಲ್ಲಿ ನಡೆದಿರಿವುದೂ,ಇಸ್ಲಾಮಿಗೆ ಅಮೋಘ ಜಯ ದೊರಕಿದ್ದೂ,ಇಸ್ಲಾಮಿಗೆ ಶಕ್ತಿ ತುಂಬಿರುವುದ್ದು ಬದ್ರ್ ನಿಂದಲೇ ಆಗಿರುತ್ತದೆ.

ಕೇವಲ ಮುನ್ನೂರ ಹದಿಮೂರು ಸ್ವಹಾಬಿ ಶುಹದಾಗಳು ಒಂಭೈನೂರ ಐವತ್ತಕ್ಕೂ ಮಿಕ್ಕಿದ ಶತ್ರುಗಳನ್ನು ಮಣ್ಣು ಮುಕ್ಕಿಸಿ ವಿಜಯದ ಪತಾಕೆಯನ್ನು ಹಾರಿಸಿ ಇಸ್ಲಾಮಿನ ಇತಿಹಾಸದಲ್ಲಿ ಚಿರಸ್ಥಾಯಿಗೊಂಡ ಐತಿಹಾಸಿಕ ಯುದ್ಧ.

ಬದ್ರ್ ಯುದ್ಧ ನಡೆದ ಸ್ಥಳ ಇಂದು ಬಂಜರು ಭೂಮಿಯಂತೆ ಸಸಿಯೂ,ಕೃಷಿಯೂ ಬೆಳೆಯದೆ ರಣಭೂಮಿ ಬಿಕೋ ಅನ್ನುತ್ತಿದೆ.
ಯುದ್ದ ನಡೆದ ಸ್ಥಳ ಶತ್ರುಗಳಿಗೆ ಸೇರಿದ್ದೂ ಇದರ ಮೇಲೆ ಭಾಗದಲ್ಲಿರುವ ಬೆಟ್ಟ ಮುಸ್ಲಿಮರ ಪಾಲಿನದ್ದಾಗಿತ್ತು. ಶೇಕರಿಸಲ್ಪಡುವ ನೀರಿನ ತೊಟ್ಟಿಗೆ ಸಂಬಂಧಿಸಿ ನಡುವೆ ಎರಡು ವಿಭಾಗದ ನಡುವೆ ಮಾತಿನ ಚಕಮಕಿ ಮಿತಿಮೀರಿದದಾಗ ಅಲ್ಲಾಹನ ಅತೀಂದ್ರಿಯ ಶಕ್ತಿಯಿಂದ ಮಳೆಯೊಂದು ಆರ್ಭಟಿಸಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ಶತ್ರುಗಳು ನಿರ್ಮಿಸಿದ ನೀರಿನ ತೊಟ್ಟಿ ಇಂದಿಗೂ ಯಾತ್ರಿಕರಿಗೆ ನೇತ್ರ ಸಾಕ್ಷಿಯಾಗಿ ನಿಂತಿದೆ.

ನಂ.34ಬೀರ್ ಖಲೀಬ್.

ಬದ್ರ್ ಯುದ್ಧದಲ್ಲಿ ಸತ್ತು ಬಿದ್ದ ಇಸ್ಲಾಮಿನ ಪರಮ ಶತ್ರು ದುರಂಕಾರಿ ಅಬೂಜಹಲ್ ಸಹಿತ ನೂರಾರು ಶತ್ರುಗಳ ಶವಗಳನ್ನು ಹೂತಿಟ್ಟ ಬಾವಿಯನ್ನು ಬೀರ್ ಖಲೀಬ್ ಎಂದು ಕರೆಯಲ್ಪಡುತ್ತದೆ.
ಈ ಬಾವಿ ಇಂದಿಗೂ ಅಲ್ಲಿ ಕಾಣಬಹುದು.

