*ಟೋಪಿ ಧರಿಸುವಿಕೆ : ಇಸ್ಲಾಮಿನಲ್ಲಿ..*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮುದಿ ಸಲಫಿಗಳಿಗೆ ಹಲಾಲ್, ಚೋಟಾ ಸಲಫಿಗಳಿಗೆ ಹರಾಂ..! ಹಂಗಾಯಿತು ನಮ್ಮ ಈ ಆಧುನಿಕ ಸಲಫಿಗಳ ಅವಸ್ಥೆ. ತಲೆ ಮರೆಯುವುದು ಸುನ್ನತ್ ಅಲ್ಲವಂತೆ. ಅದನ್ನು ಪ್ರವಾದಿ (ಸ.ಅ) ಸುನ್ನತ್ ಆಗಿ ಕಲಿಸಿಲ್ಲವಂತೆ.
ಇನ್ನು ಈ ಸಲಫಿಗಳ ಸ್ವಾರಸ್ಯಕರ ವಾದ ವಾದವೇನೆಂದರೆ, ಪ್ರವಾದಿ (ಸ.ಅ) ರು ತಲೆಗೆ ಟೊಪ್ಪಿ ಇಡುತ್ತಿರಲಿಲ್ಲವಂತೆ. ಆದರೂ, ತಲೆ ಮರೆಸುತ್ತಿದ್ದರಂತೆ.! ಎಂತಹ ಬುದ್ಧಿವಂತರಲ್ಲವೇ ಇವರು.ಯಾವುದರ ಮರೆಗಾಗಿ ಟೋಪಿ ಧರಿಸಲಾಗುತ್ತದೆ ಎಂದು ಈ ಸಲಫಿಗಳಿಗೆ ಯಾರಾದರು ಹೇಳಿಕೊಟ್ಟಿದ್ದರೆ ಒಳ್ಳೆಯದಿತ್ತು.
*ಟೋಪಿ ಧರಿಸುವಿಕೆ ಸಲಫಿಗಳ ದೃಷ್ಟಿಯಲ್ಲಿ...*
*ಸಲಫಿ ಗಳ ಪತ್ರಿಕೆ, ಅಲ್ ಮನಾರ್ ನಲ್ಲಿ ಮುಜಾಹಿದ್ ನೇತಾರರು ಬರೆಯುತ್ತಾರೆ, "ಟೊಪ್ಪಿ ಇಂದಲೋ, ಇನ್ಯಾವುದೇ ವಸ್ತ್ರಗಳಿಂದಲೋ ತಲೆ ಮುಚ್ಚುವುದು ಸುನ್ನತ್ ಆಗಿದೆ". ಅದೇರೀತಿ ಸಲಫಿಗಳ ಪ್ರಮುಖ ನೇತಾರರಾಗಿದ್ದ ಉಮರ್ ಮೌಲವಿ ತನ್ನ ಸಲ್'ಸಬೀಲ್ ಎಂಬ ಗ್ರಂಥದಲ್ಲಿ ಹೇಳುತ್ತಾರೆ, "ತಲೆ ಮರೆಯುವ ವಿಷಯದಲ್ಲಿ ನಾನು ದೃಢವಾಗಿ ಹೇಳುತ್ತೇನೆ, ಅದು ಪ್ರವಾದಿ (ಸ.ಅ) ರ ಸುನ್ನತ್ ಆಗಿದೆ" ಎಂದು.*
ಅಂದರೆ, ಹತ್ತಿಪ್ಪತ್ತು ವರ್ಷಗಳ ಮುಂಚಿನವರೆಗೂ, ತಲೆ ಮರೆಸುವುದು ಸುನ್ನತ್ ಎಂಬ ವಿಷಯದಲ್ಲಿ ಸಲಫಿ ಗಳಿಗೂ ತರ್ಕವಿದ್ದಿಲ್ಲ ಎಂದಾಯಿತು.
*5 ನೇ ಶತಮಾನದ ಮುಜದ್ದಿದ್ ಎಂದೇ ಕರೆಸಲ್ಪಡುವ, ಹುಜ್ಜತುಲ್ ಇಸ್ಲಾಂ ಅಬೂಹಾಮಿದಿಲ್ ಗಝ್ಝಾಲಿ (ರ) ರವರು ತಮ್ಮ ಇಹ್'ಯಾವುಲ್ ಉಲೂಂ ಎಂಬ ಗ್ರಂಥದಲ್ಲಿ "ನಬಿ (ಸ.ಅ) ರು ತಲೆಗೆ ಟೊಪ್ಪಿ ಇಡುತ್ತಿದ್ದರು, ಮತ್ತು ಅದರ ಮೇಲೆ ತಲೆಕಟ್ಟು ಕಟ್ಟುತ್ತಿದ್ದರು" ಎಂದು ಉಲ್ಲೇಖಿಸಿದ್ದಾರೆ.*
ನಮಾಝ್ ನಲ್ಲಿ ತಲೆ ತೆರೆದಿಡುವುದು ಕರಾಹತ್ ಎಂದು ಶಾಫಿಹೀ ಮಝ್'ಹಬ್ ನ ಫಿಖ್ಹ್ ಗ್ರಂಥಗಳಲ್ಲಿ ಇವೆ. ಕರಾಹತ್ ಅಂದರೆ, ಮಾಡಿದರೆ ಶಿಕ್ಷೆಯಿಲ್ಲ, ಉಪೇಕ್ಷಿಸಿದರೆ ಪ್ರತಿಫಲ ಸಿಗುವಂತದ್ದೂ ಆಗಿದೆ. ಅಂದರೆ, ನಮಾಝ್ ನಲ್ಲಿ ತಲೆ ಮರೆಸುವುದು ಸುನ್ನತ್ ಆದ ಕಾರ್ಯವಾಗಿದೆ.