ನಂ35
ಬದ್ರ್ ಮಖ್ಬರಾ.
ಪರಿಶುದ್ಧ ದೀನುಲ್ ಇಸ್ಲಾಮಿನ ಉಳಿವಿಗಾಗಿ ಮನೆ,ಮಠ,ಮಡದಿ, ಮಕ್ಕಳನ್ನು ಬಿಟ್ಟು ಜೀವನವನ್ನೇ ಇಸ್ಲಾಮಿಗಾಗಿ ಮುಡಿಪಾಗಿಟ್ಟು ರಕ್ತ ಸಾಕ್ಷಿಗಳಾದ ಬದ್ರ್ ಶುಹದಾಗಳ ಮಖ್ಬರಾಗಳು ಬದ್ರ್' ಯುದ್ಧ ನಡೆದ ಸ್ವಲ್ಪ ಪಕ್ಕದಲ್ಲಿಯೇ ಇದೆ.ಇದು ಇಂದು ಸಾರ್ವಜನಿಕ ಮಖ್ಬರವಾಗಿ  ಮಾರ್ಪಟ್ಟಿವೆ.
ಬದ್ರ್'ನ
ಪರಿಸರ ವಾಸಿಗಳು ಅಥವಾ  ಯಾತ್ರಿಕರು ಮರಣ ಹೊಂದಿದ್ದಲ್ಲಿ ಆ ಪುಣ್ಯ ದನ್ಯ ಮಣ್ಣಿನಲ್ಲಿಯೇ ದಫನ‌ ಮಾಡಲಾಗುವುದು.

ನಂ.36 ಮಸ್ಜಿದ್ ಅರಸ್.
ಬದ್ರ್ ಯುದ್ದ ನಡೆದ ಪಕ್ಕದಲ್ಲಿ ಯುದ್ಧ ಸಮಯದಲ್ಲಿ ಪ್ರವಾದಿ ﷺ ರವರು ವಿಶ್ರಾಂತಿ ಪಡೆದ ಹಾಗೂ ದೀನುಲ್ ಇಸ್ಲಾಮಿನ ವಿಜಯಕ್ಕಾಗಿ ಅಲ್ಲಾಹನಿಗೆ ದೀರ್ಘಕಾಲ ಸಾಷ್ಟಾಂಗ ಮಾಡಿದ ಪವಿತ್ರ ಮಸ್ಜಿದ್. ಮಸ್ಜಿದುಲ್ ಅರಸ್ ಎಂಬ ನಾಮದಿಂದ ಪ್ರಸಿದ್ಧಗೊಂಡಿದೆ.
ಇದು ಬದ್ರ್ ರಣರಂಗದ ಬಳಿ ಶ್ವೇತವರ್ಣದಿಂದ ನೆಲೆನಿಂತಿದೆ.
          *-End-*

ಅಲ್ ಹಂದುಲಿಲ್ಲಾಹ್.!
ಮನದಾಳದಲ್ಲಿ ಮದೀನಾ ಎಂಬ ಈ ಕಿರು ಸಂಚಿಕೆ ಇಂದಿಗೆ ಸಮಾಪ್ತಿ ಗೊಳ್ಳುತ್ತದೆ.ಮದೀನಾ ಬಗ್ಗೆ ವರ್ಣನೆ ಅಕ್ಷರಕ್ಕೆ ನಿಲುಕದು.
ಪ್ರವಾದಿ ﷺರವರ ಪುಣ್ಯ ಪಾದದಿಂದ ಪುಳಕಿತಗೊಂಡ ನಾಡಿನ ಒಂದೊಂದು ಹೆಜ್ಜೆಯೂ ಗತಕಾಲದ ಇತಿಹಾಸವನ್ನು ಹೇಳುತ್ತಿವೆ.
ನನಗೆ ಸಂಧರ್ಶಿಸಲು ಸೌಭಾಗ್ಯ ದೊರಕಿದ ಪ್ರದೇಶಗಳ ಬಗ್ಗೆ ಬರಹ ಮೂಲಕ ಕನ್ನಡಿಗರಿಗೆ ಪರಿಚಯಿಸುವ ಹೃಸ್ವ ಪ್ರಯತ್ನ ಮಾಡಿದ್ದೇನೆ.
ಅಲ್ಲಾಹನು ಸ್ವೀಕರಿಸಿದ್ದಲ್ಲಿ ಈ ನನ್ನ ಶ್ರಮ ಸಾರ್ಥಕ.
ಎಡಬಿಡದೆ ಪೂರ್ತಿಯಾಗಿ ಹನ್ನೊಂದು ಸಂಚಿಕೆಯನ್ನು ಓದಿ,ಇತರ ಗ್ರೂಪ್'ಗಳಲ್ಲಿ ವಿನಿಮಯ ‌ಮಾಡಿ ಪ್ರತ್ಯೇಕ ಮೆಸೇಜ್ ಮಾಡಿ ಪ್ರೋತ್ಸಾಹ ಪ್ರೇರಣೆ  ಹಾಗೂ ಅಭಿಪ್ರಾಯ ತಿಳಿಸಿದ ಸಮಸ್ತ ಓದುಗರಿಗೆ ಆಭಾರಿಯಾಗಿದ್ದೇನೆ.

✍ಸಿ.ಐ.ಇಸ್ಹಾಕ್ ಫಜೀರ್.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...