ತಲೆ ಮರೆಸುವುದು ಸುನ್ನತ್ ಎಂಬ ವಿಷಯದಲ್ಲಿ ವಿಶ್ವದ ಯಾವೊಬ್ಬ ಮುಸ್ಲಿಮನಿಗೂ ಸಂಶಯವಿಲ್ಲ. ನಾಲ್ಕು ಮಝ್'ಹಬ್ ಅನ್ನು ಅಂಗೀಕರಿಸುವ ವಿಶ್ವದ ಎಲ್ಲಾ ಮುಸ್ಲಿಮರೂ ಸುನ್ನತ್ ಎಂಬ ಉದ್ದೇಶದಿಂದ ತಲೆ ಮರೆಸುತ್ತಿರುವಾಗ, ತಲೆ ಮರೆಸಲು ಸುನ್ನತ್ ಇಲ್ಲ ಎಂದು ವಾದಿಸುವ ಏಕೈಕ ವಿಭಾಗ ಕೇರಳ-ಕರ್ನಾಟಕದ ಬೆರಳೆಣಿಕೆಯ ಸಲಫಿಗಳು ಮಾತ್ರ.
ಇನ್ನು ಫಿಖ್ಹ್ ಗ್ರಂಥಗಳಲ್ಲಿನ ಇಮಾಮ್ ಗಳ ಉಲ್ಲೇಖದ ಬಗ್ಗೆ ಸಲಫಿಗಳು ಹೇಳುವುದೇನೆಂದರೆ, ಫಿಖ್ಹ್ ಗಳು ಇಮಾಮ್ ಗಳ ಸ್ವಂತ ಅಭಿಪ್ರಾಯವಂತೆ, ಇಮಾಮರುಗಳು ಹದೀಸ್ ಗೆ ವಿರುದ್ಧ ಇದ್ದಾರಂತೆ. ವಾಹ್, ಹೇಗಿದೆಯಲ್ಲವೇ ಸಲಫಿಗಳ ದೊಡ್ಡಸ್ತಿಕೆ ಮತ್ತು ಅಹಂಕಾರ. ಇವರಾದರೊ, ಇಂದು ಹೇಳಿದ್ದನ್ನು ನಾಳೆ, ನಾಳೆಯದನ್ನು ನಾಡಿದ್ದು ಈ ರೀತಿ ಮನಬಂದಂತೆ ತಮ್ಮ ವಾದವನ್ನು ಬದಲಿಸುವವರಾಗಿದ್ದಾರೆ.
ಫಿಖ್ಹ್ ಅಂದರೇನೆಂದೇ ಗೊತ್ತಿಲ್ಲದ, ಸರಿಯಾಗಿ ಕಿತಾಬ್ ಓದಲು ಬರದ, ಹತ್ತಿಪ್ಪತ್ತು ಹದೀಸ್ ಗಳ ಜ್ಞಾನವೂ ಇರದ, ಗೋಸುಂಬೆ ಯಂತೆ ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಲೇ ಇರುವ ಈ ಅಜ್ಞಾನಿ ಸಲಫಿ ಗಳನ್ನು ನಾವು ಅನುಸರಿಸಬೇಕಾ, ಅಲ್ಲ, ಲಕ್ಷಾಂತರ ಹದೀಸ್ ಗಳ ಜ್ಞಾನ ಇರುವ, ಸಾವಿರಾರು ವರ್ಷಗಳಿಂದ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲದೆ, ಲೊಕದ ಪ್ರಗಲ್ಭ ಇಮಾಮರುಗಳೂ, ವಿಶ್ವದ ಮುಸ್ಲಿಮರೆಲ್ಲರೂ ಅಂಗೀಕರಿಸುತ್ತಾ ಬಂದಂತಹ ಮಝ್'ಹಬ್ ನ ಇಮಾಮರುಗಳನ್ನು ನಾವು ಅನುಸರಿಸಬೇಕಾ ಎಂದು ಇವರ ಹಿಂದೆ ಹೋಗುವವರು ಎದೆಮೇಲೆ ಕೈ ಇಟ್ಟು ಚಿಂತಿಸಬೇಕಾಗಿದೆ.
ಅಲ್ಲಾಹು ನಮ್ಮೆಲ್ಲರನ್ನು ಇಹ-ಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
Comments